ರಾಜ್ಯದಲ್ಲಿಂದು ತ್ರಿಶತಕದ ಗಡಿ ದಾಟಿದ ಕೊರೋನಾ

ರಾಜ್ಯದಲ್ಲಿ ಇವತ್ತು ಒಂದೇ ದಿನ 317 ಮಂದಿಗೆ ಕೊರೊನಾ ಸೋಂಕು ತಗುಲಿರುವ ವರದಿ ಬಂದಿದೆ. ಒಟ್ಟು ಸೋಂಕಿತರ ಸಂಖ್ಯೆ 7530 ಕ್ಕೆ ಏರಿಕೆಯಾಗಿದೆ.

2976 ಸಕ್ರಿಯ ಪ್ರಕರಣಗಳು ಇದ್ದು, 72 ಮಂದಿ ಐಸಿಯುನಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವತ್ತು 322 ಮಂದಿ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದು, ರಾಜ್ಯದಲ್ಲಿ ಇದುವರೆಗೆ 4456 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ರಾಜ್ಯದಲ್ಲಿ ಇಂದು 7 ಮಂದಿ ಮೃತಪಟ್ಟಿದ್ದು ಕೊರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 94ಕ್ಕೆ ಏರಿಕೆಯಾಗಿದೆ. ಇಂದು ಪತ್ತೆಯಾದ ಸೋಂಕಿತರಲ್ಲಿ 108 ಮಂದಿ ಅಂತರರಾಜ್ಯ ಪ್ರಯಾಣಿಕರಾಗಿದ್ದು, 78 ಮಂದಿ ಅಂತರರಾಷ್ಟ್ರೀಯ ಪ್ರಯಾಣಿಕರಾಗಿರುತ್ತಾರೆ.

Leave a comment

Design a site like this with WordPress.com
Get started