ಕೋವಿಡ್-19 ಸೋಂಕು ನಿಯಂತ್ರಿಸಲು ರಾಷ್ಟ್ರೀಯ ನಿರ್ದೇಶನಗಳನ್ನು ಪಾಲಿಸುವುದು ಕಡ್ಡಾಯವಾಗಿದೆ. ಈ ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ಮುಖಗವಸು(ಮಾಸ್ಕ್) ಧರಿಸುವುದು, ಸೋಪಿನಿಂದ ಕೈ ತೊಳೆಯುವುದು, ಸ್ಯಾನಿಟೈಸರ್ ಬಳಕೆ ಮತ್ತು ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಅತೀ ಮುಖ್ಯವಾದ ವೈದ್ಯಕಿಯೇತರ ಪಾಲನೆಯಾಗಿದೆ ಎಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ತಿಳಿಸಿದ್ದಾರೆ. ಈ ಕುರಿತು ಜನ ಸಮುದಾಯದಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲು ರಾಜ್ಯ ಸರಕಾರವು ಜೂ.18ರಂದು ‘ಮಾಸ್ಕ್ ದಿನ’ವನ್ನಾಗಿ ಘೋಷಿಸಲು ನಿರ್ಧರಿಸಿದೆ. ಈ ದಿನ ಜಿಲ್ಲಾ ಮತ್ತು ತಾಲೂಕು ಆಡಳಿತವು ಚುನಾಯಿತ ಪ್ರತಿನಿಧಿಗಳು,Continue reading “ಜೂನ್ 18 :ಮಾಸ್ಕ್ ದಿನಾಚರಣೆ”
Daily Archives: June 17, 2020
ಕೆಂಪು ದೈತ್ಯ ಚೀನಾ ಒಡೆದು ಚೂರಾಗಿಹೋಗಲಿದೆಯೇ???
ಚೈನಾ! ಜಗತ್ತಿನ ಅತಿ ಶಕ್ತಿಶಾಲಿ ರಾಷ್ಟ್ರಗಳಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವ ರಾಷ್ಟ್ರ. ಭೂವಿಸ್ತಾರ, ಪ್ರಾಕೃತಿಕ ಸಂಪತ್ತು, ಜನಸಂಖ್ಯೆ, ಉತ್ಪಾದನೆ, ಅಭಿವೃದ್ಧಿ ಎಲ್ಲದರಲ್ಲೂ ಜಗತ್ತಿನ ಮುಂಚೂಣಿಯಲ್ಲಿರುವ ರಾಷ್ಟ್ರ. ಕಳೆದ ಹತ್ತು ಹದಿನೈದು ವರ್ಷಗಳ ಚಿಕ್ಕ ಅವಧಿಯಲ್ಲಿ ಆರ್ಥಿಕ ಅಭಿವೃದ್ಧಿಯ ವಿಷಯದಲ್ಲಿ ವಿಶ್ವದ ಉಳಿದೆಲ್ಲ ರಾಷ್ಟ್ರಗಳನ್ನು ಹಿಂದೆ ಹಾಕಿ ದೊಡ್ಡದೊಂದು ನೆಗೆತ ನೆಗೆದ ಸಾಹಸಿ ರಾಷ್ಟ್ರ. ಕೇವಲ ಆರ್ಥಿಕ ಕ್ಷೇತ್ರದಲ್ಲಿ ಮಾತ್ರವಲ್ಲದೇ ಮಿಲಿಟರಿ ಕ್ಷೇತ್ರದಲ್ಲೂ ಅಮೆರಿಕಾದಂತ ಅಮೇರಿಕಾಕ್ಕೆ ಸಡ್ಡು ಹೊಡೆದು ನಿಂತಿರುವ ಏಷ್ಯಾದ ದೈತ್ಯ ರಾಷ್ಟ್ರ. ಇಂತಹಾ ರಾಷ್ಟ್ರ ಕಳೆದ ಕೆಲವುContinue reading “ಕೆಂಪು ದೈತ್ಯ ಚೀನಾ ಒಡೆದು ಚೂರಾಗಿಹೋಗಲಿದೆಯೇ???”
