ಪ್ರಧಾನಿ ಮೋದಿ ಆಡಳಿತದ ಸಾರ್ಥಕ 7 ವರ್ಷಗಳ ಪ್ರಯುಕ್ತ ಜಿಲ್ಲೆಯಾದ್ಯಂತ ಸೇವಾ ಕಾರ್ಯಗಳ ಮಹಾಪೂರ: ಕುಯಿಲಾಡಿ ಸುರೇಶ್ ನಾಯಕ್

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಸಾರ್ಥಕ ಆಡಳಿತದ ಏಳನೇ ವರ್ಷ ಪೂರೈಸಿರುವ ಸುಸಂದರ್ಭದಲ್ಲಿ ರಾಜ್ಯ ಬಿಜೆಪಿಯ ಸೂಚನೆಯಂತೆ ಉಡುಪಿ ಜಿಲ್ಲೆಯಾದ್ಯಂತ ಮೇ 30ರಂದು ಸೇವಾ ಹೀ ಸಂಘಟನ್ ತತ್ವದಡಿ ಜಿಲ್ಲೆಯ ಎಲ್ಲಾ ಬೂತ್ ಗಳಲ್ಲಿ ಹಾಗೂ ವಿವಿಧ ಸ್ಥಳಗಳಲ್ಲಿ ಪಕ್ಷದ ವಿವಿಧ ಸ್ತರದ ಪದಾಧಿಕಾರಿಗಳು, ಮೋರ್ಚಾಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರ ನೇತೃತ್ವದಲ್ಲಿ ಒಟ್ಟು 1,297 ಸೇವಾ ಕಾರ್ಯಗಳು ಯಶಸ್ವಿಯಾಗಿ ನಡೆದಿವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ. ಈ ಸಂದರ್ಭದಲ್ಲಿ ವಿವಿಧContinue reading “ಪ್ರಧಾನಿ ಮೋದಿ ಆಡಳಿತದ ಸಾರ್ಥಕ 7 ವರ್ಷಗಳ ಪ್ರಯುಕ್ತ ಜಿಲ್ಲೆಯಾದ್ಯಂತ ಸೇವಾ ಕಾರ್ಯಗಳ ಮಹಾಪೂರ: ಕುಯಿಲಾಡಿ ಸುರೇಶ್ ನಾಯಕ್”

ಅನಾಥ ಮಕ್ಕಳ ನೆರವಿಗೆ ನಿಂತ ಮೋದಿ ಸರ್ಕಾರ, ‘ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್’ ಯೋಜನೆ ಜಾರಿ

ನವದೆಹಲಿ: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೋವಿಡ್ ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ನೆರವಾಗಲು ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ವಿಶೇಷ ಯೋಜನೆ ಘೋಷಿಸಿದೆ. ಅನಾಥರಾದ ಮಕ್ಕಳಿಗೆ 18 ವರ್ಷ ತುಂಬಿದ ಕೂಡಲೇ 10 ಲಕ್ಷ ರೂಪಾಯಿ ಮೀಸಲು ನಿಧಿಯಿಂದ ಮಾಸಿಕ ಸ್ಟೈಫಂಡ್ ನೀಡಲಾಗುತ್ತದೆ. ಮಕ್ಕಳು 23 ವರ್ಷಕ್ಕೆ ಕಾಲಿಟ್ಟಾಗ ಉನ್ನತ ಶಿಕ್ಷಣ ಮತ್ತಿತರ ಖರ್ಚಿಗೆ 10 ಲಕ್ಷ ರೂಪಾಯಿ ನಗದು ನೆರವು ನೀಡಲಾಗುವುದು. 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕೇಂದ್ರೀಯ ವಿದ್ಯಾಲಯ, ಖಾಸಗಿ ಶಾಲೆಗಳಲ್ಲಿContinue reading “ಅನಾಥ ಮಕ್ಕಳ ನೆರವಿಗೆ ನಿಂತ ಮೋದಿ ಸರ್ಕಾರ, ‘ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್’ ಯೋಜನೆ ಜಾರಿ”

