ಜೂನ್ 09,2020,ಮಂಗಳವಾರ ದಿನ ಭವಿಷ್ಯ

Mesha

ಮೇಷ

ಆರ್ಥಿಕವಾಗಿ ಆಗಾಗ ತಾಪತ್ರಯಗಳು ಕಂಡು ಬರಲಿವೆ.ವೃತ್ತಿರಂಗದಲ್ಲಿ ಅಧಿಕಾರಿ ಜನರ ಅಗ್ರಹ ಭಿನ್ನಾಭಿಪ್ರಾಯಕ್ಕೆ ಕಾರಣವಾಗಲಿದೆ. ಪ್ರಯಾಣದಲ್ಲಿ ಕಷ್ಟನಷ್ಟಗಳು ತೋರಿ ಬರಲಿವೆ.ದಿನಾಂತ್ಯ ಕಿರು ಸಂಚಾರವಿದೆ.

Vrishabha

ವೃಷಭ

ಸದ್ಯ ದೈವಬಲ ಇದ್ದುದರಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಅನುಕೂಲವಾಗಲಿದೆ.ಮಕ್ಕಳ ವಿಚಾರದಲ್ಲಿ ಮನಸ್ಸಿಗೆ ಆಸಮಾಧಾನ ಕಂಡು ಬರುತ್ತದೆ. ವೃತ್ತಿರಂಗದಲ್ಲಿ ನಿಮ್ಮ ಕಾರ್ಯಸಾಧನೆಗೆ ಉತ್ತಮ ಫ‌ಲವು ಸಿಗಲಿದೆ. .

Mithuna

ಮಿಥುನ

ಅಪೇಕ್ಷಿತ ಜನರ ಸಹಾಯದಿಂದ ಕಾರ್ಯಸಾಧನೆಯಾಗಲಿದೆ.ದೇಹಾರೋಗ್ಯದಲ್ಲಿ ಸಮಾಧಾನ ಸಿಗಲಿದೆ.ದೈಹಿಕ ವಿಷದಾಪತ್ತುಗಳು ಸಮಸ್ಯೆ ತಂದೀತು.ಸಾಂಸಾರಿಕವಾಗಿ ಉತ್ತಮ ಕೆಲಸಗಳು ನಡೆಯಲಿವೆ.

Kataka

ಕಟಕ

ದೀರ್ಘ‌ಕಾಲದ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ.ಕುಟುಂಬ ವರ್ಗದವರಿಂದ ಸ್ಫೂರ್ತಿ ಸಹಕಾರ ಮುನ್ನಡೆಗೆ ಸಾಧಕವಾಗಲಿದೆ.ನೆರೆಹೊರೆಯವರೊಂದಿಗೆ ಉತ್ತಮ ಸಂಬಂಧವನ್ನು ಇಟ್ಟುಕೊಳ್ಳುವುದು.

Simha

ಸಿಂಹ

ಅಧೀನ ನೌಕರರಿಂದ ಕಿರಿಕಿರಿ ಇರುತ್ತದೆ. ಸಾಂಸಾರಿಕವಾಗಿ ಉತ್ತಮ ಕೆಲಸಗಳಾಗಲಿವೆ. ಉದ್ಯೋಗ ಗೃಹಕೃತ್ಯಗಳಲ್ಲಿ ಸಮಾಧಾನ ಸಿಗಲಿದೆ. ಶತ್ರುಕೃತ ದೋಷದಿಂದ ಮನಸ್ಸಿಗೆ ಸಮಾಧಾನ ದೊರಕಲಾರದು.

Kanya

ಕನ್ಯಾ

ಸಾಂಸಾರಿಕವಾಗಿ ಸಾಮರಸ್ಯದ ಕೊರತೆ ಕಾಣಿಸಲಿದೆ.ಮನಸ್ಸು ಉದ್ವೇಗದಿಂದ ಶಾಂತಿ, ಸಮಾಧಾನ ಕಳೆದುಕೊಳ್ಳಲಿದೆ.ಖರ್ಚುವೆಚ್ಚಗಳು ದುಪ್ಪಟ್ಟಾಗುವುದರಿಂದ ಆರ್ಥಿಕ ಸಮತೋಲನ ತಪ್ಪಿ ಆತಂಕಕ್ಕೆ ಕಾರಣವಾದಾವು.

