ಹೆಜಮಾಡಿ ಕೋಡಿಯಲ್ಲಿ ಇಂದು ದಿನಾಂಕ 19-01-2021 ರಂದು ಹೆಜಮಾಡಿ ಕೋಡಿ ಮೀನುಗಾರಿಕೆ ಬಂದರು ಇದರ ಶಂಕುಸ್ಥಾಪನೆಯನ್ನು ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪ ರವರು ನೆರವೇರಿಸಿದರು. . ಈ ಸಂದರ್ಭದಲ್ಲಿ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಮೀನುಗಾರಿಕೆ ಇಲಾಖೆ ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಕಾಪು ಕ್ಷೇತ್ರದ ಶಾಸಕರಾದ ಲಾಲಾಜಿ ಆರ್ ಮೆಂಡನ್, ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಶೋಭಾ ಕರಂದ್ಲಾಜೆ, ಶಾಸಕರಾದ ಶ್ರೀ ಕೆ.Continue reading “ಹೆಜಮಾಡಿ ಕೋಡಿ ಮೀನುಗಾರಿಕೆ ಬಂದರು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪರವರಿಂದ ಶಂಕುಸ್ಥಾಪನೆ”
Daily Archives: January 19, 2021
ಜನವರಿ 19, ಮಂಗಳವಾರ ; 2021 : ಇಂದಿನ ರಾಶಿಭವಿಷ್ಯ
19-1-2021 ಮಂಗಳವಾರ ಶಾರ್ವರಿ ಸಂ|ರದ ಮಕರ ಮಾಸ ದಿನ 5 ಸಲುವ ಪೌಷ ಶುದ್ಧ ಷಷ್ಠಿ 10 ಗಳಿಗೆ. ದಿನ ವಿಶೇಷ :ಕಿರು ಷಷ್ಠಿ ಬೆಳ್ಳಿಪ್ಪಾಡಿ ಉತ್ಸವ ನಿತ್ಯ ನಕ್ಷತ್ರ :ಉತ್ತರಾಭಾದ್ರಾ 7||ಗಳಿಗೆ. ಮಹಾ ನಕ್ಷತ್ರ :ಉತ್ತರಾಷಾಢಾ. ಋತು :ಹೇಮಂತ ರಾಹುಕಾಲ :3.00-4.30 ಗಂಟೆಗುಳಿಕ ಕಾಲ :12.00-1.30 ಗಂಟೆಸೂರ್ಯಾಸ್ತ :6.23 ಗಂಟೆ ಸೂರ್ಯೋದಯ :7.00 ಗಂಟೆ ಮೇಷ ವಿಷಯಗಳನ್ನು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದು ಉತ್ತಮ. ಮನೆಯವರ ವಿಶ್ವಾಸದ ದುರುಪಯೋಗ ಮಾಡಿಕೊಳ್ಳದಿರಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿಯನ್ನು ಕಾಣುವಿರಿ. ಸಂಜೆಯContinue reading “ಜನವರಿ 19, ಮಂಗಳವಾರ ; 2021 : ಇಂದಿನ ರಾಶಿಭವಿಷ್ಯ”
ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಡಾ. ಅನಿಲ್ ಥಾಮಸ್ ಉಡುಪಿ ಜಿಲ್ಲಾ ಬಿಜೆಪಿ ಕಛೇರಿ ಭೇಟಿ
ಇಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಮೋರ್ಚಾದ ಪ್ರಧಾನ ಕಾರ್ಯದರ್ಶಿಯವರಾದ ಡಾ. ಅನಿಲ್ ಥಾಮಸ್ ರವರು ಉಡುಪಿ ಜಿಲ್ಲಾ ಬಿಜೆಪಿ ಕಛೇರಿಗೆ ಭೇಟಿ ನೀಡಿದರು. ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರು ಕುಯಿಲಾಡಿ ಸುರೇಶ್ ನಾಯಕ್ ರವರ ಅಧ್ಯಕ್ಷತೆಯಲ್ಲಿ ರಾಜ್ಯ ಅಲ್ಪಸಂಖ್ಯಾತ ಮೋರ್ಚಾದ ಪ್ರಧಾನ ಕಾರ್ಯದರ್ಶಿಯವರಾದ ಡಾ. ಅನಿಲ್ ಥಾಮಸ್ ರವರನ್ನು ಸ್ವಾಗತಿಸಲಾಯಿತು.ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷರಾದ ದಾವುದ್ ಅಬೂಬಕರ್ ರವರ ಮಾರ್ಗದರ್ಶನದಲ್ಲಿ ಉಪಾಧ್ಯಕ್ಷರಾದ ರುಡಾಲ್ಫ್ ಡಿಸೋಜರವರ ಮುಂದಾಳತ್ವದಲ್ಲಿ ಕಾರ್ಯಕ್ರಮ ನಡೆಸಲಾಯಿತು.ರಾಜ್ಯ ಅ.ಸಂ.ಮೋ. ಕಾರ್ಯದರ್ಶಿಯವರಾದ ಸಲೀಂ ಅಂಬಾಗಿಲುರವರು ಅಲ್ಪಸಂಖ್ಯಾತರ ಯೋಜನೆಗಳContinue reading “ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಡಾ. ಅನಿಲ್ ಥಾಮಸ್ ಉಡುಪಿ ಜಿಲ್ಲಾ ಬಿಜೆಪಿ ಕಛೇರಿ ಭೇಟಿ”
