
ಪಂಚಾಂಗ
ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ, ಶಿಶಿರ ಋತು,ಫಾಲ್ಗುಣ ಮಾಸ,
ಕೃಷ್ಣಪಕ್ಷ, ಚತುರ್ಥಿ / ಪಂಚಮಿ, ಗುರುವಾರ,ವಿಶಾಖ ನಕ್ಷತ್ರ / ಅನುರಾಧ ನಕ್ಷತ್ರ
ರಾಹುಕಾಲ 01:59 ರಿಂದ 03:31
ಗುಳಿಕಕಾಲ 09:23 ರಿಂದ 10:55
ಯಮಗಂಡಕಾಲ 6 19 ರಿಂದ 07:51
ಮೇಷ
ಮಹಿಳೆಯರಿಗೆ ವಿಶೇಷ ದಿನವಾಗಿ ಕಂಡುಬರುವುದು. ಹಣಕಾಸಿನ ವಿಷಯಗಳಲ್ಲಿ ತೊಂದರೆ ಉಂಟಾಗದು. ಷೇರು ಮಾರುಕಟ್ಟೆಯಲ್ಲಿ ವಿಚಾರ ವಿಮರ್ಶೆ ಮಾಡಿ ಹಣ ತೊಡಗಿಸಿಕೊಳ್ಳುವುದು ಉತ್ತಮ. ಅತಿಯಾದ ಆಸೆಯಿಂದಾಗಿ ಮೋಸಹೋಗುವ ಸಾಧ್ಯತೆ
ವೃಷಭ
ವಾಹನಗಳ ಬಿಡಿ ಭಾಗಗಳ ಮಾರಾಟಗಾರರಿಗೆ ತಯಾರಕರಿಗೆ ದುರಸ್ತಿ ಮಾಡುವವರಿಗೆ ಹೆಚ್ಚಿನ ಆದಾಯ ತರುವಂತಹ ದಿನವಾಗಲಿದೆ. ಮನೆಯಲ್ಲಿ ನಡೆಯಬೇಕಾದ ಮಂಗಳ ಕಾರ್ಯಗಳಿಗೆ ತಯಾರಿ ನಡೆಸಲಿದ್ದೀರಿ. ಹಬ್ಬದ ವಾತಾವರಣ ಮೂಡಿಬರಲಿದೆ.
ಮಿಥುನ
ಸಹೋದ್ಯೋಗಿಗಳೊಡನೆ ಹೊಂದಾಣಿಕೆಯ ಅಗತ್ಯ ಕಂಡುಬರುವುದು. ಕೆಲಸದ ಒತ್ತಡ ಕಡಿಮೆಯಾಗಿ ನೆಮ್ಮದಿಯನ್ನು ತರಲಿದೆ. ಉದ್ಯೋಗದಲ್ಲಿ ಲಾಭವನ್ನು ಕಾಣಲಿದ್ದೀರಿ. ಮನೆಯವರೊಂದಿಗೆ ಸಂಭ್ರಮದಿAದ ದಿನ ಕಳೆಯುವಿರಿ.
ಕಟಕ
ನಿಮ್ಮ ಕಾರ್ಯತಂತ್ರವನ್ನು ತಡಮಾಡದೇ ರೂಪಿಸಲಿದ್ದೀರಿ. ಈ ದಿನ ನೀವು ವಿಚಾರ ಮಾಡಿ ತೆಗೆದುಕೊಳ್ಳುವ ಎಲ್ಲ ನಿರ್ಧಾರಗಳು ಸರಿಯಾಗಿದ್ದು ಶುಭಫಲಗಳನ್ನೇ ತರಲಿವೆ. ಹಿರಿಯರ ಆರೋಗ್ಯಕ್ಕಾಗಿ ವೆಚ್ಚ ಭರಿಸಬೇಕಾದೀತು.
ಸಿಂಹ
ಸ್ನೇಹ ಸಂಬಂಧಗಳು ಗಟ್ಟಿಯಾಗಿ ಹೊಸ ಚೈತನ್ಯ ಮೂಡುವುದರಿಂದ ಸಹಾಯ, ಸಹಕಾರಗಳು ನಿರೀಕ್ಷೆಗೂ ಮೀರಿ ದೊರಕಲಿದೆ. ಪ್ರಿಯರಿಂದ ಉಡುಗೊರೆ ಲಭ್ಯವಾಗುವ ಸಾಧ್ಯತೆ. ಕಲಾವಿದರಿಗೆ ಆದಾಯದಲ್ಲಿ ಹೆಚ್ಚಳ.