ದೇಶದ ಸಂಕಷ್ಟದ ಸಮಯದಲ್ಲಿ ಬಿಜೆಪಿ ಕಾರ್ಯಕರ್ತರು ಮಾಡುವ ಸೇವೆ ಇತರರಿಗೆ ಮಾದರಿ – ಶಾಸಕ ಕೆ ರಘುಪತಿ ಭಟ್
ಕೋವಿಡ್ – 19 ಮಹಾಮಾರಿಯಿಂದ ದೇಶದಲ್ಲಿ ಲಾಕ್ ಡೌನ್ ಹೇರಿದಾಗ ಜನಸಾಮಾನ್ಯರ ಸಂಕಷ್ಟಗಳಿಗೆ ನೆರವಾಗುವಲ್ಲಿ ಹಮ್ಮಿಕೊಳ್ಳಲಾದ ಕಾರ್ಯಕ್ರಮಗಳಲ್ಲಿ ಸ್ವ-ಇಚ್ಛೆಯಿಂದ ಪಾಲ್ಗೊಂಡು ನಿಸ್ವಾರ್ಥ ಸೇವೆ ಸಲ್ಲಿಸಿದ ಬಿಜೆಪಿ ಕಾರ್ಯಕರ್ತರು ಇತರರಿಗೆ ಮಾದರಿಯಾಗಿದ್ದಾರೆ ಎಂದು ಶಾಸಕ. ರಘುಪತಿ ಭಟ್ ಹೇಳಿದರು. ಕೊಕ್ಕರ್ಣೆ ಶಿವಗಿರಿ ನಾರಾಯಣಗುರು ಸಭಾಭವನದಲ್ಲಿ ದಿ 17-06-2020 ರಂದು ನಡೆದ ಬಿಜೆಪಿ ಗ್ರಾಮಾಂತರ ಭಾಗದ ಕೊಕ್ಕರ್ಣೆ ಮಹಾ ಶಕ್ತಿ ಕೇಂದ್ರದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿದರು. ಒಂದೆಡೆ ಕೊರೋನಾ ಭೀತಿ ಆವರಿಸಿದ್ದರು ಯಾವುದಕ್ಕೂ ಹೆದರದೆ ಸ್ವ-ಇಚ್ಛೆಯಿಂದ ಯಾವುದೇ ಪ್ರತಿಫಲಾಪೇಕ್ಷೆContinue reading “ದೇಶದ ಸಂಕಷ್ಟದ ಸಮಯದಲ್ಲಿ ಬಿಜೆಪಿ ಕಾರ್ಯಕರ್ತರು ಮಾಡುವ ಸೇವೆ ಇತರರಿಗೆ ಮಾದರಿ – ಶಾಸಕ ಕೆ ರಘುಪತಿ ಭಟ್”
ರಾಜ್ಯದಲ್ಲಿ ಇಂದು ಕೊರೋನಾ ಸೋಂಕಿಗೆ 8 ಬಲಿ
ರಾಜ್ಯದಲ್ಲಿ ಕೊರೊನಾ ಸೋಂಕಿಗೆ ಬುಧವಾರ ಮತ್ತೆ 8 ಮಂದಿ ಬಲಿಯಾಗಿದ್ದಾರೆ. ಆ ಮೂಲಕ ಸೋಂಕಿಗೆ ಬಲಿಯಾದವರ ಸಂಖ್ಯೆ 102ಕ್ಕೆ ಏರಿಕೆಯಾಗಿದೆ. ಕೊರೊನಾ ವೈರಸ್ ನಿಂದಾಗಿ ಬುಧವಾರದಂದು ಬೆಂಗಳೂರಿನಲ್ಲಿ ಐವರು, ಶಿವಮೊಗ್ಗ, ಬಳ್ಳಾರಿ ಹಾಗೂ ಬೀದರ್ ನಲ್ಲಿ ತಲಾ ಒಬ್ಬರು ಸಾವನ್ನಪ್ಪಿರುವ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಹಿತಿ ನೀಡಿದೆ.
