Design a site like this with WordPress.com
Get started

ಉಡುಪಿಯಲ್ಲಿ ಸಮುದಾಯ ಮಟ್ಟದಲ್ಲಿ ಸೋಂಕು: ಡಾ.ಶಶಿಕಿರಣ್ ‌ಎಚ್ಚರಿಕೆ.

ಉಡುಪಿ: ಜಿಲ್ಲೆಯಲ್ಲಿ ತೀವ್ರ ಉಸಿರಾಟದ ಸಮಸ್ಯೆ ಹಾಗೂ ಶೀತಜ್ವರ ರೋಗ ಲಕ್ಷಣ ಇರುವವರರಲ್ಲಿ ಕೋವಿಡ್‌ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಸಮುದಾಯ ಮಟ್ಟದಲ್ಲಿ ಸೋಂಕು ಹರಡಿರುವ ಭೀತಿ ಸೃಷ್ಟಿಯಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟಬುತ್ತಿ ಎನ್ನುತ್ತಾರೆ ಡಾ.ಟಿಎಂಎ ಪೈ ಆಸ್ಪತ್ರೆಯ ತಜ್ಞ ವೈದ್ಯ ಡಾ.ಶಶಿಕಿರಣ್ ಉಮಾಕಾಂತ್.

ಜುಲೈ 23, 2020; ಗುರುವಾರ: ಇಂದಿನ ರಾಶಿಭವಿಷ್ಯ

ಪಂಚಾಂಗ:ಶ್ರೀ ಶಾರ್ವರಿನಾಮ ಸಂವತ್ಸರ,ದಕ್ಷಿಣಾಯನ ಪುಣ್ಯಕಾಲ,ವರ್ಷ ಋತು, ಶ್ರಾವಣ ಮಾಸ,ಶುಕ್ಲ ಪಕ್ಷ, ತೃತೀಯಾ ತಿಥಿ,ಸಂಜೆ 5:04 ನಂತರ ಚತುರ್ಥಿ,ಗುರುವಾರ, ಮಖ ನಕ್ಷತ್ರ,ಸಂಜೆ 5:08 ಪೂರ್ವಫಾಲ್ಗುಣಿ ನಕ್ಷತ್ರ ರಾಹುಕಾಲ: ಮಧ್ಯಾಹ್ನ 2:05 ರಿಂದ 3:41ಗುಳಿಕಕಾಲ: ಬೆಳಗ್ಗೆ 9:18 ರಿಂದ 10:54ಯಮಗಂಡಕಾಲ: ಬೆಳಗ್ಗೆ 6:07 ರಿಂದ 7:42 ಮೇಷ ವಾಹನ ಖರೀದಿಯ ಅವಕಾಶಗಳು ಕಂಡುಬರುತ್ತಿವೆ. ಸ್ವಉದ್ಯೋಗಗಳಲ್ಲಿ ತೊಡಗಿಕೊಳ್ಳಲು ಸಕಾಲ. ಸಣ್ಣ ವ್ಯಾಪಾರ, ಗುಡಿ ಕೈಗಾರಿಕೆಗಳಿಂದ ಲಾಭ. ದೊಡ್ಡ ಉದ್ಯಮಕ್ಕೆ ಯೋಜನೆಗಳು ಹೊಂದಾಣಿಕೆಯಾಗುವವು. ವೃಷಭ ಆದಾಯಕ್ಕೂ ಮೀರಿದ ಖರ್ಚು ತಲೆದೋರಬಹುದು. ಭೂ ಸಂಬಂಧಿContinue reading “ಜುಲೈ 23, 2020; ಗುರುವಾರ: ಇಂದಿನ ರಾಶಿಭವಿಷ್ಯ”

