
ಚಿತ್ರಮೂಲಿಕಾ ಚಿತ್ರಮೂಲಮು ಹುತಾಶನ ಅಗ್ನಿಪಾವಕ ವಹ್ನಿಮೂಲ ಅಗ್ನಿಮೂಲ ಕೊಡಿವೇಲಿ ಅಧಿನಾರಿ ಅಧಿಮಹಾಮೂಲಿ ಕೂರಿಯವಹ್ನಿ ಕುಡನಾವಿ ವಹ್ನಿಪ್ರಿಯ ಎಂಬ ಹೆಸರುಗಿಂದ ಕರೆಯುತ್ತಾರೆ.
ಅರಣ್ಯ ಪ್ರದೇಶಗಳಲ್ಲಿ ಬೀಳು ಭೂಮಿ ಪಾಳು ಜಮೀನು ಕೆರೆ ಕಟ್ಟೆಗಳ ಮೇಲೆ ರಸ್ತೆ ಪಕ್ಕದಲ್ಲಿ ಬೇಲಿಗಳಲ್ಲಿ ಧಾರಾಳವಾಗಿ ಬೆಳೆಯುತ್ತದೆ.
ಚಿತ್ರಮೂಲದಲ್ಲಿ ಐದಾರು ಪ್ರಭೇದಗಳಿವೆ ಎಂದು ಪುರಾತನ ಆಯುರ್ವೇದ ಗ್ರಂಥಗಳಲ್ಲಿ ಹೇಳಿದ್ದಾರೆ ಆದರೆ….! ಸದ್ಯಕ್ಕೆ ಲಭ್ಯವಿರುವುದು ಯತೇಚ್ಚವಾಗಿ ಬಿಳಿ ಚಿತ್ರಮೂಲ,ವಿರಳವಾಗಿ ನೀಲಿ ಹಾಗೂ ಕೆಂಪು ಚಿತ್ರಮೂಲ ಕಾಣಬಹುದು.ತಾಳೆಗರಿ ಗ್ರಂಥಗಳಲ್ಲಿ ಉಲ್ಲೇಖಿಸಿರುವಂತೆ ಕಪ್ಪು ಹಾಗೂ ಹಳದಿ ಚಿತ್ರಮೂಲಗಳು ಖಚಿತವಾಗಿ ತಿಳಿದು ಬಂದಿಲ್ಲ.
ಪುರಾತನ ಕಾಲದಿಂದಲೂ ಆಯುರ್ವೇದ ಯುನಾನಿ ನಾಟಿ ವೈದ್ಯ ಪದ್ದತಿಯಲ್ಲಿ ಚಿತ್ರಮೂಲಸಸ್ಯವನ್ನು ಔಷಧಿಯಾಗಿ ಬಳಸುತ್ತಾ ಬಂದಿದ್ದಾರೆ.
ಚಿತ್ರಮೂಲದ ಬೇರು ಚರ್ಮಕ್ಕೆ ತಾಕಿದರೆ ದದ್ದುಗಳು ಬರುತ್ತೆ, ಶುದ್ಧಿ ಮಾಡದೆ ಹೊಟ್ಟೆಗೆ ತೆಗಿದುಕೊಂಡರೆ ಜಠರ ಹಾಗೂ ಕರಳುಗಳು ಸುಟ್ಟು ಹೋಗುತ್ತವೆ.
ಶುದ್ಧಿ ಮಾಡುವ ವಿಧಾನ:-1 ನಿಂಬೆಹಣ್ಣಿನ ರಸದಲ್ಲಿ 3 ದಿನಗಳ ಕಾಲ ನೆನಸಿಟ್ಟು, ಹೊರ ತೆಗೆದು ಚೆನ್ನಾಗಿ ತೊಳೆದು ನೆರಳಲ್ಲಿ ಒಣಗಿಸಿದರೆ ಶುದ್ದಿಯಾಗುತ್ತೆ.
ವಿಧಾನ 2.ಎರಡು ದಿನಗಳ ಕಾಲ ಸುಣ್ಣದ ತಿಳಿನೀರಿನಲ್ಲಿ ನೆನಸಿಟ್ಟು, ಆಮೇಲೆ ಹೊರಗಡೆ ತೆಗೆದು ಚೆನ್ನಾಗಿ ತೊಳೆದು ನೆರಳಲ್ಲಿ ಒಣಗಿಸಿದರೆ ಶುದ್ದಿಯಾಗುತ್ತೆ.
