Design a site like this with WordPress.com
Get started

04 ಜೂನ್,2020 ಗುರುವಾರ ಇಂದಿನ ರಾಶಿ ಫಲ

ಮೇಷ ತುರ್ತು ವಿಷಯಕ್ಕಾಗಿ ಸಂಬಂಧಿಕರ ನೆರವು ಪಡೆಯಬೇಕಾದಿತು. ಸಂಸಾರದಲ್ಲಿ ನೆಮ್ಮದಿ. ಅನಗತ್ಯ ಸುತ್ತಾಟದಿಂದಾಗಿ ದೇಹಾಲಸ್ಯ ಉಂಟಾಗಬಹುದು. ಗುರುದೇವತಾ ದರ್ಶನ ಮಾಡುವ ಸಾಧ್ಯತೆ. ವೃಷಭ ಹೊಸ ಉದ್ಯಮದ ಕೆಲಸಗಳು ಪೂರ್ಣಗೊಂಡು ನೆಮ್ಮದಿ. ಮಕ್ಕಳಿಗೆ ವಿವಾಹ ವಿಷಯದಲ್ಲಿ ನೆಂಟರಿಂದ ಒತ್ತಾಯಪೂರ್ವಕ ಪ್ರಸ್ತಾಪಗಳು ಬರಲಿವೆ. ಸಾಲದಿಂದ ಮುಕ್ತಿ ಹೊಂದಿ ನಿರಾಳತೆ ಅನುಭವಿಸುವಿರಿ. ಮಿಥುನ ತರಕಾರಿ, ಹಣ್ಣುಗಳ ವ್ಯಾಪಾರಿಗಳಿಗೆ ಬಹು ಬೇಡಿಕೆಯಿಂದಾಗಿ ಅಧಿಕ ಲಾಭ. ಪತ್ನಿ ವರ್ಗದವರ ಮನೆಗಳಿಗೆ ಕುಟುಂಬ ಸಮೇತರಾಗಿ ಭೇಟಿ ನೀಡುವ ಸಾಧ್ಯತೆ. ಧಾನ್ಯ ವ್ಯಾಪಾರಿಗಳಿಗೆ ಹಿನ್ನೆಡೆ. ಕಟಕ ಹಂತContinue reading “04 ಜೂನ್,2020 ಗುರುವಾರ ಇಂದಿನ ರಾಶಿ ಫಲ”

ಹಿಂದೂ ಧರ್ಮದಿಂದಲೇ ಸಿಕ್ಕ ಕೊರೋನಾ ಔಷಧ? ಎಂದ ಬ್ರಿಟನ್ ವಿಜ್ಞಾನಿಗಳು

ಭಾರತೀಯ ಸಂಸ್ಕೃತಿಯಲ್ಲಿ ಯಾವುದು ಪ್ರಾಚೀನ ಕಾಲದಿಂದಲೂ ಹೇಳಿದ್ದರೋ ಅದು ಈಗ ಪಾಶ್ಚಾತ್ಯ ವಿಜ್ಞಾನಿಗಳು ಸಂಶೋಧನೆ ಮಾಡಿ ಮಾನ್ಯತೆಯನ್ನು ನೀಡುತ್ತಿದ್ದಾರೆ. ಇದರಿಂದ ಅವರು ಎಷ್ಟು ಹಿಂದುಳಿದಿದ್ದಾರೆ ಎಂಬುದು ಗಮನಕ್ಕೆ ಬರುತ್ತದೆ. ಹೌದು ಪಾಶ್ಚಾತ್ಯರನ್ನು ಅನುಸರಿಸುವ ಭಾರತೀಯರು ತಮ್ಮನ್ನು ಹೇಗೆ ಹಿಂದುಳಿದವರು ಎಂದು ತಿಳಿದಿದ್ದಾರೆ ಎಂಬುದು ಕೂಡ ಈಗ ಗಮನಕ್ಕೆ ಬರುತ್ತದೆ.ಕೊರೋನಾಗೆ ಸಂಬಂಧಿಸಿದಂತೆ ಆಯುಷ್ ಸಚಿವಾಲಯವು ನೀಡಿದ ಹಲವಾರು ಸಲಹೆಗಳಲ್ಲಿ ಬಿಸಿನೀರಿಗೆ ಉಪ್ಪು ಸೇರಿಸಿ ಬಾಯಿ ಮುಕ್ಕಳಿಸುವುದು ಸೇರಿದೆ. ಬಾಯಿ ಮುಕ್ಕಳಿಸುವ ಅಭ್ಯಾಸವು ಭಾರತೀಯ ಸಂಸ್ಕೃತಿಯಲ್ಲಿ ಪ್ರಾಚೀನದಿಂದಲೂ ಇದೆ. ಈಗContinue reading “ಹಿಂದೂ ಧರ್ಮದಿಂದಲೇ ಸಿಕ್ಕ ಕೊರೋನಾ ಔಷಧ? ಎಂದ ಬ್ರಿಟನ್ ವಿಜ್ಞಾನಿಗಳು”

