ಇಂದಿನ ಔಷಧೀಯ ಸಸ್ಯ ಪರಿಚಯ: ಹಾಲುಕುಡಿ ಬಳ್ಳಿ

ದುಗ್ಧಿಕಾ (ಹಾಲು ಬಳ್ಳಿ )ಕೆಂಪು ನೆನೆ ಅಕ್ಕಿಗಿಡ, ಬಿಳಿ ನೆನೆಅಕ್ಕಿಗಿಡ, ದೊಡ್ಡ ಹಾಲುಕುಡಿ, ಸಣ್ಣ ಹಾಲುಕುಡಿ,ಅಚ್ಚೆಗಿಡ,ರೆಡ್ಡಿವಾರು ನಾನಬಾಲ, ಪಾಲುಕಾಡ, ನಾಗಾರ್ಜುನಿ, ನಾನಪಾಲ ಪಚ್ಚಪೋಟ್ಲಾಕು, ಅಮ್ಮನ್ ಪಚ್ಚೆರಸಿ, ನೀಲಪಾಳೈ ಎಂಬ ಹೆಸರುಗಳಿಂದ ಕರೆಯುತ್ತಾರೆ. ಈ ಸಸ್ಯವು ತೋಟ, ಹೊಲ, ಸಾಗುವಳಿ ಭೂಮಿ, ರಸ್ತೆಗಳ ಪಕ್ಕ, ಪಾಳು ಭೂಮಿ, ನೀರು ಹರಿಯುವ ಕಾಲುವೆಗಳ ಪಕ್ಕ,ತೇವಾಂಶ ಹೆಚ್ಚು ಇರುವ ಕಡೆ ಕಳೆಯಂತೆ ಬೆಳೆಯುತ್ತೆ.ಇದರಲ್ಲಿ ಕೆಂಪು ಹಾಗು ಬಿಳಿಯ ಬಣ್ಣದ ಎರಡು ಪ್ರಭೇದಗಳಿದ್ದು, 1/2 -1 ಅಡಿ ನೆಲದಲ್ಲಿ ಹಬ್ಬಿ ಬೆಳೆಯುತ್ತವೆ. ದೇಹದಲ್ಲಿContinue reading “ಇಂದಿನ ಔಷಧೀಯ ಸಸ್ಯ ಪರಿಚಯ: ಹಾಲುಕುಡಿ ಬಳ್ಳಿ”

‘ಎನ್ -95 ಮಾಸ್ಕ್‌ ಬಳಕೆದಾರರನ್ನು ತಕ್ಷಣ ಎಚ್ಚರಿಸಿ’ – ಕೇಂದ್ರದಿಂದ ರಾಜ್ಯಗಳಿಗೆ ಸೂಚನೆ

ಜನರು ಎನ್ -95 ಮಾಸ್ಕ್‌ಗಳನ್ನು ಬಳಸುವುದರ ವಿರುದ್ಧವಾಗಿ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರವು ಪತ್ರ ಬರೆದಿದ್ದು, ಇವುಗಳು ವೈರಸ್ ಹರಡುವುದನ್ನು ತಡೆಯುವುದಿಲ್ಲ ಹಾಗೂ ಅದರ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳಿಗೆ “ಹಾನಿಕಾರಕ” ಎಂದು ತಿಳಿಸಿದೆ. ಆರೋಗ್ಯ ಸಚಿವಾಲಯದ ಆರೋಗ್ಯ ಸೇವೆಗಳ ಮಹಾನಿರ್ದೇಶಕರು (ಡಿಜಿಎಚ್‌ಎಸ್) ರಾಜ್ಯಗಳ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣದ ಪ್ರಧಾನ ಕಾರ್ಯದರ್ಶಿಗಳಿಗೆ ಬರೆದಿರುವ ಪತ್ರದಲ್ಲಿ, ಎನ್ -95 ಮಾಸ್ಕ್‌ನ “ಅನುಚಿತ ಬಳಕೆ”ಯ ಬಗ್ಗೆ ಗಮನಿಸಲಾಗಿದೆ. ನಿಗದಿ ಪಡಿಸಿದ ಆರೋಗ್ಯ ಕಾರ್ಯಕರ್ತರನ್ನು ಹೊರತುಪಡಿಸಿ ಸಾರ್ವಜನಿಕರುContinue reading “‘ಎನ್ -95 ಮಾಸ್ಕ್‌ ಬಳಕೆದಾರರನ್ನು ತಕ್ಷಣ ಎಚ್ಚರಿಸಿ’ – ಕೇಂದ್ರದಿಂದ ರಾಜ್ಯಗಳಿಗೆ ಸೂಚನೆ”

ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀ ಸ್ವಾಮೀಜಿಗಳಿಗೆ ಕೊರೋನಾ ಸೋಂಕು ದೃಢ

ಉಡುಪಿ , ಜು.21:  ಕೃಷ್ಣ ನಗರಿಯಲ್ಲಿ ಕೊರೋನಾ ದಿನದಿಂದ ದಿನಕ್ಕೆ ಸದ್ದು ಮಾಡುತ್ತಲೇ ಇದೆ. ಇಂದು ಉಡುಪಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರಿಗೂ ಕೊವೀಡ್ -19 ಸೋಂಕು ತಗುಲಿರುವುದು ದೃಢವಾಗಿದೆ. ಅವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸುಗುಣೇಂದ್ರ ಶ್ರೀಗಳಿಗೆ ಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ ತಪಾಸಣೆಗೆಂದು ಆಸ್ಪತ್ರೆಗೆ ತೆರಳಿದ್ದರು. ಈ ವೇಳೆ ಅವರ ಗಂಟಲ ದ್ರವ ಪರೀಕ್ಷೆಗೆ ರವಾನಿಸಲಾಗಿತ್ತು. ಮಂಗಳವಾರ ವರದಿ ಕೈ ಸೇರಿದ್ದು, ಕೊರೊನಾ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಮಣಿಪಾಲ ಆಸ್ಪತ್ರೆಗೆ ಶ್ರೀಗಳನ್ನು ದಾಖಲಿಸಲಾಗಿದೆ.Continue reading “ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀ ಸ್ವಾಮೀಜಿಗಳಿಗೆ ಕೊರೋನಾ ಸೋಂಕು ದೃಢ”

ಜುಲೈ 21,2020;ಮಂಗಳವಾರ : ಇಂದಿನ ರಾಶಿಭವಿಷ್ಯ

ಪಂಚಾಂಗ:ಶ್ರೀ ಶಾರ್ವರಿನಾಮ ಸಂವತ್ಸರ,ದಕ್ಷಿಣಾಯನ ಪುಣ್ಯಕಾಲ,ವರ್ಷ ಋತು, ಶ್ರಾವಣ ಮಾಸ,ಶುಕ್ಲ ಪಕ್ಷ, ಪಾಡ್ಯ ತಿಥಿ,ಮಂಗಳವಾರ, ಪುಷ್ಯ ನಕ್ಷತ್ರ ರಾಹುಕಾಲ: ಮಧ್ಯಾಹ್ನ 3:41 ರಿಂದ 5:17ಗುಳಿಕಕಾಲ: ಮಧ್ಯಾಹ್ನ 12:30 ರಿಂದ 2:05ಯಮಗಂಡಕಾಲ: ಬೆಳಗ್ಗೆ 9:18 ರಿಂದ 10:54 ಮೇಷ ಉದ್ಯೋಗ ವ್ಯವಹಾರಗಳಲ್ಲಿ ಸಮಸ್ಯೆಗಳು ಉಂಟಾಗಬಹುದು. ಹೊಸ ವಸ್ತುಗಳ ಖರೀದಿಯನ್ನು ಮಾಡುವಾಗ ಎಚ್ಚರಿಕೆ ಅಗತ್ಯ. ವೃತ್ತಿಯಲ್ಲಿ ಸ್ಥಾನ ಬದಲಾವಣೆ ಸಾಧ್ಯತೆ ಕಂಡುಬರುತ್ತಿದೆ. ಕೆಲಸದ ನಿಮಿತ್ತ ಅಲೆದಾಟ ಮಾಡಬೇಕಾದೀತು. ವೃಷಭ ಪ್ರಯಾಣದಲ್ಲಿ ಸಂಕಟ ತಲೆದೋರಬಹುದು. ಭೂ ವ್ಯವಹಾರದಿಂದ ಧನ ಲಾಭವಾಗುವ ಸಾಧ್ಯತೆ ಕಂಡುಬರುತ್ತಿದೆ.Continue reading “ಜುಲೈ 21,2020;ಮಂಗಳವಾರ : ಇಂದಿನ ರಾಶಿಭವಿಷ್ಯ”

Create your own website, free on WordPress.com.Create your own website.
Start free