
ವಿಶ್ವದೆಲ್ಲೆಡೆ ತನ್ನ ಕರಾಳ ಮುಖವನ್ನು ತೋರಿಸುತ್ತಾ ಕೋಟ್ಯಾಂತರ ಜನರನ್ನು ಆತಂಕಕ್ಕೆ ತಳ್ಳಿರುವ ಕೊರೊನಾದಿಂದ ಜಗತ್ತಿನೆಲ್ಲೆಡೆ ಭಯದ ಕಾರ್ಮೋಡ ಮೂಡಿದೆ. ಇಡೀ ದೇಶವನ್ನೇ ಸಾವಿನ ಕೂಪದಲ್ಲಿ ಮುಳುಗಿಸಿರುವ ಕೊರೋನಾಗೆ ಲಸಿಕೆ, ಮದ್ದು ಕಂಡು ಹಿಡಿಯಲು ಎಲ್ಲಾ ದೇಶಗಳು ಸಂಶೋಧನೆ ಮಾಡುತ್ತಿವೆ. ಮಿಂಚಿನಂತೆ ಹರಡುತ್ತಿರುವ ಕೊರೊನಾ ವೈರಸ್‌ಗೆ ಚಿಕಿತ್ಸೆ ಇಲ್ಲದೆ ಇಡೀ ವಿಶ್ವ ಬೆಚ್ಚಿಬಿದ್ದಿರುವಾಗ, ಭಾರತದ ಪತಂಜಲಿ ಸಂಸ್ಥೆಯು ಕೊರೊನಾ ವೈರಸ್‌ಗೆ ಲಸಿಕೆ ಅಭಿವೃದ್ಧಿ ಪಡಿಸಿ, ಬಿಡುಗಡೆಗೊಳಿಸಿ ಅಚ್ಚರಿ ಮೂಡಿಸಿದೆ.
ಪತಂಜಲಿ ಸಂಸ್ಥೆಯ ಸಂಸ್ಥಾಪಕರಾಗಿರುವ ಯೋಗಗುರು ಬಾಬಾ ರಾಮ್ ದೇವ್ ಔಷಧಿ ಬಿಡುಗಡೆ ಮಾಡಿದ್ದಾರೆ. ನೂರಾರು ಕೊರೋನಾ ಪೀಡಿತ ರೋಗಿಗಳ ಮೇಲೆ ನಮ್ಮ ಪತಂಜಲಿಯ ಔಷಧಿಯನ್ನು ನೀಡಲಾಗಿದೆ. ಈ ಔಷಧಿ ಪ್ರಯೋಗಿಸಿರುವವರ ಮೇಲೆ ಶೇ.100 ರಷ್ಟು ಫಲಿತಾಂಶ ನೀಡಿದೆ. 5 ರಿಂದ 7 ದಿನದಲ್ಲಿ ಎಲ್ಲಾ ಕೊರೋನಾ ರೋಗಿಗಳು ಗುಣಮುಖರಾಗಿದ್ದಾರೆ ಎಂದು ಪತಂಜಲಿ ಸಂಸ್ಥೆಯ ಸಿಇಒ ಆಚಾರ್ಯ ಬಾಲಕೃಷ್ಣ, ಔಷಧಿ ಬಿಡುಗಡೆ ವೇಳೆ ಹೇಳಿದ್ದಾರೆ. ಸದ್ಯ ಪತಂಜಲಿ ಸಂಸ್ಥೆಯ ಹೇಳಿಕೆ ತಲ್ಲಣ ಸೃಷ್ಟಿಸಿದೆ. ಪತಂಜಲಿ ಔಷಧಿ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುವ ಮುನ್ಸೂಚನೆ ದೊರೆತಿದೆ.
ಪತಂಜಲಿ ಕಂಪನಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆಚಾರ್ಯ ಬಾಲಕೃಷ್ಣ ಕೊರೋನಾ ವೈರಸ್ ನಿರ್ಮೂಲನೆ ಔಷಧವನ್ನು ಕಂಪನಿ ಕಂಡುಹಿಡಿದಿರುವುದಾಗಿ ತಿಳಿಸಿದ್ದರು. ಅಶ್ವಗಂಧ, ತುಳಸಿ, ಗಿಲೋಯ್ ಸೇರಿಸಿ ಮಾಡುವ ಮಿಶ್ರಣದಿಂದ ಕೊರೋನಿಲ್ ತಯಾರಿಸಿದ್ದು, ಶೇ 100ರಷ್ಟು ಗುಣಮುಖರಾಗುವ ಸಾಧ್ಯತೆ ಇದೆ ಎಂದು ರಾಮ್‌ದೇವ್ ತಿಳಿಸಿದ್ದಾರೆ. ಕೊರೋನಾ ವೈರಸ್‌ಗೆ ಆಯುರ್ವೇದದಲ್ಲಿ ಮೊದಲ ಔಷಧ ಬಿಡುಗಡೆ ಮಾಡಲು ಹೆಮ್ಮೆಯಾಗುತ್ತಿದೆ. ಎಂದು ಬಾಲಕೃಷ್ಣ ಅವರು ಹೇಳಿದ್ದಾರೆ.