ದಕ್ಷಿಣ ಕನ್ನಡದಲ್ಲಿ ಬುಧವಾರ 8 ಹೊಸ ಕೊರೊನಾ ಪ್ರಕರಣಗಳು ಪತ್ತೆ, ಉಡುಪಿಯಲ್ಲಿ ಮತ್ತೆ 4 ಮಂದಿಯಲ್ಲಿ ಕೊರೋನಾ ದೃಢ
ದ.ಕ ಜಿಲ್ಲೆಯಲ್ಲಿ ಮತ್ತೆ 8 ಕೊರೊನಾ ಪ್ರಕರಣ ಪತ್ತೆಯಾಗಿದ್ದು, ಉಡುಪಿ ಜಿಲ್ಲೆಯಲ್ಲಿ 4 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ದ.ಕ. ಜಿಲ್ಲೆಯಲ್ಲಿ ಇಂದು 8 ಕೊರೊನಾ ಪಾಸಿಟಿವ್ ಕಂಡುಬಂದಿದ್ದು, ಸದ್ಯ ಜಿಲ್ಲೆಯಲ್ಲಿ 225 ಮಂದಿ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಪತ್ತೆಯಾದ 4 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ ಮೂವರು ಮಹಾರಾಷ್ಟ್ರದಿಂದ ಮರಳಿದವರಾಗಿದ್ದು, ಓರ್ವನಿಗೆ P-5451ರ ಸಂಪರ್ಕದಿಂದ ಸೋಂಕು ಪತ್ತೆಯಾಗಿದೆ. ಇಂದು 87 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ 134 ಮಂದಿ ಸೋಂಕಿತರು ಚಿಕಿತ್ಸೆContinue reading “ದಕ್ಷಿಣ ಕನ್ನಡದಲ್ಲಿ ಬುಧವಾರ 8 ಹೊಸ ಕೊರೊನಾ ಪ್ರಕರಣಗಳು ಪತ್ತೆ, ಉಡುಪಿಯಲ್ಲಿ ಮತ್ತೆ 4 ಮಂದಿಯಲ್ಲಿ ಕೊರೋನಾ ದೃಢ”
ಜೂನ್ 17,2020; ಇಂದಿನ ರಾಶಿ ಭವಿಷ್ಯ
ಪಂಚಾಂಗ ಶ್ರೀ ಶಾರ್ವರಿನಾಮ ಸಂವತ್ಸರ,ಉತ್ತರಾಯಣ ಪುಣ್ಯಕಾಲ,ಗ್ರೀಷ್ಮ ಋತು, ಜೇಷ್ಠ ಮಾಸ,ಕೃಷ್ಣ ಪಕ್ಷ, ಏಕಾದಶಿ ತಿಥಿ ಉಪರಿ ದ್ವಾದಶಿ ತಿಥಿ,ಬುಧವಾರ, ಭರಣಿ ನಕ್ಷತ್ರ ರಾಹುಕಾಲ: ಮಧ್ಯಾಹ್ನ 12:24 ರಿಂದ 2:00ಗುಳಿಕಕಾಲ: ಬೆಳಗ್ಗೆ 10:48 ರಿಂದ 12:24ಯಮಗಂಡಕಾಲ: ಬೆಳಗ್ಗೆ 7:36 ರಿಂದ 9:12 ಮೇಷ: ಪರಿಶ್ರಮಕ್ಕೆ ತಕ್ಕ ಫಲ ಲಭಿಸುವುದು, ಕಾರ್ಯ ಸಾಧನೆಗಾಗಿ ತಿರುಗಾಟ, ದೇವತಾ ಕಾರ್ಯಗಳಲ್ಲಿ ಭಾಗಿ, ಮನಸ್ಸಿನಲ್ಲಿ ಗೊಂದಲ. ವೃಷಭ: ಅಧಿಕಾರಿಗಳಿಂದ ಪ್ರಶಂಸೆ, ಕೋರ್ಟ್ ಕೇಸ್‍ಗಳಲ್ಲಿ ಜಯ, ಮಿತ್ರರು ಮೋಸ ಮಾಡುವ ಸಾಧ್ಯತೆ, ವ್ಯವಹಾರಗಳಲ್ಲಿ ಎಚ್ಚರ, ಅತಿಯಾಗಿ ಯಾರನ್ನೂ ನಂಬಬೇಡಿ. ಮಿಥುನ: ಸ್ತ್ರೀಯರಿಗೆ ತಾಳ್ಮೆ ಅತ್ಯಗತ್ಯ,Continue reading “ಜೂನ್ 17,2020; ಇಂದಿನ ರಾಶಿ ಭವಿಷ್ಯ”