ಕೊರೋನಾ ಲಾಕ್ ಡೌನ್ ನಿಂದ ತತ್ತರಿಸಿರುವ ಜನತೆಗೆ ಶುಭಸುದ್ಧಿ : ಇಂದಿನಿಂದ ಮಂದಿರ, ಹೋಟೆಲ್, ಮಾಲ್ ಸೇರಿದಂತೆ ಬಹುತೇಕ ಚಟುವಟಿಕೆಗಳು ಪ್ರಾರಂಭ

ಲಾಕ್ ಡೌನ್ ನಿಂದ ತತ್ತರಿಸಿರುವ ಜನತೆಗೆ ಸಿಹಿಸುದ್ದಿಯೊಂದು ಸಿಕ್ಕಿದ್ದು, ಇಂದಿನಿಂದ ಹೊಸ ಜೀವನ ಆರಂಭವಾಗಲಿದೆ. ಹೌದು,  ದೇವಸ್ಥಾನ, ಹೋಟೆಲ್, ಮಾಲ್ ಸೇರಿದಂತೆ ಹಲವು ಚಟುವಟಿಕೆಗಳು ಆರಂಭವಾಗಲಿದೆ.

ಹೌದು, ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಮಾರ್ಚ್ 23 ರಿಂದ ಬಂದ್ ಆಗಿರುವ ದೇಗುಲ, ಮಸೀದಿ, ಚರ್ಚ್ ನಂತಹ ಧಾರ್ಮಿಕ ಕೇಂದ್ರಗಳು, ಶಾಪಿಂಗ್ ಮಾಲ್, ಹೋಟೆಲ್ ಮತ್ತು ರೆಸ್ಟೋರೆಂಟ್ ಗಳು ಇಂದಿನಿಂದ ಪುನಾರಂಭಗೊಳ್ಳಲಿವೆ.ಜೂನ್ 30 ರ ವರೆಗೂ ಲಾಕ್ಡೌನ್ ಮುಂದುವರೆದಿದ್ದರೂ, ಅನೇಕ ಚಟುವಟಿಕೆಗಳ ಆರಂಭಕ್ಕೆ ಅವಕಾಶ ನೀಡಲಾಗಿದೆ.

ಇಂದಿನಿಂದ ಧಾರ್ಮಿಕ ಕೇಂದ್ರಗಳು, ಶಾಪಿಂಗ್ ಮಾಲ್, ಹೋಟೆಲ್, ಪ್ರವಾಸಿತಾಣ ಆರಂಭವಾಗಲಿವೆ. ಈಗಾಗಲೇ ರೈಲು, ಬಸ್, ಅಂಗಡಿಗಳು ಆರಂಭಗೊಂಡಿದ್ದು ಶೇಕಡ 98 ರಷ್ಟು ವಹಿವಾಟು ಪುನರಾರಂಭಗೊಳ್ಳಲಿದೆ. ಶಾಲೆ-ಕಾಲೇಜು, ಸಿನಿಮಾ, ಮೆಟ್ರೋ ರೈಲು, ವಿದೇಶಿ ವಿಮಾನ, ಸಭೆ-ಸಮಾರಂಭ, ಜಿಮ್ ಗಳನ್ನು ಬಂದ್ ಮಾಡಲಾಗಿದೆ.. ಸೋಮವಾರದಿಂದ ಶೇಕಡ 98ರಷ್ಟು ಸೇವೆ ಮತ್ತು ಚಟುವಟಿಕೆಗಳು ಪ್ರಾರಂಭವಾಗಲಿದ್ದು, ಜನಜೀವನ ಸಹಜಸ್ಥಿತಿಗೆ ಮರಳುತ್ತಿದೆ.

ಶಾಪಿಂಗ್ ಮಾಲ್ ಆರಂಭ :

ಕಳೆದ ಎರಡು ತಿಂಗಳಿಂದ ಬಂದ್ ಆಗಿದ್ದ ಶಾಪಿಂಗ್ ಮಾಲ್ ಇಂದಿನಿಂದ ತೆರೆಯಲಿದ್ದು ಅದಕ್ಕಾಗಿ ಕೇಂದ್ರ ಅಗತ್ಯ ಮಾರ್ಗಸೂಚಿಗಳನ್ನು ಹೊರಡಿಸಿದೆ. ಅವುಗಳನ್ನು ಪ್ರತಿಯೊಬ್ಬರು ಪಾಲಿಸಬೇಕು….

