ಬೆಂಗಳೂರು: ರಾಜ್ಯಾದ್ಯಂತ ಮಹಾಮಾರಿ ವೈರಲ್ ವೈರಸ್ ಮತ್ತೆ ಕರುನಾಡನ್ನು ಕಾಡುತ್ತಿದ್ದು ಇಂದು378 ಹೊಸ ಪ್ರಕರಣಗಳು ಬೆಳಕಿಗೆ ಬಂದಿದೆ. ಕಡಲತಡಿಯ ಉಡುಪಿ ದಕ್ಷಿಣಕನ್ನಡದಲ್ಲೂ ಮಹಾಮಾರಿ ವೈರಸ್ ನ ಅಲೆಗಳು ಬೀಸಿದ್ದು ಕರಾವಳಿಗರನ್ನು ಕಂಗೆಡಿಸಿದೆ.ಯಾದಗಿರಿ,ಕಲಬುರ್ಗಿ, ಬೆಂಗಳೂರಿನಲ್ಲೂ ಮಹಾಮಾರಿ ರುದ್ರನರ್ತನ ತಾಂಡವಾಡುತ್ತಿದ್ದು ರಾಜ್ಯಾದ್ಯಂತ ಐದು ಸಾವಿರದ ಗಡಿದಾಟಿ ಮುನ್ನುಗಿದೆ. ಕರ್ನಾಟಕದಲ್ಲಿ ಇಂದು378ಸೋಂಕಿತರು ಪತ್ತೆಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 5213ಕ್ಕೆ ಏರಿಕೆಯಾಗಿದೆ 378ಸೋಂಕಿತರ ಪೈಕಿ 341ಮಂದಿ ವಿದೇಶ ಹಾಗೂ ಹೊರರಾಜ್ಯದಿಂದ ಬಂದವರಾಗಿರುತ್ತಾರೆ ಬೀದರ್ ಹಾಗೂ ವಿಜಯಪುರದಲ್ಲಿ ಕೊರೋನಾ ಮಾಹಾಮಾರಿಗೆ ಇಬ್ಬರು ಬಲಿಯಾಗಿದ್ದು ಸಾವಿನ ಸಂಖ್ಯೆContinue reading “ಕರಾವಳಿ ತತ್ತರ: ರಾಜ್ಯದಲ್ಲಿ ಇಂದು ಕೂಡಾ ಕೊರೋನಾ ಸುನಾಮಿ”
Daily Archives: June 6, 2020
ಮುಂಬೈನಿಂದ ಬಂದ ಯುವತಿಗೆ ಸೋಂಕು ದೃಢ: ಉದ್ಯಾವರ ಕಲಾಯಿಬೈಲು ಸೀಲ್ ಡೌನ್
ಮಹಾರಾಷ್ಟ್ರದ ಮುಂಬೈನಿಂದ ಆಗಮಿಸಿ ಏಳು ದಿನದ ಕ್ವಾರಂಟೈನ್ ಮುಗಿಸಿ ಉದ್ಯಾವರದ ತನ್ನ ಮನೆಗೆ ಬಂದಿದ್ದ 26 ವರ್ಷದ ಮಹಿಳೆಗೆ ಇದೀಗ ಕೋವಿಡ್-19 ಪಾಸಿಟಿವ್ ಪತ್ತೆಯಾಗಿದೆ. ಹಾಗಾಗಿ ಮಹಿಳೆ ವಾಸವಿದ್ದ ಮನೆಯನ್ನು ಅಧಿಕಾರಿಗಳು ಸೀಲ್ ಡೌನ್ ಮಾಡಿದ್ದಾರೆ. ಉದ್ಯಾವರದ ಕಲಾಯಿಬೈಲಿನ ವಿವಾಹಿತ ಮಹಿಳೆ ಸರಕಾರಿ ಆದೇಶದ 7 ದಿನದ ಕ್ವಾರಂಟೈನ್ ಮುಗಿಸಿ, ಉದ್ಯಾವರದ ತನ್ನ ಮನೆಗೆ ಆಗಮಿಸಿದ್ದರು. ಆದರೆ ಇದೀಗ ಆ ಮಹಿಳೆಯಲ್ಲಿ ಕೋವಿಡ್-19 ಪಾಸಿಟಿವ್ ಪತ್ತೆಯಾಗಿದ್ದು, ಮಹಿಳೆ ವಾಸವಿದ್ದ ಮನೆಯನ್ನು ಅಧಿಕಾರಿಗಳು ಸೀಲ್ ಡೌನ್ ಮಾಡಿದ್ದಾರೆ. ಉದ್ಯಾವರContinue reading “ಮುಂಬೈನಿಂದ ಬಂದ ಯುವತಿಗೆ ಸೋಂಕು ದೃಢ: ಉದ್ಯಾವರ ಕಲಾಯಿಬೈಲು ಸೀಲ್ ಡೌನ್”
ಮಳೆಗಾಲದಲ್ಲಿ ಹೆದ್ದಾರಿಯಲ್ಲಿ ಅಪಘಾತಗಳಾಗದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ ಜಿ.ಜಗದೀಶ್
