ಫೆಬ್ರವರಿ 08, ಸೋಮವಾರ; 2021 : ಇಂದಿನ ರಾಶಿಭವಿಷ್ಯ

ಪಂಚಾಂಗ

ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ,
ಹೇಮಂತ ಋತು, ಪುಷ್ಯ ಮಾಸ,
ಕೃಷ್ಣಪಕ್ಷ ವಾರ : ಸೋಮವಾರ,
ತಿಥಿ : ದ್ವಾದಶಿ, ನಕ್ಷತ್ರ : ಮೂಲ,

ರಾಹುಕಾಲ: 8.15_9.42
ಗುಳಿಕಕಾಲ: 2.05_3.32
ಯಮಗಂಡಕಾಲ: 11.10-12.37

ಮೇಷ

ನಿಮ್ಮ ಇಷ್ಟದಂತೆಯೇ ಕೆಲಸ ಕಾರ್ಯಗಳು ಸಾಗುವುದರಿಂದ ನೆಮ್ಮದಿಯೊಂದಿಗೆ ಆತ್ಮವಿಶ್ವಾಸ ಮೂಡಲಿದೆ. ಅತಿಯಾದ ವಿಶ್ವಾಸದಿಂದಾಗಿ ಬೀಗದೆ ಮುಂದಿನ ಯೋಜನೆಯೊಂದರ ಬಗ್ಗೆ ಯೋಚಿಸುವ ಅಗತ್ಯ ಕಂಡುಬರುವುದು.

ವೃಷಭ

ನಿರೀಕ್ಷಿತ ಕಾರ್ಯಕಲಾಪಗಳು ನೆರವೇರಿ ನೆಮ್ಮದಿ. ಯಂತ್ರೋಪಕರಣ ಮಾರಾಟದಿಂದಾಗಿ ಅಧಿಕ ಲಾಭದ ನಿರೀಕ್ಷೆ. ಸಾಲ ಮರುಪಾವತಿಸಿ ಋಣ ಮುಕ್ತರಾಗುವ ಲಕ್ಷಣಗಳು ಕಂಡುಬರುವುದು.

ಮಿಥುನ

ಸಾಮಾಜಿಕ ಗೌರವ ಮನ್ನಣೆಗಳು ನಿಮ್ಮ ಪಾಲಿಗೆ ದೊರಕಲಿದೆ. ದೇವತಾನುಗ್ರಹದಿಂದ ಕೆಲಸ ಕಾರ್ಯಗಳು ಕೈಗೂಡಲಿದೆ. ಮನರಂಜನೆಗಾಗಿ ವ್ಯಯ ಮಾಡಬೇಕಾದೀತು. ಪತ್ನಿಯ ಅಭಿಪ್ರಾಯ ಗೌರವಿಸುವುದು ಉತ್ತಮ.

ಕಟಕ

ಮದುವೆ ಮುಂತಾದ ಮಂಗಳ ಕಾರ್ಯಗಳಿಗೆ ಸಹಾಯ ಮಾಡಬೇಕಾದೀತು. ಮನೆ ಪಾಠ ಪ್ರವಚನ ಮಾಡುವವರಿಗೆ ಬಿಡುವಿನ ದಿನವಾಗಲಿದೆ. ವಾಣಿಜ್ಯ ಬೆಳೆ ಬೆಳೆಗಾರರಿಗೆ ಉತ್ತಮ ಲಾಭ ದೊರಕಲಿದೆ.

ಸಿಂಹ

ದಿನಬಳಕೆ ವಸ್ತುಗಳ ಮಾರಾಟಗಾರರಿಗೆ ಉತ್ತಮ ವ್ಯವಹಾರ ನಡೆಯಲಿದೆ. ಹೊಸ ವ್ಯಾಪಾರ ಆರಂಭಿಸಲು ಯೋಚಿಸಲಿದ್ದೀರಿ. ಮನೆಗೆ ಅಲಂಕಾರಿಕ ವಸ್ತುಗಳನ್ನು ಖರೀದಿಸುವ ಸಾಧ್ಯತೆ. ಸಂಗಾತಿಯ ಆರೋಗ್ಯದ ಬಗ್ಗೆ ಗಮನ ಅಗತ್ಯ.

ಕನ್ಯಾ

ಬದುಕಿಗೊಂದು ಹೊಸ ಆಯಾಮ ಕಂಡುಕೊಳ್ಳಲಿದ್ದೀರಿ. ನಿಮ್ಮ ಬದುಕಿನ ತಿರುವಿಗೆ ಸ್ನೇಹಿತರ ಕೊಡುಗೆ ಬಹಳವಾದುದು ಎಂದು ತಿಳಿದುಕೊಳ್ಳುವಿರಿ. ಮನೆಯವರ ಭಾವನೆಗಳಿಗೆ ಬೆಲೆ ಕೊಡಲಿದ್ದೀರಿ.

