ಫೆಬ್ರವರಿ 17, ಬುಧವಾರ ,2021: ಇಂದಿನ ರಾಶಿಭವಿಷ್ಯ

ರಾಹುಕಾಲ:12.37 ರಿಂದ 2.05
ಗುಳಿಕಕಾಲ:11.09 ರಿಂದ 12.37
ಯಮಗಂಡಕಾಲ:8.13 ರಿಂದ 9.41
ಬುಧವಾರ, ಷಷ್ಠಿ ತಿಥಿ, ಅಶ್ವಿನಿ ನಕ್ಷತ್ರ
ಶ್ರೀ ಶಾರ್ವರಿ ನಾಮ ಸಂವತ್ಸರ,
ಉತ್ತರಾಯಣ,ಶಿಶಿರ ಋತು,ಮಾಘ ಮಾಸ, ಶುಕ್ಲ ಪಕ್ಷ.

ಮೇಷ

ಸಮಸ್ಯೆಗಳ ಪರಿಹಾರಕ್ಕಾಗಿ ನಿಮ್ಮ ಹೊಸ ಜಾಣ್ಮೆಯನ್ನು ಬಳಬೇಕಾದ ಸಂದರ್ಭ ಬರಬಹುದು. ನಿಮ್ಮ ದಿಟ್ಟ ಮಾತುಗಳಿಂದಾಗಿ ಅನಾವಶ್ಯಕ ಹೊರೆ ಹೊರಬೇಕಾದೀತು. ಸಾಂಸಾರಿಕ ಸಂತೋಷ ಅನುಭವಿಸುವಿರಿ.

ವೃಷಭ

ಕಷ್ಟಗಳೆಲ್ಲವೂ ಕರಗಿ ಹೋಗಿ ಕಾರ್ಯ ಯೋಜನೆಗಳು ಸುಲಭವಾಗಿ ಸಾಕಾರಗೊಳ್ಳುವವು. ಕೆಲಸ–ಕಾರ್ಯಗಳಿಗೆ ಸ್ಫೂರ್ತಿ ದೊರಕುವುದು. ಬಂಧುವರ್ಗದವರಿಂದ ಸಕಾಲಿಕ ನೆರವು ದೊರೆಯುವ ಸಾಧ್ಯತೆ.

ಮಿಥುನ

ಬೇರೆಯವರ ಸಲಹೆಯಿಂದಾಗಿ ಅಪಾಯದಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ. ಹಿರಿಯರ ಮಾತುಗಳನ್ನು ಗೌರವಿಸುವುದರಿಂದ ಆಪತ್ತಿನಿಂದ ಪಾರಾಗುವಿರಿ. ಛಲಕ್ಕೊಂದು ಬಲ ದೊರೆತು ಯಶಸ್ಸು ನಿಮ್ಮದಾಗಲಿದೆ.

ಕಟಕ

ಬಹುದಿನಗಳಿಂದ ಬಾಕಿ ಇರುವ ಕೆಲಸ–ಕಾರ್ಯಗಳು ಇಂದು ವಿಳಂಬವಿಲ್ಲದೇ ನೆರವೇರುವ ಸಾಧ್ಯತೆ. ಸಮಾಜದ ಗೌರವಾದರಗಳು ನಿಮ್ಮನ್ನರಸಿ ಬರುವವು. ಭರವಸೆಗಳ ಈಡೇರಿಕೆಗಾಗಿ ಅತ್ಯಂತ ಶ್ರಮ ವಹಿಸಿ.

ಸಿಂಹ

ಬಂಧುಗಳ ಸಲಹೆ ಮತ್ತು ಆಶ್ವಾಸನೆಗಳಲ್ಲಿ ವಿಶ್ವಾಸವಿಡಿ. ಹೊಸ ಕೆಲಸ–ಕಾರ್ಯಗಳಲ್ಲಿ ತೊಡಗಲು ಪ್ರಶಸ್ತವಾಗಿದೆ. ಷರತ್ತುಬದ್ಧ ಅವಕಾಶಗಳು ದೊರಕುವ ಸಾಧ್ಯತೆ. ಉದ್ಯೋಗರಂಗದಲ್ಲಿ ಬದಲಾವಣೆಯ ಸಾಧ್ಯತೆ.