ಕ್ವಾರಂಟೈನ್ ಸಮಯದಲ್ಲಿ ತಪ್ಪು ವಿಳಾಸ ನೀಡಿದಲ್ಲಿ ಕ್ರಮ : ಜಿಲ್ಲಾಧಿಕಾರಿ ಜಿ.ಜಗದೀಶ್

ಉಡುಪಿ ಜೂನ್ 3 : ಜಿಲ್ಲೆಗೆ ಹೊರಜಿಲ್ಲೆಯಿಂದ ಆಗಮಿಸುವವರು ಕ್ವಾರಂಟೈನ್ ಗೆ ತೆರಳುವ ಮುನ್ನ ತಪ್ಪು ವಿಳಾಸ , ದೂರವಾಣಿ ಸಂಖ್ಯೆ ನೀಡಿದಲ್ಲಿ ಅಂತಹವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಸಿದ್ದಾರೆ. ಹೊರ ರಾಜ್ಯದಿಂದ ಬರುವವರು ಕಡ್ಡಾಯವಾಗಿ ಸೇವಾ ಸಿಂಧು ಆಪ್ ನಲ್ಲಿ ನೊಂದಣಿ ಮಾಡಿಕೊಂಡಿರಬೇಕು. ರಸ್ತೆ ಮಾರ್ಗದಲ್ಲಿ ಆಗಮಿಸುವವರು , ರಾಜ್ಯದ ಗಡಿಯಲ್ಲಿರುವ ಸ್ವೀಕಾರ (BRC – BORDER RECEIVE CENTER) ಕೇಂದ್ರದಲ್ಲಿ ಸೂಚಿಸುವ , ತಮ್ಮ ಜಿಲ್ಲೆಯಲ್ಲಿನ, ಸ್ವೀಕಾರ ಕೇಂದ್ರ (DRCContinue reading “ಕ್ವಾರಂಟೈನ್ ಸಮಯದಲ್ಲಿ ತಪ್ಪು ವಿಳಾಸ ನೀಡಿದಲ್ಲಿ ಕ್ರಮ : ಜಿಲ್ಲಾಧಿಕಾರಿ ಜಿ.ಜಗದೀಶ್”

ಇನ್ಮುಂದೆ ಕಂಟೇನ್ಮೆಂಟ್ ಜೋನ್ ಇರಲ್ಲ, ಸೋಂಕಿತನ ಮನೆಯೇ ಸೀಲ್ ಡೌನ್

ಮಂಗಳೂರು: ಇನ್ಮುಂದೆ ಕೊರೋನಾ ಸೋಂಕಿತನ ಮನೆಯನ್ನೇ ಸೀಲ್ ಡೌನ್ ಮಾಡಲಾಗುವುದು. ಮನೆಯಲ್ಲಿರುವ ವ್ಯಕ್ತಿಗೆ ಕೊರೋನಾ ಸೋಂಕು ಇದ್ದರೆ ಮನೆ ಸೀಲ್ ಡೌನ್ ಮಾಡಲಾಗುವುದು. ಇನ್ನು ಮುಂದೆ ಕಂಟೇನ್ಮೆಂಟ್ ಜೋನ್ ಇರುವುದಿಲ್ಲ. ಮನೆಯಲ್ಲಿರುವ ವ್ಯಕ್ತಿಗೆ ಸೋಂಕು ತಗಲಿದರೆ ಮನೆಯನ್ನು ಸೀಲ್ ಡೌನ್ ಮಾಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.ಕೇವಲ ಮನೆಯನ್ನು ಮಾತ್ರ 14 ದಿನ ಸೀಲ್ ಡೌನ್ ಮಾಡಲಾಗುವುದು. ಮಹಾರಾಷ್ಟ್ರದಿಂದ ಬಂದ ಎಲ್ಲರಿಗೂ ಟೆಸ್ಟ್ ಮಾಡಲಾಗುತ್ತಿದೆ. ಇನ್ನು ಮುಂದೆ ಲಕ್ಷಣ ಇದ್ದವರಿಗೆ ಮಾತ್ರ ಕೊರೋನಾ ಟೆಸ್ಟ್Continue reading “ಇನ್ಮುಂದೆ ಕಂಟೇನ್ಮೆಂಟ್ ಜೋನ್ ಇರಲ್ಲ, ಸೋಂಕಿತನ ಮನೆಯೇ ಸೀಲ್ ಡೌನ್”

