ಫೆಬ್ರವರಿ 21, ಭಾನುವಾರ, 2021 : ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು,
ಮಾಘ ಮಾಸ, ಶುಕ್ಲ ಪಕ್ಷ.
ವಾರ : ಭಾನುವಾರ,
ತಿಥಿ : ನವಮಿ,
ನಕ್ಷತ್ರ : ರೋಹಿಣಿ,
ರಾಹುಕಾಲ:5.03 ರಿಂದ 6.31
ಗುಳಿಕಕಾಲ:3.34 ರಿಂದ 5.03
ಯಮಗಂಡಕಾಲ:12.37 ರಿಂದ 2.06

ಮೇಷ

ನಿರುದ್ಯೋಗಿಗಳಿಗೆ ಖಾಸಗಿ ಕಂಪನಿಗಳಲ್ಲಿ ಅವಕಾಶ ದೊರಕುವ ಸಾಧ್ಯತೆ. ಕೋರ್ಟ್ ಕಚೇರಿ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರಕಲಿದೆ. ಮನೆ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡುವ ಸಾಧ್ಯತೆ.

ವೃಷಭ

ವಿಶ್ವಾಸದಿಂದ ಸಮಸ್ಯೆಗಳನ್ನು ಎದುರಿಸಿ, ಯಶಸ್ಸು ನಿಮ್ಮದಾಗಲಿದೆ. ಕುಟುಂಬದಲ್ಲಿ ಹೊಂದಾಣಿಕೆಯ ಕೊರತೆ ತಲೆದೋರುವ ಸಾಧ್ಯತೆ. ಸಮಾಧಾನದಿಂದಾಗಿ ಸಾಮರಸ್ಯ ಕಂಡುಕೊಳ್ಳಬಹುದು.

ಮಿಥುನ

ವ್ಯಾಪಾರ ವಿಸ್ತರಣೆಗೆ ಸಕಾಲ. ಆರ್ಥಿಕ ಪ್ರಗತಿಯಿಂದ ಮನೆಯಲ್ಲಿ ಸಂತಸದ ವಾತಾವರಣ ಮೂಡಿಬರಲಿದೆ. ಸಹೋದರರಿಂದ ಧನ ಸಹಾಯ ನಿರೀಕ್ಷಿಸಬಹುದು.

ಕಟಕ

ಚಿನ್ನ, ತಾಮ್ರ ಮುಂತಾದ ಲೋಹಗಳ ಉದ್ಯಮಿಗಳಿಗೆ ಹೆಚ್ಚಿನ ಪ್ರಗತಿ. ಕಲಾವಿದರಿಗೆ ಕನಸು ನನಸಾಗುವ ದಿನ. ವಿದೇಶ ಪ್ರಯಾಣಕ್ಕೆ ಸಿದ್ಧತೆ ನಡೆಸುವಿರಿ.

ಸಿಂಹ

ವಿದ್ಯಾರ್ಥಿಗಳು, ಕ್ರೀಡಾಪಟುಗಳಿಗೆ ಯಶಸ್ಸಿನ ಕಿರೀಟ ಲಭ್ಯವಾಗುವ ಸಾಧ್ಯತೆ. ರಾಜಕೀಯದಲ್ಲಿರುವವರಿಗೆ ಸೂಕ್ತ ಸ್ಥಾನಮಾನ ದೊರಕಲಿದೆ. ದೈವಾನುಗ್ರಹಕ್ಕಾಗಿ ಕುಲದೇವತಾ ದರ್ಶನ ಮಾಡುವುದು ಉತ್ತಮ.

ಕನ್ಯಾ

ರೇಷ್ಮೆ ನೇಕಾರರಿಗೆ ಉತ್ತಮ ಅವಕಾಶಗಳು ಲಭ್ಯ. ಸರಕಾರಿ ಕೆಲಸಗಳಿಗೆ ಹಣ ಖರ್ಚಾದರೂ ಕಾರ್ಯಾನುಕೂಲ ವಾಗಲಿದೆ. ಭೂ ವ್ಯವಹಾರ ನಡೆಸುತ್ತಿರುವವರಿಗೆ ಯಶಸ್ಸು ದೊರಕಲಿದೆ. ಮಹಿಳೆಯರಿಗೆ ಇಷ್ಟಾರ್ಥ ಸಿದ್ಧಿಯಾಗಲಿದೆ.