ಕೊರೋನಾದಿಂದ ಮೃತಪಟ್ಟ ಕಾರ್ಮಿಕರ ಕುಟುಂಬಕ್ಕೆ ಪಿಂಚಣಿ ಸೌಲಭ್ಯ

ನವದೆಹಲಿ: ಕಾರ್ಮಿಕರ ರಾಜ್ಯ ವಿಮಾ ನಿಗಮ ಪಿಂಚಣಿ ಯೋಜನೆಯ ಪ್ರಯೋಜನವನ್ನು ಕೊರೊನಾದಿಂದ ಮೃತಪಟ್ಟವರ ಕುಟುಂಬಕ್ಕೆ ವಿಸ್ತರಿಸಲಾಗುವುದು. ದುಡಿಯುವ ಸದಸ್ಯರನ್ನು ಕಳೆದುಕೊಂಡ ಕುಟುಂಬಗಳ ಆರ್ಥಿಕ ಸಂಕಷ್ಟ ಕಡಿಮೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಕೊರೋನಾದಿಂದ ಮೃತಪಟ್ಟವರ ಕುಟುಂಬಕ್ಕೆ ಮೃತ ಕಾರ್ಮಿಕನ ಒಂದು ದಿನದ ಸರಾಸರಿ ವೇತನದ ಶೇಕಡ 90 ರಷ್ಟು ಪಿಂಚಣಿ ರೂಪದಲ್ಲಿ ನೀಡಲಾಗುವುದು. ಕಳೆದ ವರ್ಷ ಮಾರ್ಚ್ 24 ರಿಂದ ಅನ್ವಯವಾಗುವಂತೆ ನಿಯಮ ಜಾರಿಗೆ ಬರಲಿದ್ದು, 2022 ರ ಮಾರ್ಚ್ 24 ರContinue reading “ಕೊರೋನಾದಿಂದ ಮೃತಪಟ್ಟ ಕಾರ್ಮಿಕರ ಕುಟುಂಬಕ್ಕೆ ಪಿಂಚಣಿ ಸೌಲಭ್ಯ”

ಕೋವಿಡ್ ಸಂಕಷ್ಟದ ಹಿನ್ನೆಲೆ ಮೇ ತಿಂಗಳ ಮೋಟಾರು ವಾಹನ ತೆರಿಗೆಗೆ ರಾಜ್ಯದಲ್ಲಿ ವಿನಾಯಿತಿ ಘೋಷಣೆ

ಬೆಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಿರುವ ಕಾರಣ ಮೇ ತಿಂಗಳ ಮೋಟಾರು ವಾಹನ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಿ ಕರ್ನಾಟಕ ರಾಜ್ಯ ಸರ್ಕಾರ ಆದೇಶಿಸಿದೆ. ನೋಂದಾಯಿತ ಸಾರಿಗೆ ಪ್ರಯಾಣಿಕ ವಾಹನಗಳಿಗೆ ಈ ಆದೇಶ ಅನ್ವಯವಾಗಲಿದ್ದು, ಹೊಸ ವಾಹನಗಳ ನೋಂದಣಿಯನ್ನು ಹೊರತುಪಡಿಸಿ ಆದೇಶ ಹೊರಡಿಸಲಾಗಿದೆ. ರಾಜ್ಯದಲ್ಲಿ ನೋಂದಾಯಿಸಿರುವ ಎಲ್ಲಾ ಸಾರಿಗೆ ಪ್ರಯಾಣಿಕ ವಾಹನಗಳಿಗೆ ಮಾತ್ರ ಅನ್ವಯಿಸುವಂತೆ ಮೇ 2021ರ ಒಂದು ತಿಂಗಳ ಅವಧಿಗೆ ಮೋಟಾರು ವಾಹನ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಿ ರಾಜ್ಯ ಸರ್ಕಾರ ಆದೇಶContinue reading “ಕೋವಿಡ್ ಸಂಕಷ್ಟದ ಹಿನ್ನೆಲೆ ಮೇ ತಿಂಗಳ ಮೋಟಾರು ವಾಹನ ತೆರಿಗೆಗೆ ರಾಜ್ಯದಲ್ಲಿ ವಿನಾಯಿತಿ ಘೋಷಣೆ”

ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ವತಿಯಿಂದ ಉಡುಪಿ ಜಿಲ್ಲೆಗೆ ಉಚಿತ ಆಂಬುಲೆನ್ಸ್ ಸೇವೆ.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ರವರು ಉಡುಪಿ ಜಿಲ್ಲಾ ಬಿಜೆಪಿಯ ಜಿಲ್ಲಾ ಕೋವಿಡ್ ಸಹಾಯವಾಣಿಗೆ ಕೊಡಮಾಡಿದ ಅಂಬ್ಯುಲೆನ್ಸ್ ನ್ನು ಜಿಲ್ಲಾ ಬಿಜೆಪಿ ವತಿಯಿಂದ ಉಡುಪಿ ಜಿಲ್ಲಾಸ್ಪತ್ರೆಗೆ ಕೋವಿಡ್ ಸಂಬಂಧಿತ ತುರ್ತು ಉಪಯೋಗಕ್ಕಾಗಿ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ರವರಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ರವರು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮನೋಹರ್ ಎಸ್. ಕಲ್ಮಾಡಿ, ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ ಕಟಪಾಡಿ, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್ ಆತ್ರಾಡಿ,Continue reading “ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ವತಿಯಿಂದ ಉಡುಪಿ ಜಿಲ್ಲೆಗೆ ಉಚಿತ ಆಂಬುಲೆನ್ಸ್ ಸೇವೆ.”

ದೇಶದಲ್ಲಿ ಕಾಣಿಸಿಕೊಂಡಿದೆ ‘ಯೆಲ್ಲೋ ಫಂಗಸ್’ ನ ಮೊದಲ ಪ್ರಕರಣ

ದೇಶದಲ್ಲಿ ಒಂದು ಕಡೆ ಕೊರೊನಾ ಕಾಟವಾದ್ರೆ ಮತ್ತೊಂದು ಕಡೆ ಬ್ಲಾಕ್ ಫಂಗಸ್, ವೈಟ್ ಫಂಗಸ್ ಜೊತೆ ಈಗ ಯಲ್ಲೋ ಫಂಗಸ್ ಸಮಸ್ಯೆ ಶುರುವಾಗಿದೆ. ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಹಳದಿ ಶಿಲೀಂಧ್ರ ಕಾಣಿಸಿಕೊಂಡಿದೆ. ಇದಕ್ಕೆ ತುತ್ತಾದ ವ್ಯಕ್ತಿಯೊಬ್ಬನಿಗೆ ಗಾಜಿಯಾಬಾದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಆಲಸ್ಯ, ಹಸಿವಿನ ಕೊರತೆ ಅಥವಾ ಹಸಿವಾಗದಿರುವುದು ಹಳದಿ ಶಿಲೀಂಧ್ರ ರೋಗಿಗಳಲ್ಲಿ ಕಾಣಿಸಿಕೊಳ್ಳುವ ಆರಂಭಿಕ ಲಕ್ಷಣಗಳಾಗಿವೆ. ಈ ರೋಗಿಯ ತೂಕವೂ ಕಡಿಮೆಯಾಗಲು ಪ್ರಾರಂಭಿಸುತ್ತದೆ. ರೋಗ ಹೆಚ್ಚಾಗ್ತಿದ್ದಂತೆ ಕೀವು, ನಿಧಾನವಾಗಿ ಗುಣವಾಗುವ ಗಾಯ, ಅಪೌಷ್ಟಿಕತೆ ಕಾಡುತ್ತದೆ. ಅಂಗಗಳContinue reading “ದೇಶದಲ್ಲಿ ಕಾಣಿಸಿಕೊಂಡಿದೆ ‘ಯೆಲ್ಲೋ ಫಂಗಸ್’ ನ ಮೊದಲ ಪ್ರಕರಣ”

