
ಪಂಚಾಂಗ :ಶುಕ್ರವಾರ , 15.01.2021
ಸೂರ್ಯ ಉದಯ ಬೆ.06.45/ ಸೂರ್ಯ ಅಸ್ತ ಸಂ.06.12
ಚಂದ್ರ ಉದಯ ರಾ.08.32/ ಚಂದ್ರ ಅಸ್ತ ಬೆ.08.21
ಶಾರ್ವರಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು / ಕಾರ್ತೀಕ ಮಾಸ /
ಕೃಷ್ಣ ಪಕ್ಷ /ತಿಥಿ: ದ್ವಿತೀಯಾ (ಬೆ.08.05) ನಕ್ಷತ್ರ: ಧನಿಷ್ಠಾ (ರಾ.05.17)
ಯೋಗ: ಸಿದ್ಧಿ (ರಾ.02.24) ಕರಣ: ಕೌಲವ-ತೈತಿಲ (ಬೆ.08.05-ರಾ.07.51)
ಮಳೆ ನಕ್ಷತ್ರ: ಉತ್ತರಾಷಾಢ ಮಾಸ: ಮಕರ, ತೇದಿ: 02

ಮೇಷ ರಾಶಿ
ತಂದೆ- ತಾಯಿಯ ಬೆಂಬಲ ನಿಮಗೆ ದೊರೆಯಲಿದೆ. ಚಿತ್ರರಂಗದಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೊಸ ಅವಕಾಶಗಳು ದೊರೆಯುವ ಸಾಧ್ಯತೆ ಇದೆ. ಸಂಗೀತ ಕಲಾವಿದರಿಗೆ ಸಾಮಾಜಿಕ ಮನ್ನಣೆ ದೊರೆಯಲಿದೆ. ಸಂಬಂಧದೊಳಗೆ ಸಣ್ಣ- ಪುಟ್ಟ ಭಿನ್ನಾಭಿಪ್ರಾಯ ಏರ್ಪಡುವ ಸಾಧ್ಯತೆ ಇದೆ.

ವೃಷಭ ರಾಶಿ
ಕೆಲಸ- ಕಾರ್ಯಗಳಲ್ಲಿ ಪ್ರಗತಿ ಇದೆ. ದೇವತಾರಾಧನೆಯಿಂದ ಮಾನಸಿಕ ನೆಮ್ಮದಿ ಇದೆ. ಮನೆಯಲ್ಲಿ ಅಗತ್ಯ ಇರುವ ನವೀಕರಣವನ್ನು ಮಾಡುತ್ತೀರಿ. ಇದಕ್ಕಾಗಿ ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಖರ್ಚಾಗುವ ಯೋಗ ಇದೆ. ದಾಕ್ಷಿಣ್ಯಕ್ಕೆ ಸಿಲುಕಿಕೊಂಡು, ದೈಹಿಕ ಬಳಲಿಕೆ ಆಗುವಂಥ ಕೆಲಸಗಳನ್ನು ಮಾಡಲಿದ್ದೀರಿ

ಮಿಥುನ ರಾಶಿ
ದೊಡ್ಡ ಯೋಜನೆಗಳು ಹಾಕಿಕೊಂಡಿದ್ದಲ್ಲಿ ಅದು ಮುಗಿಸಿಕೊಳ್ಳಲು ಹಲವರ ನೆರವು ಒದಗಿ ಬರಲಿದೆ. ಇತರರ ಮಾತಿಗೆ ಕೂಡ ಪ್ರಾಶಸ್ತ್ಯ ನೀಡಿ, ಮುನ್ನಡೆದಲ್ಲಿ ಒತ್ತಡ ಕಡಿಮೆ ಆಗಲಿದೆ. ಸ್ವತಂತ್ರ ಆಲೋಚನೆ ಮಾಡುವವರಿಗೆ ಮೇಲಧಿಕಾರಿಗಳಿಂದ ಪ್ರೋತ್ಸಾಹ, ಬೆಂಬಲ ದೊರೆಯಲಿದೆ.