ತುಲಾ

ನೌಕರರಿಗೆ ಪರಿಶ್ರಮಕ್ಕೆ ತಕ್ಕ ಪ್ರತಿಫಲ. ವಾಹನ ಖರೀದಿ ಮಾಡುವ ಸಾಧ್ಯತೆ ಸ್ಪಷ್ಟ ಗೋಚರವಾಗುತ್ತಿದೆ. ಅವಿವಾಹಿತರಿಗೆ ಉತ್ತಮ ಸಂಗಾತಿ ಪ್ರಾಪ್ತವಾಗುವ ಸಾಧ್ಯತೆ. ಸಂತಸದ ವಾತಾವರಣ ಮೂಡಲಿದೆ.

ವೃಶ್ಚಿಕ

ಪ್ರಸ್ತುತ ನಿರ್ವಹಿಸುತ್ತಿರುವ ಕೆಲಸ ಉದ್ಯೋಗದಲ್ಲಿ ಹೆಚ್ಚಿನ ಪ್ರಗತಿಯನ್ನು ಕಾಣುವಿರಿ. ನಿಮ್ಮ ವ್ಯವಹಾರಕ್ಷೇತ್ರವನ್ನು ವಿಸ್ತರಿಸಲು ಸ್ನೇಹಿತರ ಸಹಾಯ ದೊರಕುವ ಸಾಧ್ಯತೆ ಕಂಡುಬರುತ್ತಿದೆ.

ಧನು

ವೈದ್ಯಕೀಯ ರಂಗದಲ್ಲಿರುವವರಿಗೆ ಯಶಸ್ಸಿನೊಂದಿಗೆ ಹೆಚ್ಚಿನ ಲಾಭವೂ ಪ್ರಾಪ್ತವಾಗುವುದು. ನೌಕರವರ್ಗದವರಿಗೆ ಮುಂಬಡ್ತಿ , ಸ್ಥಾನ ಬದಲಾವಣೆಯಾಗುವ ಸಾಧ್ಯತೆ.

ಮಕರ

ವ್ಯಾಪಾರಿಗಳಿಗೆ ಶ್ರಮಕ್ಕೆ ತಕ್ಕ ಪ್ರತಿಫಲ. ಆತ್ಮವಿಶ್ವಾಸದಿಂದ ಸಮಸ್ಯೆಗಳಿಗೆ ಮುಕ್ತಿಯನ್ನು ಕಂಡುಕೊಳ್ಳಲಿದ್ದೀರಿ. ಆರೋಗ್ಯದಲ್ಲಿ ಸುಧಾರಣೆ. ಪ್ರವಾಸ ಅಥವಾ ಕ್ಷೇತ್ರದರ್ಶನಗಳಿಂದ ಮನೋಲ್ಲಾಸ ದೊರಕಲಿದೆ.

ಕುಂಭ

ಸಮಯವರಿತು ಕಾರ್ಯ ಸಾಧನೆ ಮಾಡಲು ನಿಶ್ಚಯಿಸುವಿರಿ. ಮದುವೆ ಸಿದ್ಧತೆಗಳಿಗಾಗಿ ಪ್ರಯಾಣ ಮಾಡಬೇಕಾದೀತು. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ದೊರಕಲಿದೆ.

ಮೀನ

ಧನಾದಾಯದ ಹೂಡಿಕೆ ಯೋಜನೆಗಳ ಹುಡುಕಾಟದಲ್ಲಿ ಯಶಸ್ಸನ್ನು ಕಾಣುವಿರಿ. ಆರ್ಥಿಕ ಉನ್ನತಿಯಿಂದ ಹೊಸ ಕಾರ್ಯಗಳಲ್ಲಿ ಮುನ್ನಡೆ ಕಂಡುಕೊಳ್ಳುವಿರಿ. ಮನಸ್ಸಿಗೆ ನೆಮ್ಮದಿ ನೀಡುವ ಸುದ್ದಿ ಕೇಳಲಿದ್ದೀರಿ.

Leave a comment

Design a site like this with WordPress.com
Get started