ಜನ ಸೇವೆಯ ಜೊತೆಗೆ ಸ್ವಯಂ ಕಾಳಜಿ ಅಗತ್ಯ: ಡಾ! ನಿ.ಬೀ. ವಿಜಯ ಬಲ್ಲಾಳ್

ಕೋವಿಡ್ ವಾರಿಯರ್ಸ್ ಹಾಗೂ ಕೋವಿಡ್-19 ಹೆಲ್ಪ್ ಡೆಸ್ಕ್ ಸೇವಾ ನಿರತ ಕಾರ್ಯಕರ್ತರು ಜನ ಸೇವೆಯ ಜೊತೆಗೆ ಸ್ವಯಂ ಅರೋಗ್ಯ ಪಾಲನೆಯ ಕಾಳಜಿಯನ್ನೂ ವಹಿಸುವುದು ಅತೀ ಅಗತ್ಯ ಎಂದು ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿ ಡಾ! ನಿ.ಬೀ. ವಿಜಯ ಬಲ್ಲಾಳ್ ಹೇಳಿದರು. ಅವರು ಅಂಬಲಪಾಡಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ! ನಿ.ಬೀ. ವಿಜಯ ಬಲ್ಲಾಳ್ ನೇತೃತ್ವದಲ್ಲಿ ಉಡುಪಿ ನಗರ ಆರಕ್ಷಕ ಠಾಣೆಯ ಮಾರ್ಗದರ್ಶನದಲ್ಲಿ ಯುವಕ ಮಂಡಲ (ರಿ.) ಅಂಬಲಪಾಡಿ ಮತ್ತು ಸ್ಥಳೀಯ ವಿವಿಧ ಸಂಘ ಸಂಸ್ಥೆಗಳContinue reading “ಜನ ಸೇವೆಯ ಜೊತೆಗೆ ಸ್ವಯಂ ಕಾಳಜಿ ಅಗತ್ಯ: ಡಾ! ನಿ.ಬೀ. ವಿಜಯ ಬಲ್ಲಾಳ್”

ದೇಶವಿರೋಧಿ ಕಾಂಗ್ರೆಸ್ ಟೂಲ್ ಕಿಟ್ : ಕುಯಿಲಾಡಿ ಸುರೇಶ್ ನಾಯಕ್ ಖಂಡನೆ

ದೇಶ ವಿರೋಧಿ ಕಾಂಗ್ರೆಸ್ ಟೂಲ್ ಕಿಟ್ ಕುಕೃತ್ಯ ಬಹಿರಂಗಗೊಳ್ಳುವ ಮೂಲಕ ಕಾಂಗ್ರೆಸ್ ಪಕ್ಷದ ಮುಖವಾಡ ಕಳಚಿ ಬಿದ್ದಿದೆ. ಇಡೀ ದೇಶವು ಕೋವಿಡ್ ವಿರುದ್ಧ ಒಗ್ಗಟ್ಟಿನಿಂದ ಹೋರಾಡುತ್ತಿರುವ ಈ ಸಂಕಷ್ಟದ ಸಂದರ್ಭದಲ್ಲಿ ಕಾಂಗ್ರೆಸ್ ಪರಿಸ್ಥಿತಿಯ ದುರ್ಲಾಭ ಪಡೆದು ದೇಶದ ವಿರುದ್ಧ ಅವಮಾನಕರ ಸನ್ನಿವೇಶವನ್ನು ಸೃಷ್ಟಿಸಿರುವುದು ಖಂಡನೀಯ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ. ದೇಶದಲ್ಲಿನ ಸಾವು ನೋವುಗಳ ವೈಭವೀಕರಣದ ಜೊತೆಗೆ ಉತ್ತರಾಖಂಡದ ಕುಂಭ ಮೇಳದ ಕುರಿತು ಸೂಪರ್ ಸ್ಪ್ರೆಡರ್ ಎಂದು ಬಿಂಬಿಸಿರುವುದು, ಆಸ್ಪತ್ರೆಗಳಲ್ಲಿಹಾಸಿಗೆಗಳ ಕೃತಕ ಕೊರತೆContinue reading “ದೇಶವಿರೋಧಿ ಕಾಂಗ್ರೆಸ್ ಟೂಲ್ ಕಿಟ್ : ಕುಯಿಲಾಡಿ ಸುರೇಶ್ ನಾಯಕ್ ಖಂಡನೆ”

