ದುಬಾರಿ ಮರ ಅಂದಾಕ್ಷಣ ನಿಮಗೆ ಯಾವುದು ನೆನಪಾಗುತ್ತದೆ? ರೋಸ್ ವುಡ್, ತೇಗ (ಟೀಕ್ ವುಡ್)… ಅವೆಲ್ಲಕ್ಕಿಂತ ಪರಮ ದುಬಾರಿಯಾದ ಗಂಧದ ಮರ. ನಿಮಗೆ ಗೊತ್ತಾ ಒಂದೇ ಕೇಜಿ ತೂಕಕ್ಕೆ ಗಂಧದ ಮರ 3ರಿಂದ 6 ಸಾವಿರ ರುಪಾಯಿ ಬಾಳುತ್ತದೆ. ಆದರೆ ಗಂಧದ ಮರಕ್ಕಿಂತ ಸಿಕ್ಕಾಪಟ್ಟೆ ಕಾಸ್ಟ್ಲಿ ಎನಿಸುವ ಮರವೊಂದಿದೆ. ಅದನ್ನು ಖರೀದಿಸಬೇಕಿದ್ದರೆ ಶ್ರೀಮಂತರು ಸಹ ಒಂದಕ್ಕೆ ಎರಡು ಬಾರಿ ಆಲೋಚನೆ ಮಾಡುತ್ತಾರೆ.

ಆ ಮರದ ಹೆಸರು ಆಫ್ರಿಕನ್ ಬ್ಲ್ಯಾಕ್ ವುಡ್. ಕನ್ನಡದಲ್ಲಿ ಆಫ್ರಿಕಾದ ಕಪ್ಪು ಮರ ಎನ್ನಬಹುದು. ಈ ಭೂಮಿ ಮೇಲೆ ಅತ್ಯಂತ ಮೌಲ್ಯ ಇರುವ ವಸ್ತುಗಳಲ್ಲಿ ಒಂದು ಇದು. ಒಂದು ಕೇಜಿಗೆ 8 ಸಾವಿರ ಪೌಂಡ್ ಸ್ಟರ್ಲಿಂಗ್ ಬೆಲೆ ಇದೆ. ಭಾರತದ ರುಪಾಯಿ ಲೆಕ್ಕದಲ್ಲಿ ಹೇಳಬೇಕು ಅಂದರೆ, 7.60 ಲಕ್ಷ ರುಪಾಯಿ.

ವಿಶ್ವದ 26 ದೇಶಗಳಲ್ಲಿ ಬೆಳೆಯುತ್ತದೆ

ಉಳಿದ ಮರಗಳಿಗೆ ಹೋಲಿಸಿದರೆ ಈ ಆಫ್ರಿಕನ್ ಬ್ಲ್ಯಾಕ್ ವುಡ್ ಅಂಥ ಎತ್ತರವೇನೂ ಬೆಳೆಯಲ್ಲ. 25ರಿಂದ 40 ಅಡಿ ಎತ್ತರಕ್ಕೆ ಬೆಳೆಯುತ್ತದೆ. ಈ ಮರದ ಬಗ್ಗೆ ಗೊತ್ತಿರುವವರು ಬಹಳ ಬೇಗ ಇವುಗಳನ್ನು ಕಂಡುಹಿಡಿಯುತ್ತಾರೆ. ವಿಶ್ವದ 26 ದೇಶಗಳಲ್ಲಿ ಈ ಮರಗಳನ್ನು ಕಾಣಬಹುದು.

ಚೆನ್ನಾಗಿ ಬೆಳೆಯಲು 70ರಿಂದ 100 ವರ್ಷ ತೆಗೆದುಕೊಳ್ಳುತ್ತದೆ

ಈ ಮರವನ್ನು ಯಾವುದಾದರೂ ವಸ್ತು ಮಾಡುವುದಕ್ಕೆ ಬಳಸುವಷ್ಟು ಬೆಳೆಯುವುದಕ್ಕೆ 70ರಿಂದ 100 ವರ್ಷ ತೆಗೆದುಕೊಳ್ಳುತ್ತದೆ. ಆದರೆ ಕೀನ್ಯಾ, ತಾಂಜೇನಿಯಾದಲ್ಲಿ ಇವುಗಳನ್ನು ಕಾನೂನುಬಾಹಿರವಾಗಿ ಸಾಗಣೆ ಮಾಡುವುದಕ್ಕೆ ಬಹಳ ಮುಂಚಿತವಾಗಿಯೇ ಕತ್ತರಿಸಿಬಿಡುತ್ತಾರೆ. ಆ ಕಾರಣಕ್ಕೆ ಇವುಗಳ ಸಂಖ್ಯೆ ಬಹಳ ಕಡಿಮೆಯಾಗಿ, ಕಪ್ಪು ಮರವೇ ವಿರಳವಾಗಿದೆ.

ಪಾಲಿಶ್ ಮಾಡಿದ ಮೇಲೆ ಚೆಲುವೋ ಚೆಲುವು

ಈ ಮರಗಳ ಹೆಸರೇ ಹೇಳುವಂತೆ ಕಡುಕಪ್ಪು. ಜತೆಗೆ ಕಣ್ಣು ಕಂಡೂ ಕಾಣದಂತೆ ಗೆರೆಗಳು ಇರುತ್ತದೆ. ಬಹಳ ಗಟ್ಟಿ, ನೇರ ಹಾಗೂ ದೃಢವಾದ ಮರ ಇದು. ಇವುಗಳಲ್ಲಿ ಪೀಠೋಪಕರಣವೋ ಮತ್ತೊಂದೋ ಮಾಡುವುದು ಸಹ ಸಲೀಸಲ್ಲ. ಈ ಕಪ್ಪು ಮರದಿಂದ ಮಾಡಿದ ವಸ್ತುಗಳನ್ನು ಒಮ್ಮೆ ಪಾಲಿಶ್ ಮಾಡಿದ ಮೇಲೆ ಅದರ ಚೆಲುವೇ ವರ್ಣಿಸಲು ಅಸಾಧ್ಯ.

ಸಂಗೀತ ವಾದ್ಯಗಳ ತಯಾರಿಗೆ ಬಳಕೆ

Leave a comment

Design a site like this with WordPress.com
Get started