ಉಡುಪಿ ಜೂನ್ 6 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಹಾದು ಹೋಗುವ ರಾಷ್ಟಿçÃಯ ಹೆದ್ದಾರಿ 66 ಮತ್ತು 169ಎ ನಲ್ಲಿ , ಮಳೆಗಾಲದ ಸಂದರ್ಭದಲ್ಲಿ ಅಪಘಾತಗಳು ಸಂಭವಿಸದOತೆ ಎಲ್ಲಾ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ರಾಷ್ಟಿಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದರು.ಅವರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮಳೆಗಾಲದಲ್ಲಿ ರಾಷ್ಟಿಯ ಹೆದ್ದಾರಿ 66 ರಲ್ಲಿ ನೀರು ನಿಂತು ಅಪಘಾತಗಳು ಸಂಭವಿಸುವ ಸಾದ್ಯತೆಗಳಿದ್ದು, ಅಂತಹ ಸ್ಥಳಗಳನ್ನು ಕೂಡಲೇ ಗುರುತಿಸಿ ಹೆದ್ದಾರಿಯಲ್ಲಿ ನೀರುContinue reading “ಮಳೆಗಾಲದಲ್ಲಿ ಹೆದ್ದಾರಿಯಲ್ಲಿ ಅಪಘಾತಗಳಾಗದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ ಜಿ.ಜಗದೀಶ್”
ಕೊರೋನಾ ವಾರಿಯರ್ಸ್ಗಳಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಆಶಾಕಾರ್ಯಕರ್ತರಿಗೆ KMF ಕಿಟ್ ವಿತರಣೆ
ಕೋರೋನಾ ಎಂಬ ಮಹಾಮಾರಿ ವೈರಸ್ ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿದ್ದು, ಕೊರೋನಾ ವಾರಿಯರ್ಸ್ ಗಳಾದ ಆಶಾ ಕಾರ್ಯಕರ್ತರು ಪ್ರತಿ ಮನೆ ಮನೆಗೆ ಭೇಟಿ ನೀಡಿ ಜನರ ಆರೋಗ್ಯ ಸ್ಥಿತಿಯ ಬಗ್ಗೆ ಹಾಗೂ ಹೊಂ ಕ್ವಾರಂಟೈನ್ ನಲ್ಲಿರುವವರ ಬಗ್ಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮಾಹಿತಿ ನೀಡಿ ಕೋರೋನ ವೈರಸ್ ಸಾಮೂಹಿಕವಾಗಿ ಹರಡು ವುದನ್ನು ತಡೆಗಟ್ಟುವಿಕೆಯಲ್ಲಿ ಇವರ ಪಾತ್ರ ಅವಿಸ್ಮರಣೀಯ. ಇವರ ಈ ಸೇವೆಯನ್ನು ಮನಗಂಡು K.M.F ಮಂಗಳೂರು ಇವರ ವತಿಯಿಂದ ಸುಮಾರು 2600 ನಂದಿನಿ ಉತ್ಪನ್ನಗಳ ವಿಶೇಷ ಕಿಟ್Continue reading “ಕೊರೋನಾ ವಾರಿಯರ್ಸ್ಗಳಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಆಶಾಕಾರ್ಯಕರ್ತರಿಗೆ KMF ಕಿಟ್ ವಿತರಣೆ”
ಉಡುಪಿ ಜಿಲ್ಲೆಯಲ್ಲಿ ದಿನಕ್ಕೆ ಸರಾಸರಿ 100 ಕೋವಿಡ್ ಪೀಡಿತರು ಡಿಸ್ಚಾರ್ಜ್
ಉಡುಪಿ :ಜೂನ್ 6 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಇದುವರೆಗೆ 767 ಕೋವಿಡ್-19 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 132 ಮಂದಿ ಡಿಸ್ಚಾರ್ಜ್ ಆಗಿದ್ದು, 635 ಸಕ್ರಿಯ ಪ್ರಕರಣಗಳಿವೆ. ಸಕ್ರಿಯ ಪ್ರಕರಣಗಳಲ್ಲಿ ಇಂದಿನಿAದ ಸರಾಸರಿ 100 ಮಂದಿ ಪ್ರತಿದಿನ ಗುಣಮುಖರಾಗಿ ಡಿಸ್ಚಾಜ್ ð ಆಗಲಿದ್ದಾರೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಉಡುಪಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ನಡೆದ ದಿಶಾ ಸಭೆಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಮಾಹಿತಿ ನೀಡಿದರು.ಜಿಲ್ಲೆಯಲ್ಲಿ ಇದುವರೆಗೆ 12258 ಮಂದಿಯ ಕೋವಿಡ್ ಮಾದರಿ ಸಂಗ್ರಹಿಸಿದ್ದು, ಅದರಲ್ಲಿContinue reading “ಉಡುಪಿ ಜಿಲ್ಲೆಯಲ್ಲಿ ದಿನಕ್ಕೆ ಸರಾಸರಿ 100 ಕೋವಿಡ್ ಪೀಡಿತರು ಡಿಸ್ಚಾರ್ಜ್”
ಮುನ್ನೆಚ್ಚರಿಕೆಯೊಂದಿಗೆ ರೆಸ್ಟೋರೆಂಟ್ ತೆರೆಯಿರಿ – ಸಿಎಂ ಯಡಿಯೂರಪ್ಪ ಸೂಚನೆ
ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ವಯ ರಾಜ್ಯದಲ್ಲಿ ಹೋಟೆಲ್ ಗಳು, ರೆಸ್ಟೋರೆಂಟ್ ಗಳನ್ನು ತೆರೆಯಲು ಅವಕಾಶ ನೀಡಲಾಗುತ್ತಿದೆ. ಆದರೆ ನಿಗದಿ ಪಡಿಸಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಿಳಿಸಿದರು. ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವುದಾಗಿ ಹೋಟೆಲ್ ಗಳ ಸಂಘದ ಪ್ರತಿನಿಧಿಗಳು ಮತ್ತು ಸಾರಿಗೆ ಕಂಪೆನಿಗಳ ಪ್ರತಿನಿಧಿಗಳು ಮುಖ್ಯಮಂತ್ರಿಗಳಿಗೆ ಭರವಸೆ ನೀಡಿದರು. ಮುಖ್ಯಮಂತ್ರಿಗಳು ಇಂದು ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಹಾಗೂ ಕೆಲವು ತೊಡಕುಗಳ ನಿವಾರಣೆ ಕುರಿತು ಪ್ರವಾಸೋದ್ಯಮ ಹಾಗೂ ಸಾರಿಗೆContinue reading “ಮುನ್ನೆಚ್ಚರಿಕೆಯೊಂದಿಗೆ ರೆಸ್ಟೋರೆಂಟ್ ತೆರೆಯಿರಿ – ಸಿಎಂ ಯಡಿಯೂರಪ್ಪ ಸೂಚನೆ”
