
ಪಂಚಾಂಗ
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಹೇಮಂತ ಋತು, ಮಾರ್ಗಶಿರ ಮಾಸ, ಕೃಷ್ಣಪಕ್ಷ.
ವಾರ : ಬುಧವಾರ ತಿಥಿ : ಅಮಾವಾಸ್ಯೆ
ನಕ್ಷತ್ರ : ಉತ್ತರಾಷಾಢ
ರಾಹುಕಾಲ: 12.32 ರಿಂದ 1.58
ಗುಳಿಕಕಾಲ: 11.06 ರಿಂದ 12.32
ಯಮಗಂಡಕಾಲ: 8.14 ರಿಂದ 9.40
ಮೇಷ
ವ್ಯವಹಾರದಲ್ಲಿ ಉತ್ತಮ ಲಾಭ ನಿರೀಕ್ಷೆ. ಸಂಪನ್ಮೂಲ ಕ್ರೋಢೀಕರಣದಲ್ಲಿ ಯಶಸ್ಸು. ಮನಃಶಾಂತಿಗಾಗಿ ದೇವಸ್ಥಾನ ಅಥವಾ ಪ್ರವಚನ ಮಂದಿರಗಳಿಗೆ ಭೇಟಿ. ಪರಿವರ್ತನೆಗಳಿಗಾಗಿ ವಿಫುಲ ಅವಕಾಶಗಳು ತೆರೆದುಕೊಳ್ಳಲಿವೆ.
ವೃಷಭ
ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ಕೆಲಸವೊಂದು ಪೂರ್ಣಗೊಳ್ಳಲಿದೆ. ಜೀವನದಲ್ಲಿದ್ದ ನಿರುತ್ಸಾಹ ದೂರವಾಗುವುದರಿಂದ ಹೆಚ್ಚಿನ ಅವಕಾಶಗಳನ್ನು ನಿಮ್ಮದಾಗಿಸಿಕೊಳ್ಳುವಿರಿ.
ಮಿಥುನ
ಕಚೇರಿ ಕೆಲಸಗಳಲ್ಲಿ ಕಿರಿಕಿರಿ. ಬರಹಗಾರರು, ಮುದ್ರಣಕಾರಿಗೆ ಹೆಚ್ಚಿನ ಅವಕಾಶಗಳು ಒದಗಿಬರಲಿದೆ. ಹೊಸ ಗೆಳೆಯರ ಪರಿಚಯದೊಂದಿಗೆ ಹೊಸತನ ನಿಮ್ಮ ಚೈತನ್ಯವನ್ನು ಮತ್ತಷ್ಟು ಹುರಿದುಂಬಿಸಲಿದೆ.
ಕಟಕ
ಉತ್ತಮ ಆರೋಗ್ಯವನ್ನು ಹೊಂದುವಿರಿ. ಮನೆಯವರೊಂದಿಗೆ ಉತ್ತಮ ಬಾಂಧವ್ಯ ಸಾಧಿಸಲಿದ್ದೀರಿ. ನಿಮ್ಮ ಅನಿಸಿಕೆಗಳಿಗೆ ಗಮನ ಕೊಟ್ಟು ಕಾರ್ಯನಿರ್ವಹಿಸಿದಲ್ಲಿ ವೈಯಕ್ತಿಕ ಜೀವನ ಅಭಿವೃದ್ಧಿಯಾಗಲಿದೆ.
ಸಿಂಹ
ಸ್ಥಿರ ಮತ್ತು ಚರಾಸ್ತಿಗಳ ಬಗ್ಗೆ ದಾಯಾದಿಗಳಲ್ಲಿನ ಭಿನ್ನಾಭಿಪ್ರಾಯಗಳು ಮಿತ್ರರ ಮೂಲಕ ಬಗೆಹರಿಯುವುದು. ನೇರವಾದ ಮಾತುಗಳು ಪ್ರಮುಖ ಎನಿಸುವುದು. ಆರ್ಥಿಕ ವ್ಯವಹಾರದಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ.