ಹೊರ ದೇಶ, ಹೊರ ರಾಜ್ಯಗಳಿಂದ ಬಂದವರಿಗೆ ಹೋಂ ಕ್ವಾರಂಟೈನ್ ಮಾಡಿ ಮನೆ ಸೀಲ್ ಡೌನ್ ಮಾಡಿ : ಶಾಸಕ ಕೆ. ರಘುಪತಿ ಭಟ್ ಸಲಹೆ

ಹೊರ ದೇಶ, ಹೊರ ರಾಜ್ಯಗಳಿಂದ ಬರುವವರು ನಮ್ಮವರು. ಅವರು ಬರಲೇ ಬೇಕು. ಆದರೆ ಜಿಲ್ಲೆಯಲ್ಲಿ ಈಗಿರುವ ಪರಿಸ್ಥಿತಿಗೆ ಇಲ್ಲಿನ ಜನತೆ ಭಯ ಭೀತರಾಗಿದ್ದು, ಅವರ ರಕ್ಷಣೆಯೂ ನಮ್ಮ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಹೊರ ರಾಜ್ಯ, ಹೊರ ದೇಶದಿಂದ ಬಂದವರು ಅವರ ಮನೆಯಲ್ಲಿ ಇರುವಂತೆ ಸೂಚಿಸಿ ಮನೆಯನ್ನು ಸೀಲ್ ಡೌನ್ ಮಾಡುವುದು ಸೂಕ್ತ ಎಂಬ ಸಲಹೆಯನ್ನು ನೀಡಿದರು. ವೈದ್ಯಕೀಯ ಶಿಕ್ಷಣ ಸಚಿವರಾದ ಡಾll ಸುಧಾಕರ್ ರವರು ಇಂದು ದಿ.03-06-2020 ಉಡುಪಿಗೆ ಭೇಟಿ ನೀಡಿ ಕೋವಿಡ್ -19 ಸಂಬಂಧ ಜಿಲ್ಲೆಯContinue reading “ಹೊರ ದೇಶ, ಹೊರ ರಾಜ್ಯಗಳಿಂದ ಬಂದವರಿಗೆ ಹೋಂ ಕ್ವಾರಂಟೈನ್ ಮಾಡಿ ಮನೆ ಸೀಲ್ ಡೌನ್ ಮಾಡಿ : ಶಾಸಕ ಕೆ. ರಘುಪತಿ ಭಟ್ ಸಲಹೆ”

ಉಡುಪಿ, ದ.ಕ. ಜಿಲ್ಲೆಯಿಂದ ರಾತ್ರಿ ಬಸ್‌ ಸಂಚಾರ ಆರಂಭ

ಉಡುಪಿ/ಮಂಗಳೂರು: ಉಡುಪಿ, ದ.ಕ. ಜಿಲ್ಲೆಯಿಂದ ದೂರದ ಊರುಗಳಿಗೆ ಸೀಮಿತವಾಗಿ ಕೆಎಸ್ಆರ್ ಟಿಸಿ ಮತ್ತು ಖಾಸಗಿ ಬಸ್‌ಗಳ ರಾತ್ರಿ ಸಂಚಾರ ಆರಂಭವಾಗಿದೆ. ಕೆಎಸ್ಸಾರ್ಟಿಸಿ ಉಡುಪಿ, ಮಂಗಳೂರು, ಪುತ್ತೂರು ವಿಭಾಗದಿಂದ ರಾತ್ರಿ 9ರ ವರೆಗೆ ಬಸ್‌ ಸಂಚಾರ ನಡೆಸಲಿದೆ. ಸದ್ಯ ಬೆಂಗಳೂರಿಗೆ ಮಾತ್ರ ಕೊನೆಯ ಬಸ್‌ ರಾತ್ರಿ 9ಕ್ಕೆ ಸಂಚರಿಸಲಿದೆ. ಉಡುಪಿ, ಮಂಗಳೂರು ವಿಭಾಗದಿಂದ ಬಾಗಲಕೋಟೆ, ಹುಬ್ಬಳ್ಳಿ, ಬಳ್ಳಾರಿ, ರಾಯ ಚೂರು, ಬೆಳಗಾವಿ ಸಹಿತ ದೂರದ ಊರಿಗೆ ರಾತ್ರಿ 8ರ ವರೆಗೂ ಬಸ್‌ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.Continue reading “ಉಡುಪಿ, ದ.ಕ. ಜಿಲ್ಲೆಯಿಂದ ರಾತ್ರಿ ಬಸ್‌ ಸಂಚಾರ ಆರಂಭ”

