Design a site like this with WordPress.com
Get started

ಆಡು ಮುಟ್ಟದ ಸೊಪ್ಪಿನಲ್ಲಿ ಎಂಥಾ ಔಷಧಿ ಗುಣಗಳಿವೆ ನಿಮಗೆ ಗೊತ್ತಾ?

ವಾಸಾ, ವಾಸಿಕಾ, ಮಲಬಾರ್ ನಟ್, ಅಧತೋಡಾ ಎಂದು ಕರೆಯಲ್ಪಡುವ ಆಡುಸೋಗೆ ಅಥವಾ ಆಡು ಮುಟ್ಟದ ಸೊಪ್ಪು ಅಸ್ತಮಾ, ಬ್ರಾಂಕೈಟಿಸ್ ಮತ್ತು ನಿಯಂತ್ರಣಕ್ಕೆ ಬಾರದಷ್ಟು ಕೆಮ್ಮಿಗೆ ಚಿಕಿತ್ಸೆ ನೀಡಲು ಬಳಸುವ ಗಿಡಮೂಲಿಕೆಯಾಗಿದ್ದು ತುಂಬಾ ಶಕ್ತಿಯುತವಾದ ಸಸ್ಯವಾಗಿದೆ. “ಆಡು ಮುಟ್ಟದ ಸೊಪ್ಪಿಲ್ಲ” ಎನ್ನುವ ಗಾದೆ ಮಾತಿನಂತೆ ಸಾಮಾನ್ಯವಾಗಿ ಆಡುಗಳು ತಿನ್ನದ ಸೊಪ್ಪು, ತರಕಾರಿಗಳಿಲ್ಲ. ಆದರೆ ಈ ವಾಸಕ ಗಿಡದ ಎಲೆ, ಹೂಗಳನ್ನು ಆಡು ತಿನ್ನುವುದಿಲ್ಲ. ಅದಕ್ಕಾಗಿ ಆಡು ಸೋಕದ ಈ ಗಿಡಕ್ಕೆ ಕನ್ನಡದಲ್ಲಿ ಆಡುಸೋಗೆ ಎಂಬ ಹೆಸರು ಬಂದಿದೆ. ಉಸಿರಾಟದContinue reading “ಆಡು ಮುಟ್ಟದ ಸೊಪ್ಪಿನಲ್ಲಿ ಎಂಥಾ ಔಷಧಿ ಗುಣಗಳಿವೆ ನಿಮಗೆ ಗೊತ್ತಾ?”

ಸಮ್ಮೇಳ!! ಪೂರ್ಣಕಾಲಿಕ ಯಕ್ಷಗಾನ ಕಲಾವಿದರಿಗೆ ಆಹಾರ ಕಿಟ್ ವಿತರಣೆ.

ಉಡುಪಿಯ ಸಮ್ಮೇಳ ಪೂರ್ಣಕಾಲಿಕ ಯಕ್ಷಗಾನ ಕಲಾವಿದರಿಗೆ ಕಿದಿಯೂರು ಉದಯಕುಮಾರ್ ಶೆಟ್ಟಿ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಅಕ್ಕಿ ಹಾಗೂ ಆಹಾರದ ಕಿಟ್ ಗಳನ್ನು ವಿತರಿಸಲಾಯಿತು. ಉಡುಪಿ, ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ “ಸಮ್ಮೇಳದ” ಪದಾಧಿಕಾರಿಗಳಾದ ಸತೀಶ್ ಉಪಾಧ್ಯ ಅಂಬಲಪಾಡಿ, ಗಣೇಶ್ ಶೆಣೈ ಇವರಿಗೆ ಕಿಟ್ ಗಳನ್ನು ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯ ಬಳಿ ಹಸ್ತಾಂತರಿಸಿದರು. ಟ್ರಸ್ಟ್ ಅಧ್ಯಕ್ಷ ಹಾಗೂ ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಶ್ರೀ ಕೆ. ಉದಯಕುಮಾರ್ ಶೆಟ್ಟಿ, ಶಾಸಕರಾದ ಲಾಲಾಜಿ ಆರ್. ಮೆಂಡನ್, ಉಡುಪಿ ಜಿಲ್ಲಾContinue reading “ಸಮ್ಮೇಳ!! ಪೂರ್ಣಕಾಲಿಕ ಯಕ್ಷಗಾನ ಕಲಾವಿದರಿಗೆ ಆಹಾರ ಕಿಟ್ ವಿತರಣೆ.”

