ಮೇ 13, ಗುರುವಾರ, 2021 : ಇಂದಿನ ನಿತ್ಯಪಂಚಾಂಗ ಹಾಗೂ ರಾಶಿ ಭವಿಷ್ಯ

ಪಂಚಾಂಗ:ಪ್ಲವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು,ವೈಶಾಖ ಮಾಸ, ಶುಕ್ಲ ಪಕ್ಷ, ದ್ವಿತೀಯ,ಗುರುವಾರ, ರೋಹಿಣಿ ನಕ್ಷತ್ರರಾಹುಕಾಲ 1.55 ರಿಂದ 3:30ಗುಳಿಕಕಾಲ 9: 10 ರಿಂದ 10:45ಯಮಗಂಡಕಾಲ 06:00ರಿಂದ 7.35 ಮೇಷ ಕುಲಕಸುಬುದಾರರಿಗೆ ಉತ್ತಮ ವ್ಯವಹಾರದಿಂದಾಗಿ ಲಾಭ. ಪಾರಂಪರಿಕವಾಗಿ ನಡೆದು ಬಂದ ವ್ಯವಹಾರವನ್ನು ಕೈ ಬಿಡುವುದು ಬೇಡ. ಚಲನಚಿತ್ರರಂಗದವರಿಗೆ ಉತ್ತಮ ಅವಕಾಶ. ವೃಷಭ ಕೈಗಾರಿಕೋದ್ಯಮಿಗಳಿಗೆ ಪ್ರಗತಿ ಸಾಧ್ಯತೆ. ಹೊಸ ಉದ್ಯಮದಲ್ಲಿ ಯಶಸ್ಸು. ಮನೆಯಲ್ಲಿ ಬಹಳ ದಿನಗಳ ನಂತರ ನಗುವನ್ನು ಕಾಣಲಿದ್ದೀರಿ. ಬಂಧುಗಳ ಆಗಮನದ ಜೊತೆಗೆ ವ್ಯವಹಾರ ಸಂಬಂಧಗಳ ಬಗ್ಗೆ ಚರ್ಚೆ. ಮಿಥುನ ಶೀಘ್ರದಲ್ಲಿContinue reading “ಮೇ 13, ಗುರುವಾರ, 2021 : ಇಂದಿನ ನಿತ್ಯಪಂಚಾಂಗ ಹಾಗೂ ರಾಶಿ ಭವಿಷ್ಯ”

ಅಂಬಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಡಿಲು ಭೂಮಿ ಉಳುಮೆಗೆ ಶಾಸಕ ರಘುಪತಿ ಭಟ್ ಚಾಲನೆ – ತೋಡುಗಳ ಹೂಳೆತ್ತುವಿಕೆ ವೀಕ್ಷಣೆ.

ಉಡುಪಿ ವಿಧಾನಸಭಾ ಕ್ಷೇತ್ರದಾದ್ಯಂತ ಹಮ್ಮಿಕೊಂಡಿರುವ “ಹಡಿಲು ಭೂಮಿ ಕೃಷಿ ಆಂದೋಲನ” ಸಂಬಂಧ ಅಂಬಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಬಲಪಾಡಿ ವಾರ್ಡಿನಲ್ಲಿ ಗ್ರಾಮಸ್ಥರು, ಭೂ ಮಾಲಕರು ಮತ್ತು ಸ್ಥಳೀಯ ಪ್ರಮುಖರೊಂದಿಗೆ ಶಾಸಕ ಕೆ.ರಘುಪತಿ ಭಟ್ ಭೂಮಿ ಪೂಜೆ ನೆರವೇರಿಸಿ ಹಡಿಲು ಕೃಷಿ ಭೂಮಿಯ ಉಳುಮೆಗೆ ಚಾಲನೆ ನೀಡಿದರು. ಬಳಿಕ ಹಡಿಲು ಭೂಮಿಯ ಸುತ್ತಮುತ್ತಲಿನ ತೋಡುಗಳ ಹೂಳೆತ್ತುವ ಕಾಮಗಾರಿಯನ್ನು ವೀಕ್ಷಿಸಿ ಗದ್ದೆಗಳ ನೀರು ಸಮರ್ಪಕವಾಗಿ ಹರಿದು ಹೋಗುವಂತೆ ತೋಡುಗಳನ್ನು ಪುನಶ್ಚೇತನಗೊಳಿಸಲು ಸೂಚಿಸಿದರು. ಈ ಸಂದರ್ಭದಲ್ಲಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷContinue reading “ಅಂಬಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಡಿಲು ಭೂಮಿ ಉಳುಮೆಗೆ ಶಾಸಕ ರಘುಪತಿ ಭಟ್ ಚಾಲನೆ – ತೋಡುಗಳ ಹೂಳೆತ್ತುವಿಕೆ ವೀಕ್ಷಣೆ.”