Tula

ತುಲಾ

ಆರ್ಥಿಕವಾಗಿ ಆದಾಯಕ್ಕಿಂತ ಖರ್ಚು ಹೆಚ್ಚಾಗಲಿದೆ. ನಾನಾ ರೀತಿಯ ಸಮಸ್ಯೆಗಳು ಮನಸ್ಸನ್ನು ಉದ್ವಿಗ್ನಗೊಳಿಸಲಿವೆ.ಎಲ್ಲದರಲ್ಲೂ ತಪ್ಪು ಹುಳುಕು ಹುಡುಕುವ ನಿಮಗೆ ಸಮಾಧಾನವು ಕಂಡು ಬರಲಾರದು.

Vrishika

ವೃಶ್ಚಿಕ

ಆರೋಗ್ಯದ ಬಗ್ಗೆ ಮುಖ್ಯವಾಗಿ ಪಿತ್ತ, ಉಷ್ಣ ಜಾಡ್ಯ,ಉದರವ್ಯಾಧಿ,ಉಸಿರಾಟದ ತೊಂದರೆ ಆಗಾಗ ಗೋಚರಕ್ಕೆ ಬಂದಾವು.ಜಾಗ್ರತೆ ವಹಿಸಿರಿ. ಕಾರ್ಯಕ್ಷೇತ್ರದಲ್ಲಿ ವಿರೋಧಿಗಳನ್ನು ಧೈರ್ಯವಾಗಿ ಎದುರಿಸುವುದು. .

Dhanussu

ಧನು

ನಿರುದ್ಯೋಗಿಗಳಿಗೆ ಅವಕಾಶಗಳು ಅನಿರೀಕ್ಷಿತ ರೀತಿಯಲ್ಲಿ ಸಿಗಲಿವೆ.ವಿದ್ಯಾರ್ಥಿಗಳ ಪರಿಶ್ರಮ ಸಾರ್ಥಕವಾದೀತು.ಶ್ರೀದೇವರ ದರ್ಶನ ಭಾಗ್ಯದಿಂದ ಮನಸ್ಸಿಗೆ ಸಂತಸ ತರಲಿದೆ.

Makara

ಮಕರ

ಶುಭಮಂಗಲ ಕಾರ್ಯಗಳು ನಿರ್ವಿಘ್ನವಾಗಿ ನಡೆದೀತು.ಆರ್ಥಿಕವಾಗಿ ಶಿಸ್ತು,ಸಂಯಮದಿಂದ ಇದ್ದಲ್ಲಿ ಕಷ್ಟನಷ್ಟಗಳು ಕಡಿಮೆಯಾಗುವ ಅನುಭವ ನಿಮ್ಮದಾಗಲಿವೆ.ಮಾನಸಿಕ ಒತ್ತಡವು ಹೆಚ್ಚಾಗಲಿದೆ.

Kumbha

ಕುಂಭ

ವಿದ್ಯಾರ್ಥಿಗಳಿಗೆ ಕೊಂಚ ಹಿನ್ನಡೆಯು ಕಂಡು ಮನಸ್ಸಿಗೆ ಬೇಸರ ತರಲಿದೆ.ಹೆಜ್ಜೆ ಹೆಜ್ಜೆಗೂ ವಿವೇಚನೆ ಅಗತ್ಯವಿದೆ.ಉದ್ಯೋಗಿಗಳಿಗೆ ದೂರಕ್ಕೆ ವರ್ಗಾವಣೆಯ ಸಂಭವ ಕಂಡು ಬರಲಿದೆ.ತಾಳ್ಮೆಯಿಂದ ಸಹಕರಿಸಿರಿ.

Meena

ಮೀನ

ಗ್ರಹಿಸಿದ ಕೆಲಸವೊಂದು ಅನಿರೀಕ್ಷಿತವಾಗಿ ನಡೆದು ಮನಸ್ಸಿಗೆ ಸಮಾಧಾನವಾಗಲಿದೆ.ವಿವಾಹಾಪೇಕ್ಷಿಗಳಿಗೆ ದಾಂಪತ್ಯದ ಯೋಗವಿದೆ.ಪತ್ರಿಕೋದ್ಯಮಿಗಳಿಗೆ ನಿರೀಕ್ಷೆಗೂ ಮೀರಿ ಯಶಸ್ಸು ತೋರಿ ಬರಲಿದೆ.ಸಹನೆ ಇರಲಿ.

Leave a comment

Design a site like this with WordPress.com
Get started