
ಪಂಚಾಂಗ
ರಾಹುಕಾಲ: 5:03 ರಿಂದ 6 :33
ಗುಳಿಕಕಾಲ: 3:34 ರಿಂದ 5:03
ಯಮಗಂಡಕಾಲ: 12.33 ರಿಂದ 2:05
ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ,
ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ.
ವಾರ : ಭಾನುವಾರ, ತಿಥಿ : ಪಾಡ್ಯ ನಕ್ಷತ್ರ : ಪುಬ್ಬ
ಮೇಷ
ವಿವಿಧ ಮೂಲಗಳಿಂದ ಹೆಚ್ಚಿನ ಆದಾಯ. ವಾಹನ ಮಾರಾಟದಿಂದ ಉತ್ತಮ ಲಾಭ. ಮಕ್ಕಳ ಹೆಚ್ಚಿನ ವಿದ್ಯಾಭ್ಯಾಸದ ಧಾವಂತದಿಂದಾಗಿ ಆರೋಗ್ಯದಲ್ಲಿ ವ್ಯತ್ಯಯವಾದೀತು. ಸಮಾಧಾನ ಚಿತ್ತರಾಗಿರಿ.
ವೃಷಭ
ಉದ್ಯಮವನ್ನು ವಿಸ್ತರಿಸುವ ಸಲುವಾಗಿ ಸಿದ್ಧತೆ. ನಿಮ್ಮ ಕಾರ್ಯಕ್ಷೇತ್ರವನ್ನು ವಿದೇಶಗಳಲ್ಲೂ ವಿಸ್ತರಿಸಲು ಅನುಮತಿ ಪಡೆಯಲಿದ್ದೀರಿ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಮಕ್ಕಳ ವಿಶೇಷ ಸಾಧನೆಯ ಸಾಧ್ಯತೆ ಇದ್ದು ಸಂತಸ ಮೂಡಲಿದೆ.
ಮಿಥುನ
ನೂಲು ತೆಗೆಯುವ, ಶೃಂಗಾರ ಸಾಮಗ್ರಿ ಹಾಗೂ ಔಷಧ ತಯಾರಕರುಗಳಿಗೆ ಉತ್ತಮ ಲಾಭ. ಸ್ವಂತ ಉದ್ಯಮ, ಫ್ಯಾಕ್ಟರಿಗಳನ್ನು ನಡೆಸುತ್ತಿರುವವರಿಗೆ ಉತ್ತಮ ಆದಾಯ. ಆರೋಗ್ಯದ ಬಗ್ಗೆ ಕಾಳಜಿ ಇರಲಿ.
ಕಟಕ
ಜಾಹೀರಾತುಗಳ ಮೂಲಕ ವಹಿವಾಟನ್ನು ಹೆಚ್ಚಿಸಿಕೊಳ್ಳಲಿದ್ದೀರಿ. ವಿದೇಶಿ ಉತ್ಪನ್ನಗಳ ಮಾರಾಟದಿಂದಾಗಿ ಹೇರಳ ಲಾಭ. ಮಂಗಲಕಾರ್ಯಗಳಲ್ಲಿ ಭಾಗಿ. ತಾಯಿಯ ಆರೋಗ್ಯಕ್ಕಾಗಿ ನುರಿತ ವೈದ್ಯರಲ್ಲಿ ಚಿಕಿತ್ಸೆ ಕೊಡಿಸುವುದು ಉತ್ತಮ.
ಸಿಂಹ
ಗುತ್ತಿಗೆ ವ್ಯವಹಾರ ನಡೆಸುತ್ತಿರುವವರಿಗೆ ಸರ್ಕಾರದ ಕಾಮಗಾರಿಗಳು ದೊರೆತು ಸಂತಸ ನೀಡಲಿದೆ. ಮಂಗಳ ಕಾರ್ಯಗಳಿಗಾಗಿ ಮಕ್ಕಳೊಂದಿಗೆ ಚರ್ಚೆ. ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸಲು ಸಕಾಲವಾಗಿದೆ.
ಕನ್ಯಾ
ಕೃಷಿಕರಿಗೆ ಬೆಳೆದ ಫಸಲಿಗೆ ಉತ್ತಮ ಬೆಲೆ ದೊರಕುವುದರಿಂದಾಗಿ ಕೃಷಿ ಕೆಲಸಗಳಲ್ಲಿ ಉತ್ಸಾಹ ಮೂಡಲಿದೆ. ತೈಲ ಉತ್ಪನ್ನಗಳ ಮಾರಾಟಗಾರರಿಗೆ ಉತ್ತಮ ಲಾಭ ದೊರಕಲಿದೆ. ಹೊಸ ವ್ಯಕ್ತಿಗಳ ಆಗಮನದಿಂದಾಗಿ ಮನೆಯಲ್ಲಿ ಸಂತಸ.
