Design a site like this with WordPress.com
Get started

ಫ್ರಾನ್ಸ್‌ನಲ್ಲಿ ಶಾಲೆಗಳು ಆರಂಭವಾದ ಒಂದೇ ವಾರದಲ್ಲಿ 70 ಮಕ್ಕಳಿಗೆ ಕೊರೊನಾ ಸೋಂಕು; ಪೋಷಕರಲ್ಲಿ ಹೆಚ್ಚಿದ ಆತಂಕ

ಪ್ಯಾರಿಸ್: ಕೊರೊನಾವೈರಸ್‌ ಲಾಕ್‌ಡೌನ್‌ ಮುಕ್ತಾಯದ ಬಳಿಕ ಪ್ರಾನ್ಸ್‌ನಲ್ಲಿ ಶಾಲೆಗಳು ಪುನರಾರಂಭವಾಗಿ ಒಂದೇ ವಾರದಲ್ಲಿ 70ಕ್ಕೂ ಹೆಚ್ಚು ಮಕ್ಕಳಿಗೆ ಕೊರೊನಾ ಸೋಂಕು ತಗುಲಿದೆ. ಇದು ಮತ್ತೆ ತೀವ್ರ ಆತಂಕ ಸೃಷ್ಟಿಸಿದೆ. ಕೆಲವು ಶಾಲೆಗಳು ಕಳೆದ ವಾರ ಕಾರ್ಯಾರಂಭಿಸಿದ್ದವು. ಒಟ್ಟಾರೆ 1,50,000 ಶಾಲಾ ಮಕ್ಕಳು ಸೋಮವಾರ ಮರಳಿ ತರಗತಿಗಳಿಗೆ ಹಾಜರಾಗಿದ್ದರು.ಸರಕಾರ ನಿರ್ಬಂಧಗಳನ್ನು ಸಡಿಲಗೊಳಿಸುತ್ತಿದ್ದಂತೆಯೇ ಕೊರೊನಾ ಸಾಂಕ್ರಾಮಿಕ ಮತ್ತೆ ವ್ಯಾಪಕವಾಗಿ ಹರಡಲಾರಂಭಿಸಿದೆ. ಫ್ರಾನ್ಸ್ ಸರಕಾರ ನಿರ್ಬಂಧಗಳನ್ನು ತೆರವುಗೊಳಿಸಿದ್ದನ್ನು ಪ್ರಜೆಗಳು ಆರಂಭಿಕವಾಗಿ ಸ್ವಾಗತಿಸಿದ್ದರು. ವರ್ಕ್‌ ಫ್ರಮ್ ಹೋಮ್ ಮಾಡುತ್ತಿದ್ದ ಪೋಷಕರು ಮಕ್ಕಳನ್ನು ನೋಡಿಕೊಳ್ಳುವುದು ಕಷ್ಟವೆಂದುContinue reading “ಫ್ರಾನ್ಸ್‌ನಲ್ಲಿ ಶಾಲೆಗಳು ಆರಂಭವಾದ ಒಂದೇ ವಾರದಲ್ಲಿ 70 ಮಕ್ಕಳಿಗೆ ಕೊರೊನಾ ಸೋಂಕು; ಪೋಷಕರಲ್ಲಿ ಹೆಚ್ಚಿದ ಆತಂಕ”

ಕರುನಾಡಿಗೆ ಇಂದು ಕೊರೋನಾಘಾತ ಬರೋಬ್ಬರಿ 257 ಪ್ರಖರಣಗಳು!!!

ಕರ್ನಾಟಕದಲ್ಲಿ ಒಂದೇ ದಿನ ಮತ್ತೆ 257 ಮಂದಿಗೆ ಕೊರೋನ ವೈರಸ್ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಒಟ್ಟು ಸಂಖ್ಯೆ 4,320ಕ್ಕೆ ಏರಿಕೆಯಾಗಿದೆ. ಬೆಂಗಳೂರು ನಗರದಲ್ಲಿ ಇಬ್ಬರು, ಗದಗದಲ್ಲಿ ಪುರುಷರೊಬ್ಬರು ಮತ್ತು ದಾವಣಗೆರೆ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಕೊರೋನ ಸೋಂಕಿನಿಂದ ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 57ಕ್ಕೆ ಏರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಇಂದು ಸಂಜೆ ಬಿಡುಗಡೆಗೊಳಿಸಿದ ಬುಲೆಟಿನ್ ನಲ್ಲಿ ಬುಧವಾರ ಸಂಜೆ 5 ಗಂಟೆಯಿಂದ ಗುರುವಾರ ಸಂಜೆ 5 ಗಂಟೆವರೆಗೆ 257Continue reading “ಕರುನಾಡಿಗೆ ಇಂದು ಕೊರೋನಾಘಾತ ಬರೋಬ್ಬರಿ 257 ಪ್ರಖರಣಗಳು!!!”