ಕನ್ಯಾ

ನಂಬಿ ಬಂದವರಿಗೆ ಉತ್ತಮ ಆಸರೆ ನೀಡಿ ಹರ್ಷದಾಯಕ ಸಂದೇಶ ನೀಡುವ ಸಾಧ್ಯತೆ. ಚಮತ್ಕಾರಿಕವಾಗಿ ಸತ್ಕಾರ್ಯಗಳಲ್ಲಿ ತೊಡಗಿ ನಿರ್ವಹಿಸುವ ಅವಕಾಶ ನಿಮ್ಮದಾಗಲಿದೆ. ಪ್ರಶಂಸೆಗೆ ಪಾತ್ರರಾಗುವಿರಿ.

ತುಲಾ

ಅಭಿರುಚಿಗೆ ತಕ್ಕಂತೆ ಸ್ವಾವಲಂಬಿ ಕಾರ್ಯಗಳಲ್ಲಿ ತೊಡಗುವಿರಿ. ಆದರ್ಶ ಹೊಂದಿದ ಕೆಲಸ–ಕಾರ್ಯಗಳಿಗೆ ಸಹಾಯ ದೊರಕಿ ಕಾರ್ಯಸಾಧನೆ ಮಾಡಲಿದ್ದೀರಿ. ಘನತೆ ಗೌರವಗಳು ನಿಮ್ಮದಾಗಲಿವೆ.

ವೃಶ್ಚಿಕ

ಸದಾಚಾರ ಕಾರ್ಯಗಳಲ್ಲಿ ಸ್ವಸ್ಥ ಮನಸ್ಸಿನಿಂದ ತೊಡಗುವಿರಿ. ಇಷ್ಟಮಿತ್ರರ ಮಧ್ಯಸ್ಥಿಕೆಯಲ್ಲಿ ಗಂಭೀರ ಸಮಾಲೋಚನೆಗಳು ನಡೆಯುವ ಸಾಧ್ಯತೆಯಿದ್ದು ಶುಭದಾಯಕವಾಗಿ ಪರಿಣಮಿಸಲಿದೆ.

ಧನು

ನಿಮ್ಮ ವಿರುದ್ಧ ಪಿತೂರಿ ನಡೆಸುತ್ತಿರುವವರ ಬಣ್ಣ ಬಯಲಾಗಲಿದೆ. ಮೇಧಾವಿತನದಿಂದಾಗಿ ಹಿತಕರ ವಾತಾವರಣ ನಿಮ್ಮದಾಗುವುದು. ಗೊಂದಲ ನಿವಾರಣೆಗಾಗಿ ವೆಚ್ಚ ಮಾಡುವ ಸಾಧ್ಯತೆ ಇದೆ.

ಮಕರ

ಭರವಸೆಗಳ ಮಹಾಪೂರವೇ ಹರಿದುಬಂದು ಸಂತೋಷ ಮೂಡುವುದು. ಸೇವಾಕಾರ್ಯಗಳಲ್ಲಿ ತೊಡಗಿಕೊಳ್ಳುವ ಸಾಧ್ಯತೆ. ಸವಾಲುಗಳು ಎದುರಾಗಲಿದ್ದು ಎದೆಗುಂದದೇ ಮುನ್ನುಗ್ಗಿ.

ಕುಂಭ

ಹೊಂದಿಕೊಳ್ಳುವ ಮನೋಭಾವದಿಂದಾಗಿ ಮಹತ್ವದ ವಿಷಯಗಳಲ್ಲಿ ಒಡಂಬಡಿಕೆಗೆ ಬರುವ ಸಾಧ್ಯತೆ. ವಿಪರೀತ ಸನ್ನಿವೇಶಗಳು ಎದುರಾಗಬಹುದು. ಧಾರ್ಮಿಕ ವಿಷಯಗಳಲ್ಲಿ ಆಸಕ್ತಿಯ ಚರ್ಚೆ ನಡೆಯುವ ಸಾಧ್ಯತೆ.

ಮೀನ

ನಿಮ್ಮ ಬಹುದಿನಗಳ ಬಯಕೆ ಇಡೇರುವ ಸಾಧ್ಯತೆ. ವೃತ್ತಿಯಲ್ಲಿ ಬದಲಾವಣೆ ಮಾಡುವ ಸಾಧ್ಯತೆ. ಉತ್ತಮ ಕೆಲಸ ಕಾರ್ಯಗಳಿಂದಾಗಿ ಮನ್ನಣೆ ಗಳಿಸುವಿರಿ. ಮನೆಯವರ ಆರೋಗ್ಯದ ಬಗ್ಗೆ ನಿಗಾ ವಹಿಸಿ.

Leave a comment

Design a site like this with WordPress.com
Get started