ಕರ್ಕಾಟಕ ರಾಶಿ
ಮಾತಿನ ಮೂಲಕ ಯಾವುದಕ್ಕೂ ಕಟ್ಟುಬೀಳಬೇಡಿ. ವಾಹನ ದುರಸ್ತಿಗೆ ಹೆಚ್ಚಿನ ಖರ್ಚಾಗುವ ಸಾಧ್ಯತೆ ಇದೆ. ಆಸೆಗೆ ಕಡಿವಾಣ ಹಾಕಿಕೊಳ್ಳಿ. ವಿವಾಹೇತರ ಸಂಬಂಧಗಳ ಕಡೆಗೆ ಮನಸ್ಸು ಹರಿದು, ನೆಮ್ಮದಿ ಕಳೆದುಕೊಳ್ಳುವ ಸಾಧ್ಯತೆ ಇದೆ. ಸರಿ- ತಪ್ಪುಗಳ ಬಗ್ಗೆ ವಿವೇಚನೆ ಇರಲಿ. ಮನಸ್ಸಾಕ್ಷಿಗೆ ತಕ್ಕಂತೆ ನಡೆದುಕೊಳ್ಳಿ.

ಸಿಂಹ ರಾಶಿ
ಕೈ ಮೀರಿದ ಖರ್ಚು ಎದುರಾಗಲಿದೆ. ಆರೋಗ್ಯ ಬಾಧೆ, ಶತ್ರುಗಳ ಕಾಟ ಎದುರಿಸುತ್ತೀರಿ. ಯಾರ ಮೇಲೂ ದ್ವೇಷ ಸಾಧನೆಗೆ ಇಳಿಯಬೇಡಿ. ನಿಮ್ಮದೊಂದು ಕಣ್ಣು ಹೋದರೂ ತೊಂದರೆ ಇಲ್ಲ, ನಿಮಗಾಗದವರ ಎರಡೂ ಕಣ್ಣು ಹೋಗಬೇಕು ಎಂಬ ಆಲೋಚನೆ ಮಾಡಿದಲ್ಲಿ ತೊಂದರೆ ಅನುಭವಿಸುತ್ತೀರಿ.

ಕನ್ಯಾ ರಾಶಿ
ಮನರಂಜನೆಗಾಗಿ ಹೆಚ್ಚಿನ ಖರ್ಚು ಮಾಡಲಿದ್ದೀರಿ. ಸಂಗಾತಿ ಜತೆಗೆ ಸುಮಧುರ ಕ್ಷಣಗಳನ್ನು ಕಳೆಯಲಿದ್ದೀರಿ. ಕ್ರೀಡಾಳುಗಳಿಗೆ ಹೊಸ ಅವಕಾಶಗಳು ದೊರೆಯಲಿವೆ. ತಂದೆ- ತಾಯಿ ಜತೆ ಸೇರಿ ಪುಣ್ಯಕ್ಷೇತ್ರ ದರ್ಶನ ಮಾಡುವ ಯೋಗ ಇದೆ. ಆಹಾರ ಪಥ್ಯದಲ್ಲಿ ಎಚ್ಚರಿಕೆಯಿಂದ ಇರಬೇಕು.

ತುಲಾ ರಾಶಿ
ಮನೆ ನಿರ್ವಹಣೆಗಾಗಿ ಸಾಲ ತರಬೇಕಾದ ಅಥವಾ ಉಳಿತಾಯದ ಹಣ ಇದ್ದಲ್ಲಿ ಅದನ್ನು ತೆಗೆಯಬೇಕಾದ ಸನ್ನಿವೇಶ ಎದುರಾಗಲಿದೆ. ಕಣ್ಣಿನ ಸಮಸ್ಯೆಗಳು ಎದುರಿಸುತ್ತಿದ್ದಲ್ಲಿ ಕಡ್ಡಾಯವಾಗಿ ವೈದ್ಯರನ್ನು ಭೇಟಿ ಮಾಡಿ. ಈ ಹಿಂದೆ ನೀವು ಕೇಳಿದ್ದ ಸಹಾಯಕ್ಕೆ ಸಂಬಂಧಿಸಿದ ಏನು ಬೆಳವಣಿಗೆ ಆಗಿದೆ ಎಂಬ ಮಾಹಿತಿ ದೊರೆಯುತ್ತದೆ.

ವೃಶ್ಚಿಕ ರಾಶಿ
ನೀರಿನಿಂದ ಎಚ್ಚರಿಕೆ ವಹಿಸಬೇಕು. ನೀವು ಮಾಡಿದ್ದೆಲ್ಲ ಸರಿ ಎಂಬ ಭಾವನೆಯಿಂದ ನಷ್ಟ ಅನುಭವಿಸುವಂತಾಗುತ್ತದೆ. ಆದ್ದರಿಂದ ಗುರು- ಹಿರಿಯರ ಮಾರ್ಗದರ್ಶನ ಪಡೆದು, ಮುಂದಕ್ಕೆ ಹೆಜ್ಜೆ ಇಡಿ. ಭೂಮಿ ಖರೀದಿ ವ್ಯವಹಾರ ಪ್ರಗತಿ ಇದ್ದಲ್ಲಿ ಕಮಿಷನ್ ವಿಚಾರಕ್ಕೆ ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಆಗಬಹುದು.

