
ಶಾರ್ವರಿ ಸಂ|ರದ ಮೀನ ಮಾಸ ದಿನ 25 ಸಲುವ ಫಾಲ್ಗುಣ ಬಹುಳ ದ್ವಾದಶಿ 52| ಗಳಿಗೆದಿನ ವಿಶೇಷ :ಹರಿವಾಸರ ಗಂ. 8.41ನಿತ್ಯ ನಕ್ಷತ್ರ :ಶತಭಿಷಾ 56| ಗಳಿಗೆ ಮಹಾ ನಕ್ಷತ್ರ :ರೇವತಿಋತು :ಶಿಶಿರರಾಹುಕಾಲ :1.30-3.00 ಗಂಟೆಗುಳಿಕ ಕಾಲ :9.00-10.30 ಗಂಟೆಸೂರ್ಯಾಸ್ತ :6.41 ಗಂಟೆಸೂರ್ಯೋದಯ :6.23 ಗಂಟೆ
ಮೇಷ
ಸ್ತ್ರೀ ವರ್ಗದವರಿಗೆ ಅತ್ಯಂತ ಸಂತೋಷಕರ ವಾತಾವರಣ. ಮದುವೆ ಮುಂಜಿ ಸಮಾರಂಭಗಳಲ್ಲಿ ಭಾಗಿ. ಬಂಧು–ಬಾಂಧವರ ಸಮಾಗಮ. ನವ ಚೈತನ್ಯ ಧುಮ್ಮಿಕ್ಕಲಿದೆ.
ವೃಷಭ
ಪಿತ್ರಾರ್ಜಿತ ಆಸ್ತಿಯು ನಿಮ್ಮ ಪಾಲಿಗೆ ಬಂದೊದಗಲಿದೆ. ಹಿರಿಯರ ಆಶೀರ್ವಾದದಿಂದಾಗಿ ಆದಾಯದ ಮೂಲಗಳು ಗೋಚರವಾಗಿ ಸಂತೃಪ್ತಿ. ಕುಟುಂಬದವರಿಂದ ಸ್ಥಾನ ಮಾನಗಳು ಲಭ್ಯ.
ಮಿಥುನ
ಭೂ ವಿವಾದದಲ್ಲಿ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆ. ಅತಿಯಾದ ಕಾರ್ಯ ಒತ್ತಡದಿಂದಾಗಿ ಗೊಂದಲಮಯ ಪರಿಸ್ಥಿತಿ. ಸಕಾಲಿಕ ಚಿಂತನೆಯಿಂದಾಗಿ ಮಾನಸಿಕ ಶಾಂತಿ. ಸಂಗಾತಿಯಿಂದ ಸಿಹಿ ಸುದ್ದಿ.
ಕಟಕ
ಹಿಂದಿನ ತಾಪತ್ರಯಗಳೆಲ್ಲವೂ ನಿವಾರಣೆಯಾಗಿ ನಿರಾಳತೆ. ವಿದ್ಯಾರ್ಥಿಗಳಿಗೆ ಯಶಸ್ಸಿನ ದಿನ. ದಿನಸಿ ವ್ಯಾಪಾರಿಗಳಿಗೆ ಸ್ವಲ್ಪಮಟ್ಟಿನ ನಷ್ಟ. ವಕೀಲ ವೃತ್ತಿಯವರಿಗೆ ಆರ್ಥಿಕಾಭಿವೃದ್ಧಿ. ವಾಹನ ಯೋಗ.
ಸಿಂಹ
ಕಳ್ಳ ಕಾಕರ ಬಗ್ಗೆ ಗಮನ ವಹಿಸುವುದು ಉತ್ತಮ. ಬೆಲೆಬಾಳುವ ವಸ್ತುಗಳ ಬಗ್ಗೆ ಸೂಕ್ತ ರಕ್ಷಣೆ ಮಾಡಿಕೊಳ್ಳಿ. ಮಿತ್ರರೊಂದಿಗೆ ಮನಸ್ತಾಪ ಶಮನ. ಸಂಗಾತಿಯಿಂದ ವಿಶೇಷ ಕೊಡುಗೆ. ಬಂಧುಗಳ ಆಗಮನದಿಂದ ಸಂತಸ.