ಮೇ 12, ಬುಧವಾರ, 2021: ಇಂದಿನ ನಿತ್ಯಪಂಚಾಂಗ ಹಾಗೂ ರಾಶಿ ಭವಿಷ್ಯ

ಪಂಚಾಂಗ:ಪ್ಲವ ನಾಮ ಸಂವತ್ಸರ, ಉತ್ತರಾಯಣ,ವಸಂತ ಋತು, ಚೈತ್ರ-ಮಾಸ, ಶುಕ್ಲ ಪಕ್ಷ,ಬುಧವಾರ, ಪಾಡ್ಯ ತಿಥಿ , ಕೃತಿಕಾ ನಕ್ಷತ್ರರಾಹುಕಾಲ:12.19 ರಿಂದ 1.54ಗುಳಿಕಕಾಲ :10.44 ರಿಂದ 12.19ಯಮಗಂಡಕಾಲ:7.34 ರಿಂದ 9.09 ಮೇಷ ಈ ದಿನದ ಪ್ರಗತಿ ಅಷ್ಟೊಂದು ಉತ್ತಮವಲ್ಲದಿದ್ದರೂ ಕುಲದೇವತಾ ಆರಾಧನೆಯಿಂದ ವಿಘ್ನಗಳು ದೂರವಾಗಲಿವೆ. ಪತ್ನಿ ಬಂಧುವರ್ಗದವರಿಂದ ಬಂದ ಸಲಹೆಗಳನ್ನು ನಿರಾಕರಿಸದಿರಿ. ಆರೋಗ್ಯ ಭಾಗ್ಯಕ್ಕೆ ಚ್ಯುತಿಯಿಲ್ಲ. ವೃಷಭ ಗುರುಹಿರಿಯರಿಂದ ಪ್ರಶಂಸೆ ಗಳಿಸುವಿರಿ. ವ್ಯವಹಾರದಲ್ಲಿ ಉತ್ತಮ ಪ್ರಗತಿ. ಆಕಸ್ಮಿಕ ಧನಲಾಭ. ಪ್ರೀತಿ ಪಾತ್ರದವರಿಂದ ಸ್ವಲ್ಪಮಟ್ಟಿನ ಕಿರಿಕಿರಿ ಅನುಭವಿಸುವಿರಿ. ಶಿವನ ಅನುಗ್ರಹದಿಂದ ಅನುಕೂಲ. ಮಿಥುನ ವಾಹನ ಖರೀದಿContinue reading “ಮೇ 12, ಬುಧವಾರ, 2021: ಇಂದಿನ ನಿತ್ಯಪಂಚಾಂಗ ಹಾಗೂ ರಾಶಿ ಭವಿಷ್ಯ”