ಭಾರತದಲ್ಲಿ ಕೊರೋನಾದಿಂದಾಗಿ ಶೇಕಡಾ 50 ಕ್ಕಿಂತ ಹೆಚ್ಚು 50 ವರ್ಷದ ಮೇಲ್ಪಟ್ಟವರೇ ಬಲಿ

ರೋಗ ನಿರೋಧಕ ಶಕ್ತಿ ಕಡಿಮೆಯಾಗಿರುವುದರಿಂದ ಪ್ರಾಯವಾದವರಿಗೆ ಕೊರೊನಾ ವೈರಸ್ ಬೇಗನೇ ತಗುಲುವ ಸಾಧ್ಯತೆಯಿದ್ದು, ಸಾವು ಸಂಭವಿಸುವ ಅಪಾಯ ಜಾಸ್ತಿಯಾಗಿದೆ. ಇದನ್ನು ಸರಕಾರ ಬಿಡುಗಡೆ ಮಾಡಿರುವ ಅಂಕಿಅಂಶಗಳು ಸಾರುತ್ತಿದೆಭಾರತದ ಜನಸಂಖ್ಯೆಯ ಶೇಕಡಾ 10ರಷ್ಟಿರುವ ವೃದ್ಧರು, ದೇಶದ ಒಟ್ಟು ಕೋವಿಡ್ 19 ಸಾವುಗಳ ಪೈಕಿ ಶೇಕಡಾ 50ಕ್ಕಿಂತಲೂ ಹೆಚ್ಚು ಪ್ರಕರಣಗಳನ್ನು ಹೊಂದಿದೆ ಎಂಬ ಮಾಹಿತಿಯನ್ನು ಒದಗಿಸಿದೆ. ಇದರ ಜೊತೆಗೆ ಶೇಕಡಾ 73ರಷ್ಟು ಸಾವಿನ ಪ್ರಕರಣಗಳು ಆರೋಗ್ಯ ತೊಂದರೆ ಇರುವವರನ್ನು ಸೇರಿದೆ. ಹಾಗಿದ್ದರೂ ಇತರೆ ದೇಶಗಳಿಗೆ ಹೋಲಿಸಿದಾಗ ಕೋವಿಡ್ ಸಾವಿನ ಸಂಖ್ಯೆ ನಿಯಂತ್ರಿಸಲು ಭಾರತContinue reading “ಭಾರತದಲ್ಲಿ ಕೊರೋನಾದಿಂದಾಗಿ ಶೇಕಡಾ 50 ಕ್ಕಿಂತ ಹೆಚ್ಚು 50 ವರ್ಷದ ಮೇಲ್ಪಟ್ಟವರೇ ಬಲಿ”

ರೈತರು, ಉದ್ಯೋಗದ ನಿರೀಕ್ಷೆಯಲ್ಲಿದ್ದ ಗ್ರಾಮೀಣ ಜನತೆಗೆ ಭರ್ಜರಿ ‘ಗುಡ್ ನ್ಯೂಸ್

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಸಣ್ಣ ಮತ್ತು ಅತಿ ಸಣ್ಣ ರೈತರು, ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ, ಬಡತನ ರೇಖೇಗಿಂತ ಕೆಳಗೆ ಇರುವ ರೈತರು, ಜಮೀನು, ಜಾಬ್‍ಕಾರ್ಡ ಹಾಗೂ ಬ್ಯಾಂಕ್ ಖಾತೆ ಹೊಂದಿರುವ ರೈತರು ಯೋಜನೆಯ ಫಲಾನುಭವಿಗಳಾಗಿರುತ್ತಾರೆ.ದಿನಕ್ಕೆ 275 ರೂ. ರಂತೆ ಗಂಡು ಮತ್ತು ಹೆಣ್ಣು ಕೂಲಿಕಾರ್ಮಿಕರಿಗೆ ಸಮಾನ ವೇತನ ನೀಡಲಾಗುವುದು. ಪ್ರತಿ ಕುಟುಂಬಕ್ಕೆ ಗರಿಷ್ಠ 100 ದಿನಗಳವರೆಗೆ ಉದ್ಯೋಗ ಒದಗಿಸಬಹುದಾಗಿರುತ್ತದೆ. ಬರಪೀಡಿತ ತಾಲ್ಲೂಕುಗಳಲ್ಲಿ ಗರಿಷ್ಠ 150 ದಿನಗಳವರೆಗೆ ಉದ್ಯೋಗ ಒದಗಿಸಬಹುದಾಗಿರುತ್ತದೆ. ರೈತರುContinue reading “ರೈತರು, ಉದ್ಯೋಗದ ನಿರೀಕ್ಷೆಯಲ್ಲಿದ್ದ ಗ್ರಾಮೀಣ ಜನತೆಗೆ ಭರ್ಜರಿ ‘ಗುಡ್ ನ್ಯೂಸ್”