ಡ್ರೈವಿಂಗ್ ಲೈಸೆನ್ಸ್ ಅನ್ನು ಆಧಾರ್‌ಗೆ ಲಿಂಕ್ ಮಾಡೋದು ಹೇಗೆ? ಇಲ್ಲಿದೆ ಸರಳವಾದ ಪ್ರಕ್ರಿಯೆ

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು (MORTH) ಪ್ರತಿ ರಾಜ್ಯಕ್ಕೂ ಚಾಲನಾ ಪರವಾನಗಿ ನೀಡುವ ಮತ್ತು ನವೀಕರಿಸುವ ಜವಾಬ್ದಾರಿಯನ್ನು ನೀಡಿದೆ. ಆದಾಗ್ಯೂ, ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳನ್ನು ನಿಯಂತ್ರಿಸುವ ಪ್ರತ್ಯೇಕ ಸಚಿವಾಲಯವನ್ನು ಹೊಂದಿರುವುದರಿಂದ, ಆಧಾರ್ ಸಂಪರ್ಕದ ಪ್ರಕ್ರಿಯೆಯು ಒಂದು ರಾಜ್ಯದಿಂದ ಮತ್ತು ಯುಟಿಯಿಂದ ಇನ್ನೊಂದಕ್ಕೆ ಬದಲಾಗಬಹುದಾಗಿದೆ. ಈ ನಡುವೆ ಒಬ್ಬ ವ್ಯಕ್ತಿಗೆ ಒಂದಕ್ಕಿಂತ ಹೆಚ್ಚು ಚಾಲನಾ ಪರವಾನಗಿ ಇರಬಾರದು ಎಂದು ರಸ್ತೆ ಸಾರಿಗೆ ಕಾಯ್ದೆ ಹೇಳುತ್ತದೆ. ಆದಾಗ್ಯೂ, ಜನರು ಅನೇಕContinue reading “ಡ್ರೈವಿಂಗ್ ಲೈಸೆನ್ಸ್ ಅನ್ನು ಆಧಾರ್‌ಗೆ ಲಿಂಕ್ ಮಾಡೋದು ಹೇಗೆ? ಇಲ್ಲಿದೆ ಸರಳವಾದ ಪ್ರಕ್ರಿಯೆ”

ರಾಜ್ಯದಲ್ಲಿ ಇಂದು ಹೊಸ ದಾಖಲೆ ಬರೆದ ಕೊರೋನಾ : ಬರೋಬ್ಬರಿ 515 ಜನರಿಗೆ ಕೊರೋನಾ ಪಾಸಿಟಿವ್

ರಾಜ್ಯದಲ್ಲಿ ಇಂದು ಕೂಡ ಕೊರೋನಾ ಸೋಂಕಿತರ ಸಂಖ್ಯೆ ಸರಣಿ ಮುಂದುವರೆದಿದೆ. ರಾಜ್ಯದಲ್ಲಿ ಇಂದು ದಾಖಲೆಯ 515 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 4835ಕ್ಕೆ ಏರಿಕೆಯಾಗಿದೆ. ಇವರಲ್ಲಿ 1688 ಜನರು ಸಂಪೂರ್ಣವಾಗಿ ಗುಣಮುಖರಾಗುವ ಮೂಲಕ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಸಕ್ರೀಯವಾಗಿರುವ ಕೊರೋನಾ ಸೋಂಕಿತರ ಸಂಖ್ಯೆ 3088 ಆಗಿದೆ.  ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಇಂದು ಉಡುಪಿ –Continue reading “ರಾಜ್ಯದಲ್ಲಿ ಇಂದು ಹೊಸ ದಾಖಲೆ ಬರೆದ ಕೊರೋನಾ : ಬರೋಬ್ಬರಿ 515 ಜನರಿಗೆ ಕೊರೋನಾ ಪಾಸಿಟಿವ್”

