
ಶಾರ್ವರಿ ಸಂ|ರದ ಮೀನ ಮಾಸ ದಿನ 22 ಸಲುವ ಫಾಲ್ಗುಣ ಬಹುಳ ನವಮಿ 49|| ಗಳಿಗೆದಿನ ವಿಶೇಷ :ರಾಷ್ಟ್ರೀಯ ನಾವಿಕರ ದಿನನಿತ್ಯ ನಕ್ಷತ್ರ :ಉತ್ತರಾಷಾಢಾ 49| ಗಳಿಗೆಮಹಾ ನಕ್ಷತ್ರ :ರೇವತಿಋತು :ಶಿಶಿರರಾಹುಕಾಲ :7.30-9.00 ಗಂಟೆಗುಳಿಕ ಕಾಲ :1.30-3.00 ಗಂಟೆಸೂರ್ಯಾಸ್ತ :6.41 ಗಂಟೆಸೂರ್ಯೋದಯ :6.26 ಗಂಟೆ
ಮೇಷ
ಮನೆಯವರ ಅಸಮ್ಮತಿಯ ನಡುವೆಯೂ ಉದ್ಯೋಗದ ಸಲುವಾಗಿ ದೂರದ ಪ್ರಯಾಣ ಮಾಡಬೇಕಾದೀತು. ಪತ್ನಿವರ್ಗದವರಿಂದ ಸಹಾಯ ದೊರಕಲಿದೆ. ಸಂಬಂಧಿಗಳ ಮಧ್ಯಸ್ಥಿಕೆಯಿಂದಾಗಿ ಸಮಸ್ಯೆಗಳು ನಿವಾರಣೆಯಾಗಲಿದೆ.
ವೃಷಭ
ಹೊಸದಾಗಿ ಕಟ್ಟಿಸುತ್ತಿರುವ ಮನೆಯ ಕೆಲಸಗಳು ಪೂರ್ಣಗೊಂಡು ನೆಮ್ಮದಿಯನ್ನು ಉಂಟುಮಾಡಲಿದೆ. ಮಕ್ಕಳಿಗೆ ವಿವಾಹ ವಿಷಯದಲ್ಲಿ ನೆಂಟರಿಂದ ಒತ್ತಾಯ ಪೂರ್ವಕ ಪ್ರಸ್ತಾಪಗಳು ಬರಲಿದೆ. ಸಾಲದಿಂದ ಮುಕ್ತಿ ಹೊಂದಿ ನಿರಾಳತೆ.
ಮಿಥುನ
ಸಹೋದ್ಯೋಗಿಗಳೊಡನೆ ಉತ್ತಮ ಸಂಬಂಧ ಬೆಳೆಸಿ ಕೊಳ್ಳುವಿರಿ. ಲೋಕೋಪಯೋಗಿ ಇಲಾಖೆ, ತಾಂತ್ರಿಕ ಇಲಾಖೆಯ ಕಂಪ್ಯೂಟರ್ ವಿಭಾಗದವರಿಗೆ ಭತ್ಯೆಯಲ್ಲಿ ಹೆಚ್ಚಳ. ರಾಜಕೀಯದಲ್ಲಿ ತಲ್ಲೀನರಾದವರಿಗೆ ಮಾನಸಿಕ ದ್ವಂದ್ವಗಳು ಏರ್ಪಡಲಿದೆ.
ಕಟಕ
ತರಕಾರಿ ಹಣ್ಣುಗಳ ವ್ಯಾಪಾರಸ್ಥರಿಗೆ ಬಹು ಬೇಡಿಕೆಯಿಂದಾಗಿ ಅಧಿಕ ಲಾಭ. ಪತ್ನಿ ವರ್ಗದವರ ಮನೆಗಳಿಗೆ ಕುಟುಂಬ ಸಮೇತರಾಗಿ ಭೇಟಿನೀಡುವ ಸಾಧ್ಯತೆ. ಧಾನ್ಯ ವ್ಯಾಪಾರಸ್ಥರಿಗೆ ವ್ಯವಹಾರದಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ ಕಂಡುಬರಲಿದೆ.
ಸಿಂಹ
ಚಿನ್ನಾಭರಣಗಳ ವ್ಯವಹಾರ ಪ್ರಾರಂಭಿಸಲು ಉತ್ತಮ ದಿನವಾಗಲಿದೆ. ಲೆಕ್ಕ ಪತ್ರ ಪರಿಶೀಲನೆಯಲ್ಲಿ ಹೆಚ್ಚಿನ ಕಾಲ ಕಳೆಯಬೇಕಾದೀತು. ಉತ್ತಮ ಆದಾಯವನ್ನು ಹೊಂದುವಿರಿ. ಪುಸ್ತಕ ಗ್ರಂಥಗಳ ಖರೀದಿಗಾಗಿ ವೆಚ್ಚವನ್ನು ಭರಿಸಬೇಕಾದೀತು.
