

ರಾಜ್ಯದಲ್ಲಿ ಇಂದು ಕೂಡ ಕೊರೋನಾ ಸೋಂಕಿತರ ಸಂಖ್ಯೆ ಸರಣಿ ಮುಂದುವರೆದಿದೆ. ರಾಜ್ಯದಲ್ಲಿ ಇಂದು ದಾಖಲೆಯ 239 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 5452ಕ್ಕೆ ಏರಿಕೆಯಾಗಿದೆ. ಇವರಲ್ಲಿ 2132 ಜನರು ಸಂಪೂರ್ಣವಾಗಿ ಗುಣಮುಖರಾಗುವ ಮೂಲಕ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಸಕ್ರೀಯವಾಗಿರುವ ಕೊರೋನಾ ಸೋಂಕಿತರ ಸಂಖ್ಯೆ 3257 ಆಗಿದೆ.
ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಇಂದು ಕಲಬುರ್ಗಿ – 39, ಯಾದಗಿರಿ -39, ಬೆಳಗಾವಿ-38, ಬೆಂಗಳೂರು ನಗರ – 23, ದಕ್ಷಿಣ ಕನ್ನಡ -17, ದಾವಣಗೆರೆ -17, ಉಡುಪಿ -13, ಶಿವಮೊಗ್ಗ -12, ವಿಜಯಪುರ-09, ಬೀದರ್ -07, ಬಳ್ಳಾರಿ -06, ಬೆಂಗಳೂರು ಗ್ರಾಮಾಂತರ-05, ಹಾಸನ – 05, ಧಾರವಾಡ-03, ಗದಗ-02, ಉತ್ತರಕನ್ನಡ -02, ಮಂಡ್ಯ -01, ರಾಯಚೂರು -01 ಕೊರೋನಾ ಸೋಂಕು ತಗಲುವ ಮೂಲಕ ಇಂದು 239 ಜನರಿಗೆ ಕೊರೋನಾ ದೃಢಪಟ್ಟಿದೆ. ಅಲ್ಲದೇ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 5452ಕ್ಕೆ ಏರಿಕೆಯಾದ್ರೇ, 2132 ಜನ ಕೊರೋನಾ ಸೋಂಕಿತರು ಗುಣಮುಖರಾಗುವ ಮೂಲಕ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಕೊರೋನಾ ಸೋಂಕಿತ ಸಕ್ರೀಯ ಜನರ ಸಂಖ್ಯೆ 3257 ಆಗಿದೆ.ರಾಜ್ಯದಲ್ಲಿ ಇಂದು ಕೊರೋನಾಗೆ ಇಬ್ಬರು ಬಲಿಯಾಗುವ ಮೂಲಕ, ಸಾವಿನ ಸಂಖ್ಯೆ 61ಕ್ಕೆ ಏರಿಕೆಯಾಗಿದೆ