ಕನ್ಯಾ
ಕಾರ್ಯಕ್ಷೇತ್ರದಲ್ಲಿನ ಕೆಲಸಗಳನ್ನು ಶೀಘ್ರವಾಗಿ ಮುಗಿಸಲಿದ್ದೀರಿ. ಮನೆಯಲ್ಲಿ ನಡೆಯಬೇಕಾದ ಮದುವೆ ಮುಂಜಿ ಮುಂತಾದ ಮಂಗಳ ಕಾರ್ಯಗಳ ಜವಾಬ್ದಾರಿ ನಿಭಾಯಿಸುವ ಧಾವಂತ. ಬಂಧುಗಳ ಆಗಮನ.
ತುಲಾ
ಚಿನ್ನಾಭರಣ ಖರೀದಿ ಸಾಧ್ಯತೆ. ಆದಾಯದಲ್ಲಿ ಹೆಚ್ಚಳ. ತಂದೆಯ ಆರೋಗ್ಯದಲ್ಲಿ ಸುಧಾರಣೆ. ಮಕ್ಕಳ ವಿವಾಹ ಸಂಬಂಧಗಳು ಕೂಡಿಬರುವ ಸಾಧ್ಯತೆ. ದೂರ ಪ್ರಯಾಣದ ಸಿದ್ಧತೆ ನಡೆಸಲಿದ್ದೀರಿ.
ವೃಶ್ಚಿಕ
ನಿಮ್ಮ ಪ್ರತಿಭೆಯ ತೀಕ್ಷ್ಣತೆಯು ಸಂಬಂಧಪಟ್ಟವರ ಗಮನ ಸೆಳೆಯಲಿದೆ. ತಾಂತ್ರಿಕ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರು ಬಡ್ತಿ ನಿರೀಕ್ಷಿಸಬಹುದು. ಅತಿಯಾದ ಕಾರ್ಯಬಾಹುಳ್ಯದಿಂದಾಗಿ ಆಲಸ್ಯ. ಸಮಾಧಾನದ ನಡೆ ಅವಶ್ಯಕ.
ಧನು
ಮೇಲಧಿಕಾರಿಗಳು ನಿಮ್ಮ ನಿರ್ಧಾರಕ್ಕೆ ನಿಮ್ಮೊಂದಿಗಿದ್ದಾರೆಂಬ ಭರವಸೆಯಿಂದ ಕೆಲಸ ನಿರ್ವಹಿಸಲಿದ್ದೀರಿ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಸಮಾಲೋಚನೆ ಮಾಡುವುದು ಉತ್ತಮ.
ಮಕರ
ಹೊಸ ಅವಕಾಶಗಳ ಬಾಗಿಲು ತೆರೆಯುವುದರಿಂದ ನಿಯೋಜಿತ ಕೆಲಸಗಳನ್ನು ಆಸಕ್ತಿಯಿಂದ ಒಪ್ಪಿಕೊಳ್ಳುವಿರಿ. ಆತ್ಮವಿಶ್ವಾಸ ಮೂಡಿಬರಲಿದೆ. ಗುತ್ತಿಗೆ ವ್ಯವಹಾರ ನಡೆಸುತ್ತಿರುವವರಿಗೆ ಹೊಸ ಕೆಲಸ ಸಿಗಲಿದೆ.
ಕುಂಭ
ವ್ಯವಹಾರದಲ್ಲಿ ಬದಲಾವಣೆಗಳನ್ನು ನಿರೀಕ್ಷಿಸಲಾಗದು. ಈ ದಿನದ ಕಷ್ಟದ ಕ್ಷಣಗಳು ನಿಮ್ಮ ನಾಳಿನ ಬದುಕಿನ ಸುಖಕ್ಕೆ ನಾಂದಿಯಾಗಲಿದೆ. ತಾಳ್ಮೆ ಹಾಗೂ ಸಹಿಷ್ಣುತೆಯೇ ಈ ದಿನದ ಶುಭ ಫಲಕ್ಕೆ ಹೇತುವಾಗಲಿದೆ.
ಮೀನ
ಪೀಠೋಪಕರಣಗಳು ಮತ್ತು ಅಲಂಕಾರಿಕ ವಸ್ತುಗಳ ಖರೀದಿ ಮಾಡುವ ಸಾಧ್ಯತೆ. ಆಯುಧಗಳ ವಿಷಯದಲ್ಲಿ ಅತ್ಯಂತ ಜಾಗರೂಕರಾಗಿರುವುದು ಒಳಿತು. ಮಕ್ಕಳ ಆರೋಗ್ಯದ ಕಡೆ ಗಮನ ಅಗತ್ಯ.