ಕೋವಿಡ್ ಸಂಕಷ್ಟಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರದ ಸ್ಪಂದನೆ ಅಭಿನಂದನೀಯ : ಕುಯಿಲಾಡಿ ಸುರೇಶ್ ನಾಯಕ್

ಉಡುಪಿ : ರಾಜ್ಯದಾದ್ಯಂತ ಕೋವಿಡ್-19 2ನೇ ಅಲೆಯ ಸಂಕಷ್ಟಕ್ಕೆ ಒಳಗಾಗಿರುವ ಕೃಷಿಕರು, ಕಟ್ಟಡ ಕಾರ್ಮಿಕರು, ಆಟೋ ಟ್ಯಾಕ್ಸಿ ಚಾಲಕರು ಹಾಗೂ ಹಲವು ವೃತ್ತಿ ನಿರತ ಸಮುದಾಯಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರದಿಂದ ರೂ.1,250 ಕೋಟಿಗೂ ಹೆಚ್ಚಿನ ಮೌಲ್ಯದ ಆರ್ಥಿಕ ಪರಿಹಾರ ಘೋಷಣೆಯನ್ನು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಸ್ವಾಗತಿಸಿದ್ದಾರೆ. ಕೋವಿಡ್ ಸಂಕಷ್ಟದ ನಡುವೆ ರಾಜ್ಯ ಸರಕಾರದ ಈ ಆರ್ಥಿಕ ನೆರವಿನ ಪ್ಯಾಕೇಜ್‍ನಿಂದ ರೈತರು ಮತ್ತು ಅಸಂಘಟಿತ ವಲಯಗಳ ಶ್ರಮಿಕರಿಗೆ ಪ್ರಯೋಜನವಾಗಲಿದೆ. ಇದರ ಜೊತೆಗೆContinue reading “ಕೋವಿಡ್ ಸಂಕಷ್ಟಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರದ ಸ್ಪಂದನೆ ಅಭಿನಂದನೀಯ : ಕುಯಿಲಾಡಿ ಸುರೇಶ್ ನಾಯಕ್”

ಮೇ 20, ಗುರುವಾರ,2021 : ಇಂದಿನ ನಿತ್ಯಪಂಚಾಂಗ ಹಾಗೂ ರಾಶಿಭವಿಷ್ಯ

ಪ್ಲವ ಸಂ|ರದ ವೃಷಭ ಮಾಸ‌ ದಿನ 6 ಸಲುವ ವೈಶಾಖ ಶುದ್ಧ ಅಷ್ಟಮಿ 15|| ಗಳಿಗೆ ದಿನ ವಿಶೇಷ :ನಿತ್ಯ ನಕ್ಷತ್ರ :ಮಖಾ 24|| ಗಳಿಗೆ ಮಹಾ ನಕ್ಷತ್ರ :ಕೃತ್ತಿಕಾ ಋತು :ವಸಂತ ರಾಹುಕಾಲ :1.30-3.00 ಗಂಟೆ ಗುಳಿಕ ಕಾಲ :9.00-10.30 ಗಂಟೆ ಸೂರ್ಯಾಸ್ತ :6.48 ಗಂಟೆ ಸೂರ್ಯೋದಯ :6.06 ಗಂಟೆ ಮೇಷ ಅಪರಿಚಿತ ವ್ಯಕ್ತಿಗಳಿಂದ ಮೋಸ ಹೋಗುವ ಸಾಧ್ಯತೆ. ಹಣಕಾಸಿನ ವಿಷಯದಲ್ಲಿ ಅತ್ಯಂತ ಜಾಗರೂಕರಾಗಿರಿ. ಮನೆಯವರ ಸಲಹೆಗೆ ಮನ್ನಣೆ ನೀಡಿ. ಕುಲದೇವತಾ ಪ್ರಾರ್ಥನೆ ಒಳಿತನ್ನುಂಟು ಮಾಡುವುದು.Continue reading “ಮೇ 20, ಗುರುವಾರ,2021 : ಇಂದಿನ ನಿತ್ಯಪಂಚಾಂಗ ಹಾಗೂ ರಾಶಿಭವಿಷ್ಯ”

Design a site like this with WordPress.com
Get started