ಧನಸ್ಸು ರಾಶಿ
ದುಡ್ಡು ಬಂದಲ್ಲಿ ಅದನ್ನು ಎತ್ತಿಟ್ಟುಕೊಳ್ಳಬೇಕು ಎಂಬುದರ ಕಡೆ ಗಮನ ನೀಡಿ. ಎಲ್ಲ ವಿಚಾರದಲ್ಲೂ ಒಂದು ಲೆಕ್ಕಾಚಾರ ಇರಲಿ. ಬಂದ ಆದಾಯ ಎಷ್ಟು, ಮಾಡಿದ ಖರ್ಚು ಎಷ್ಟು ಎಂಬ ಬಗ್ಗೆ ನಿಗಾ ಇಡದೆ ಇದ್ದಲ್ಲಿ ಮುಂದೆ ಹಣಕಾಸಿಗೆ ತೊಂದರೆ ಅನುಭವಿಸಬೇಕಾಗುತ್ತದೆ, ಎಚ್ಚರ.

ಮಕರ ರಾಶಿ
ದೈಹಿಕ ಆಯಾಸ ಹೆಚ್ಚಾಗಲಿದೆ. ಜ್ವರ, ಶೀತ, ಕಫ ಸೇರಿದಂತೆ ಇತರ ಸಮಸ್ಯೆಗಳನ್ನು ನಿಮ್ಮನ್ನು ಕಾಡಬಹುದು. ಕಡ್ಡಾಯವಾಗಿ ವಿಶ್ರಾಂತಿ ಪಡೆಯುವುದು ಉತ್ತಮ. ಆಹಾರ, ನೀರು ಸೇವನೆ ಮಾಡುವಾಗ ಸ್ಥಳ ಸ್ವಚ್ಛತೆ ಹಾಗೂ ಶುದ್ಧತೆಗೆ ಪ್ರಾಶಸ್ತ್ಯ ನೀಡಬೇಕು. ಅನಿರೀಕ್ಷಿತವಾಗಿ ಅಶುಭ ಸುದ್ದಿ ಕೇಳಬೇಕಾಗುತ್ತದೆ

ಕುಂಭ ರಾಶಿ
ಸ್ವಕೇಂದ್ರಿತವಾಗಿ ಬಹಳ ಆಲೋಚನೆ ಮಾಡುತ್ತೀರಿ. ಇತರರಿಗಾಗಿ ಮಾಡಿದ ಸಹಾಯದಿಂದ ನಷ್ಟ ಅಥವಾ ತನ್ನ ಏಳಿಗೆ ಆಗಲಿಲ್ಲ ಎಂಬ ಭಾವ ನಿಮ್ಮನ್ನು ಬಹುವಾಗಿ ಕಾಡಲಿದೆ. ಕ್ರೆಡಿಟ್ ಕಾರ್ಡ್ ಅನ್ನು ಬೇರೆಯವರಿಗೆ ಬಳಸಲು ನೀಡುವ ಮುನ್ನ ಹಲವು ಸಲ ಆಲೋಚನೆ ಮಾಡಿ. ಅವರು ಹಣ ಕಟ್ಟದಿದ್ದಲ್ಲಿ ಏನು ಮಾಡಬೇಕೆಂದು ಚಿಂತಿಸಿಟ್ಟುಕೊಳ್ಳಿ.

ಮೀನ ರಾಶಿ
ಹೊಸ ಬಟ್ಟೆ, ಆಭರಣ ಇತ್ಯಾದಿಗಳ ಖರೀದಿಗಾಗಿ ಹಣ ಖರ್ಚು ಮಾಡುವ ಸಾಧ್ಯತೆ ಇದೆ. ಮಕ್ಕಳ ವಿವಾಹಕ್ಕೆ ಪ್ರಯತ್ನಿಸುತ್ತಿದ್ದಲ್ಲಿ ಅನುಕೂಲಕರ ಸಂಬಂಧಗಳು ಹುಡುಕಿಕೊಂಡು ಬರುವ ಸಾಧ್ಯತೆ ಇದೆ. ಹೊಸದಾಗಿ ಮನೆ ನಿರ್ಮಾಣ ಕಾರ್ಯಗಳು ಕೈಗೊಂಡಿದ್ದಲ್ಲಿ ಹಣದ ದಾರಿ ಗೋಚರ ಆಗುತ್ತದೆ