
ಇಂದು ಶಾಸಕರಾದ ಶ್ರೀ ಕೆ ರಘುಪತಿ ಭಟ್ ರವರು ಆದಿ ಉಡುಪಿಯಲ್ಲಿರುವ ಎ.ಪಿ.ಎಂ.ಸಿ. ದಿನವಹಿ ಮಾರುಕಟ್ಟೆಯನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಶಾಸಕರು ಹಿಂದೆ ಸದ್ರಿ ಮಾರುಕಟ್ಟೆಯಲ್ಲಿ ವಾರದಲ್ಲಿ ಬುಧವಾರದ ಮಾತ್ರ ವ್ಯಾಪಾರಕ್ಕೆ ಅನುಮತಿ ನೀಡಲಾಗಿತ್ತು, ಇಂದಿನಿಂದ ಅಂಬಾಗಿಲು, ಬೀಡಿನಗುಡ್ಡೆ ಭಾಗದ ಬೀದಿಗಳಲ್ಲಿ ತರಕಾರಿ ವ್ಯಾಪಾರ ಮಾಡುತ್ತಿರುವವರನ್ನು ಮತ್ತು ಹೋಲ್ಸೇಲ್ ವ್ಯಾಪಾರಿಗಳನ್ನು ಇಲ್ಲಿಗೆ ಸ್ಥಳಾಂತರಿಸಿ ಅವರಿಗೆ ಇಲ್ಲಿ ದಿನನಿತ್ಯದ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡಲಾಗಿದೆ ಮತ್ತು ಜನರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು. ಹಾಗೂ ಇದಕ್ಕೆ ಶ್ರಮಿಸಿದ ಎ.ಪಿ.ಎಂ.ಸಿ ಆಡಳಿತ ಮಂಡಳಿಗೆ ವಿಶೇಷವಾದ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ನಗರಸಭೆಯ ಪೌರಾಯುಕ್ತರಾದ ಆನಂದ್ ಸಿ ಕಲ್ಲೋಲಿಕರ್, ನಗರಸಭಾ ಸದಸ್ಯರುಗಳಾದ ಶ್ರೀಶ ಕೊಡವೂರು, ಸವಿತಾ ಹರೀಶ್ ರಾಮ್ ಮತ್ತು ಎ.ಪಿ.ಎಂ.ಸಿ ಅಧ್ಯಕ್ಷರಾದ ಕೆ. ಶಾಮ್ ಪ್ರಸಾದ್ ಭಟ್ ಉಪಾಧ್ಯಕ್ಷರಾದ ಲತಾ ಎಸ್ ಹಾಗೂ ಎ.ಪಿ.ಎಂ.ಸಿಯ ಸರ್ವ ಸದಸ್ಯರು ಮತ್ತು ಇತರ ಪ್ರಮುಖರು ಉಪಸ್ಥಿತರಿದ್ದರು.