ಮೇ 11, ಮಂಗಳವಾರ,2021 : ಇಂದಿನ ನಿತ್ಯಪಂಚಾಂಗ ಹಾಗೂ ರಾಶಿ ಭವಿಷ್ಯ

ಪಂಚಾಂಗ:ಪ್ಲವ ನಾಮ ಸಂವತ್ಸರ,ಉತ್ತರಾಯಣ, ವಸಂತ ಋತು,ಚೈತ್ರ-ಮಾಸ, ಕೃಷ್ಣ ಪಕ್ಷ.ವಾರ: ಮಂಗಳವಾರ, ತಿಥಿ: ಅಮಾವಾಸ್ಯೆನಕ್ಷತ್ರ: ಭರಣಿ, ಯೋಗ: ಸೌಭಾಗ್ಯಕರಣ: ಚತುಷ್ಪದರಾಹುಕಾಲ:3.29 ರಿಂದ 5.04ಗುಳಿಕಕಾಲ :12.19 ರಿಂದ 1.54ಯಮಗಂಡಕಾಲ :9.09 ರಿಂದ 10.44 ಮೇಷ ಮನೆಯಲ್ಲಿನ ರಂಪಾಟಗಳು ಜಾಸ್ತಿಯಾಗುವ ಸಾಧ್ಯತೆ. ಅನಿರೀಕ್ಷಿತ ಬೆಳವಣಿಗೆಯಿಂದ ಮಾನಸಿಕ ನೆಮ್ಮದಿ. ಸರ್ಕಾರಿ ನೌಕರರಿಗೆ ಪ್ರಶಂಸೆಯ ದಿನ. ಚಿಲ್ಲರೆ ವ್ಯಾಪಾರಿಗಳಿಗೆ ಲಾಭದ ದಿನ. ವೃಷಭ ಯಂತ್ರಾಗಾರಗಳಲ್ಲಿ ಅಗ್ನಿಯಿಂದ ಎಚ್ಚರ ಅಗತ್ಯ. ಅನಿರೀಕ್ಷಿತವಾದ ತಲೆನೋವಿಗೆ ಧೃತಿಗೆಡಬೇಕಾಗಿಲ್ಲ. ವೈದ್ಯರಿಗೆ ಕಾಲುನೋವಿನ ಸಾಧ್ಯತೆ. ಮಹಿಳಾ ಉದ್ಯಮಿಗಳಿಗೆ ಸಂತೃಪ್ತಿ. ಮಿಥುನ ಅದೃಷ್ಟದ ದಿನಕ್ಕಾಗಿ ಕಾಯುತ್ತಿರುವ ನಿಮಗೆContinue reading “ಮೇ 11, ಮಂಗಳವಾರ,2021 : ಇಂದಿನ ನಿತ್ಯಪಂಚಾಂಗ ಹಾಗೂ ರಾಶಿ ಭವಿಷ್ಯ”

ಮೇ 10, ಸೋಮವಾರ ,2021 : ಇಂದಿನ ನಿತ್ಯಪಂಚಾಂಗ ಹಾಗೂ ರಾಶಿ ಭವಿಷ್ಯ

ಪ್ಲವ ಸಂ|ರದ ಮೇಷ ಮಾಸ‌ ದಿನ 27 ಸಲುವ ಚೈತ್ರ ಬಹುಳ ಚತುರ್ದಶಿ 39|| ಗಳಿಗೆ ದಿನ ವಿಶೇಷ :ನಿತ್ಯ ನಕ್ಷತ್ರ :ಅಶ್ವಿ‌ನಿ 35||| ಗಳಿಗೆ ಮಹಾ ನಕ್ಷತ್ರ :ಭರಣಿ ಋತು :ವಸಂತ ರಾಹುಕಾಲ :7.30-9.00 ಗಂಟೆ ಗುಳಿಕ ಕಾಲ :1.30-3.00 ಗಂಟೆ ಸೂರ್ಯಾಸ್ತ :6.46 ಗಂಟೆ ಸೂರ್ಯೋದಯ :6.08 ಗಂಟೆ ಮೇಷ ಅಪೇಕ್ಷಿತ ಗುರಿಯನ್ನು ಯಶಸ್ವಿಯಾಗಿ ತಲುಪಬಹುದು. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚಿಂತೆ ನಡೆಸಲಿದ್ದೀರಿ. ನೇರ ಹಾಗೂ ದಿಟ್ಟ ನಡವಳಿಕೆ ಅವಶ್ಯ. ಹೊಸ ಹೊಸ ಮಾರ್ಗಗಳContinue reading “ಮೇ 10, ಸೋಮವಾರ ,2021 : ಇಂದಿನ ನಿತ್ಯಪಂಚಾಂಗ ಹಾಗೂ ರಾಶಿ ಭವಿಷ್ಯ”

ಲೋಕ ಕ್ಷೇಮಕ್ಕಾಗಿ ಉಡುಪಿ ಮುಚ್ಲುಕೋಡು ಶ್ರೀ ಸುಬ್ರಹ್ಮಣ್ಯ ದೇವರಿಗೆ 1008 ಸೀಯಾಳ (ಎಳನೀರು) ಅಭಿಷೇಕ ಸೇವೆ

ಉಡುಪಿ ಕ್ಷೇತ್ರದ ಸದ್ಭಕ್ತರೆಲ್ಲಾ ಸೇರಿ ಕೊರೋನಾ ಮುಕ್ತ ಭಾರತ, ಸುಖೀ ಸಮೃದ್ಧ ಸುಭಿಕ್ಷ ಶಾಂತಿಪೂರ್ಣ ನೆಮ್ಮದಿಯ ಭಾರತ ಮತ್ತು ಲೋಕ ಕ್ಷೇಮಕ್ಕಾಗಿ ಹಾಗೂ ಪ್ರಧಾನಿ ಶ್ರೀ ನರೇಂದ್ರ ಮೋದಿಜಿ ಯವರಿಗೆ ಕೊರೋನಾ ಸಂಕಷ್ಟದ ಹೋರಾಟದಲ್ಲಿ ಅದ್ಭುತ ಯಶಸ್ಸು ಸಿಗಲೆಂದು ಪ್ರಾರ್ಥಿಸಿ ಉಡುಪಿ ಮುಚ್ಲುಕೋಡು ಶ್ರೀ ಸುಬ್ರಹ್ಮಣ್ಯ ದೇವರಿಗೆ 1008 ಸೀಯಾಳ (ಎಳನೀರು) ಅಭಿಷೇಕ ಸೇವೆಯನ್ನು ಸಲ್ಲಿಸಿದರು. ಪೂಜ್ಯ ಪಲಿಮಾರು ಮಠದ ಶ್ರೀಗಳಾದ ಶ್ರೀ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು, ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥContinue reading “ಲೋಕ ಕ್ಷೇಮಕ್ಕಾಗಿ ಉಡುಪಿ ಮುಚ್ಲುಕೋಡು ಶ್ರೀ ಸುಬ್ರಹ್ಮಣ್ಯ ದೇವರಿಗೆ 1008 ಸೀಯಾಳ (ಎಳನೀರು) ಅಭಿಷೇಕ ಸೇವೆ”

ಕೊರೋನಾ ಸೋಂಕು ಲಕ್ಷಣ ಇದ್ದವರಿಗೆ ಟೆಸ್ಟ್ ವೇಳೆಯೇ ಔಷಧ ನೀಡುವಂತೆ ಆದೇಶ ಜಾರಿಗೊಳಿಸಿದ ಆರೋಗ್ಯ ಇಲಾಖೆ

ಬೆಂಗಳೂರು: ಕೊರೋನಾ ಸೋಂಕು ಲಕ್ಷಣ ಹೊಂದಿದವರಿಗೆ ಮತ್ತು ಪ್ರಾಥಮಿಕ ಸಂಪರ್ಕಿತರಿಗೆ ಆರ್‌ಟಿ-ಪಿಸಿಆರ್‌ ಸೋಂಕು ಪರೀಕ್ಷೆಗೆ ಒಳಪಟ್ಟ ಸಮಯದಿಂದಲೇ ಕೆಲವು ಮಾತ್ರೆಗಳನ್ನು ನೀಡುವಂತೆ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ಕೊರೊನಾ ಸೋಂಕು ಪರೀಕ್ಷೆಗಳ ಪಾಸಿಟಿವಿಟಿ ದರ ಶೇ.30ಕ್ಕೂ ಅಧಿಕವಿದೆ. ಪರೀಕ್ಷೆಗೊಳಪಡುವ ಪ್ರತಿ ಮೂವರಲ್ಲಿ ಒಬ್ಬರಿಗೆ ಸೋಂಕು ದೃಢಪಡುತ್ತಿದೆ. ಹೀಗಾಗಿ, ಕೊರೊನಾ ಸೋಂಕು ನಿಯಂತ್ರಣ ತಜ್ಞರ ಸಮಿತಿ ಶಿಫಾರಸ್ಸಿನ ಮೇರೆಗೆ ಸೋಂಕು ಪರೀಕ್ಷೆಗೆ ಬಂದವರ ಪೈಕಿ ಸೋಂಕು ಲಕ್ಷಣ ಹೊಂದಿದವರಿಗೆ ಮತ್ತು ಸೋಂಕಿತರ ಪ್ರಾಥಮಿಕ ಸಂಪರ್ಕ ಹೊಂದಿದವರಿಗೆ ಸ್ಥಳದಲ್ಲಿಯೇ ಕೆಲ ಮಾತ್ರೆContinue reading “ಕೊರೋನಾ ಸೋಂಕು ಲಕ್ಷಣ ಇದ್ದವರಿಗೆ ಟೆಸ್ಟ್ ವೇಳೆಯೇ ಔಷಧ ನೀಡುವಂತೆ ಆದೇಶ ಜಾರಿಗೊಳಿಸಿದ ಆರೋಗ್ಯ ಇಲಾಖೆ”