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭಕ್ತಾದಿಗಳ ದರ್ಶನ ವ್ಯವಸ್ಥೆ

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನಕ್ಕೆ ಸಾರ್ವಜನಿಕರಿಗೆ ಮುಕ್ತ ಅವಕಾಶವನ್ನು ದಿನಾಂಕ 8-6-2020 ರಿಂದ ಮಾಡಿಕೊಡಲಾಗುವುದೆಂದು ಧರ್ಮಸ್ಥಳ ವೀರೇಂದ್ರ ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ವೀರು ಶೆಟ್ಟಿಯವರು ತಿಳಿಸಿರುತ್ತಾರೆ. ದೇವರ ದರ್ಶನಕ್ಕೆ ಧರ್ಮಸ್ಥಳದ ದೇವಳದಲ್ಲಿ, ಅನ್ನಪೂರ್ಣ ಭೋಜನ ಮಂದಿರದಲ್ಲಿ, ಸೂಕ್ತ ವ್ಯವಸ್ಥೆಯನ್ನು ಮಾಡಲಾಗಿದೆ. ದೇವಸ್ಥಾನದ ಒಳ ಪ್ರವೇಶ ಮಾಡುವವರು ತೆಗೆದುಕೊಳ್ಳಬೇಕಾದ ಕ್ರಮಗಳು ಇಂತಿವೆ. ಮುಖಕ್ಕೆ ಮಾಸ್ಕ್ ಧರಿಸಿರಬೇಕು, ಥರ್ಮಲ್ ಸ್ಕ್ರೀನಿಂಗ್‍ಗೆ ಒಳಪಡಬೇಕು, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು, ಕೈಗೆ ಸ್ಯಾನಿಟೈಸರ್ ಹಾಕಿಸಿಕೊಳ್ಳಬೇಕು.ಅರ್ಚಕ ಸಿಬ್ಬಂದಿಗಳು, ರಕ್ಷಣಾ ಸಿಬ್ಬಂದಿಗಳು, ಸ್ವಯಂContinue reading “ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭಕ್ತಾದಿಗಳ ದರ್ಶನ ವ್ಯವಸ್ಥೆ”

ಜೂನ್ 05, ವಿಶ್ವ ಪರಿಸರ ದಿನಾಚರಣೆ

ಜೂನ್ ತಿಂಗಳೆಂದರೆ ಅದಕ್ಕೆ ಒಂದು ವಿಶೇಷತೆ ಇದೆ. ಅದೇನೆಂದರೆ ವಿಶ್ವ ಪರಿಸರ ದಿನಾಚರಣೆ. ನಾವು ನಮ್ಮ‌ ಪರಿಸರದ ಬಗ್ಗೆ ತಿಳಿಯುವ, ಅದರ ಮಹತ್ವ ಅರಿಯುವ ಹಾಗೂ ಇಂದು ಪರಿಸರಕ್ಕೆ ಆಗುತ್ತಿರುವ ಹಾನಿಯನ್ನು ಅರಿತು, ಅದರ ಸಂರಕ್ಷಣೆಯ ಬಗ್ಗೆಯೂ ಆಲೋಚಿಸಬೇಕಾದ ಮಹತ್ತರವಾದ ದಿನ. ಮಾನವ ಪರಿಸರದ ಶಿಶು, ಪರಿಸರವಿಲ್ಲದೆ ಮಾನವನ ಅಸ್ತಿತ್ವಕ್ಕೆ ಯಾವುದೇ ರೀತಿಯ ಬೆಲೆಯಿರುವುದಿಲ್ಲ. ಆದ್ದರಿಂದಲೇ ಪ್ರತಿಯೊಬ್ಬರೂ ಪರಿಸರದ ಬಗ್ಗೆ ಅರಿಯಬೇಕಾದ ಅವಶ್ಯಕತೆ, ಅನಿವಾರ್ಯತೆ ಎರಡೂ ಇದೆ.1972 ರಲ್ಲಿ ವಿಶ್ವಸಂಸ್ಥೆಯ ಘೋಷಣೆಯ ನಂತರ, 1973 ಜೂನ್ 5Continue reading “ಜೂನ್ 05, ವಿಶ್ವ ಪರಿಸರ ದಿನಾಚರಣೆ”

ರೋಗ ನಿರೋಧಕ ಶಕ್ತಿ ತುಂಬುವ ರಾಗಿ

ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸರಳ ಪಾನೀಯವನ್ನು ಮಾಡುವ ವಿಧಾನವನ್ನು ತಿಳಿಯೋಣ. ಇದನ್ನು ಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರೂ ಕುಡಿಯಬಹುದು. ಒಂದು ಕಪ್ ರಾಗಿಯನ್ನು ಸ್ವಚ್ಛಗೊಳಿಸಿ, ರಾತ್ರಿ ನೀರಿನಲ್ಲಿ ನೆನೆಸಿ. 1 ಕಪ್ ರಾಗಿಗೆ 2 ಕಪ್ ನಷ್ಟು ನೀರು ಬೇಕು. ಇದನ್ನು ನಾಲ್ಕು ಜನ ಕುಡಿಯಬಹುದು ಬೆಳಗ್ಗೆ ಇದನ್ನು ಮಿಕ್ಸಿಯಲ್ಲಿ ರುಬ್ಬಿ ಮತ್ತೆ ಸೋಸಿ. ಒಂದು ಮುಷ್ಟಿ ಕಡಲೆಕಾಯಿ ಬೀಜವನ್ನು ಹಿಂದಿನ ರಾತ್ರಿಯೇ ನೆನೆಸಿಟ್ಟು ತುಸು ತೆಂಗಿನ ತುರಿ ಬೆರೆಸಿ ರುಬ್ಬಿ. ರಾಗಿ ಹಾಲನ್ನುContinue reading “ರೋಗ ನಿರೋಧಕ ಶಕ್ತಿ ತುಂಬುವ ರಾಗಿ”

