ಪಂಚಾಂಗ:ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,ಶರದ್ ಋತು, ಕಾರ್ತಿಕ ಮಾಸ,ಕೃಷ್ಣಪಕ್ಷ. ವಾರ:ಸೋಮವಾರ,ತಿಥಿ :ಅಮಾವಾಸ್ಯೆ, ನಕ್ಷತ್ರ:ಜೇಷ್ಠ,ರಾಹುಕಾಲ:8.00 ರಿಂದ 9.26ಗುಳಿಕಕಾಲ:1.43 ರಿಂದ 3.09ಯಮಗಂಡಕಾಲ:10.52 ರಿಂದ 12.18 ಮೇಷ ಮಧ್ಯವರ್ತಿಗಳಿಗೆ ಹೆಚ್ಚಿನ ಆದಾಯ. ವಿದ್ಯಾರ್ಥಿಗಳಿಗೆ ಪ್ರಗತಿಯ ಬಗೆಗೆ ಮಾನಸಿಕ ದುಗುಡ. ವಯೋವೃದ್ಧರಿಗೆ ಆರೋಗ್ಯದಲ್ಲಿ ಏರಿಳಿತ. ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಒಳ್ಳೆಯದು. ವೃಷಭ ಸೈನಿಕರು, ಆರಕ್ಷಣಾ ಇಲಾಖೆಯಲ್ಲಿ ಇರುವವರಿಗೆ ಸಂತೋಷದ ದಿನ. ಜೀವನದಲ್ಲಿ ಸಾಧನೆಯ ಆತ್ಮತೃಪ್ತಿಯನ್ನು ಹೊಂದಲಿದ್ದೀರಿ. ಸಾಂಸಾರಿಕ ಜೀವನದಲ್ಲಿ ನೆಮ್ಮದಿ. ಮಿಥುನ ಆರ್ಥಿಕ ಲಾಭವನ್ನು ಹೊಂದುವ ದಿನ. ಶುಭಸುದ್ದಿಯೊಂದು ಕೇಳಿಬರಲಿದೆ. ಭೂ ಖರೀದಿContinue reading “ಡಿಸೆಂಬರ್ 14,ಸೋಮವಾರ;2020 :ಇಂದಿನ ರಾಶಿಭವಿಷ್ಯ”
Monthly Archives: December 2020
ಔಷಧೀಯ ಸಸ್ಯ ಪರಿಚಯ : ಆಡುಮುಟ್ಟದ ಸೊಪ್ಪು
ಹೊಟ್ಟೆಯೊಳಗೆ ವಿಷ ಸೇರಿದರೆ ಆಡುಮುಟ್ಟದ ಬಳ್ಳಿ ( ಅಜದ್ವೇಷಿ ) ಸೇವಿಸಿ ಮೇಕೆ ಭೂಮಿಯಲ್ಲಿ ಬೆಳೆಯುವ ಎಲ್ಲಾ ರೀತಿಯ ಗಿಡದ ಸೊಪ್ಪನ್ನು ಮೇಯುತ್ತೆ, ಆದರೆ ಈ ಗಿಡದ ಸೊಪ್ಪನ್ನು ಮಾತ್ರ ತಿನ್ನೋದಿಲ್ಲ. ಅದಕ್ಕೆ ಇದನ್ನು ಆಡು ಮುಟ್ಟದ ಬಳ್ಳಿ ಎಂದು ಕರೆಯುತ್ತಾರೆ. ಇದರ ಸಮೂಲದ ಯಾವುದೇ ಭಾಗವನ್ನು ಮಾನವರಾಗಲಿ, ಪ್ರಾಣಿಗಳಾಗಲಿ ಸೇವಿಸಿದರೆ ತಕ್ಷಣ ವಾಂತಿಯಾಗುತ್ತೆ.ಲತಾಕ್ಷೀರಿ, ಅಂತಮೂಲ್, ಅನಂತಮೂಲ, ವಳ್ಳಿಪಾರಿ, ಜಂಗ್ಲಿ ಪಿಕ್ವಮ್, ಪಿತ್ಕಾರಿ, ಕಿರಮಂಜಿ, ವೆರ್ರಿಪಾಲ, ಕುಕ್ಕಪಾಲ, ವೆಟ್ಟಿಪಾಲ,ಮೇಕ ಮೇಯಿನಿ ಆಕು, ಶ್ವಾಸಘ್ನಿ, ನಂಜರೊಪ್ಪನ್, ನೇಪಾಳದಬೇರು, ನಾಯಿಹಾಲೆContinue reading “ಔಷಧೀಯ ಸಸ್ಯ ಪರಿಚಯ : ಆಡುಮುಟ್ಟದ ಸೊಪ್ಪು”