ಮಾಲ್‌ ಪ್ರವೇಶ ದ್ವಾರದಲ್ಲಿ ಹ್ಯಾಂಡ್‌ ಸ್ಯಾನಿಟೈಸರ್‌ ಮತ್ತು ಥರ್ಮಲ್‌ ಸ್ಕ್ರೀನಿಂಗ್‌ ಕಡ್ಡಾಯ.
ರೋಗ ಲಕ್ಷಣ ರಹಿತ ಗ್ರಾಹಕರು ಅಥವಾ ಸಂದರ್ಶಕರಿಗೆ ಮಾತ್ರ ಮಾಲ್‌ ಒಳಗಡೆ ಪ್ರವೇಶ.
ಫೇಸ್ ಮಾಸ್ಕ್‌ ಧರಿಸಿದ ಕಾರ್ಮಿಕರು,ಗ್ರಾಹಕರು,ಸಂದರ್ಶಕರಿಗೆ ಮಾತ್ರ ಪ್ರವೇಶಕ್ಕೆ ಅನುಮತಿ.
ಶಾಪಿಂಗ್ ಮಾಲ್ ಒಳಗಡೆ ಎಲ್ಲಾ ಸಮಯದಲ್ಲೂ ಮಾಸ್ಕ್‌ ಧರಿಸುವುದು ಕಡ್ಡಾಯ.
ಕೊರೊನಾ ನಿಯಂತ್ರಣದ ಪೋಸ್ಟರ್‌ ಹಾಗೂ ವಿಡಿಯೋಗಳನ್ನು ಮಾಲ್ ನಲ್ಲಿ ಪ್ರದರ್ಶಿಸಬೇಕು.
ಸಾಧ್ಯವಾದರೆ ಸಂದರ್ಶಕರನ್ನು ಒಂದೇ ಕಡೆ ನಿಲ್ಲಿಸುವುದು ಉಚಿತ
ಸಾಮಾಜಿಕ ಅಂತರ ಕಾಪಾಡಲು ಮಾಲ್‌ ನಿರ್ವಹಣೆ ಕಂಪನಿಗಳು ಅಗತ್ಯವಾದ ಜನರನ್ನು ನಿಯೋಜಿಸಬೇಕು.
ವೃದ್ಧ ನೌಕರರು, ಗರ್ಭಿಣಿ ನೌಕರರು ಮತ್ತು ವೈದ್ಯಕೀಯ ಪರಿಸ್ಥಿತಿಗಳನ್ನು ಹೊಂದಿರುವ ನೌಕರರು ಹೆಚ್ಚುವರಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಅವರು ಸಾರ್ವಜನಿಕರೊಂದಿಗೆ ನೇರವಾಗಿ ಸಂಪರ್ಕಕ್ಕೆ ಬರದಂತೆ ನೋಡಿಕೊಳ್ಳಬೇಕು.
ಪಾರ್ಕಿಂಗ್‌ ಸ್ಥಳಗಳಲ್ಲಿ ಜನದಟ್ಟಣೆ ನಿಯಂತ್ರಿಸಬೇಕು. ಸಾಮಾಜಿಕ ಅಂತರ ಕಡ್ಡಾಯ.
ಮಾಲ್‌ನ ಆವರಣದ ಹೊರಗೆ ಹಾಗೂ ಒಳಗೆ ಯಾವುದೇ ಅಂಗಡಿಗಳು, ಮಳಿಗೆಗಳು ಕೆಫೆಟೇರಿಯಾಗಳಲ್ಲಿ ಎಲ್ಲ ಸಮಯದಲ್ಲೂ ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯವಾಗಿದೆ. ಡೋರ್, ಕೀ, ಸ್ಟೇರಿಂಗ್ ಡಿಸ್ ಇನ್ ಫೆಕ್ಕ್ಷನ್ ಮಾಡುವುದು ಉಚಿತ.