ಕನ್ಯಾ
ತಂದೆ ತಾಯಿಗಳಿಗೆ ಮಕ್ಕಳ ಸಲುವಾಗಿ ವಿದೇಶ ಪ್ರಯಾಣ ಯೋಗ ದೊರಕಲಿದೆ. ಸತ್ಪುರುಷರ ಸಂದರ್ಶನ ಮಾಡುವ ಸಾಧ್ಯತೆ ಕಂಡುಬರುತ್ತಿದೆ. ಅಧ್ಯಯನದಲ್ಲಿಯ ಆಸಕ್ತಿಯಿಂದಾಗಿ ಉತ್ತಮ ಭವಿಷ್ಯ ನಿರ್ಮಾಣಕ್ಕೆ ಮಾರ್ಗವಾಗಲಿದೆ.
ತುಲಾ
ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಂಪನ್ಮೂಲಗಳ ಕ್ರೂಢೀಕರಣಕ್ಕಾಗಿ ಬ್ಯಾಂಕ್ ಮುಂತಾದ ಹಣಕಾಸು ಸಂಸ್ಥೆಗಳ ಮೊರಹೊಗಬೇಕಾದೀತು. ದೂರದ ಪ್ರಯಾಣ ಮಾಡಬೇಕಾದೀತು. ಸ್ವಂತ ವಾಹನ ಖರೀದಿಯಿಂದ ನೆಮ್ಮದಿ ಕಾಣುವಿರಿ.
ವೃಶ್ಚಿಕ
ವೈಯುಕ್ತಿಕ ವಿಚಾರಗಳತ್ತ ಹೆಚ್ಚಿನ ಗಮನ ಹರಿಸಬೇಕಾದೀತು. ನೆರೆಯವರೊಂದಿಗೆ ಸ್ನೇಹ ಸಂಬಂಧಗಳು ವೃದ್ಧಿಯಾಗಲಿವೆ. ಮನೆ ಬದಲಾವಣೆ ವಿಚಾರ ಚರ್ಚೆಗೆ ಬರಲಿದೆ. ಅತಿಯಾದ ಪ್ರಯಾಣದಿಂದಾಗಿ ದೇಹಾಯಾಸದಿಂದ ಬಳಲುವಿರಿ.
ಧನು
ಪ್ರಾಪ್ತ ವಯಸ್ಕರು ವೈವಾಹಿಕ ಜೀವನಕ್ಕೆ ಕಾಲಿಡಲು ಮಾಡಿದ ಪ್ರಯತ್ನಗಳು ಫಲನೀಡಲಿವೆ. ಗಣ್ಯರೊಂದಿಗೆ ಸಮಾರಂಭದಲ್ಲಿ ಭಾಗವಹಿಸುವ ಸಾಧ್ಯತೆ ಕಂಡುಬರುವುದು. ನಿಮ್ಮ ಸಹಾಯ ಸಲಹೆ ಕೋರಿ ಬರುವವರಿಗೆ ಸಹಾಯ ನೀಡಿ.
ಮಕರ
ತುರ್ತುವಿಷಯಕ್ಕಾಗಿ ಸಂಬಂಧಿಕರ ನೆರವನ್ನು ಪಡೆಯಬೇಕಾದೀತು. ಸಂಸಾರದಲ್ಲಿ ನೆಮ್ಮದಿಯನ್ನು ಕಾಣುವಿರಿ. ಅನಗತ್ಯ ಸುತ್ತಾಟದಿಂದಾಗಿ ದೇಹಾಲಸ್ಯ ಉಂಟಾಗಬಹುದು. ಗುರುದೇವತಾ ದರ್ಶನ ಮಾಡುವ ಸಾಧ್ಯತೆ ಕಂಡುಬರುವುದು.
ಕುಂಭ
ಹಂತಹಂತವಾಗಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ಬಂಧುಗಳ ಆಗಮನದಿಂದ ಸಂತೋಷದ ವಾತಾವರಣ ಮೂಡಲಿದೆ. ಸಂಬಂಧಿಕರೊಂದಿಗೆ ಸುದೀರ್ಘ ಆಪ್ತ ಸಮಾಲೋಚನೆಯಿಂದಾಗಿ ಬಾಂಧವ್ಯದಲ್ಲಿ ವೃದ್ಧಿ.
ಮೀನ
ಜಮೀನಿನ ಕೆಲಸ ಕಾರ್ಯಗಳು ಭರದಿಂದ ಸಾಗುವುದರ ಜೊತೆಗೆ ಕಾಮಗಾರಿಗಳು ಹೆಚ್ಚಳಗೊಳ್ಳುವವು. ಹಣಕಾಸು ಸಂಸ್ಥೆಗಳಿಂದ ಸಹಾಯ ಪಡೆಯುವ ಅವಶ್ಯಕತೆ ನೀಗಲಿದೆ. ಮನೆಯವರ ದೂರ ಪ್ರಯಾಣದಿಂದಾಗಿ ಒಂಟಿತನ ಮನೆಮಾಡೀತು.