ಕನ್ಯಾ
ಬಂಧು ಬಳಗದವರ ಸಹಕಾರದಿಂದ ಎಲ್ಲಾ ಕೆಲಸಗಳು ಸರಾಗವಾಗಿ ಮುಗಿದು ಮನಸ್ಸಿಗೆ ನೆಮ್ಮದಿ. ಮಕ್ಕಳ ಅಭಿಲಾಷೆ ಈಡೇರಿಸುವ ಸಲುವಾಗಿ ವೆಚ್ಚ ಭರಿಸಬೇಕಾದೀತು.
ತುಲಾ
ಸಹೋದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯ ಸಾಧ್ಯತೆ. ಗುರುಹಿರಿಯರ ಆಶೀರ್ವಾದದಿಂದ ಹೆಚ್ಚಿನ ಕೆಲಸಗಳು ನೆರವೇರುವವು. ಸಂಸಾರದಲ್ಲಿನ ಪರಸ್ಪರ ಭಿನ್ನಾಭಿಪ್ರಾಯಗಳು ದೂರವಾಗಲಿದೆ.
ವೃಶ್ಚಿಕ
ನಿತ್ಯದ ಕಾರ್ಯಕ್ರಮಗಳಿಂದ ಬದಲಾವಣೆ ಕಾಣಲಿರುವಿರಿ. ಕೆಲಸದವರಿಗೆ ವ್ಯವಹಾರವನ್ನು ಮನವರಿಕೆ ಮಾಡಿಕೊಡುವುದರಿಂದ ಯಶಸ್ಸು. ಉತ್ತಮ ಲಾಭವನ್ನು ಹೊಂದಲಿದ್ದೀರಿ. ಗೆಳೆಯರ ಭೇಟಿ ಸಾಧ್ಯತೆ.
ಧನು
ಹಣಕಾಸಿನ ವಿಚಾರದಲ್ಲಿ ಚೇತರಿಕೆ. ಮನೆ ಕಟ್ಟುವ ವಿಷಯವಾಗಿ ಮನೆಯವರೊಂದಿಗೆ ಕುಳಿತು ಚರ್ಚಿಸಿ ನಿರ್ದಾರ ತೆಗೆದುಕೊಳ್ಳುವಲ್ಲಿ ಯಶಸ್ಸು ಕಾಣುವಿರಿ. ಮನೆದೇವರ ಆರಾಧನೆಯಿಂದ ಹೆಚ್ಚಿನ ಶುಭ ಫಲ ದೊರೆಯಲಿದೆ.
ಮಕರ
ಹಿಂದಿನ ಸಾಲಗಳಿಂದ ಮುಕ್ತರಾಗಲು ಹೊಸ ಮಾರ್ಗವೊಂದು ಗೋಚರಿಸಲಿದೆ. ಸ್ನೇಹಿತರ ಸಹಕಾರದಿಂದಾಗಿ ವ್ಯವಹಾರವನ್ನು ಉತ್ತಮ ಸ್ಥಿತಿಗೆ ಒಯ್ಯಲಿದ್ದೀರಿ. ದೂರದ ಪ್ರಯಾಣ ಅಷ್ಟೊಂದು ಉತ್ತಮವಾಗಿರಲಾರದು.
ಕುಂಭ
ಹೊಸ ಕೆಲಸದ ಬಗ್ಗೆ ಚಿಂತನೆಯಲ್ಲಿ ಯಶಸ್ಸು. ಕಟ್ಟಡ ಸಾಮಗ್ರಿ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ದೊರಕಲಿದೆ. ಅತಿಯಾದ ಆತ್ಮವಿಶ್ವಾಸದಿಂದಾಗಿ ಹೆರವರನ್ನು ಕಡೆಗಣಿಸದಿರುವುದು ಉತ್ತಮ.
ಮೀನ
ಪತ್ರಕರ್ತರಿಗೆ ಹೊಸ ಸುದ್ದಿ ದೊರೆಯಲಿದೆ. ನಿಮ್ಮ ಆಶಾವಾದಕ್ಕೆ ಪುಷ್ಟಿ ದೊರೆಯಲಿದೆ. ಬಂದ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ಯಶಸ್ಸನ್ನು ಸಾಧಿಸಲಿದ್ದೀರಿ.