ಒಳ್ಳೆಯದಾದರೆ ಅಧಿಕಾರಿಗಳ ಶ್ರಮ. ‌. . ಕೆಟ್ಟದಾದರೆ ಜನ ಪ್ರತಿನಿಧಿಗಳು ಕಾರಣ. .

ಎಲ್ಲವೂ ಸರ್ಕಾರದ ಆದೇಶದಂತೆ ನಡೆದದ್ದು. ಕೊರೋನಾ ನಿಯಂತ್ರಣದಲ್ಲೂ ಉಡುಪಿ No-1 ಜಿಲ್ಲೆ ಆಗಿತ್ತು …ಸರ್ಕಾರ ನಿಯಮಗಳನ್ನು ರೂಪಿಸಿದೆ. ಅಧಿಕಾರಿಗಳು ಅದನ್ನು ಪಾಲಿಸಿದ್ದಾರೆ. ಜನ ಸಹಕಾರ ನೀಡಿದ್ದಾರೆ. ಮತ್ತೇನಿದೆ.ಇಲ್ಲಿ ಒಳ್ಳೆಯದಾದರೆ ಅದು ಅಧಿಕಾರಿಗಳಿಂದ. .ಸ್ವಲ್ಪ ಸಮಸ್ಯೆ ಆದರೆ ಅದಕ್ಕೆ ಜನ ಪ್ರತಿನಿಧಿಗಳು ಕಾರಣ. . ಯಾಕೀ ಧೋರಣೆ????? ವರದಿ ಬರುವ ಮೊದಲು ಕ್ವಾರಂಟೈನ್ ನಲ್ಲಿ ಇದ್ದವರನ್ನು ಮನೆಗೆ ಕಳುಹಿಸಲು ಸರ್ಕಾರದ ಆದೇಶ ಅದನ್ನು ಪಾಲನೆ ಮಾಡಿದ್ದಾರೆ.ಉಡುಪಿ ಜಿಲ್ಲೆ ಗ್ರೀನ್ ಝೋನ್ ಬರಲು ಸರ್ಕಾರ ರೂಪಿಸಿದ ನಿಯಮಗಳನ್ನು ಪಾಲನೆ ಮಾಡಿದ್ದಾರೆ.Continue reading “ಒಳ್ಳೆಯದಾದರೆ ಅಧಿಕಾರಿಗಳ ಶ್ರಮ. ‌. . ಕೆಟ್ಟದಾದರೆ ಜನ ಪ್ರತಿನಿಧಿಗಳು ಕಾರಣ. .”

ಶಾಲಾ ಆರಂಭಕ್ಕೆ ಪೋಷಕರಿಂದ ತೀವ್ರ ವಿರೋಧ:ಈ ಬಗ್ಗೆ ಸಚಿವರ ಹೇಳಿಕೆ

ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ಶಾಲೆಗಳ ಆರಂಭಕ್ಕೆ ಪೋಷಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಆದರೆ, ಕೊರೋನಾ ಸಂದರ್ಭದಲ್ಲಿ ಶಾಲೆ ಆರಂಭಿಸಲು ರಾಜ್ಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಶಾಲೆಗಳ ಆರಂಭಕ್ಕೆ ತರಾತುರಿ ಇಲ್ಲವೆಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಮಕ್ಕಳ ಸುರಕ್ಷತೆಗೆ ಸರ್ಕಾರ ಆದ್ಯತೆ ನೀಡಲಿದ್ದು ಪೋಷಕರ ಅಭಿಪ್ರಾಯ ಪಡೆದು ಕೇಂದ್ರಕ್ಕೆ ಜೂನ್ 15 ರಂದು ವರದಿ ಕಳುಹಿಸಲಾಗುವುದು. ನಂತರ ಶಾಲೆ ಆರಂಭದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದುContinue reading “ಶಾಲಾ ಆರಂಭಕ್ಕೆ ಪೋಷಕರಿಂದ ತೀವ್ರ ವಿರೋಧ:ಈ ಬಗ್ಗೆ ಸಚಿವರ ಹೇಳಿಕೆ”