ಸಂದರ್ಶಕರು, ಕಾರ್ಮಿಕರು ಮತ್ತು ಸರಕು/ಸರಬರಾಜುಗಳಿಗಾಗಿ ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನ ದ್ವಾರಗಳ ನಿರ್ಮಾಣ.
ಹೋಮ್‌ ಡೆಲಿವರಿಗೂ ಮುನ್ನ ಡೆಲಿವರಿ ಬಾಯ್‌ ಅಥವಾ ಸಿಬ್ಬಂದಿಯ ಥರ್ಮಲ್‌ ಸ್ಕ್ರೀನಿಂಗ್‌ನ್ನು ಮಾಲ್‌ ನಿರ್ವಹಣೆ ಕಂಪನಿಗಳು ಮಾಡಬೇಕು.
ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಕನಿಷ್ಠ ಸಂಖ್ಯೆಯಲ್ಲಿ ಗ್ರಾಹಕರನ್ನು ಒಳಗಡೆ ಬಿಡಬೇಕು ಎಂದು ಕೇಂದ್ರ ಸರಕಾರ ತಿಳಿಸಿದೆ.
ಮಾಲ್‌ಗಳ ಎಸಿ 24 ರಿಂದ 30 ಡಿಗ್ರಿ ಸೆಲ್ಸಿಯಸ್‌ ಇರಬೇಕು. ಸಾಧ್ಯವಾದಷ್ಟು ಹೆಚ್ಚು ಮಾಲ್‌ ಒಳಗಡೆ ತಾಜಾ ಗಾಳಿ ಬರುವಂತೆ ವ್ಯವಸ್ಥೆ ಮಾಡಿಕೊಳ್ಳಬೇಕು.
ಮಾಲ್ ನ ಒಳಗೆ ಕುಳಿತುಕೊಳ್ಳಲು ವ್ಯವಸ್ಥೆ ಇದ್ದರೆ ಅಲ್ಲೂ ಸಹ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.
ಮಾಲ್ ನ ಒಳಗೆ, ಹೊರಗೆ, ವಾಷಿಂಗ್ ಏರಿಯಾ, ಡ್ರಿಂಕಿಂಗ್ ಏರಿಯಾ, ಕುಳಿತುಕೊಳ್ಳುವ ಜಾಗ, ಹಾಂಡ್ ರೇಲ್ಸ್, ಎಲಿವೇಟರ್ ಬಟನ್, ಡೋರ್ ಹಾಂಡಲ್ ಇವುಗಳೆಲ್ಲವನ್ನು ಕಡ್ಡಾಯವಾಗಿ ನಿಯಮಿತವಾಗಿ ಸಾನಿಟೈಸಿಂಗ್, ಕ್ಲೀನಿಂಗ್ ಮಾಡುತ್ತಿರಬೇಕು.
ವಾಷ್ ರೂಮ್ ಗಳನ್ನು ಶುಚಿತ್ವವಾಗಿಡುವುದು, ಕ್ಲೀನ್ ಮಾಡುವುದು ಕಡ್ಡಾಯ
ಬಳಸಿದ ಮಾಸ್ಕ್, ಗ್ಲೌಸ್, ಗ್ರಾಹಕರು ಬಿಟ್ಟು ಹೋದ ವಸ್ತುಗಳನ್ನು ಸರಿಯಾಗಿ ವಿಲೇವಾರಿ ಮಾಡಬೇಕು.ಅಡುಗೆ ಮನೆಯಲ್ಲಿ, ಸಿಬ್ಬಂದಿ ಕೆಲಸದ ಸ್ಥಳದಲ್ಲಿ ಸಾಮಾಜಿಕ ಅಂತರ ನಿಯಮ ಪಾಲನೆ ಕಡ್ಡಾಯ.