ಕನ್ಯಾ
ಸ್ಥಿರಾಸ್ತಿ ಪ್ರಾಪ್ತವಾಗುವ ಸಾಧ್ಯತೆಯಿದ್ದು, ಭೂ ಖರೀದಿಗೆ ಯೋಗ್ಯ ದಿನ. ವಿದೇಶ ಪ್ರಯಾಣದ ಕನಸು ಗರಿಗೆದರುವ ಸಾಧ್ಯತೆ. ಹೊಸ ಮನೆ, ಸಂತಾನ ಭಾಗ್ಯ ಮುಂತಾದವುಗಳು ದೊರಕಿ ಸಂತಸ.
ತುಲಾ
ಕೋರ್ಟ್ ಕಚೇರಿ ವ್ಯವಹಾರಗಳಲ್ಲಿ ಉತ್ತಮ ಫಲಿತಾಂಶ. ಹೊಸ ಮನೆ, ಜಮೀನು ಪ್ರಾಪ್ತವಾಗುವ ಯೋಗ. ಸಾಂಸಾರಿಕ ಸುಖ. ಕೃಷಿ ಬದುಕಿನವರಿಗೆ ಸ್ವಲ್ಪ ಮಟ್ಟಿನ ಬಿಡುವು. ದೂರ ಪ್ರಯಾಣ ಸಾಧ್ಯತೆ.
ವೃಶ್ಚಿಕ
ನಿಮ್ಮ ಎಲ್ಲ ಕೆಲಸ ಕಾರ್ಯಗಳು ಸುಗಮವಾಗಿ ಕೈಗೂಡಲಿದೆ. ವಿದ್ಯಾರ್ಥಿಗಳ ಉನ್ನತ ವ್ಯಾಸಂಗದ ದಾರಿ ಸುಗಮ. ವಿವಾಹಾಕಾಂಕ್ಷಿಗಳಿಗೆ ಕಂಕಣ ಭಾಗ್ಯ. ರಾಜಕೀಯ ರಂಗದವರಿಗೆ ಉತ್ತಮ ಫಲ.
ಧನು
ಸಂದುನೋವು, ಬೆನ್ನು ನೋವಿನಿಂದ ಬಳಲುವ ಸಾಧ್ಯತೆ. ಹಿರಿಯರ ಮಾತುಗಳಿಗೆ ಮನ್ನಣೆ ನೀಡಿ ಬರಲಿರುವ ಅವಘಡವನ್ನು ತಪ್ಪಿಸಿಕೊಳ್ಳಿ. ವಿವಾಹಾಕಾಂಕ್ಷಿಗಳಿಗೆ ಹಿನ್ನಡೆ.
ಮಕರ
ಭೂ ವ್ಯವಹಾರದಲ್ಲಿ ಅಧಿಕ ಲಾಭ. ರಾಜಕೀಯ ರಂಗದಲ್ಲಿರುವವರಿಗೆ ಉನ್ನತ ಹುದ್ದೆ ಪ್ರಾಪ್ತಿ. ನೀಡಿದ ಸಾಲಗಳು ಮರುಪಾವತಿಯಾಗುವವು. ವಿದ್ಯಾರ್ಥಿಗಳು ಯಶಸ್ಸಿನ ಉತ್ತುಂಗವನ್ನು ಕಂಡುಕೊಳ್ಳುವ ಅವಕಾಶ.
ಕುಂಭ
ದಿನದ ಮಟ್ಟಿಗೆ ಎಲ್ಲ ವಿಧಗಳಲ್ಲೂ ಕಷ್ಟನಷ್ಟ ಅನುಭವಿಸುವ ಸಾಧ್ಯತೆ. ಅಪಾಯಕಾರಿ ಕೆಲಸ ಮತ್ತು ವಾಹನಗಳಿಂದ ದೂರವಿರುವುದು ಶ್ರೇಯಸ್ಕರ. ಗುರು ಗಣಪತಿಯ ಆರಾಧನೆಯಿಂದ ಉತ್ತಮ ಫಲ.
ಮೀನ
ಸ್ವಯಂ ಉದ್ಯೋಗಿಗಳಿಗೆ ಉತ್ತಮ ಆದಾಯ. ಕೊಡುಕೊಳ್ಳುವಿಕೆಯಲ್ಲಿ ಎಚ್ಚರಿಕೆ ಅಗತ್ಯ. ಮೋಸಹೋಗುವ ಸಾಧ್ಯತೆ. ಸ್ನೇಹಿತ ವರ್ಗದವರಿಂದ ಸಂತಸದ ಸುದ್ದಿ. ಉದ್ಯೋಗದಲ್ಲಿ ಬದಲಾವಣೆಗಳು ಸಂಭವಿಸಬಹುದು.