ಇಂದಿನ ಔಷಧೀಯ ಸಸ್ಯ ಪರಿಚಯ: ಕೋಕಿಲಾಕ್ಷ

ಕೋಕಿಲಾಕ್ಷ ಕೋಕಿಲಾಕ್ಷಿ, ಕೊಳವಳಿಕೆ, ಗೊರ್ಮಿಟಿ, ನೀರ್ ಗುಬ್ಲಿ, ಕೊಳವಂಕ, ನೀರ್ ಮುಳ್ಳಿ, ವನಶೃಂಗಾರಮು,ನೀಟಿ ಗೊಬ್ಬಿ, ಕುಲಿಖಾರ, ತಲ್ಮಖಾನ, ಉಂಡಗಮ್ ಎಂಬ ಹೆಸರುಗಳಿಂದ ಕರೆಯುತ್ತಾರೆ.ಈ ಗಿಡವು ತೇವಾಂಶ ಇರುವ ಕಡೆ ಹೆಚ್ಚಾಗಿ ಬೆಳೆಯುತ್ತೆ.ಕೆರೆ ಕುಂಟೆಗಳ ಸುತ್ತಲೂ, ನೀರು ಹರಿಯುವ ಕಾಲುವೆಗಳ ಪಕ್ಕ, ಗದ್ದೆಗಳ ಬದಿಗಳ ಮೇಲೆ 2 ರಿಂದ 3 ಅಡಿ ಬೆಳೆಯುವ ಮುಳ್ಳಿನ ಗಿಡವಾಗಿದ್ದು, ಸಮೂಲ ಸಹಿತ ಅಪಾರ ಔಷಧಿ ಗುಣಗಳನ್ನು ಹೊಂದಿದೆ.ಅನೇಕ ಪ್ರಾಂತ್ಯಗಳಲ್ಲಿ ಕೊಳವಳಿಕೆ ಗಿಡದ ಸೊಪ್ಪಿನಿಂದ ಪಲ್ಯ, ಸಾಂಬಾರ್ ಮಾಡಿ ತಿನ್ನುತ್ತಾರೆ.ಇದು ಸೇವಿಸಲು ತುಂಬಾContinue reading “ಇಂದಿನ ಔಷಧೀಯ ಸಸ್ಯ ಪರಿಚಯ: ಕೋಕಿಲಾಕ್ಷ”

ಬಿ.ಎಸ್. ಯಡಿಯೂರಪ್ಪರವರು ಸೂಚಿಸಿದ ಐವರು ಅಭ್ಯರ್ಥಿಗಳು MLC ಗಳಾಗಿ ಆಯ್ಕೆ

ವಿಧಾನ ಪರಿಷತ್ ಗೆ ಐವರನ್ನು ನಾಮ ನಿರ್ದೇಶನ ಮಾಡಲಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಐವರ ಹೆಸರನ್ನು ಶಿಫಾರಸು ಮಾಡಿದ್ದು ಇದಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸುವಲ್ಲಿ ನೆರವಾಗಿದ್ದ ಮಾಜಿ ಸಂಸದ ಹೆಚ್. ವಿಶ್ವನಾಥ್, ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಅವರಿಗೆ ಅವಕಾಶ ಸಿಕ್ಕಿದೆ. ಅದೇ ರೀತಿ ಭಾರತಿ ಶೆಟ್ಟಿ, ಶಾಂತಾರಾಮ್ ಸಿದ್ದಿ ಮತ್ತು ತಳವಾರ್ ಸಾಬಣ್ಣ ಅವರ ಹೆಸರಿಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ರಾಜ್ಯಸಭೆ ಚುನಾವಣೆಯಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿಯಿಂದContinue reading “ಬಿ.ಎಸ್. ಯಡಿಯೂರಪ್ಪರವರು ಸೂಚಿಸಿದ ಐವರು ಅಭ್ಯರ್ಥಿಗಳು MLC ಗಳಾಗಿ ಆಯ್ಕೆ”

18 ಕೋಟಿ ಭಾರತೀಯರಿಗೆ ಈಗಾಗಲೇ ಕೊರೋನಾ ಬಂದು ಗುಣಮುಖವಾಗಿದೆ ಇದು ಅಶ್ಚರ್ಯವೆನಿಸಿದರೂ ಸತ್ಯ..

ಭಾರತದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 11 ಲಕ್ಷ ಗಡಿ ದಾಟಿರುವಂತೆಯೇ ಇತ್ತ ಅಧ್ಯಯನವೊಂದು ಈಗಾಗಲೇ 18 ಕೋಟಿ ಭಾರತೀಯರಲ್ಲಿ ಕೊರೋನಾ ವೈರಸ್ ಬಂದು ಹೋಗಿದೆ ಎಂಬ ಅಚ್ಚರಿ ಅಂಶವನ್ನು ಬಯಲು ಮಾಡಿದೆ. ಹೌದು. ಖ್ಯಾತ ಖಾಸಗಿ ಪರೀಕ್ಷಾ ಲ್ಯಾಬ್ ಸಂಸ್ಥೆ ಥೈರೋಕೇರ್ ಈ ಬಗ್ಗೆ ಮಾಹಿತಿ ನೀಡಿದ್ದು, ತಾನು ನಡೆಸಿದ ಅಧ್ಯಯನದಲ್ಲಿ ದೇಶದ ಸುಮಾರು 18 ಕೋಟಿ ಭಾರತೀಯರಲ್ಲಿ ಈಗಾಗಲೇ ಕೊರೋನಾ ವೈರಸ್ ಬಂದು ಹೋಗಿದೆ ಎಂದು ಹೇಳಿದೆ. ಕೊರೋನಾ ವೈರಸ್ ಸೈಲೆಂಟ್ ಆಗಿ ಎಲ್ಲರನ್ನೂContinue reading “18 ಕೋಟಿ ಭಾರತೀಯರಿಗೆ ಈಗಾಗಲೇ ಕೊರೋನಾ ಬಂದು ಗುಣಮುಖವಾಗಿದೆ ಇದು ಅಶ್ಚರ್ಯವೆನಿಸಿದರೂ ಸತ್ಯ..”

ಜುಲೈ 22,2020; ಬುಧವಾರ: ಇಂದಿಶ ರಾಶಿ ಭವಿಷ್ಯ

ಪಂಚಾಂಗ:ಶ್ರೀ ಶಾರ್ವರಿನಾಮ ಸಂವತ್ಸರ,ದಕ್ಷಿಣಾಯನ ಪುಣ್ಯಕಾಲ,ವಸಂತ ಋತು, ಶ್ರಾವಣ ಮಾಸ,ಶುಕ್ಲ ಪಕ್ಷ, ದ್ವಿತೀಯಾ ತಿಥಿ,ಬುಧವಾರ, ಆಶ್ಲೇಷ ನಕ್ಷತ್ರ ರಾಹುಕಾಲ: ಮಧ್ಯಾಹ್ನ 12:30 ರಿಂದ 2:05ಗುಳಿಕಕಾಲ: ಬೆಳಗ್ಗೆ 10:54 ರಿಂದ 12:30ಯಮಗಂಡಕಾಲ: ಬೆಳಗ್ಗೆ 7:42 ರಿಂದ 9:18 ಮೇಷ ಉದ್ಯೋಗದ ವಿಷಯದಲ್ಲಿ ಭಾಗ್ಯೋದಯದ ವಾರ್ತೆಯನ್ನು ಕೇಳಲಿದ್ದೀರಿ. ಮಿತ್ರರ ಔದಾರ್ಯವು ದೊರಕುವುದು. ಆರ್ಥಿಕ ಅಭಿವೃದ್ಧಿ ಕಾಣುವಿರಿ. ಬಂಧುಗಳೊಂದಿಗೆ ಅತಿಯಾದ ಜಿಗುಟುತನದಿಂದಾಗಿ ವಿರಸ. ವೃಷಭ ವ್ಯವಹಾರದಲ್ಲಿ ಹೊಸ ಯೋಜನೆಯನ್ನು ಪ್ರಾರಂಭಿಸುವ ಸಾಧ್ಯತೆ. ಹತ್ತಿ, ಬಟ್ಟೆ ವ್ಯಾಪಾರದಿಂದ ಅಧಿಕ ಲಾಭವನ್ನು ಹೊಂದುವಿರಿ. ಗುತ್ತಿಗೆ ಕೆಲಸContinue reading “ಜುಲೈ 22,2020; ಬುಧವಾರ: ಇಂದಿಶ ರಾಶಿ ಭವಿಷ್ಯ”

