
ಶಾರ್ವರಿ ಸಂ|ರದ ಮೀನ ಮಾಸ ದಿನ 23 ಸಲುವ ಫಾಲ್ಗುಣ ಬಹುಳ ದಶಮಿ 49|| ಗಳಿಗೆದಿನ ವಿಶೇಷ :ನಿತ್ಯ ನಕ್ಷತ್ರ :ಶ್ರವಣ 50|| ಗಳಿಗೆ ಮಹಾ ನಕ್ಷತ್ರ :ರೇವತಿಋತು :ಶಿಶಿರರಾಹುಕಾಲ :3.00-4.30 ಗಂಟೆಗುಳಿಕ ಕಾಲ :12.00-1.30 ಗಂಟೆಸೂರ್ಯಾಸ್ತ :6.41 ಗಂಟೆಸೂರ್ಯೋದಯ :6.25 ಗಂಟೆ
ಮೇಷ
ಆರ್ಥಿಕ ವಿಷಯದಲ್ಲಿ ಸ್ವಲ್ಪಮಟ್ಟಿನ ಸುಧಾರಣೆ. ಶುಭಕಾರ್ಯಗಳಲ್ಲಿ ಯಶಸ್ಸು. ಕೆಲಸ ಕಾರ್ಯಗಳಲ್ಲಿ ಪ್ರಗತಿ. ಆರೋಗ್ಯದಲ್ಲಿಯೂ ಸುಧಾರಣೆ.
ವೃಷಭ
ನೀವು ಕೈಗೊಂಡಿರುವ ಕಾರ್ಯಗಳು ಪೂರ್ಣಗೊಳ್ಳಲಿದೆ. ವ್ಯವಹಾರದಲ್ಲಿ ಸ್ವಲ್ಪ ಮಟ್ಟದ ಚೇತರಿಕೆ. ಸರ್ಕಾರಿ ಕೆಲಸಗಳಲ್ಲಿದ್ದವರಿಗೆ ಹೆಚ್ಚಿನ ತೊಂದರೆ ತಾಪತ್ರಯಗಳು ಕಂಡುಬರುವ ಸಾಧ್ಯತೆ.
ಮಿಥುನ
ಬಂಧು ಮಿತ್ರರ ಸಹಾಯದಿಂದಾಗಿ ಕಾರ್ಯಗಳಲ್ಲಿ ಯಶಸ್ಸು. ಕೌಟುಂಬದಲ್ಲಿ ನೆಮ್ಮದಿ. ಆರೋಗ್ಯದಲ್ಲಿ ಸುಧಾರಣೆ. ಧನ ವ್ಯಯವಾಗುವ ಸಂಭವ.
ಕಟಕ
ಧರ್ಮಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆ. ಸಜ್ಜನರ ಸಹವಾಸದಿಂದಾಗಿ ನೆಮ್ಮದಿ. ವಸ್ತ್ರ ಒಡವೆಗಳನ್ನು ಪಡೆಯಲಿದ್ದೀರಿ. ವ್ಯಾಪಾರಸ್ಥರಿಗೆ ಹೆಚ್ಚಿನ ಲಾಭ. ಕಾರ್ಮಿಕ ವರ್ಗದವರಿಂದ ಅನುಕೂಲ.
ಸಿಂಹ
ಕಾರ್ಯಾನುಕೂಲವು ನಿಧಾನಗತಿಯಲ್ಲಿರುವುದು. ಬಂಧು ಮಿತ್ರರೊಂದಿಗೆ ಹೆಚ್ಚಿನ ಸಂಯಮ ವಹಿಸುವುದು ಉತ್ತಮ. ಸರ್ಕಾರಿ ನೌಕರರಿಗೆ ಅತಿಯಾದ ತೊಂದರೆ ತಾಪತ್ರಯಗಳು ಕಂಡುಬರುತ್ತಿದೆ.