ತುಲಾ
ರಫ್ತು ಮಾರಾಟಗಾರರಿಗೆ ಉತ್ತಮ ವ್ಯವಹಾರ ಕುದುರುವುದರಿಂದ ಆದಾಯ ಹೆಚ್ಚಲಿದೆ. ನಟ ನಟಿಯರು ಕಲಾವಿದರುಗಳಿಗೆ ಹೆಚ್ಚಿನ ಅವಕಾಶ ದೊರಕುವ ಸಾಧ್ಯತೆ. ವಿವಾಹ ನಿಶ್ಚಯವೇ ಮುಂತಾದ ಕೆಲಸಗಳಿಗಾಗಿ ಹೆಚ್ಚಿನ ಓಡಾಟ.
ವೃಶ್ಚಿಕ
ಸಣ್ಣ ಕೈಗಾರಿಕೋದ್ಯಮಿಗಳಿಗೆ ಸರ್ಕಾರದಿಂದ ಸಹಾಯಧನ. ಹೊಸ ಕೆಲಸಗಳಿಗೆ ಮಾಡುವ ಪ್ರಯತ್ನಕ್ಕೆ ಸ್ನೇಹಿತರಿಂದ ಸಹಾಯ. ಯಂತ್ರೋಪಕರಣಗಳ ವ್ಯವಹಾರದಿಂದಾಗಿ ಉತ್ತಮ ಲಾಭ.
ಧನು
ಸರ್ಕಾರಿ ಕೆಲಸಗಳಲ್ಲಿರುವವರಿಗೆ ಬಡ್ತಿ ಸಾಧ್ಯತೆ. ಹೊಸ ನಿವೇಶನ ಖರೀದಿ ಅಥವಾ ಗೃಹ ನಿರ್ಮಾಣ ಕಾರ್ಯಗಳು ಚುರುಕುಗೊಳ್ಳಲಿದೆ. ಕಾರ್ಯಬಾಹುಳ್ಯದಿಂದಾಗಿ ಮಾನಸಿಕ ಒತ್ತಡ ಹೆಚ್ಚಲಿದೆ.
ಮಕರ
ಪ್ರಭಾವಿ ವ್ಯಕ್ತಿಗಳೊಂದಿಗಿನ ಒಡನಾಟದಿಂದಾಗಿ ಹೆಚ್ಚಿನ ಸ್ಥಾನ ಪಡೆದುಕೊಳ್ಳಲಿದ್ದೀರಿ. ಸರ್ಕಾರದ ಉನ್ನತ ಹುದ್ದೆಗಳಲ್ಲಿ ಕೆಲಸಗಳನ್ನು ನಿರ್ವಹಿಸುವ ಅವಕಾಶ ದೊರಕಲಿದೆ. ಶುಭಕಾರ್ಯಗಳನ್ನು ನಡೆಸುವ ಬಗ್ಗೆ ಚಿಂತನೆ ನಡೆಸಲಿದ್ದೀರಿ.
ಕುಂಭ
ರಾಸಾಯನಿಕ ವಸ್ತುಗಳ ರಫ್ತು ವ್ಯಾಪಾರಗಳಿಂದ ಅಧಿಕ ವರಮಾನ. ಹೊಸ ಗೃಹ ನಿರ್ಮಾಣ ಕೆಲಸಗಳು ಶೀಘ್ರಗತಿಯಲ್ಲಿ ಸಾಗುವವು. ಸಮಾಧಾನಕರವಾಗಿ ಕೆಲಸಗಳನ್ನು ನಿರ್ವಹಿಸುವುದರಿಂದ ಒದಗಬಹುದಾದ ತೊಂದರೆಯಿಂದ ಪಾರಾಗಲಿದ್ದೀರಿ.
ಮೀನ
ಕೈಗೊಂಡ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲಿದ್ದೀರಿ. ಹಿರಿಯರ ಪ್ರಶಂಸೆಗೆ ಪಾತ್ರರಾಗುವಿರಿ. ನವ ದಂಪತಿಗಳಿಗೆ ಸಂತಾನ ಭಾಗ್ಯ. ಆಪ್ತರೊಬ್ಬರಿಗೆ ಹಣಕಾಸಿನ ನೆರವು ನೀಡುವ ಸಾಧ್ಯತೆ ಕಂಡುಬರುತ್ತಿದೆ