ಮುತ್ತಪ್ಪ ರೈ ಬರೆದಿಟ್ಟಿದ್ದ ವಿಲ್ ಬಹಿರಂಗ- ಮಕ್ಕಳು , ಪತ್ನಿ ಸಹಿತ 25 ಕೆಲಸಗಾರರಿಗೂ ಆಸ್ತಿಯಲ್ಲಿ ಪಾಲು
◆41 ಪುಟಗಳ ವಿಲ್ ಬರೆದಿರುವ ಮುತ್ತಪ್ಪ ರೈ ◆ಎರಡನೇ ಪತ್ನಿ ಅನುರಾಧಾರವರಿಗೂ ಆಸ್ತಿಯಲ್ಲಿ ಪಾಲು ◆ ಆಪ್ತರು ಹಾಗೂ ಸಂಬಂಧಿಕರಿಗೂ ಆಸ್ತಿ ಹಂಚಿಕೆ ◆ಮನೆ ಕೆಲಸದವರು, ಕಾರು ಡ್ರೈವರ್, ಗನ್ ಮ್ಯಾನ್ ಗಳಿಗೆ ಸೈಟು, ಹಣ ಇತ್ತೀಚೆಗಷ್ಟೇ ನಿಧನ ಹೊಂದಿದ್ದ ಮಾಜಿ ಭೂಗತ ದೊರೆ ಹಾಗೂ ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಮುತ್ತಪ್ಪ ರೈ ಯವರು ತನ್ನ ಒಟ್ಟು ಸಂಪತ್ತಿನ ಬಗ್ಗೆ ಮಾಡಿದ ಉಯಿಲು ಬಹಿರಂಗವಾಗಿದೆ .ಕನ್ನಡದ ಖ್ಯಾತ ದೃಶ್ಯ ಮಾದ್ಯಮವೊಂದು ರೈ ಯವರ ವಕೀಲರು ಬಹಿರಂಗContinue reading “ಮುತ್ತಪ್ಪ ರೈ ಬರೆದಿಟ್ಟಿದ್ದ ವಿಲ್ ಬಹಿರಂಗ- ಮಕ್ಕಳು , ಪತ್ನಿ ಸಹಿತ 25 ಕೆಲಸಗಾರರಿಗೂ ಆಸ್ತಿಯಲ್ಲಿ ಪಾಲು”
ನಿದ್ರಾ ಹೀನತೆ ಸಮಸ್ಯೆಯನ್ನು ಪರಿಹರಿಸುತ್ತೆ ಕಿವಿ ಹಣ್ಣು…!
ಮಳೆಗಾಲ ಆರಂಭವಾದರೆ ಸೊಳ್ಳೆಗಳ ಕಾಟವೂ ಶುರುವಾಯಿತೆಂದೇ ಲೆಕ್ಕ. ಚಿಕನ್ ಗುನ್ಯಾ, ಡೆಂಗ್ಯೂದಂಥ ಮಹಾಮಾರಿ ನಿಮ್ಮನ್ನು ಕಾಡದಂತೆ ಕಾಪಾಡಿಕೊಳ್ಳಲು ಇಲ್ಲಿದೆ ಉಪಾಯ..! ಡೆಂಗ್ಯೂ ಅಂತಹ ಮಾರಕ ಕಾಯಿಲೆಗಳು ಬಂದರೆ ಮೊದಲು ಕಿವಿ ಹಣ್ಣನ್ನು ತಿನ್ನಲು ಹೇಳುತ್ತಾರೆ. ಕಿವಿ ಹಣ್ಣು ನಮ್ಮ ದೇಹದಲ್ಲಿ ಇರುವ ಬಿಳಿ ರಕ್ತ ಕಣಗಳನ್ನು ಹೆಚ್ಚಿಸುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕೂಡ ಕಿವಿ ಹಣ್ಣು ಉಪಯುಕ್ತವಾಗಿದೆ. ದೇಹಕ್ಕೆ ಬೇಕಾಗಿರುವ ಹಲವಾರು ಪೌಷ್ಟಿಕ ಅಂಶಗಳನ್ನು ಇದು ಕೊಡುತ್ತದೆ. ಪ್ರೋಟಿನ್ ವಿಟಮಿನ್ ಅಂಶಗಳನ್ನು ದೇಹಕ್ಕೆ ಹೇರಳವಾಗಿ ಕೊಡುತ್ತದೆ.Continue reading “ನಿದ್ರಾ ಹೀನತೆ ಸಮಸ್ಯೆಯನ್ನು ಪರಿಹರಿಸುತ್ತೆ ಕಿವಿ ಹಣ್ಣು…!”
ನಿದ್ರಾ ಹೀನತೆ ಸಮಸ್ಯೆಯನ್ನು ಪರಿಹರಿಸುತ್ತೆ ಕಿವಿ ಹಣ್ಣು…!