ಇಂದಿನ ಔಷಧೀಯ ಸಸ್ಯ ಪರಿಚಯ: ಹಾಲುಕುಡಿ ಬಳ್ಳಿ

ದುಗ್ಧಿಕಾ (ಹಾಲು ಬಳ್ಳಿ )ಕೆಂಪು ನೆನೆ ಅಕ್ಕಿಗಿಡ, ಬಿಳಿ ನೆನೆಅಕ್ಕಿಗಿಡ, ದೊಡ್ಡ ಹಾಲುಕುಡಿ, ಸಣ್ಣ ಹಾಲುಕುಡಿ,ಅಚ್ಚೆಗಿಡ,ರೆಡ್ಡಿವಾರು ನಾನಬಾಲ, ಪಾಲುಕಾಡ, ನಾಗಾರ್ಜುನಿ, ನಾನಪಾಲ ಪಚ್ಚಪೋಟ್ಲಾಕು, ಅಮ್ಮನ್ ಪಚ್ಚೆರಸಿ, ನೀಲಪಾಳೈ ಎಂಬ ಹೆಸರುಗಳಿಂದ ಕರೆಯುತ್ತಾರೆ. ಈ ಸಸ್ಯವು ತೋಟ, ಹೊಲ, ಸಾಗುವಳಿ ಭೂಮಿ, ರಸ್ತೆಗಳ ಪಕ್ಕ, ಪಾಳು ಭೂಮಿ, ನೀರು ಹರಿಯುವ ಕಾಲುವೆಗಳ ಪಕ್ಕ,ತೇವಾಂಶ ಹೆಚ್ಚು ಇರುವ ಕಡೆ ಕಳೆಯಂತೆ ಬೆಳೆಯುತ್ತೆ.ಇದರಲ್ಲಿ ಕೆಂಪು ಹಾಗು ಬಿಳಿಯ ಬಣ್ಣದ ಎರಡು ಪ್ರಭೇದಗಳಿದ್ದು, 1/2 -1 ಅಡಿ ನೆಲದಲ್ಲಿ ಹಬ್ಬಿ ಬೆಳೆಯುತ್ತವೆ. ದೇಹದಲ್ಲಿContinue reading “ಇಂದಿನ ಔಷಧೀಯ ಸಸ್ಯ ಪರಿಚಯ: ಹಾಲುಕುಡಿ ಬಳ್ಳಿ”

‘ಎನ್ -95 ಮಾಸ್ಕ್‌ ಬಳಕೆದಾರರನ್ನು ತಕ್ಷಣ ಎಚ್ಚರಿಸಿ’ – ಕೇಂದ್ರದಿಂದ ರಾಜ್ಯಗಳಿಗೆ ಸೂಚನೆ

ಜನರು ಎನ್ -95 ಮಾಸ್ಕ್‌ಗಳನ್ನು ಬಳಸುವುದರ ವಿರುದ್ಧವಾಗಿ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರವು ಪತ್ರ ಬರೆದಿದ್ದು, ಇವುಗಳು ವೈರಸ್ ಹರಡುವುದನ್ನು ತಡೆಯುವುದಿಲ್ಲ ಹಾಗೂ ಅದರ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳಿಗೆ “ಹಾನಿಕಾರಕ” ಎಂದು ತಿಳಿಸಿದೆ. ಆರೋಗ್ಯ ಸಚಿವಾಲಯದ ಆರೋಗ್ಯ ಸೇವೆಗಳ ಮಹಾನಿರ್ದೇಶಕರು (ಡಿಜಿಎಚ್‌ಎಸ್) ರಾಜ್ಯಗಳ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣದ ಪ್ರಧಾನ ಕಾರ್ಯದರ್ಶಿಗಳಿಗೆ ಬರೆದಿರುವ ಪತ್ರದಲ್ಲಿ, ಎನ್ -95 ಮಾಸ್ಕ್‌ನ “ಅನುಚಿತ ಬಳಕೆ”ಯ ಬಗ್ಗೆ ಗಮನಿಸಲಾಗಿದೆ. ನಿಗದಿ ಪಡಿಸಿದ ಆರೋಗ್ಯ ಕಾರ್ಯಕರ್ತರನ್ನು ಹೊರತುಪಡಿಸಿ ಸಾರ್ವಜನಿಕರುContinue reading “‘ಎನ್ -95 ಮಾಸ್ಕ್‌ ಬಳಕೆದಾರರನ್ನು ತಕ್ಷಣ ಎಚ್ಚರಿಸಿ’ – ಕೇಂದ್ರದಿಂದ ರಾಜ್ಯಗಳಿಗೆ ಸೂಚನೆ”

ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀ ಸ್ವಾಮೀಜಿಗಳಿಗೆ ಕೊರೋನಾ ಸೋಂಕು ದೃಢ

ಉಡುಪಿ , ಜು.21:  ಕೃಷ್ಣ ನಗರಿಯಲ್ಲಿ ಕೊರೋನಾ ದಿನದಿಂದ ದಿನಕ್ಕೆ ಸದ್ದು ಮಾಡುತ್ತಲೇ ಇದೆ. ಇಂದು ಉಡುಪಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರಿಗೂ ಕೊವೀಡ್ -19 ಸೋಂಕು ತಗುಲಿರುವುದು ದೃಢವಾಗಿದೆ. ಅವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸುಗುಣೇಂದ್ರ ಶ್ರೀಗಳಿಗೆ ಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ ತಪಾಸಣೆಗೆಂದು ಆಸ್ಪತ್ರೆಗೆ ತೆರಳಿದ್ದರು. ಈ ವೇಳೆ ಅವರ ಗಂಟಲ ದ್ರವ ಪರೀಕ್ಷೆಗೆ ರವಾನಿಸಲಾಗಿತ್ತು. ಮಂಗಳವಾರ ವರದಿ ಕೈ ಸೇರಿದ್ದು, ಕೊರೊನಾ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಮಣಿಪಾಲ ಆಸ್ಪತ್ರೆಗೆ ಶ್ರೀಗಳನ್ನು ದಾಖಲಿಸಲಾಗಿದೆ.Continue reading “ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀ ಸ್ವಾಮೀಜಿಗಳಿಗೆ ಕೊರೋನಾ ಸೋಂಕು ದೃಢ”

ಜುಲೈ 21,2020;ಮಂಗಳವಾರ : ಇಂದಿನ ರಾಶಿಭವಿಷ್ಯ

ಪಂಚಾಂಗ:ಶ್ರೀ ಶಾರ್ವರಿನಾಮ ಸಂವತ್ಸರ,ದಕ್ಷಿಣಾಯನ ಪುಣ್ಯಕಾಲ,ವರ್ಷ ಋತು, ಶ್ರಾವಣ ಮಾಸ,ಶುಕ್ಲ ಪಕ್ಷ, ಪಾಡ್ಯ ತಿಥಿ,ಮಂಗಳವಾರ, ಪುಷ್ಯ ನಕ್ಷತ್ರ ರಾಹುಕಾಲ: ಮಧ್ಯಾಹ್ನ 3:41 ರಿಂದ 5:17ಗುಳಿಕಕಾಲ: ಮಧ್ಯಾಹ್ನ 12:30 ರಿಂದ 2:05ಯಮಗಂಡಕಾಲ: ಬೆಳಗ್ಗೆ 9:18 ರಿಂದ 10:54 ಮೇಷ ಉದ್ಯೋಗ ವ್ಯವಹಾರಗಳಲ್ಲಿ ಸಮಸ್ಯೆಗಳು ಉಂಟಾಗಬಹುದು. ಹೊಸ ವಸ್ತುಗಳ ಖರೀದಿಯನ್ನು ಮಾಡುವಾಗ ಎಚ್ಚರಿಕೆ ಅಗತ್ಯ. ವೃತ್ತಿಯಲ್ಲಿ ಸ್ಥಾನ ಬದಲಾವಣೆ ಸಾಧ್ಯತೆ ಕಂಡುಬರುತ್ತಿದೆ. ಕೆಲಸದ ನಿಮಿತ್ತ ಅಲೆದಾಟ ಮಾಡಬೇಕಾದೀತು. ವೃಷಭ ಪ್ರಯಾಣದಲ್ಲಿ ಸಂಕಟ ತಲೆದೋರಬಹುದು. ಭೂ ವ್ಯವಹಾರದಿಂದ ಧನ ಲಾಭವಾಗುವ ಸಾಧ್ಯತೆ ಕಂಡುಬರುತ್ತಿದೆ.Continue reading “ಜುಲೈ 21,2020;ಮಂಗಳವಾರ : ಇಂದಿನ ರಾಶಿಭವಿಷ್ಯ”