ಶುದ್ಧಿ ಮಾಡಿದ ಬೇರಿನ ಚೂರ್ಣವನ್ನು 1 ಚಮಚದಂತೆ ಬಿಸಿನೀರಿನಲ್ಲಿ ಕಲಸಿ ಸೇವಿಸುತ್ತಾ ಬಂದರೆ ಎಂತಹ ಅಜೀರ್ಣ ಸಮಸ್ಯೆ ಇದ್ದರು ಗುಣವಾಗುತ್ತೆ.ಜೀರ್ಣಕ್ರಿಯೆಗೆ ತುಂಬಾ ಉಪಯುಕ್ತ ಮೂಲಿಕೆ.
ಹೆಂಗಸರಲ್ಲಿ ಋತುಶ್ರಾವ ವಿಪರೀತ ಇದ್ದರೂ, ಏರುಪೇರು ಇದ್ದರೂ, ಅನಿಯಮಿತವಿದ್ದರೂ 1 ಚಮಚ ಚೂರ್ಣವನ್ನು ನಾಟಿ ಕೋಳಿ ಮೊಟ್ಟೆಯ ಬಿಳಿಯ ಲೋಳೆಯೊಂದಿಗೆ ಕಲಸಿ ದಿನ ಬೆಳಿಗ್ಗೆ ಸಂಜೆ ಸೇವಿಸುತ್ತಾ ಬಂದರೆ ಶೀಘ್ರ ಅತೋಟಿಗೆ ಬರುತ್ತದೆ.
ಚಿತ್ರಮೂಲದ ಬೇರಿನ ಚೂರ್ಣ 3 ಚಮಚ,ಪುನಃನವಾ(ಕೊಮ್ಮೆ) ಬೇರಿನ ಚೂರ್ಣ 3 ಚಮಚ, ಅಮೃತಬಳ್ಳಿ ಸಮೂಲ ಚೂರ್ಣ 3 ಚಮಚ, ಆನೆ ನೆಗ್ಗಿಲು ಕಾಯಿ ಚೂರ್ಣ 3 ಚಮಚ, ಚೆನ್ನಾಗಿ ಮಿಶ್ರಣ ಮಾಡಿ,200ml ನೀರಿನಲ್ಲಿ 5 ಗ್ರಾಂ ಮಿಶ್ರಣ ಕಲಸಿ ಚೆನ್ನಾಗಿ ಕುದಿಸಿ 1/4 ಭಾಗವಾದಾಗ ಬೆಳಿಗ್ಗೆ ಸಂಜೆ 25ml ನಂತೆ ಸೇವಿಸಿದರೆ ಕಾಲುಗಳ ಊತ, ನರಗಳ ಊತ ವಾಸಿಯಾಗುತ್ತೆ.
ಚಿತ್ರಮೂಲದ ಬೇರಿನ 1/4 ಚಮಚ ಚೂರ್ಣವನ್ನು 1 ಲೋಟ ಮಜ್ಜಿಗೆಯಲ್ಲಿ ಕಲಸಿ ದಿನವೂ ಸೇವಿಸುತ್ತಾ ಬಂದರೆ ಮೂಲವ್ಯಾಧಿ ವಾಸಿಯಾಗುತ್ತೆ.
ಶುದ್ಧಿ ಮಾಡಿದ ಚಿತ್ರಮೂಲದ ಚೂರ್ಣವನ್ನು ನಾಟಿ ಹಸುವಿನ ಗಂಜಲದಲ್ಲಿ ಕಲಸಿ ಸೇವಿಸುತ್ತಾ ಬಂದರೆ ಮುಖ ಹಾಗೂ ದೇಹ ಕಾಂತಿಯಿಂದ ಹೊಳೆಯುತ್ತದೆ. ಗೆಳೆಯರೆ ನಾಳೆ ಮತ್ತೊಂದು ಅಮೂಲ್ಯ ಸಸ್ಯದೊಡನೆ ಭೇಟಿಯಾಗೋಣ.ಧನ್ಯವಾದಗಳು