ಸುಳ್ಳು ಮಾಹಿತಿ ನೀಡಿ BPL ಕಾರ್ಡ್ ಪಡೆದವರಿಗೆ ಆಘಾತ : ಮುಖ್ಯಮಂತ್ರಿಗಳಿಂದ ಎಚ್ಚರಿಕೆ

ಸಿಎಂ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಲಾಗಿದ್ದು, ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಆಹಾರ ಇಲಾಖೆ ಸಚಿವ ಕೆ. ಗೋಪಾಲಯ್ಯ ಹಾಗೂ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದಾರೆ. ಸಭೆಯಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ಅನರ್ಹರು ಪಡೆದುಕೊಂಡಿರುವ ಪಡಿತರ ಚೀಟಿ ಮತ್ತು ನಕಲಿ ಪಡಿತರ ಚೀಟಿಗಳನ್ನು ರದ್ದು ಮಾಡುವಂತೆ ಸೂಚನೆ ನೀಡಿದ್ದಾರೆ. ಕೆಲವು ಸರ್ಕಾರಿ ನೌಕರರು, ಶ್ರೀಮಂತರು, ಟ್ರ್ಯಾಕ್ಟರ್ ಸೇರಿ ಇತರೆ ವಾಹನ ಹೊಂದಿದವರು ಬಿಪಿಎಲ್ ಕಾರ್ಡ್ ಹೊಂದಿದ್ದಲ್ಲಿContinue reading “ಸುಳ್ಳು ಮಾಹಿತಿ ನೀಡಿ BPL ಕಾರ್ಡ್ ಪಡೆದವರಿಗೆ ಆಘಾತ : ಮುಖ್ಯಮಂತ್ರಿಗಳಿಂದ ಎಚ್ಚರಿಕೆ”

ಜೂನ್ 05, 2020 ಶುಕ್ರವಾರ ಇಂದಿನ ರಾಶಿ ಫಲ

ಮೇಷ ಆರೋಗ್ಯದಲ್ಲಿ ಕೊಂಚ ಏರುಪೇರಾಗುವ ಸಾಧ್ಯತೆ. ಆರ್ಥಿಕ ಬೆಳವಣಿಗೆಯನ್ನು ಕಾಣಬಹುದು. ಪ್ರಮುಖ ವಿಚಾರಗಳ ಬಗ್ಗೆ ದೃಢ ನಿರ್ಧಾರ ಕೈಗೊಳ್ಳುವ ಸಾಧ್ಯತೆ. ಉತ್ತಮ ಗೆಳೆತನ ದೊರಕುವ ಸಾಧ್ಯತೆ ಇದ್ದು ನೆಮ್ಮದಿ ಉಂಟಾಗಲಿದೆ. ವೃಷಭ ಸಣ್ಣ ಪುಟ್ಟ ಪ್ರಯಾಣ ಯೋಗ ಕಂಡುಬರುವುದು. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಸಾಮರ್ಥ್ಯವನ್ನರಿತು ಕೆಲಸ ನಿರ್ವಹಿಸುವುದು ಉತ್ತಮ. ಮಿತ್ರವೃಂದದಿಂದ ಉಪಯುಕ್ತ ಸಲಹೆ ದೊರೆತು ವೃತ್ತಿಯಲ್ಲಿ ಯಶಸ್ಸು. ಮಿಥುನ ನಿಮ್ಮ ಇಚ್ಛೆಗಳು ಸುಗಮವಾಗಿ ಈಡೇರಲಿವೆ. ಯೋಗ್ಯ ವಯಸ್ಕರಿಗೆ ಬಂಧುಗಳ ಸಹಕಾರದಿಂದ ವೈವಾಹಿಕ ಭಾಗ್ಯ ದೊರಕಲಿದೆ. ಇತರರೊಂದಿಗೆContinue reading “ಜೂನ್ 05, 2020 ಶುಕ್ರವಾರ ಇಂದಿನ ರಾಶಿ ಫಲ”