
ಭಾರತೀಯ ಸಂಸ್ಕೃತಿಯಲ್ಲಿ ಯಾವುದು ಪ್ರಾಚೀನ ಕಾಲದಿಂದಲೂ ಹೇಳಿದ್ದರೋ ಅದು ಈಗ ಪಾಶ್ಚಾತ್ಯ ವಿಜ್ಞಾನಿಗಳು ಸಂಶೋಧನೆ ಮಾಡಿ ಮಾನ್ಯತೆಯನ್ನು ನೀಡುತ್ತಿದ್ದಾರೆ. ಇದರಿಂದ ಅವರು ಎಷ್ಟು ಹಿಂದುಳಿದಿದ್ದಾರೆ ಎಂಬುದು ಗಮನಕ್ಕೆ ಬರುತ್ತದೆ. ಹೌದು ಪಾಶ್ಚಾತ್ಯರನ್ನು ಅನುಸರಿಸುವ ಭಾರತೀಯರು ತಮ್ಮನ್ನು ಹೇಗೆ ಹಿಂದುಳಿದವರು ಎಂದು ತಿಳಿದಿದ್ದಾರೆ ಎಂಬುದು ಕೂಡ ಈಗ ಗಮನಕ್ಕೆ ಬರುತ್ತದೆ.ಕೊರೋನಾಗೆ ಸಂಬಂಧಿಸಿದಂತೆ ಆಯುಷ್ ಸಚಿವಾಲಯವು ನೀಡಿದ ಹಲವಾರು ಸಲಹೆಗಳಲ್ಲಿ ಬಿಸಿನೀರಿಗೆ ಉಪ್ಪು ಸೇರಿಸಿ ಬಾಯಿ ಮುಕ್ಕಳಿಸುವುದು ಸೇರಿದೆ. ಬಾಯಿ ಮುಕ್ಕಳಿಸುವ ಅಭ್ಯಾಸವು ಭಾರತೀಯ ಸಂಸ್ಕೃತಿಯಲ್ಲಿ ಪ್ರಾಚೀನದಿಂದಲೂ ಇದೆ. ಈಗ ಬ್ರಿಟನ್‌ನ ಎಡಿನ್ಬರ್ಗ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಮಾಡಿದ ಸಂಶೋಧನೆಯಲ್ಲಿ ‘ಬಿಸಿನೀರಿನಲ್ಲಿ ಉಪ್ಪು ಹಾಕಿ ಬಾಯಿ ಮುಕ್ಕಳಿಸಿದರೆ ಕರೋನಾ ಸೋಂಕಿನ ಅಪಾಯವನ್ನು ಗಮನಾರ್ಹವಾಗಿ ಕಡಿಮೆಯಾಗುವುದು ಎಂದಿದ್ದಾರೆ.ಇಷ್ಟೇ ಅಲ್ಲದೆ ಹೀಗೆ ಬಿಸಿ ನೀರು ಹಾಗೂ ಉಪ್ಪನ್ನು ಸೇರುಸಿ ಬಾಯಿ ಮುಕ್ಕಳಿಸುವುದರಿಂದ ಕೊರೊನಾ ಸಾಂಕ್ರಾಮಿಕ ರೋಗದ ಕಾಲಾವಧಿಯನ್ನು ಕಡಿಮೆ ಮಾಡುತ್ತದೆ’ ಎಂಬುದು ಗಮನಕ್ಕೆ ಬಂದಿದೆ. ಈ ವಿಜ್ಞಾನಿಗಳು ಕೊರೋನಾ ಪೀಡಿತ 12 ರೋಗಿಗಳ ಮೇಲೆ 12 ದಿನಗಳ ಕಾಲ ಈ ಪ್ರಯೋಗವನ್ನು ಮಾಡಿದ್ದಾರೆ. ಈ ರೋಗಿಗಳಿಗೆ 12 ದಿನಗಳ ಕಾಲ ಬಿಸಿ ನೀರಿನಲ್ಲಿ ಉಪ್ಪು ಹಾಕಿ ಬಾಯಿ ಮುಕ್ಕಳಿಸಲು ಹೇಳಲಾಗಿತ್ತು.