ಕೇಂದ್ರ ಸರ್ಕಾರವು ಮೇ. 30 ರಂದು 5 ನೇ ಹಂತದ ಲಾಕ್ ಡೌನ್ ಘೋಷಣೆ ಮಾಡಿದ್ದು, ಜೂನ್ 8 ರಿಂದ ಧಾರ್ಮಿಕ ಕೇಂದ್ರ, ಶಾಪಿಂಗ್ ಮಾಲ್, ಹೋಟೆಲ್ ಮತ್ತು ರೆಸ್ಟೋರೆಂಟ್ ಗಳನ್ನು ತೆರೆಯಲು ಅವಕಾಶ ನೀಡಿದೆ. ಈ ಸಂಬಂಧ ಜೂ. 3 ಬುಧವಾರ ನಿಯಮಾವಳಿಗಳನ್ನು ಬಿಡುಗಡೆ ಮಾಡಿತ್ತು.  .

 ಇನ್ನೂ, ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ಮುಜರಾಯಿ ಇಲಾಖೆಗೆ ಸೇರಿದ ರಾಜ್ಯದ ಎಲ್ಲಾ ದೇವಾಲಯಗಳು ಕೂಡ ಇಂದಿನಿಂದ ತೆರೆಯಲಾಗುತ್ತದೆ. ಧಾರ್ಮಿಕ ಕೇಂದ್ರಗಳನ್ನು ತೆರೆಯುವುದರಿಂದ ಆಗಬಹುದಾದ ಸೋಂಕು ಹರಡುವುದನ್ನು ತಡೆಗಟ್ಟಲು ಹಲವಾರು ಷರತ್ತುಗಳನ್ನು ವಿಧಿಸಿದ್ದಾರೆ. ಕಂಟೈನ್‍ಮೆಂಟ್ ವಲಯಗಳಲ್ಲಿ ಕಂಡುಬರುವ ಧಾರ್ಮಿಕ ಸ್ಥಳಗಳು, ಪೂಜಾ ಸ್ಥಳಗಳು, ಆಧ್ಯಾತ್ಮಿಕ ಕೇಂದ್ರಗಳನ್ನು ತೆರೆಯುವಂತಿಲ್ಲ. ಧಾರ್ಮಿಕ ಸ್ಥಳಗಳು, ಪೂಜಾ ಸ್ಥಳಗಳು, ಆಧ್ಯಾತ್ಮಿಕ ಕೇಂದ್ರಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ಸೇರುವುದರಿಂದ ಅಂತಹ ಪ್ರದೇಶಗಳಲ್ಲಿ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಕಾಯ್ದುಕೊಂಡು ಮುಖಗವಸನ್ನು ತಪ್ಪದೇ ಧರಿಸಬೇಕು ಹಾಗೂ ದೇವಾಲಯಗಳಲ್ಲಿ ಸೋಪ್‍ನಿಂದ ಕೈತೊಳೆಯಲು ಹಾಗೂ ಆಲ್ಕೊಹಾಲ್ ಇರುವ ಹ್ಯಾಂಡ್ ಸ್ಯಾನಿಟೈಸರ್ ಉಪಯೋಗಿಸಲು ವ್ಯವಸ್ಥೆ ಮಾಡಬೇಕು. ಕೆಮ್ಮುವಾಗ ಮತ್ತು ಸೀನುವಾಗ ಬಾಯಿ ಮತ್ತು ಮೂಗನ್ನು ಕಡ್ಡಾಯವಾಗಿ ಹ್ಯಾಂಡ್ ಕರ್ಚಿಪ್ ಅಥವಾ ಮೊಣಕೈಯಿಂದ ಮುಚ್ಚಿಕೊಳ್ಳಬೇಕು.

ಧಾರ್ಮಿಕ ಸ್ಥಳಗಳು, ಪೂಜಾ ಸ್ಥಳಗಳು, ಆಧ್ಯಾತ್ಮಿಕ ಕೇಂದ್ರಗಳ ಪ್ರವೇಶದ್ವಾರದಲ್ಲಿ ಸ್ಯಾನಿಟೈಸರ್ ನೀಡಲು ಹಾಗೂ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಬೇಕು ಹಾಗೂ ಸ್ಮಾರ್ಟ್‍ಫೋನ್ ಹೊಂದಿರುವವರು ಕಡ್ಡಾಯವಾಗಿ ಆರೋಗ್ಯ ಸೇತು ಆಪ್ ಅನ್ನು ಹೊಂದಿರಬೇಕು. ದೇವಾಲಯಗಳಲ್ಲಿ ಕೋವಿಡ್-19 ವೈರಾಣು ಬಗ್ಗೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಶಾಶ್ವತ ಫಲಕ ಅಳವಡಿಸುವುದು ಹಾಗೂ ವಿಡಿಯೋ-ಆಡಿಯೋ ಕ್ಲಿಪ್‍ಗಳ ಮೂಲಕ ಪ್ರಚಾರ ಮಾಡಬೇಕು.

ಭಕ್ತರಿಗೆ ದೇವರ ದರ್ಶನಕ್ಕೆ ಮಾತ್ರ ಅವಕಾಶವಿದ್ದು, ಸೇವೆಗಳಿಗೆ ಅವಕಾಶವಿರುವುದಿಲ್ಲ. ದರ್ಶನಕ್ಕೆ ಬರುವವರು ಹೂ, ಹಣ್ಣು, ಕಾಯಿ ಮುಂತಾದ ಪೂಜಾ ಸಾಮಗ್ರಿಗಳನ್ನು ತರಲು ಅವಕಾಶವಿರುವುದಿಲ್ಲ. ಹಾಗೂ ಪ್ರಸಾದ, ತೀರ್ಥ ನೀಡಲು ಹಾಗೂ ಪ್ರೋಕ್ಷಿಸಲು ಅವಕಾಶವಿರುವುದಿಲ್ಲ. 65 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ ಹಾಗೂ 10 ವರ್ಷ ಕೆಳಗಿನ ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ಪ್ರವೇಶ ನಿಷೇಧಿಸಲಾಗಿದೆ. ದೇವಾಲಯದ ವಸತಿಗೃಹದಲ್ಲಿ ತಂಗಲು ಅವಕಾಶವಿರುವುದಿಲ್ಲ. ಅಲ್ಲದೆ ಸದ್ಯದ ಮಟ್ಟಿಗೆ ದಾಸೋಹ ನಡೆಸಲು ಅವಕಾಶವಿರುವುದಿಲ್ಲ.

Leave a comment

Design a site like this with WordPress.com
Get started