ಮಳೆಗಾಲ ಆರಂಭವಾದರೆ ಸೊಳ್ಳೆಗಳ ಕಾಟವೂ ಶುರುವಾಯಿತೆಂದೇ ಲೆಕ್ಕ. ಚಿಕನ್ ಗುನ್ಯಾ, ಡೆಂಗ್ಯೂದಂಥ ಮಹಾಮಾರಿ ನಿಮ್ಮನ್ನು ಕಾಡದಂತೆ ಕಾಪಾಡಿಕೊಳ್ಳಲು ಇಲ್ಲಿದೆ ಉಪಾಯ..! ಡೆಂಗ್ಯೂ ಅಂತಹ ಮಾರಕ ಕಾಯಿಲೆಗಳು ಬಂದರೆ ಮೊದಲು ಕಿವಿ ಹಣ್ಣನ್ನು ತಿನ್ನಲು ಹೇಳುತ್ತಾರೆ. ಕಿವಿ ಹಣ್ಣು ನಮ್ಮ ದೇಹದಲ್ಲಿ ಇರುವ ಬಿಳಿ ರಕ್ತ ಕಣಗಳನ್ನು ಹೆಚ್ಚಿಸುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕೂಡ ಕಿವಿ ಹಣ್ಣು ಉಪಯುಕ್ತವಾಗಿದೆ. ದೇಹಕ್ಕೆ ಬೇಕಾಗಿರುವ ಹಲವಾರು ಪೌಷ್ಟಿಕ ಅಂಶಗಳನ್ನು ಇದು ಕೊಡುತ್ತದೆ. ಪ್ರೋಟಿನ್ ವಿಟಮಿನ್ ಅಂಶಗಳನ್ನು ದೇಹಕ್ಕೆ ಹೇರಳವಾಗಿ ಕೊಡುತ್ತದೆ.Continue reading “ನಿದ್ರಾ ಹೀನತೆ ಸಮಸ್ಯೆಯನ್ನು ಪರಿಹರಿಸುತ್ತೆ ಕಿವಿ ಹಣ್ಣು…!”
ನಿಮ್ಮ ಇಷ್ಠಾರ್ಥ ಸಿದ್ಧಿಗಾಗಿ ಅಂಬಲಪಾಡಿ ದೇವಸ್ಥಾನಕ್ಕೆ ಕೈಮುಗಿದು ಬನ್ನಿ
ಭಕ್ತ ಜನರ ಆರಾಧ್ಯ ಶಕ್ತಿಯಾಗಿರುವ ದೇವಸ್ಥಾನಗಳಲ್ಲಿ ಉಡುಪಿ ಸಮೀಪದ ಅಂಬಲಪಾಡಿಯಲ್ಲಿರುವ ಶ್ರೀ ಜನಾರ್ಧನ ಮಹಾಕಾಳಿಯ ಮಂದಿರವು ಒಂದು. ಇಲ್ಲಿ ಕೇವಲ ಶಾಕ್ತ ಪರಂಪರೆ ಮಾತ್ರವಲ್ಲದೆ ವೈಷ್ಣವ ಪರಂಪರೆಯನ್ನು ಕಾಣಬಹುದು. ವಿಷ್ಣುಮಾಯೆಯಾದ ಶಕ್ತಿ ಮತ್ತು ಶಿವೆಯ ಅಣ್ಣನಾದ ವಿಷ್ಣು ಇಲ್ಲಿ ಒಂದೇ ಕಡೆಯಲ್ಲಿ ಪೂಜೆಗೊಳ್ಳುತ್ತಾರೆ. ದೇವಾಲಯ ಇರುವ ಈ ಸ್ಥಳವು ಹಿಂದೆ ದೊಡ್ಡ ಮರ -ಗಿಡಗಳಿಂದ ಕೂಡಿದ ಹಾಡಿ ಅಂದರೆ ಕಾಡು (ಪಾಡಿ-ತುಳು) ಆಗಿತ್ತಂತೆ. ಕಾಲಕ್ರಮೇಣ ‘ಅಂಬಲಪಾಡಿ’ ಎಂದು ಕರೆಯಲ್ಪಟ್ಟಿತು ಎಂಬುದು ತಿಳಿದುಬರುತ್ತದೆ. ಇಲ್ಲಿ ಹಿಂದೆ ದೇವಿಯ ಗುಡಿContinue reading “ನಿಮ್ಮ ಇಷ್ಠಾರ್ಥ ಸಿದ್ಧಿಗಾಗಿ ಅಂಬಲಪಾಡಿ ದೇವಸ್ಥಾನಕ್ಕೆ ಕೈಮುಗಿದು ಬನ್ನಿ”