ಫೆಬ್ರವರಿ 10,ಬುಧವಾರ,2021 : ಇಂದಿನ ರಾಶಿಭವಿಷ್ಯ

ಶಾರ್ವರಿ ಸಂ|ರದ ಮಕರ ಮಾಸ ದಿನ 27 ಸಲುವ ಪೌಷ ಬಹುಳ ಚತುರ್ದಶಿ 45|| ಗಳಿಗೆದಿನ ವಿಶೇಷ :ನಿತ್ಯ ನಕ್ಷತ್ರ :ಉತ್ತರಾಷಾಢಾ 18| ಗಳಿಗೆಮಹಾ ನಕ್ಷತ್ರ :ಧನಿಷ್ಠಾಋತು :ಹೇಮಂತರಾಹುಕಾಲ :12.00-1.30 ಗಂಟೆಗುಳಿಕ ಕಾಲ :10.30-12.00 ಗಂಟೆಸೂರ್ಯಾಸ್ತ :6.33 ಗಂಟೆಸೂರ್ಯೋದಯ :6.58 ಗಂಟೆ

ಮೇಷ

ದುಡುಕುತನದಿಂದಾಗಿ ಕಾರ್ಯ ವೈಫಲ್ಯ ತಪ್ಪಿಸಲು ಹೆಚ್ಚಿನ ತಾಳ್ಮೆ ಹಾಗೂ ಜಾಗರೂಕತೆ ಅವಶ್ಯ. ಸಂಶೋಧನೆಯಲ್ಲಿ ಅಪಾರ ಶ್ರಮ ವಹಿಸಲಿದ್ದೀರಿ. ಆರೋಗ್ಯದಲ್ಲಿ ಸ್ವಲ್ಪಮಟ್ಟಿನ ಕಿರಿಕಿರಿ ಉಂಟಾದೀತು.

ವೃಷಭ

ಕೆಲಸ ಕಾರ್ಯಗಳಿಂದ ಬಿಡುವು ಮಾಡಿಕೊಳ್ಳಲಿದ್ದೀರಿ. ಸ್ನೇಹಿತರೊಂದಿಗೆ ದಿನವನ್ನು ಸಂತೋಷದಿಂದ ಕಳೆಯಲಿದ್ದೀರಿ. ಕುಟುಂಬದ ಸದಸ್ಯರೊಂದಿಗೆ ಸಂತೋಷದ ಓಡಾಟ. ನೆಮ್ಮದಿಯ ದಿನ.

ಮಿಥುನ

ಕಾರ್ಯಕ್ಷೇತ್ರದಲ್ಲಿ ಒಮ್ಮತ ಮೂಡಿಸಲು ನೀವು ಅನುಸರಿಸಿದ ಮಾರ್ಗ ಮೆಚ್ಚಿ ಮೇಲಾಧಿಕಾರಿಗಳಿಂದ ಪ್ರಶಂಸೆ. ಕಛೇರಿಯಲ್ಲಿ ನಿಮ್ಮ ಸ್ಥಾನಮಾನ ಗಟ್ಟಿಯಾಗುವ ಜೊತೆಗೆ ಕಾರ್ಯ ಬಾಹುಳ್ಯ ಅಧಿಕಗೊಳ್ಳುವ ಸಾಧ್ಯತೆ.

ಕಟಕ

ಕಛೇರಿ ಕೆಲಸಗಳ ಸುಗಮತೆಗಾಗಿ ಸಹವರ್ತಿಗಳ ಸಲಹೆ ಸಹಕಾರ ಕೋರಲಿದ್ದೀರಿ. ಸಂಗಾತಿಗೆ ಹೊಸ ಉದ್ಯೋಗ ದೊರೆತು ಸಂತೋಷ. ನಿರ್ದಿಷ್ಟ ಕೆಲಸಗಳಿಗೆ ಮಾತ್ರ ಶ್ರದ್ಧೆಯಿಂದ ಕಾರ್ಯ ನಿರ್ವಹಿಸುವುದು ಒಳಿತು.

ಸಿಂಹ

ಉದ್ಯೋಗದಲ್ಲಿ ಸ್ಥಾನಮಾನಗಳು ಅಧಿಕಗೊಳ್ಳುವುದು. ರೈತಾಪಿ ವರ್ಗದವರಿಗೆ ಕೃಷಿ ಕಾರ್ಯದಲ್ಲಿ ತೊಡಗಿಕೊಳ್ಳಲು ತೊಡಕು. ಅನ್ನಪೂರ್ಣೇಶ್ವರಿಯ ಆರಾಧನೆಯಿಂದ ಮನೆಯಲ್ಲಿ ಸಮೃದ್ಧಿ ನೆಲೆಸಲಿದೆ.