ಬಿಗ್ ನ್ಯೂಸ್: ವಾಯುಭಾರ ಕುಸಿತ, ಚಂಡಮಾರುತ ಪರಿಣಾಮ 2 ದಿನ ಭಾರೀ ಮಳೆ ಸಾಧ್ಯತೆ

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು ರಾಜ್ಯದ ಹಲವೆಡೆ ಮಳೆಯಾಗತೊಡಗಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ, ಕಾರವಾರದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು ಮೀನುಗಾರಿಕೆಗೆ ತೆರಳದಂತೆ ಸೂಚನೆ ನೀಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಜಿಲ್ಲೆಯ ಬೆಳ್ತಂಗಡಿ, ಸುಳ್ಯ ಭಾಗದಲ್ಲಿ ಮಳೆಯಾಗತೊಡಗಿದೆ. ಎರಡು ದಿನ ಮಳೆಯಾಗುವ ಸಾಧ್ಯತೆ ಇದ್ದು, ಮೀನುಗಾರಿಕೆಗೆ ತೆರಳದಂತೆ ಮನವಿ ಮಾಡಲಾಗಿದೆ. ನಿಸರ್ಗ ಚಂಡಮಾರುತದ ಪರಿಣಾಮ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ವಾಯುಭಾರ ಕುಸಿತದ ಪರಿಣಾಮ ಕರಾವಳಿ ಮತ್ತು ಮಲೆನಾಡುContinue reading “ಬಿಗ್ ನ್ಯೂಸ್: ವಾಯುಭಾರ ಕುಸಿತ, ಚಂಡಮಾರುತ ಪರಿಣಾಮ 2 ದಿನ ಭಾರೀ ಮಳೆ ಸಾಧ್ಯತೆ”

ಮಳೆಗಾಲದ ಶೀತ – ಕೆಮ್ಮಿಗೆ ಇಲ್ಲಿದೆ ಸಿರಪ್…!

ಒಂದು ಇಂಚು ಹಸಿ ಅರಿಶಿಣ, ಸ್ವಲ್ಪ ಹಸಿ ಶುಂಠಿಯನ್ನು ಚೆನ್ನಾಗಿ ತೊಳೆದು 1 ಲೋಟ ನೀರಿಟ್ಟು ಕುದಿಸಿ. ಜೊತೆಗೆ ಇದರಲ್ಲಿ 3 ರಿಂದ 4 ಲವಂಗವನ್ನು ಹಾಕಿ. 10 ರಿಂದ 12 ಪುದೀನಾ ಎಲೆ, ಕಾಲು ಚಮಚ ಓಂ ಕಾಳನ್ನು ಹಾಕಿ. ಒಂದು ಲೋಟ ನೀರು ಅರ್ಧಕ್ಕೆ ಇಳಿಯಲಿ. ನಂತರ ಇದನ್ನು ಸೋಸಿ.ಮಳೆಗಾಲದಲ್ಲಿ ತುಂತುರು ಹನಿಯನ್ನು ಲೆಕ್ಕಿಸದೆ ಓಡಾಡಿ ನೆಗಡಿ, ಕೆಮ್ಮು ತಂದುಕೊಳ್ಳುತ್ತೇವೆ. ಇದನ್ನು ನಿವಾರಿಸುವ ಮನೆಮದ್ದುಗಳ ಬಗ್ಗೆ ತಿಳಿಯೋಣ. ಈ ಕಷಾಯ ತಣ್ಣಗಾದ ಮೇಲೆ ಒಂದುContinue reading “ಮಳೆಗಾಲದ ಶೀತ – ಕೆಮ್ಮಿಗೆ ಇಲ್ಲಿದೆ ಸಿರಪ್…!”