ಮುಂಬೈನಿಂದ ಉಡುಪಿ ಜಿಲ್ಲೆಗೆ ಬಂದ 54 ವರ್ಷ ವಯಸ್ಸಿನ ಕೊರೋನ ಸೋಂಕಿತ ವ್ಯಕ್ತಿಯೊಬ್ಬರು ದಿಢೀರ್ ಆಗಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ತೆಕ್ಕಟ್ಟೆ ನಿವಾಸಿಯಾಗಿರುವ ಇವರು, ಗುರುವಾರ ಮಧ್ಯಾಹ್ನ ಮಹಾರಾಷ್ಟ್ರ ದಿಂದ ಕುಂದಾಪುರಕ್ಕೆ ಬಂದಿದ್ದರು. ಇವರೊಂದಿಗೆ ಇತರ ನಾಲ್ಕು ಮಂದಿ ಮಹಾರಾಷ್ಟ್ರದಿಂದ ಬಂದಿದ್ದರು. ನಿಯಮದಂತೆ ಇವರೆಲ್ಲ ಮನೆಯಲ್ಲೇ ಹೋಂ ಕ್ವಾರಂಟೈನ್ ಗೆ ಒಳಗಾಗಿದ್ದರು. ಉಡುಪಿಗೆ ಬಂದಾಗ ಇವರನ್ನು ಸಂಪೂರ್ಣ ತಪಾಸಣೆ ಮಾಡಿದ್ದೆವು. ಇವರಲ್ಲಿ ಕೊರೋನದ ಯಾವುದೇ ಲಕ್ಷಣ ಕಂಡು ಬಂದಿರಲಿಲ್ಲ. ಇವರು ದಿಢೀರ್ ಆಗಿ ಮನೆಯಲ್ಲೇ ಸಾವನ್ನಪ್ಪಿದ್ದಾರೆ. ಮರಣಕ್ಕೆContinue reading “ಉಡುಪಿ ಜಿಲ್ಲೆಯಲ್ಲಿ ಕೊರೋನಾ ಸೋಂಕಿಗೆ ಎರಡನೇ ಬಲಿ”
Daily Archives: June 19, 2020
ಶಾಂತಿ ಕಾಯಿ ಮರ :ಔಷಧೀಯ ಗುಣಗಳು
ವಿಭೀತಕೀ ತಾರೆಮರ ಶಾಂತಿಮರ ತಾನಿಕಾಯಿ ಚೆಟ್ಟು (ಮಾನು) ಬಿಭೀತ ಬಹೆಡಾ ತಾಡಿ ಅಕ್ಕಮ್ ತೊಡೀಕೈ ತನ್ರಿ ಬೈಡಾ ಎಂಬ ಹೆಸರುಗಳಿಂದ ಕರೆಯುತ್ತಾರೆ. ಅರಣ್ಯಗಳಲ್ಲಿ ಮಾತ್ರ ಕಂಡು ಬರುವ ತಾರೆ ಮರ, ಸಾಂಪ್ರದಾಯಿಕವಾಗಿ ಪೂಜನೀಯ ಸ್ಥಾನ ಹೊಂದಿರುವ ತಾರೆಮರವನ್ನು ಶನಿದೇವರ ಪ್ರತಿನಿಧಿ ಎಂದು ಭಾವಿಸಲಾಗಿದ್ದು, ಹಲವಾರು ಶನೇಶ್ವರ ದೇವಾಲಯಗಲ್ಲಿ ಬೆಳೆಸಿರುತ್ತಾರೆ. ಸುಮಾರು 55 ರಿಂದ 90 ಅಡಿವರಿಗೂ ಎತ್ತರ ಬೆಳೆಯುತ್ತೆ. ಆಯುರ್ವೇದ, ಯುನಾನಿ, ಸಾಂಪ್ರದಾಯಿಕ ಚಿಕಿತ್ಸ ಪದ್ಧತಿಯಲ್ಲಿ, ಬೀಜ,ತೊಗಟೆ,ಕಾಯಿಯ ಸಿಪ್ಪೆಯನ್ನು ಔಷಧೀಯ ಉದ್ದೇಶಕ್ಕಾಗಿ ಬಳಸುತ್ತಾರೆ. ತಾರೆಕಾಯಿಯ ಚೂರ್ಣವನ್ನು ಬಿಸಿContinue reading “ಶಾಂತಿ ಕಾಯಿ ಮರ :ಔಷಧೀಯ ಗುಣಗಳು”
ಉಡುಪಿ ಜಿಲ್ಲೆಯಲ್ಲಿ ಮಾಸ್ಕ್ ಧರಿಸದೇ ಓಡಾಟ ನಡೆಸುವವರಿಂದ 27000 ರೂ.ದಂಡ ಸಂಗ್ರಹ:ನೀವು ಜಾಗರೂಕರಾಗಿರಿ ಮಾಸ್ಕ್ ಧರಿಸಿ
