
ಶಾರ್ವರಿ ಸಂ|ರದ ಮಕರ ಮಾಸ ದಿನ 28 ಸಲುವ ಪೌಷ ಬಹುಳ ಅಮಾವಾಸ್ಯೆ 44| ಗಳಿಗೆದಿನ ವಿಶೇಷ :ಪುರಂದರದಾಸರ ಪುಣ್ಯದಿನನಿತ್ಯ ನಕ್ಷತ್ರ :ಶ್ರವಣ 18 ಗಳಿಗೆಮಹಾ ನಕ್ಷತ್ರ :ಧನಿಷ್ಠಾಋತು :ಹೇಮಂತರಾಹುಕಾಲ :1.30-3.00 ಗಂಟೆಗುಳಿಕ ಕಾಲ :9.00-10.30 ಗಂಟೆಸೂರ್ಯಾಸ್ತ :6.34 ಗಂಟೆಸೂರ್ಯೋದಯ :6.58 ಗಂಟೆ
ಮೇಷ
ಒಪ್ಪಂದದ ಮಾತುಕತೆಗಳು ಫಲಪ್ರದವಾಗಲಿವೆ. ಧಾರ್ಮಿಕ ಕೆಲಸಗಳಿಗಾಗಿ ವೆಚ್ಚ. ಕುಟುಂಬದವರೊಂದಿಗೆ ಕುಲದೇವತಾ ದರ್ಶನ ಭಾಗ್ಯ. ದೂರದ ಪ್ರಯಾಣ ಮಾಡಬೇಕಾದ ಅನಿವಾರ್ಯತೆ.
ವೃಷಭ
ನಿಮಗೆ ಅಚ್ಚರಿ ಮೂಡಿಸುವ ರೀತಿಯಲ್ಲಿ ಹಣಕಾಸಿನ ಅನುಕೂಲತೆಗಳು ಒದಗಿಬರಲಿವೆ. ಪರಿಸ್ಥಿತಿಯ ಅರಿವು ನಿಮಗೆ ಆಗಲಿದ್ದು ಉತ್ತಮ ಕಾರ್ಯನಿರ್ವಹಣೆ ಆಗುವುದರಲ್ಲಿ ಸಂಶಯಬೇಡ.
ಮಿಥುನ
ಹೆರವರಿಗೆ ನಿಮ್ಮ ಮೇಲಿರುವ ಸಂಶಯಗಳು ದೂರವಾಗಿ ನಿರಾಳತೆ ಮೂಡಲಿದೆ. ಸಂಘ ಸಂಸ್ಥೆಗಳಲ್ಲಿ ಅಧಿಕಾರ ಪ್ರಾಪ್ತವಾಗುವ ಸಾಧ್ಯತೆ. ವಾಹನಗಳಿಂದ ಲಾಭ, ಮನೆ ಬಳಕೆಯ ವಿಶೇಷ ವಸ್ತುಗಳ ಖರೀದಿ.
ಕಟಕ
ಒದಗಿ ಬಂದ ಅವಕಾಶಗಳಲ್ಲಿ ಪ್ರಮುಖವಾದುದನ್ನು ಮಾತ್ರ ಆಯ್ದುಕೊಳ್ಳಿ. ಪರಿಸ್ಥಿತಿಗೆ ನೀವು ಚೆನ್ನಾಗಿ ಹೊಂದಿಕೊಳ್ಳುವುದರಿಂದಾಗಿ ಸಂಕಷ್ಟಗಳು ಎದುರಾಗಲಾರವು.
ಸಿಂಹ
ಹೆಚ್ಚಿನ ಜವಾಬ್ದಾರಿಗಳು ನಿಮಗೆ ಒದಗಿಬಂದರೂ ಯಾವುದನ್ನೂ ಅತಿಯೆಂದು ಭಾವಿಸದೇ ಸಮಾಧಾನ ಚಿತ್ತದಿಂದ ನಿರ್ವಹಿಸಿದಲ್ಲಿ ನಿಮ್ಮ ಯಶಸ್ಸಿಗೆ ಸೋಪಾನವಾಗಲಿದೆ. ಹೊಸ ಯೋಜನೆಗಳನ್ನು ಆರಂಭಕ್ಕೆ ಸಕಾಲ.
