ಕೇಂದ್ರ ಬಜೆಟ್ ಮತ್ತು ಭಾರತದ ಆರ್ಥಿಕತೆ” ಹಾಗೂ “ಜಿ.ಎಸ್.ಟಿ. ಇತ್ತೀಚಿನ ಬದಲಾವಣೆಗಳು” ಬಗ್ಗೆ ವಿಚಾರ ಗೋಷ್ಠಿ

ಬಿಜೆಪಿ ಆರ್ಥಿಕ ಪ್ರಕೋಷ್ಠ ಉಡುಪಿ ಜಿಲ್ಲೆ, ಉಡುಪಿ ಜಿಲ್ಲಾ ಟ್ಯಾಕ್ಸ್ ಬಾರ್ ಅಸೋಸಿಯೇಶನ್ (ರಿ.) ಇದರ ಜಂಟಿ ಆಶ್ರಯದಲ್ಲಿ “ಕೇಂದ್ರ ಬಜೆಟ್ ಮತ್ತು ಭಾರತದ ಆರ್ಥಿಕತೆ” ಹಾಗೂ “ಜಿ.ಎಸ್.ಟಿ. ಇತ್ತೀಚಿನ ಬದಲಾವಣೆಗಳು” ಬಗ್ಗೆ ವಿಚಾರ ಗೋಷ್ಠಿಗಳು ಫೆ.6 ರಂದು ಹೋಟೆಲ್ ಕಿದಿಯೂರು ಮಾಧವ ಕೃಷ್ಣ ಸಭಾಂಗಣದಲ್ಲಿ ನಡೆಯಿತು.

ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕೆ.ರಾಘವೇಂದ್ರ ಕಿಣಿಯವರ ಅಧ್ಯಕ್ಷತೆಯಲ್ಲಿ ನಡೆದ ಈ ವಿಚಾರ ಗೋಷ್ಠಿಗಳನ್ನು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರ್ ರತ್ನಾಕರ ಹೆಗ್ಡೆಯವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.

ಆರ್ಥಿಕ ತಜ್ಞರಾದ ವಿಶ್ವನಾಥ್ ಭಟ್ ಬೆಂಗಳೂರು ಇವರು “ಕೇಂದ್ರ ಬಜೆಟ್ ಮತ್ತು ಭಾರತದ ಆರ್ಥಿಕತೆ” ಬಗ್ಗೆ ಹಾಗೂ ಲೆಕ್ಕ ಪರಿಶೋಧಕ ರಾದ ಸಿ.ಎ. ವಿಕಾಸ್ ಶೆಣೈ ಮಂಗಳೂರು ಇವರು “ಜಿ.ಎಸ್.ಟಿ.” ಇತ್ತೀಚಿನ ಬದಲಾವಣೆಗಳು ವಿಷಯದಲ್ಲಿ ವಿಸ್ತೃತ ವಿಚಾರ ಗೋಷ್ಠಿಗಳನ್ನು ನಡೆಸಿಕೊಟ್ಟರು. ಬಳಿಕ ಪ್ರಶ್ನೋತ್ತರ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ, ಮೋರ್ಚಾ, ಪ್ರಕೋಷ್ಠ, ಮಂಡಲ ಪದಾಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಆಹ್ವಾನಿತ ಗಣ್ಯರು ಉಪಸ್ಥಿತರಿದ್ದರು.

ಜಿಲ್ಲಾ ಟ್ಯಾಕ್ಸ್ ಬಾರ್ ಅಸೋಸಿಯೇಶನ್ ಅಧ್ಯಕ್ಷರಾದ ಪ್ರಸಾದ್ ಉಪಾಧ್ಯಾಯರವರು ಸ್ವಾಗತಿಸಿ, ಕೋಶಾಧಿಕಾರಿ ಗಳಾದ ಬಿ.ಎಮ್. ಭಟ್ ರವರು ಕಾರ್ಯಕ್ರಮ ನಿರೂಪಿಸಿದರು. ಅಸೋಸಿಯೇಶನ್ ಕಾರ್ಯದರ್ಶಿ ಹಾಗೂ ಬಿಜೆಪಿ ಜಿಲ್ಲಾ ಆರ್ಥಿಕ ಪ್ರಕೋಷ್ಠದ ಸಂಚಾಲಕರಾದ ದಿವಾಕರ ಶೆಟ್ಟಿ ಯವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಹ ಸಂಚಾಲಕರಾದ ವೆಂಕಟೇಶ್ ನಾವುಂದ ವಂದಿಸಿದರು.

Leave a comment

Design a site like this with WordPress.com
Get started