ಕನ್ಯಾ

ವೃತ್ತಿ ಬದಲಾವಣೆಯ ಸಮಸ್ಯೆ ನಿವಾರಣೆಯಾಗುವುದು. ಹೊಸ ಕಾರ್ಯದ ಸಂಪೂರ್ಣ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ ಹೆಗ್ಗಳಿಕೆ ನಿಮ್ಮದಾಗಲಿದೆ. ಆಭರಣ ಖರೀದಿ ಸಾಧ್ಯತೆ.

ತುಲಾ

ಒದಗಿ ಬಂದಿರುವ ಅವಕಾಶಗಳನ್ನು ಕಳೆದುಕೊಳ್ಳದೇ ಸದುಪಯೋಗ ಪಡೆದುಕೊಳ್ಳಿ. ಸ್ನೇಹಿತನ ಸಹಾಯಕ್ಕೆ ನಿಲ್ಲಬೇಕಾದ ಅವಕಾಶ ಎದುರಾದೀತು. ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಉದ್ಯೋಗ ಅವಕಾಶ.

ವೃಶ್ಚಿಕ

ಚಿತ್ರಕಲೆ, ಗಾಯನ ಮುಂತಾದ ಲಲಿತ ಕಲೆಗಳಲ್ಲಿ ಆಸಕ್ತಿ ವಹಿಸಲಿದ್ದೀರಿ. ಮುಖ್ಯವಾದ ವಿಷಯವೊಂದರ ಬಗ್ಗೆ ಹೆಚ್ಚಿನ ವಿವರಕ್ಕಾಗಿ ಸ್ನೇಹಿತರ ಸಹಾಯ ಪಡೆದುಕೊಳ್ಳಬೇಕಾದೀತು.

ಧನು

ಜವಾಬ್ದಾರಿಯಲ್ಲಿನ ಸ್ಪಷ್ಟ ವಿಷಯವೊಂದರ ಮನವರಿಕೆ. ಹಣಕಾಸಿನ ಅಡಚಣೆಗಳು ದೂರ. ಜೀವನದಲ್ಲಿ ಬದಲಾವಣೆ ತರುವ ಘಟನೆಯೊಂದು ಎದುರಾಗುವ ಸಾಧ್ಯತೆ. ಸಂಪನ್ಮೂಲಗಳು ಕೂಡಿಬರಲಿವೆ.

ಮಕರ

ಆತ್ಮೀಯರೊಂದಿಗೆ ಹಣಕಾಸಿನ ಪರಿಸ್ಥಿತಿ ಬಗ್ಗೆ ವಿಷಯ ಹಂಚಿಕೊಳ್ಳಲಿದ್ದೀರಿ. ನಿವೇಶನಕೊಳ್ಳವ ವಿಚಾರ ಮುಂದೂಡುವ ಬದಲಾಗಿ ಹೊಂದಾಣಿಕೆಯಿಂದ ಮುಂದುವರೆಯುವುದು ಉತ್ತಮ.

ಕುಂಭ

ಸಮಾಜಸೇವೆ ನಿಮಿತ್ತ ಹೆಚ್ಚಿನ ಓಡಾಟ. ಸಂಗಾತಿಯ ಆರೋಗ್ಯದಲ್ಲಿ ಏರುಪೇರು ಸಂಭವ. ದೂರದಲ್ಲಿರುವ ಮಿತ್ರರೊಬ್ಬರು ಸನಿಹಕ್ಕೆ ಬರುವ ಸಾಧ್ಯತೆ. ಆರ್ಥಿಕ ಅನುಕೂಲತೆಗಳು ಸಹಜವಾಗಿರುವುದು.

ಮೀನ

ಹೊಸ ನಿರ್ಮಾಣ ಕಾರ್ಯಗಳ ಬಗ್ಗೆ ಒಪ್ಪಂದ ಏರ್ಪಟ್ಟು ಸಂತೋಷ. ಸಂಶೋಧನಾ ವೃತ್ತಿಯಲ್ಲಿರುವವರಿಗೆ ಪ್ರಶಸ್ತಿ, ಗೌರವಾದರಗಳು ಲಭ್ಯವಾಗಲಿವೆ. ಪ್ರವಾಸ ಸಂತಸವನ್ನು ತರುವುದು.

Leave a comment

Design a site like this with WordPress.com
Get started