ತುಲಾ

ಆರೋಗ್ಯದಲ್ಲಿ ಸುಧಾರಣೆ. ಮನೆಯ ವಿಸ್ತರಣೆ ಅಥವಾ ನವೀಕರಣಕ್ಕಾಗಿ ವೆಚ್ಚ. ನಿಮ್ಮ ವಿಚಾರಗಳಿಂದ ವ್ಯಕ್ತಿಯೊಬ್ಬರೊಡನೆ ವಾದ ಮಂಡಿಸಿ ಮನ ಗೆಲ್ಲಲಿದ್ದೀರಿ. ಗೆಳೆಯರೊಂದಿಗೆ ಪ್ರವಾಸ ಸಾಧ್ಯತೆ.

ವೃಶ್ಚಿಕ

ಸಂತಾನ ಪ್ರಾಪ್ತಿಯ ಸುದ್ದಿಯಿಂದಾಗಿ ಸಂತಸ. ಮರಮುಟ್ಟುಗಳ ವ್ಯಾಪಾರದಿಂದಾಗಿ ಅಧಿಕ ಲಾಭ. ಮಕ್ಕಳಿಗೆ ಉತ್ತಮ ಸ್ಥಾನ ಲಭಿಸಿದ್ದನ್ನು ಕಂಡು ಸಂತೋಷ ಪಡಲಿದ್ದೀರಿ.

ಧನು

ವೃತ್ತಿಯಲ್ಲಿನ ಬದಲಾವಣೆ ಅಥವಾ ಸ್ಥಾನ ಬದಲಾವಣೆಯ ಬಗ್ಗೆ ಸಂಗಾತಿಯೊಡನೆ ಚರ್ಚಿಸಲಿದ್ದೀರಿ. ರೈತರು ರಸಗೊಬ್ಬರ ಮತ್ತು ಕೀಟನಾಶಕ ಮುಂತಾದ ಕೃಷಿ ರಕ್ಷಣಾ ಖರೀದಿಗಾಗಿ ಹಣ ವ್ಯಯಿಸಬೇಕಾದೀತು.

ಮಕರ

ಬಂಧುಮಿತ್ರರೊಡಗೂಡಿ ನೆನಪಿನ ದಿನವೊಂದನ್ನು ಸಂಭ್ರಮದಿಂದ ಆಚರಿಸಿಕೊಳ್ಳಲಿದ್ದೀರಿ. ಹಲವರಿಗೆ ಮದುವೆ ವಿಷಯ ಪ್ರಸ್ತಾಪವಾಗುವ ಸಾಧ್ಯತೆ. ಮಕ್ಕಳಿಂದ ಶುಭ ಸುದ್ದಿ. ಬಂಧಗಳ ಅಗತ್ಯ ಪೂರೈಕೆಗಾಗಿ ಶ್ರಮ.

ಕುಂಭ

ಕಬ್ಬಿಣ, ಸಿಮೆಂಟ್ ಮುಂತಾದ ಕಟ್ಟಡ ಸಾಮಗ್ರಿಗಳ ವ್ಯಾಪಾರಸ್ಥರಿಗೆ ಅತೀವ ಲಾಭ. ಮನೆಯಲ್ಲಿ ಹಿರಿಯರ ಆರೋಗ್ಯದಲ್ಲಿ ಸುಧಾರಣೆ. ಲಲಿತ ಕಲೆಗಳಲ್ಲಿ ಉನ್ನತ ಸ್ಥಾನ ಲಭ್ಯವಾಗಲಿದೆ. ಬರಹಗಾರರಿಗೆ ಉತ್ತಮ ಅವಕಾಶ.

ಮೀನ

ವಾಹನ ಪ್ರಯಾಣ ಅನುಕೂಲಕರವಾಗಿ ಪರಿಣಮಿಸಲಿದೆ. ಚಿನ್ನ ಬೆಳ್ಳಿ ಮುಂತಾದ ಆಭರಣ ಮಾರಾಟಗಾರರಿಗೆ ಗಳಿಕೆಯಲ್ಲಿ ಹೆಚ್ಚಳ. ಮುಖ್ಯವಾದ ಕೆಲಸವೊಂದನ್ನು ಪ್ರಾರಂಭಿಸುವ ಸಲುವಾಗಿ ಹಿರಿಯರೊಂದಿಗೆ ಚರ್ಚೆ.

Leave a comment

Design a site like this with WordPress.com
Get started