ಕನ್ಯಾ
ನಿವೇಶನ ಅಥವಾ ಗೃಹ ಖರೀದಿ ಸಾಧ್ಯತೆ. ದೂರದ ಪ್ರಯಾಣ ಮಾಡುವ ಸಾಧ್ಯತೆ. ಮಕ್ಕಳ ಕಡೆಯಿಂದ ಸಿಹಿ ಸುದ್ದಿ. ಉನ್ನತ ಹುದ್ದೆಯಲ್ಲಿರುವವರಿಗೆ ಹೆಚ್ಚಿನ ಕೆಲಸದಿಂದ ಆಯಾಸ.
ತುಲಾ
ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚಿನ ಲಾಭ. ಆರೋಗ್ಯದಲ್ಲಿ ಸುಧಾರಣೆ. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ. ಶುಭ ಕಾರ್ಯವೊಂದನ್ನು ನಿಶ್ಚಯಿಸಲಿದ್ದೀರಿ.
ವೃಶ್ಚಿಕ
ಸರ್ಕಾರಿ ನೌಕರಿಯಲ್ಲಿರುವವರಿಗೆ ಬಿಡುವಿಲ್ಲದ ತಿರುಗಾಟ. ವ್ಯಾಪಾರ ವ್ಯವಹಾರಗಳಲ್ಲಿ ಪ್ರಗತಿ. ಆರೋಗ್ಯದಲ್ಲಿ ಸುಧಾರಣೆ ಜೊತೆಗೆ ಕಾಳಜಿಯೂ ಅಗತ್ಯ.
ಧನು
ವ್ಯಾಪಾರ ವ್ಯವಹಾರಗಳಲ್ಲಿ ನಿಧಾನಗತಿಯ ಪ್ರಗತಿ. ತಾಳ್ಮೆ ಮತ್ತು ಸಂಯಮವನ್ನು ರೂಪಿಸಿಕೊಳ್ಳುವುದು ಉತ್ತಮ. ಕುಟುಂಬದಲ್ಲಿ ಅಹಿತಕರ ಘಟನೆಗಳು ಸಂಭವಿಸಬಹುದು.
ಮಕರ
ಆರೋಗ್ಯ ಸಮಸ್ಯೆಗಳು ಪರಿಹಾರ ಕಾಣಲಿವೆ. ಬಂಧುಮಿತ್ರರ ಸಹಕಾರ. ಹಣಕಾಸಿನ ಪರಿಸ್ಥಿತಿಯಲ್ಲಿ ಸುಧಾರಣೆ. ಮಾನಸಿಕ ಕಿರಿಕಿರಿಯುಂಟಾದೀತು.
ಕುಂಭ
ಸಜ್ಜನರ ಸಹಕಾರದಿಂದಾಗಿ ಕಾರ್ಯಗಳಲ್ಲಿ ಯಶಸ್ಸು. ಕುಟುಂಬದಲ್ಲಿ ನೆಮ್ಮದಿಯ ವಾತಾವರಣ. ಖರ್ಚು ವೆಚ್ಚಗಳ ಮೇಲೆ ನಿಗಾ ವಹಿಸುವುದು ಉತ್ತಮ. ಉನ್ನತ ಹುದ್ದೆಯಲ್ಲಿರುವವರಿಗೆ ಅತಿಯಾದ ಕಾರ್ಯಬಾಹುಳ್ಯ.
ಮೀನ
ವ್ಯಾಪಾರ ವ್ಯವಹಾರದಲ್ಲಿ ಅಧಿಕ ಪ್ರಗತಿ. ಕೆಲಸ ಕಾರ್ಯಗಳಲ್ಲಿ ನಿಧಾನಗತಿಯ ಯಶಸ್ಸು. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ. ಮಾನಸಿಕ ಚಿಂತೆ ದಾಯಾದಿ ಕಲಹಗಳು ದೂರವಾಗುವವು.