ಸತತ 12 ದಿನಗಳ ನಂತರ ಅವರ ಮೂಗಿನ ದ್ರವದ ಮಾದರಿಗಳನ್ನು ತೆಗೆದುಕೊಂಡಾಗ ಅದರಲ್ಲಿ ಕರೋನಾ ಸೋಂಕಿನ ಲಕ್ಷಣಗಳು ತೀರಾ ಕಡಿಮೆ ಬಂದಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಈ ಸಂಶೋಧನೆಯನ್ನು ‘ಜರ್ನಲ್ ಆಫ್ ಗ್ಲೋಬಲ್ ಹೆಲ್ತ್‌ನಲ್ಲಿ ಪ್ರಕಟಿಸಲಾಗಿದೆ. ಅದರಲ್ಲಿ, ಕೇವಲ ಎರಡೂವರೆ ದಿನಗಳಲ್ಲಿ ಕರೋನಾ ಸೋಂಕಿನ ಪರಿಣಾಮಗಳು ಕಡಿಮೆಯಾಗಿವೆ ಎಂದು ಹೇಳಲಾಗಿದೆ.
ಆದ್ದರಿಂದ ಕೊರೋನಾ ಸೋಂಕನ್ನು ಅಲ್ಪಾವಧಿಯಲ್ಲಿಯೇ ಕಡಿಮೆ ಮಾಡಲು ಕೊನೆಗೂ ನಮ್ಮ ಪೂರ್ವಜರು ಹೇಳುತ್ತಿದ್ದ ಅಂಶಗಳೇ ನಿಜವಾಯ್ತು ಎನ್ನಬಹುದು. ಹೌದು ಹಳೆಯ ಕಾಲದ ಅಥವಾ ವಯಸ್ಸಾದ ಅಜ್ಜ ಅಜ್ಜಿಯರು ಬೆಳಿಗ್ಗೆ ಎದ್ದು ಬಿಸಿ ನೀರಿನಿಂದ ಬಾಯಿ ಮುಕ್ಕಳಿಸಿ ಚಹಾ ಕುಡಿಯುತ್ತಿದ್ದರು ಆದರೆ ಈಗಿನ ಕಾಲದ ಜನ ಮಲಗಿದ ಹಾಸಿಗೆಯಲ್ಲಿಯೇ ಹಲ್ಲುಜ್ಜದೆ ಬೆಡ್ ಕಾಫಿ ಕೇಳುತ್ತಾರೆ.
ಇಷ್ಟೇ ಅಲ್ಲದೇ ನಮ್ಮ ಪೂರ್ವಜರು ಗೋಮಾತೆಯ ಮೂತ್ರವನ್ನು ಸೇವಿಸುತ್ತಿದ್ದರು ಹಾಗೂ ಅದರಿಂದ ಮುಖ ತೊಳಿಯುತ್ತಿದ್ದರು. ಗೋಮುತ್ರ ಕೂಡ ಉಪ್ಪಾಗಿದ್ದು ಮಾನವನ ದೇಹಕ್ಕೆ ಉಪಯುಕ್ತವಾಗಿದ್ದು ಯಾವುದೇ ರೋಗ ಬಾರದಂತೆ ಸಹಾಯ ಮಾಡುತ್ತದೆ ಹೀಗಾಗಿ ಇನ್ನಾದರೂ ನಮ್ಮ ಸನಾತನ ಧರ್ಮ ಅರ್ಥ ಮಾಡಿಕೊಂಡು ನಮ್ಮ ಸನಾತನ ಸಂಸ್ಕೃತಿಯನ್ನು ಪಾಲಿಸೋಣ, ಪಾಶ್ಚಾತ್ಯ ಸಂಸ್ಕೃತಿಯನ್ನು ಬಿಟ್ಟು ಬಿಡೋಣ.