ಜಿಲ್ಲೆಯಲ್ಲಿ ಸಾಕಷ್ಟು ಮಂದಿ ಮಾಸ್ಕ್ ಹಾಕದೆ ಹೊರಗಡೆ ಓಡಾಟ ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ಈವರೆಗೆ ಮಾಸ್ಕ್ ಹಾಕದವರಿಂದ ಸುಮಾರು 27,000 ರೂ.ವರೆಗೆ ದಂಡ ವಸೂಲಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮಾಸ್ಕ್ ಹಾಕದವರಿಗೆ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಲಾಗುವುದು. ಹಾಗೂ ದಂಡ ವಿಧಿಸಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ ನೀಡಿದ್ದಾರೆ. ಉಡುಪಿ ಜಿಲ್ಲಾಡಳಿತ ಮತ್ತು ನಗರಸಭೆ ವತಿಯಿಂದ ಮಾಸ್ಕ್ ದಿನಾಚರಣೆ ಪ್ರಯುಕ್ತ ಕೋವಿಡ್-19 ಹರಡದಂತೆ ಜಗಜಾಗೃತಿ ಮೂಡಿಸಲು ಗುರುವಾರ ನಗರದಲ್ಲಿ ಆಯೋಜಿಸಲಾದ ಪಾದಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರುContinue reading “ಉಡುಪಿ ಜಿಲ್ಲೆಯಲ್ಲಿ ಮಾಸ್ಕ್ ಧರಿಸದೇ ಓಡಾಟ ನಡೆಸುವವರಿಂದ 27000 ರೂ.ದಂಡ ಸಂಗ್ರಹ:ನೀವು ಜಾಗರೂಕರಾಗಿರಿ ಮಾಸ್ಕ್ ಧರಿಸಿ”
ಜೂನ್ 19,2020 ; ಇಂದಿನ ರಾಶಿಫಲ
ಪಂಚಾಂಗ ಶ್ರೀ ಶಾರ್ವರಿನಾಮ ಸಂವತ್ಸರ,ಉತ್ತರಾಯಣ ಪುಣ್ಯಕಾಲ,ಗ್ರೀಷ್ಮ ಋತು, ಜೇಷ್ಠ ಮಾಸ,ಕೃಷ್ಣ ಪಕ್ಷ, ತ್ರಯೋದಶಿ ತಿಥಿ,ಮಧ್ಯಾಹ್ನ 11:03 ನಂತರ ಚುರ್ತುದಶಿ,ಶುಕ್ರವಾರ, ಕೃತ್ತಿಕಾ ನಕ್ಷತ್ರಬೆಳಗ್ಗೆ 10:31 ನಂತರ ರೋಹಿಣಿ ನಕ್ಷತ್ರ ರಾಹುಕಾಲ: ಬೆಳಗ್ಗೆ 10:48 ರಿಂದ 12:24ಗುಳಿಕಕಾಲ: ಬೆಳಗ್ಗೆ 7:36 ರಿಂದ 9:12ಯಮಗಂಡಕಾಲ: ಮಧ್ಯಾಹ್ನ 3:37 ರಿಂದ 5:13 ಮೇಷ: ಸ್ತ್ರೀಯರಿಂದ ಅದೃಷ್ಟ ಒಲಿಯುವುದು, ಯತ್ನ ಕಾರ್ಯಗಳಲ್ಲಿ ಜಯ, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಅನಗತ್ಯ ಮನಃಸ್ತಾಪ, ವ್ಯವಹಾರದಲ್ಲಿ ಅನುಕೂಲ ಸಾಧ್ಯತೆ. ವೃಷಭ: ಕಲಾವಿದರಿಗೆ ಉತ್ತಮ ಅವಕಾಶ, ಮಾನಸಿಕ ನೆಮ್ಮದಿ ಪ್ರಾಪ್ತಿ, ಅಧಿಕಾರಿಗಳು-ರಾಜಕೀಯ ವ್ಯಕ್ತಿಗಳು ಪ್ರಯಾಣ ಮಾಡುವರು, ಸಹೋದ್ಯೋಗಿಗಳಿಂದContinue reading “ಜೂನ್ 19,2020 ; ಇಂದಿನ ರಾಶಿಫಲ”