ವಾಟ್ಸ್ ಆ್ಯಪ್ ಹೇಗೆ ದುಡ್ಡು ಮಾಡುತ್ತೆ ಅಂತ ನಿಮ್ಗೆ ಗೊತ್ತಾ?

ವಾಟ್ಸ್ಆ್ಯಪ್ ಅತ್ಯಂತ ವೇಗವಾಗಿ ಸಂದೇಶ ರವಾನೆ ಮಾಡುತ್ತದೆ. ವಾಟ್ಸ್ಆ್ಯಪ್ ಬಳಕೆ ಇಲ್ಲದೆ ಸಾಧ್ಯವೇ ಇಲ್ಲ ಎಂಬುವಷ್ಟರಮಟ್ಟಿಗೆ ಅದು ನಮ್ಮ ಮೇಲೆ ಪ್ರಭಾವ ಬೀರಿದೆ.

ಆದರೆ,‌ನಾವು ಈ ಆ್ಯಪ್ ನಲ್ಲಿ ಜಾಹಿರಾತು ಕಾಣಲ್ಲ….! ಹಾಗಾದ್ರೆ ವಾಟ್ಸಪ್ ಗೆ ದುಡ್ಡು ಹೇಗೆ ಬರುತ್ತೆ?

ಆರಂಭದಲ್ಲಿ ವಾರ್ಷಿಕ ಶುಲ್ಕ ಪಾವತಿ ವಿಧಾನವಿತ್ತು. ಆದರೆ , ಫೇಸ್ ಬುಕ್ ಖರೀದಿ ಮಾಡಿದ ಬಳಿಕ ಅದೂ ಸಹ ಇಲ್ಲ…!
ವಾಟ್ಸ್ಆ್ಯಪ್ ಅನ್ನು ಫೇಸ್ ಬುಕ್ ಕೊಂಡಿದ್ದು19 ಬಿಲಿಯನ್ ಡಾಲರ್ ಗೆ. ಇಷ್ಟೊಂದು ದೊಡ್ಡಮೊತ್ತಕ್ಕೆ ಕೊಂಡಿದೆ ಅಂದ್ರೆ ಸಿಕ್ಕಾಪಟ್ಟೆ ದುಡ್ಡು ಇದೆ ಎಂದೇ ಅರ್ಥ ಅಲ್ಲವೇ?
ಪ್ರತಿಯೊಂದು ಸಂದೇಶ ಕೂಡ ಅಮೆರಿಕಾದಲ್ಲಿರುವ ಸರ್ವರ್ ಗೆ ಹೋಗಿ, ಅಲ್ಲಿಂದ ರವಾನೆ ಆಗುತ್ತದೆ. ಅಲ್ಲಿ ಎಲ್ಲವೂ ಸಂಗ್ರಹವಾಗಿರುತ್ತದೆ. ಈ ಡೇಟಾ ಇ-ಕಾಮರ್ಸ್ ಮೊದಲಾದ ಸಂಸ್ಥೆಗಳಿಗೆ ಚಿನ್ನದ ಗಣಿಯಂತೆ…! ಜನರ ಮೂಡ್ ಯಾವ ರೀತಿ ಎಂದು ತಿಳಿಯಲು ಈ ಡೇಟಾ ನೆರವಾಗುತ್ತದೆಯಂತೆ.
ಜನ ಮಳೆ ಬಗ್ಗೆ ಮಾತಾಡಿದ್ದರೆ, ಮಳೆ ಬಂದಿದೆ ಎಂದು ಅರ್ಥ.‌ಆಗ ಆತನಿಗೆ ಮಳೆಗೆ ಸಂಬಂಧಿಸಿದ ವಸ್ತುಗಳ ಜಾಹಿರಾತು ತೋರಿಸಬೇಕು ಎಂದರ್ಥ ‌.
ವಾಟ್ಸ್ಆ್ಯಪ್ ಅನ್ನು ಬಳಸಿಕೊಂಡು ಫೇಸ್ ಬುಕ್ ತನ್ನ ಜಾಹಿರಾತುಗಳನ್ನು ಮತ್ತಷ್ಟು ಟಾರ್ಗೆಟ್ ಮಾಡುತ್ತದೆ.