ಮೇ 07, ಶುಕ್ರವಾರ,2021 : ಇಂದಿನ ನಿತ್ಯಪಂಚಾಂಗ ಹಾಗೂ ರಾಶಿ ಭವಿಷ್ಯ

ಪಂಚಾಂಗ:ಪ್ಲವ ನಾಮ ಸಂವತ್ಸರ,ಉತ್ತರಾಯಣ, ವಸಂತಋತು,ಚೈತ್ರ-ಮಾಸ, ಕೃಷ್ಣಪಕ್ಷ,ಏಕಾದಶಿ, ಶುಕ್ರವಾರ,ಪೂರ್ವ ಭಾದ್ರಪದ ನಕ್ಷತ್ರ (ಹಗಲು 12:26) ನಂತರ “ಉತ್ತರ ಭಾದ್ರಪದ ನಕ್ಷತ್ರ”.ರಾಹುಕಾಲ 10:45ರಿಂದ 12:19ಗುಳಿಕಕಾಲ 7:30 ರಿಂದ 9 :10ಯಮಗಂಡಕಾಲ 3: 29ರಿಂದ 05:04 ಮೇಷ ವೈವಾಹಿಕ ಜೀವನದಲ್ಲಿ ಭಾಗ್ಯೋದಯವನ್ನು ಕಾಣಲಿದ್ದೀರಿ. ರಾಜಕೀಯದಲ್ಲಿರುವವರಿಗೆ ಬರಸಿಡಿಲಿನ ಸುದ್ದಿಯೊಂದು ಬಂದೆರಗಲಿದೆ. ಬಂಧುಗಳಿಂದ ಸಹಾಯ. ಸ್ಥಿರಾಸ್ತಿ ಖರೀದಿಗೆ ಮನಸ್ಸು ಮಾಡಲಿದ್ದೀರಿ. ವೃಷಭ ಅನಿವಾರ್ಯ ಬದಲಾವಣೆಗಳಿಗೆ ಒಳಗಾಗಿ ಇದ್ದುದನ್ನು ಕಳೆದುಕೊಳ್ಳಬೇಡಿ. ಹಿರಿಯರ ಮಾರ್ಗದರ್ಶನ ಅಲಕ್ಷಿಸದೆ ಇರುವುದು ಒಳ್ಳೆಯದು. ಹೊಸ ಕಾರ್ಯಯೋಜನೆಯಿಂದ ದೂರವಿರಿ. ಮಿಥುನ ನಿಮ್ಮ ಪಾಲಿನContinue reading “ಮೇ 07, ಶುಕ್ರವಾರ,2021 : ಇಂದಿನ ನಿತ್ಯಪಂಚಾಂಗ ಹಾಗೂ ರಾಶಿ ಭವಿಷ್ಯ”

ಪ.ಬಂಗಾಲ ಗೂಂಡಾಗಿರಿ ಮಮತಾ ಬ್ಯಾನರ್ಜಿಯ ತ್ರಣಮೂಲ ಕಾಂಗ್ರೆಸ್ ಅಧಪತನಕ್ಕೆ ಮುನ್ನುಡಿ: ಶೋಭಾ ಕರಂದ್ಲಾಜೆ