ರಘುಪತಿ ಭಟ್ ಮನವಿ ಮೇರೆಗೆ ಕರಂಬಳ್ಳಿಯಲ್ಲಿ ಡಾll ವಿ. ಎಸ್. ಆಚಾರ್ಯ ಸ್ಮರಣಾರ್ಥ ಸಭಾಭವನ – ಅನ್ನಛತ್ರ ನಿರ್ಮಿಸಲು ರೂ. 4.00 ಕೋಟಿ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆ
ಉಡುಪಿಯ ಕರಂಬಳ್ಳಿ ವೆಂಕಟರಮಣ ದೇವಸ್ಥಾನದಲ್ಲಿ ಇಂದು ದಿನಾಂಕ 18-01-2021ರಂದು ನಡೆದ ಬ್ರಹ್ಮಕಲಶೋತ್ಸವದಲ್ಲಿ ಪಾಲ್ಗೊಂಡ ಕರ್ನಾಟಕದ ಗೌರವಾನ್ವಿತ ಮುಖ್ಯಮಂತ್ರಿಗಳಾದ ಶ್ರೀ ಬಿ. ಎಸ್. ಯಡಿಯೂರಪ್ಪ ಅವರು ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡುತ್ತಾ ಶಾಸಕ ಕೆ. ರಘುಪತಿ ಭಟ್ ಅವರು ಮನವಿ ಮಾಡಿರುವಂತೆ ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನದ ಆವರಣದಲ್ಲಿ ಡಾll ವಿ. ಎಸ್. ಆಚಾರ್ಯ ಸ್ಮರಣಾರ್ಥ ಸಭಾಭವನ ಹಾಗೂ ಅನ್ನಛತ್ರ ನಿರ್ಮಾಣಕ್ಕೆ ಸರ್ಕಾರದಿಂದ ರೂ. 4.00 ಕೋಟಿ ನೀಡುವುದಾಗಿ ಘೋಷಣೆ ಮಾಡಿದರು. ಶ್ರೀ ವೆಂಕಟರಮಣ ದೇವಸ್ಥಾನ ಕರಂಬಳ್ಳಿContinue reading “ರಘುಪತಿ ಭಟ್ ಮನವಿ ಮೇರೆಗೆ ಕರಂಬಳ್ಳಿಯಲ್ಲಿ ಡಾll ವಿ. ಎಸ್. ಆಚಾರ್ಯ ಸ್ಮರಣಾರ್ಥ ಸಭಾಭವನ – ಅನ್ನಛತ್ರ ನಿರ್ಮಿಸಲು ರೂ. 4.00 ಕೋಟಿ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆ”
ಉಡುಪಿ ನಗರಸಭೆಗೆ ನಾಮ ನಿರ್ದೇಶಿತ ಸದಸ್ಯರ ನೇಮಕ ಮುಖ್ಯಮಂತ್ರಿಯವರಿಗೆ ಶಾಸಕ ರಘುಪತಿ ಭಟ್ ಕೃತಜ್ಞತೆ
ಕರ್ನಾಟಕ ಪುರಸಭೆ ಕಾಯ್ದೆ – 1964ರ ಪ್ರಕರಣ11(1)(ಬಿ) ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಸರ್ಕಾರವು ಉಡುಪಿ ನಗರಸಭೆಗೆ ಸದಸ್ಯರನ್ನು ನಾಮನಿರ್ದೇಶನ ಮಾಡಿ ಆದೇಶಿಸಿದೆ. ಶ್ರೀ ವಿಜಯ ಕುಂದರ್, ವಡಬಾಂಡೇಶ್ವರ ಮಲ್ಪೆ, ಶ್ರೀ ದೇವದಾಸ್ ವಿ ಶೆಟ್ಟಿಗಾರ್, ಕಿನ್ನಿಮುಲ್ಕಿ, ಶ್ರೀ ದಿನೇಶ್ ಪೈ, ಸುಬ್ರಹ್ಮಣ್ಯನಗರ ಪುತ್ತೂರು, ಶ್ರೀಮತಿ ಸುಬೇದಾ ಪುತ್ತೂರು, ಶ್ರೀಮತಿ ಅರುಣಾ ಎಸ್. ಪೂಜಾರಿ ಶಿವಳ್ಳಿ ಇವರನ್ನು ಉಡುಪಿ ನಗರಸಭೆಗೆ ಸರ್ಕಾರವು ನಾಮನಿರ್ದೇಶನ ಮಾಡಿರುತ್ತದೆ ನಗರ ಸಭೆಗೆ ಸದಸ್ಯರ ನಾಮನಿರ್ದೇಶನ ಮಾಡಿರುವ ರಾಜ್ಯದ ಮುಖ್ಯಮಂತ್ರಿಯವರಾದ ಶ್ರೀ ಬಿ.ಎಸ್Continue reading “ಉಡುಪಿ ನಗರಸಭೆಗೆ ನಾಮ ನಿರ್ದೇಶಿತ ಸದಸ್ಯರ ನೇಮಕ ಮುಖ್ಯಮಂತ್ರಿಯವರಿಗೆ ಶಾಸಕ ರಘುಪತಿ ಭಟ್ ಕೃತಜ್ಞತೆ”