ವಾಟ್ಸ್ಆ್ಯಪ್ ನಿಂದಾಗಿ ಫೇಸ್‌ಬುಕ್‌ ಕೂಡ ಅನುಕೂಲವಾಗಿದೆ.
ಇತ್ತೀಚೆಗೆ ವಾಟ್ಸ್ಆ್ಯಪ್ ಮತ್ತೊಂದು ವಿಧಾನ ಹುಡುಕಿಕೊಂಡಿದೆ. ಸಾಮಾನ್ಯವಾಗಿ, ಲಕ್ಷಾಂತರ ಗ್ರಾಹಕರನ್ನು ಹೊಂದಿರುವ ಸಂಸ್ಥೆಗಳು ತಮ್ಮ ಗ್ರಾಹಕರಿಗೆ ಕಾಲಕಾಲಕ್ಕೆ ಮಾಹಿತಿ ನೀಡುವುದಕ್ಕಾಗಿ ಟೆಲಿಕಾಂ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಎಸ್‌ಎಂಎಸ್‌ ಕಳುಹಿಸುತ್ತಿರುತ್ತವೆ. ಇದಕ್ಕೆ ಟೆಲಿಕಾಂ ಕಂಪನಿಗಳು ದರ ನಿಗದಿ ಮಾಡಿರುತ್ತವೆ.
ಟೆಲಿಕಾಂ ಕಂಪನಿಗಳ ಬದಲಿಗೆ ವಾಟ್ಸ್ಆ್ಯಪ್ ಜೊತೆಗೆ ಒಪ್ಪಂದ ಮಾಡಿಕೊಳ್ಳುವಂತೆ ಇಂಥ ಕಂಪನಿಗಳನ್ನು ವಾಟ್ಸಾಪ್‌ ಅಪ್ರೂವ್‌ ಮಾಡುತ್ತಿದೆ. ಉದಾಹರಣೆಗೆ, ನೀವು ವಿಮಾನ ಟಿಕೆಟ್‌ ಬುಕ್‌ ಮಾಡಲು ಹೋಗುತ್ತೀರಿ. ನೀವು ಟಿಕೆಟ್‌ ಬುಕ್‌ ಮಾಡಿದ ಏರ್‌ ಲೈನ್ಸ್‌ ನಿಮಗೆ ಟಿಕೆಟ್‌ ವಿವರಗಳನ್ನು ಎಸ್‌ಎಂಎಸ್‌ ಮಾಡುತ್ತದೆ. ಆದರೆ ವಾಟ್ಸ್ಆ್ಯಪ್ ಜೊತೆಗೆ ಒಪ್ಪಂದ ಮಾಡಿಕೊಂಡ ಕಂಪನಿಯು ನಿಮಗೆ ಎಸ್‌ಎಂಎಸ್‌ ಕಳುಹಿಸುವುದರ ಬದಲಿಗೆವಾಟ್ಸ್ಆ್ಯಪ್ ಮೂಲಕ ಕಳುಹಿಸುತ್ತದೆ. ಅದನ್ನು ನಿಮಗೆ ಟಿಕೆಟ್‌ ಪಿಡಿಎಫ್ ಸಿಗುತ್ತದೆ. ಟಿಕೆಟ್‌ ವಿವರ ಸಂದೇಶದ ರೂಪದಲ್ಲೂ ಸಿಗುತ್ತದೆ.
ಅದೇ ರೀತಿ ಬುಕ್ ಮೈ ಶೋನಲ್ಲಿ ನೀವು ಸಿನಿಮಾ ಟಿಕೆಟ್ ಬುಕ್ ಮಾಡಿದಾಗ ಅದು ವಾಟ್ಸಪ್ ಗೆ ಮಾಹಿತಿ ಕಳುಹಿಸಿರೋದನ್ನು ನೀವು ನೋಡಿರುತ್ತೀರಿ.ಆದರೆ, ವಾಟ್ಸಾಪ್‌ ಇವತ್ತಿಗೂ ಲಾಭದಲ್ಲಿದೆ ಎಂದೇನೂ ಹೇಳಲಾಗದು. 2014ರಲ್ಲಿ ವಾಟ್ಸಾಪ್‌ನ ಲಾಭ 1.5 ಕೋಟಿ ಡಾಲರ್‌. ಆದರೆ ನಷ್ಟ 23 ಕೋಟಿ ಡಾಲರ್‌. 2017ರ ಹೊತ್ತಿಗೆ ಈ ನಷ್ಟದ ಮೊತ್ತ 40 ಕೋಟಿಗೆ ತಲುಪಿದೆ. ಆದರೆ ವಾಟ್ಸಾಪ್‌ ಖರೀದಿಸಿದ ನಂತರ ಫೇಸ್‌ಬುಕ್‌ನ ಲಾಭದಲ್ಲಿ ಹೆಚ್ಚಳವಾಗಿದೆ. ಇದರರ್ಥ ಇಷ್ಟೇ. ವಾಟ್ಸಾಪ್‌ನ ಡೇಟಾ ಬಳಸಿಕೊಂಡು ಫೇಸ್‌ಬುಕ್‌ ಲಾಭ ಮಾಡಿಕೊಳ್ಳುತ್ತಿದೆ.

Leave a comment

Design a site like this with WordPress.com
Get started