ಕನ್ಯಾ
ಮಕ್ಕಳು ಪರೀಕ್ಷೆಗಳಲ್ಲಿ ಹೆಚ್ಚಿನ ಪ್ರಗತಿಯನ್ನು ತೋರಿ ಸಂತೋಷ ಮೂಡಿಸಲಿದ್ದಾರೆ. ಕೌಟುಂಬಿಕ ವಿಷಯಗಳನ್ನು ಆಪ್ತರಲ್ಲಿ ಹಂಚಿಕೊಳ್ಳುವುದರಿಂದ ನೆಮ್ಮದಿ. ವೈದ್ಯ ವೃತ್ತಿಯಲ್ಲಿರುವವರಿಗೆ ಉತ್ತಮ ಆದಾಯ.
ತುಲಾ
ಗೃಹ ನಿರ್ಮಾಣ ಕೆಲಸಗಳು ಸುಸೂತ್ರವಾಗಿ ಪೂರ್ಣಗೊಳ್ಳಲಿವೆ. ಮನೆಯಲ್ಲಿ ನೆಮ್ಮದಿಯ ವಾತಾವರಣ. ವ್ಯವಹಾರ ನಿಮಿತ್ತ ಗೆಳೆಯರೊಂದಿಗೆ ಪ್ರವಾಸ ಹೊರಡುವ ಬಗ್ಗೆ ಯೋಚಿಸಲಿದ್ದೀರಿ. ಯಶಸ್ವೀ ಕಾರ್ಯ ನಿರ್ವಹಣೆ.
ವೃಶ್ಚಿಕ
ಮನೆ ಮಂದಿಯೊಂದಿಗಿನ ಬಾಂಧವ್ಯ ವೃದ್ಧಿಯಾಗುವುದು. ಆರ್ಥಿಕವಾಗಿ ಬಲಿಷ್ಟಗೊಳ್ಳುವ ಅವಕಾಶ ಒದಗಿಬರುವುದು. ಮನೆಯಲ್ಲಿ ದೇವತಾ ಕಾರ್ಯಗಳನ್ನು ನೆರವೇರಿಸಲಿದ್ದೀರಿ.
ಧನು
ಅದ್ಭುತವಾದ ಕಾರ್ಯಗಳನ್ನು ಮಾಡುವ ಮೂಲಕ ಸೈ ಎನ್ನಿಸಿಕೊಳ್ಳುವಿರಿ. ಇದು ನಿಮಗೆ ಸಹಜವಾಗಿ ಕಂಡಬಂದರೂ ಇತರರಿಗೆ ವಿಶೇಷವೆನಿಸಲಿದೆ. ಬದುಕಿನಲ್ಲಿ ಒಂದು ಹೊಸ ಆಯಾಮವನ್ನು ನೀಡಲಿದ್ದೀರಿ.
ಮಕರ
ರಚನಾತ್ಮಕ ಕಾರ್ಯ ನಿರ್ವಹಣೆಯಿಂದ ಸಮಾಜದಲ್ಲಿ ಹೆಚ್ಚಿನ ಗೌರವಾದರಗಳನ್ನು ಹೊಂದುವಿರಿ. ಈ ದಿನ ಸರಕು ಸಾರಿಗೆ ವ್ಯವಹಾರದಲ್ಲಿ ತೊಡಗಿದವರಿಗೆ ಹೆಚ್ಚಿನ ಲಾಭ. ಪಿತ್ರಾರ್ಜಿತ ಆಸ್ತಿ ಕೈ ಸೇರುವ ಸಾಧ್ಯತೆ.
ಕುಂಭ
ಹೆಚ್ಚಿನ ಸ್ವಾತಂತ್ರ್ಯ ದೊರೆತಿದೆ. ಉತ್ಸಾಹದಿಂದ ಮುನ್ನುಗ್ಗಿ ಕೆಲಸ ಕಾರ್ಯಗಳು ಸುಗಮವಾಗಲಿವೆ. ದೂರಪ್ರದೇಶದಲ್ಲಿರುವ ವ್ಯಕ್ತಿಗಳಿಂದ ಸಕಾಲದಲ್ಲಿ ಸಹಾಯ ದೊರಕಲಿವೆ. ಋಣ ಬಾಧೆಯಿಂದ ಮುಕ್ತಿ.
ಮೀನ
ಕೆಲಸ ಕಾರ್ಯಗಳಲ್ಲಿ ಮುನ್ನಡೆಯನ್ನು ಸಾಧಿಸಲಿದ್ದೀರಿ. ವ್ಯಾಪಾರ ವ್ಯವಹಾರಗಳಲ್ಲಿ ನಿರೀಕ್ಷೆಗೂ ಮೀರಿದ ಲಾಭ ದೊರಕಲಿದೆ. ಸಂಗಾತಿಯೊಂದಿಗೆ ಮಧುರ ಕ್ಷಣಗಳನ್ನು ಕಳೆಯಲಿದ್ದೀರಿ.