ಪಶ್ಚಿಮ ಬಂಗಾಲದಲ್ಲಿ ಚುನಾವಣಾ ಫಲಿತಾಂಶದ ಬಳಿಕ ಸಂಭವಿಸಿರುವ ಮಮತಾ ಬ್ಯಾನರ್ಜಿ ನೇತೃತ್ವದ ತ್ರಣಮೂಲ ಕಾಂಗ್ರೆಸ್ ಗೂಂಡಾಗಿರಿ, ದಾಂಧಲೆ ತ್ರಣಮೂಲ ಕಾಂಗ್ರೆಸ್ ಅಧಪತನಕ್ಕೆ ಮುನ್ನುಡಿ ಬರೆದಿದೆ ಎಂದು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು. ಅವರು ಪ.ಬಂಗಾಲದಲ್ಲಿ ಮಮತಾ ಬ್ಯಾನರ್ಜಿಯ ಟಿ.ಎಂ.ಸಿ. ಕಾರ್ಯಕರ್ತರಿಂದ ಬಿಜೆಪಿ ಕಾರ್ಯಕರ್ತರ ಮೇಲೆ ನಡೆದ ಹಿಂಸಾಚಾರ, ಗೂಂಡಾಗಿರಿ ಪ್ರತಿಭಟಿಸಿ, ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದರು. ಇಪ್ಪತೈದು ವರ್ಷಗಳ ಪರ್ಯಂತ ಒಂದೇ ಮುಖ್ಯಮಂತ್ರಿಯನ್ನು ಮುಂದುವರಿಸಿಕೊಂಡು ಬಂದು ಕಮ್ಯುನಿಷ್ಟ್ ರಾಜ್ಯವೆನಿಸಿಕೊಂಡಿದ್ದರೂContinue reading “ಪ.ಬಂಗಾಲ ಗೂಂಡಾಗಿರಿ ಮಮತಾ ಬ್ಯಾನರ್ಜಿಯ ತ್ರಣಮೂಲ ಕಾಂಗ್ರೆಸ್ ಅಧಪತನಕ್ಕೆ ಮುನ್ನುಡಿ: ಶೋಭಾ ಕರಂದ್ಲಾಜೆ”

ಅಂಬಲಪಾಡಿ: ಹಡಿಲು ಭೂಮಿ ಕೃಷಿಗೆ ಕೆ.ರಾಘವೇಂದ್ರ ಕಿಣಿ ಚಾಲನೆ

ಉಡುಪಿ ಶಾಸಕ ಕೆ.ರಘುಪತಿ ಭಟ್ ನೇತೃತ್ವದಲ್ಲಿ ಕೇದಾರೋತ್ಥಾನ ಟ್ರಸ್ಟ್(ರಿ.) ಉಡುಪಿ ಇದರ ಆಶ್ರಯದಲ್ಲಿ ಸಾವಯುವ ಕೃಷಿ ಉತ್ಪನ್ನ ಬೆಳೆಸುವ ನಿಟ್ಟಿನಲ್ಲಿ ಅಂಬಲಪಾಡಿ ಗ್ರಾಮ ಪಂಚಾಯತ್ ಮತ್ತು ಗ್ರಾಮೋತ್ಥಾನ ಸಮಿತಿ ಅಂಬಲಪಾಡಿ ಇದರ ಸಹಯೋಗದೊಂದಿಗೆ ಅಂಬಲಪಾಡಿ ವಾರ್ಡಿನ ಸುಮಾರು 25 ಎಕ್ರೆ ಹಡಿಲು ಭೂಮಿಯಲ್ಲಿ ಕೃಷಿ ಚಟುವಟಿಕೆಗೆ ಕೇದಾರೋತ್ಥಾನ ಟ್ರಸ್ಟಿನ ಕೋಶಾಧಿಕಾರಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ರಾಘವೇಂದ್ರ ಕಿಣಿ ಅಂಬಲಪಾಡಿ ಬಂಕೇರ್ಕಟ್ಟ ಅಂಗನವಾಡಿ ಕೇಂದ್ರದ ಬಳಿ ಸುರೇಶ್ ಶೆಟ್ಟಿಯವರ ಗದ್ದೆಗೆ ಹಾಲೆರೆಯುವ ಮೂಲಕ ಚಾಲನೆ ನೀಡಿದರು ಅಂಬಲಪಾಡಿContinue reading “ಅಂಬಲಪಾಡಿ: ಹಡಿಲು ಭೂಮಿ ಕೃಷಿಗೆ ಕೆ.ರಾಘವೇಂದ್ರ ಕಿಣಿ ಚಾಲನೆ”

Design a site like this with WordPress.com
Get started