ಸ್ವಂತ ಮನೆ ಹೊಂದುವ ಕನಸು ಹೊತ್ತವರಿಗೆ ಇಲ್ಲಿದೆ ಸಿಹಿ ಸುದ್ದಿ

ಸ್ವಂತ ಸೂರು ಹೊಂದಬೇಕೆಂಬುದೇ ಬಹುತೇಕ ಎಲ್ಲರ ಬಯಕೆಯಾಗಿರುತ್ತದೆ. ಆದರೆ ಇಂದಿನ ದುಬಾರಿ ದುನಿಯಾದಲ್ಲಿ ಎಲ್ಲರೂ ಈ ಕನಸನ್ನು ಈಡೇರಿಸಿಕೊಳ್ಳುವುದು ಅಸಾಧ್ಯ. ಇದೀಗ ರಾಜ್ಯ ಸರ್ಕಾರ ಇದನ್ನು ಸಾಕಾರಗೊಳಿಸಲು ಮುಂದಾಗುವ ಮೂಲಕ ಸಿಹಿ ಸುದ್ದಿ ನೀಡಿದೆ. ಹೌದು, ಮುಂದಿನ ಎರಡು ವರ್ಷದೊಳಗೆ 10 ಲಕ್ಷ ಮನೆ ನಿರ್ಮಾಣ ಮಾಡುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದ್ದು, ವಸತಿರಹಿತರಿಗೆ ವಿತರಿಸಲು ತೀರ್ಮಾನಿಸಲಾಗಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.ಅಲ್ಲದೆ ಗ್ರಾಮೀಣ ಭಾಗದ ಜನರಿಗಾಗಿ 1.24 ಲಕ್ಷ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದುContinue reading “ಸ್ವಂತ ಮನೆ ಹೊಂದುವ ಕನಸು ಹೊತ್ತವರಿಗೆ ಇಲ್ಲಿದೆ ಸಿಹಿ ಸುದ್ದಿ”

15 ಸಾವಿರ ರೂ. ಪರಿಹಾರ ಪಡೆಯುವ ಕುರಿತು ರೈತರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಲಾಕ್ ಡೌನ್ ಜಾರಿಯಾಗಿದ್ದ ಕಾರಣ ರೈತರು ತಾವು ಬೆಳೆದ ಬೆಳೆಗಳನ್ನು ಮಾರಾಟ ಮಾಡಲಾಗದೆ ತೀವ್ರ ಆರ್ಥಿಕ ಸಂಕಷ್ಟವನ್ನು ಅನುಭವಿಸಿದ್ದರು. ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪರಿಹಾರ ಪ್ಯಾಕೇಜ್ ಘೋಷಿಸಿದೆ. ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಹೆಕ್ಟೇರಿಗೆ ಗರಿಷ್ಠ 15 ಸಾವಿರ ರೂ. ಪರಿಹಾರ ನೀಡಲಾಗುತ್ತಿದ್ದು, ಇದನ್ನು ಪಡೆಯಲು ರೈತರು ಜೂನ್ 16ರೊಳಗೆ ಅರ್ಜಿ ಸಲ್ಲಿಸಬೇಕಿದೆ. ಅರ್ಜಿ ಸಲ್ಲಿಕೆಗೆ ಪಹಣಿ, ಆಧಾರ್ ಕಾರ್ಡ್, ರೈತರ ಬ್ಯಾಂಕ್ ಖಾತೆ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿ ಹಾಗೂ ಸ್ವಯಂContinue reading “15 ಸಾವಿರ ರೂ. ಪರಿಹಾರ ಪಡೆಯುವ ಕುರಿತು ರೈತರಿಗೆ ಇಲ್ಲಿದೆ ಮಹತ್ವದ ಮಾಹಿತಿ”

04 ಜೂನ್,2020 ಗುರುವಾರ ಇಂದಿನ ರಾಶಿ ಫಲ

ಮೇಷ ತುರ್ತು ವಿಷಯಕ್ಕಾಗಿ ಸಂಬಂಧಿಕರ ನೆರವು ಪಡೆಯಬೇಕಾದಿತು. ಸಂಸಾರದಲ್ಲಿ ನೆಮ್ಮದಿ. ಅನಗತ್ಯ ಸುತ್ತಾಟದಿಂದಾಗಿ ದೇಹಾಲಸ್ಯ ಉಂಟಾಗಬಹುದು. ಗುರುದೇವತಾ ದರ್ಶನ ಮಾಡುವ ಸಾಧ್ಯತೆ. ವೃಷಭ ಹೊಸ ಉದ್ಯಮದ ಕೆಲಸಗಳು ಪೂರ್ಣಗೊಂಡು ನೆಮ್ಮದಿ. ಮಕ್ಕಳಿಗೆ ವಿವಾಹ ವಿಷಯದಲ್ಲಿ ನೆಂಟರಿಂದ ಒತ್ತಾಯಪೂರ್ವಕ ಪ್ರಸ್ತಾಪಗಳು ಬರಲಿವೆ. ಸಾಲದಿಂದ ಮುಕ್ತಿ ಹೊಂದಿ ನಿರಾಳತೆ ಅನುಭವಿಸುವಿರಿ. ಮಿಥುನ ತರಕಾರಿ, ಹಣ್ಣುಗಳ ವ್ಯಾಪಾರಿಗಳಿಗೆ ಬಹು ಬೇಡಿಕೆಯಿಂದಾಗಿ ಅಧಿಕ ಲಾಭ. ಪತ್ನಿ ವರ್ಗದವರ ಮನೆಗಳಿಗೆ ಕುಟುಂಬ ಸಮೇತರಾಗಿ ಭೇಟಿ ನೀಡುವ ಸಾಧ್ಯತೆ. ಧಾನ್ಯ ವ್ಯಾಪಾರಿಗಳಿಗೆ ಹಿನ್ನೆಡೆ. ಕಟಕ ಹಂತContinue reading “04 ಜೂನ್,2020 ಗುರುವಾರ ಇಂದಿನ ರಾಶಿ ಫಲ”