ಸಾರಿಗೆ ಸಂಧಾನ ಸಭೆ ಸಕ್ಸಸ್, ಮೂರು ದಿನಗಳ ಮುಷ್ಕರ ವಾಪಸ್ , ಇಂದು ರಾತ್ರಿಯಿಂದಲೇ ಬಸ್ ಸಂಚಾರ ಆರಂಭ
ಬೆಂಗಳೂರು: ಧರಣಿ ನಿರತ ಸಾರಿಗೆ ನೌಕರರ ಜೊತೆಗೆ ಇಂದು ನಡೆದ ಸಭೆ ಯಶಸ್ಸು ಕಂಡಿದ್ದು, ಕಳೆದ ಮೂರು ದಿವಸದಿಂದ ನಡೆಸುತ್ತಿದ್ದ ರಾಜ್ಯ ವ್ಯಾಪ್ತಿ ಮುಷ್ಕರವನ್ನು ವಾಪಸ್ಸು ಪಡೆಯಲಾಗಿದೆ. ಈ ನಡುವೆ ಇಂದು ಸಂಜೆಯಿಂದಲೇ ಬಸ್ ಸಂಚಾರ ಶುರುವಾಗಲಿದೆ ಎನ್ನಲಾಗಿದೆ. ಇಂದು ಸಾರಿಗೆ ಸಚಿವ ಸವದಿ, ಕಂದಾಯ ಸಚಿವ ಆಶೋಕ್, ಬಸವರಾಜ್ ಬೊಮ್ಮಾಯಿವರಿದ್ದ ಸಭೆಯಲ್ಲಿ ನೌಕರರ ಮುಖಂಡರು ಮುಷ್ಕರ ವಾಪಸ್ ಪಡೆಯಲು ಮನಸ್ಸು ಮಾಡಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನು ಮಾಡಬೇಕು ಎನ್ನುವ ಬೇಡಿಕೆಯನ್ನುContinue reading “ಸಾರಿಗೆ ಸಂಧಾನ ಸಭೆ ಸಕ್ಸಸ್, ಮೂರು ದಿನಗಳ ಮುಷ್ಕರ ವಾಪಸ್ , ಇಂದು ರಾತ್ರಿಯಿಂದಲೇ ಬಸ್ ಸಂಚಾರ ಆರಂಭ”
ಡಿಸೆಂಬರ್13,ಭಾನುವಾರ; 2020 : ಇಂದಿನ ರಾಶಿಭವಿಷ್ಯ
ಪಂಚಾಂಗ:ಶ್ರೀ ಶಾರ್ವರಿ ನಾಮ ಸಂವತ್ಸರ,ದಕ್ಷಿಣಾಯಣ, ಶರದ್ ಋತು,ಕಾರ್ತಿಕ ಮಾಸ, ಕೃಷ್ಣ ಪಕ್ಷ.ವಾರ : ಭಾನುವಾರ, ತಿಥಿ : ಚತುರ್ದಶಿ,ನಕ್ಷತ್ರ : ಅನುರಾಧ,ರಾಹುಕಾಲ: 4.35 ರಿಂದ 6.00ಗುಳಿಕಕಾಲ: 3.09 ರಿಂದ 4.35ಯಮಗಂಡಕಾಲ: 12.18 ರಿಂದ 1.43 ಮೇಷ ಅನಿರೀಕ್ಷಿತ ಧನಾಗಮನದ ಸಾಧ್ಯತೆಯು ಕಂಡುಬರುತ್ತಿದೆ. ಮಕ್ಕಳಿಂದ ಶುಭಸಮಾಚಾರ ಕೇಳಲಿದ್ದೀರಿ. ಉತ್ತಮ ಆರೋಗ್ಯವನ್ನು ಹೊಂದಿರುವಿರಿ. ಮಾನಸಿಕ ನೆಮ್ಮದಿಯು ನಿಮ್ಮದಾಗಲಿದೆ. ವೃಷಭ ಕೆಲಸದಲ್ಲಿ ಗೌರವ, ಮನ್ನಣೆಯನ್ನು ಹೊಂದಲಿದ್ದೀರಿ. ನಿಂತುಹೋಗಿರುವ ಯೋಜನೆಗಳು ಪುನಃ ಚಾಲನೆ ಪಡೆದುಕೊಳ್ಳಲಿವೆ. ಆಪ್ತರೊಬ್ಬರ ಭೇಟಿಯ ಸಾಧ್ಯತೆ ಕಂಡುಬರುವುದು. ಸಂತಸದ ವಾತಾವರಣ ನೆಲೆಸಲಿದೆ. ಮಿಥುನ ನಿರುದ್ಯೋಗಿಗಳಿಗೆContinue reading “ಡಿಸೆಂಬರ್13,ಭಾನುವಾರ; 2020 : ಇಂದಿನ ರಾಶಿಭವಿಷ್ಯ”
ಕೌನ್‌ಬನೇಗಾ ಕರೋಡ್‌ಪತಿಗೆ ಆಯ್ಕೆಯಾದ ಉಡುಪಿಯ ಅನಾಮಯ ಯೋಗೇಶ್ ದಿವಾಕರ್
ಉಡುಪಿ, ಡಿ.12 : ಇಲ್ಲಿನ ವಿದ್ಯೋದಯ ಪಬ್ಲಿಕ್ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಅನಾಮಯ ಯೋಗೇಶ್ ದಿವಾಕರ್ ಕೌನ್ ಬನೇಗಾ ಕರೋಡ್‌ಪತಿಯ ವಿಶೇಷ ಸಂಚಿಕೆಯಲ್ಲಿ ಭಾಗವಹಿಸುವ ಅವಕಾಶ ಪಡೆದಿದ್ದಾರೆ. ಕೆಬಿಸಿಯ ಸ್ಟುಡೆಂಟ್ ಸ್ಪೆಷಲ್ ಸಪ್ತಾಹಕ್ಕಾಗಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ವೇದಾಂತ ಆನ್‌ಲೈನ್ ಲರ್ನಿಂಗ್ ಆಪ್ ಅ.5 ರಿಂದ 25ರವರೆಗೆ ಕ್ವಿಝ್ ಸ್ಪರ್ಧೆಯನ್ನು ಆಯೋಜನೆ ಮಾಡಿತ್ತು. ಈ ಕ್ವಿಝ್‌ನಲ್ಲಿ ದೇಶದಾದ್ಯಂತ ಸುಮಾರು 1.5 ಲಕ್ಷ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಪೈಕಿ ಎಂಟು ಮಂದಿ ಫೈನಲಿಸ್ಟ್ ವಿದ್ಯಾರ್ಥಿಗಳಲ್ಲಿ ಉಡುಪಿಯ ಅನಾಮಯ ಯೋಗೇಶ್Continue reading “ಕೌನ್‌ಬನೇಗಾ ಕರೋಡ್‌ಪತಿಗೆ ಆಯ್ಕೆಯಾದ ಉಡುಪಿಯ ಅನಾಮಯ ಯೋಗೇಶ್ ದಿವಾಕರ್”
ಆಯುರ್ವೇದ ಸಸ್ಯ ಪರಿಚಯ: ದರ್ಭೆ ಹುಲ್ಲು
ಕುಶಂ (ದರ್ಭೆ) ನಲ, ರಂದ್ರಿ, ಪುಷ್ಪ, ಮೃತ್ಯ, ದಮನ, ನರ್ತಕ, ಅಗ್ನಿಗರ್ಭಮ್, ದರ್ಭಗಡ್ಡಿ, ದರ್ಭೆಪಿಲ್ಲಿ, ಕುಸೈ ಎಂಬ ಹೆಸರುಗಳಿಂದ ಕರೆಯುತ್ತಾರೆ. ನದಿಪಾತ್ರ ಭೂಮಿಯಲ್ಲಿ, ಹುಲ್ಲುಗಾವಲು ಅರಣ್ಯ, ಕೆರೆಕಟ್ಟೆ, ಕುಂಟೆಗಳಸುತ್ತ, ಹುತ್ತಗಳಮೇಲೆ ಬೆಳೆಯುವ ಒಂದು ರೀತಿಯ ಪವಿತ್ರವಾದ ಹುಲ್ಲು. ಕೆಲವು ಹಳೆಯ ಗ್ರಂಥಗಳಲ್ಲಿ 7 ರೀತಿಯ ಪ್ರಭೇಧಗಳಿವೆ ಎಂದು ಉಲ್ಲೇಖವಾಗಿದ್ದರೆ, ಮತ್ತೆ ಕೆಲವು ಗ್ರಂಥಗಳಲ್ಲಿ 9 ಪ್ರಭೇದಗಳಿವೆ ಎಂದು ಉಲ್ಲೇಖವಿದೆ. ಅವುಗಳಲ್ಲಿ ಉದ್ದವಾಗಿ ಬೆಳೆಯುವ “ವಿಶಾಮಿತ್ರ” ಹಾಗು ಗಿಡ್ಡದಾಗಿ ಬೆಳೆಯುವ “ವಶಿಷ್ಠ” ತುಂಬಾ ಶ್ರೇಷ್ಠವಾದದ್ದು ಎಂದು ಉಲ್ಲೇಖಿಸಿದ್ದಾರೆ. ನವಗ್ರಹಗಳಲ್ಲಿContinue reading “ಆಯುರ್ವೇದ ಸಸ್ಯ ಪರಿಚಯ: ದರ್ಭೆ ಹುಲ್ಲು”
ಅಂಬಲಪಾಡಿ: ಕಾಂಗ್ರೆಸ್ ನಾಯಕರು ಬಿಜೆಪಿಗೆ ಸೇರ್ಪಡೆ
ಭಾರತೀಯ ಜನತಾ ಪಾರ್ಟಿಯ ತತ್ವ ಸಿದ್ಧಾಂತಗಳು, ಪ್ರಧಾನಿ ನರೇಂದ್ರ ಮೋದಿ ಕಾರ್ಯ ವೈಖರಿ, ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರದ ಜನಪರ ಆಡಳಿತ ಮತ್ತು ಶಾಸಕ ಕೆ.ರಘುಪತಿ ಭಟ್ ನೇತೃತ್ವದಲ್ಲಿ ನಡೆಯುತ್ತಿರುವ ದಾಖಲೆಯ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮೆಚ್ಚಿ ಅಂಬಲಪಾಡಿ ಪರಿಸರದ ಕಾಂಗ್ರೆಸ್ ನಾಯಕರಾದ ಶಿವಾಜಿ ಸನಿಲ್ ಬಂಕೇರ್ಕಟ್ಟ ಮತ್ತು ಸುಮಂತ್ ಪ.ಜಾ. ಕಾಲನಿ ಇವರು ಅಂಬಲಪಾಡಿ ಗ್ರಾ.ಪಂ. ವ್ಯಾಪ್ತಿಯ ಬಿಜೆಪಿ ಚುನಾವಣಾ ಕಚೇರಿಯಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ಬಿಜೆಪಿ ಉಡುಪಿ ನಗರಾಧ್ಯಕ್ಷ ಮಹೇಶ್ ಠಾಕೂರ್ ಪಕ್ಷದ ಧ್ವಜವನ್ನುContinue reading “ಅಂಬಲಪಾಡಿ: ಕಾಂಗ್ರೆಸ್ ನಾಯಕರು ಬಿಜೆಪಿಗೆ ಸೇರ್ಪಡೆ”
ಡಿಸೆಂಬರ್ 12, ಶನಿವಾರ;2020 : ಇಂದಿನ ರಾಶಿಭವಿಷ್ಯ
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,ಶರದೃತು, ಕಾರ್ತಿಕ ಮಾಸ,ಕೃಷ್ಣಪಕ್ಷ,ದ್ವಾದಶಿ/ತ್ರಯೋದಶಿ,ಶನಿವಾರ,ವಿಶಾಖ ನಕ್ಷತ್ರ,ರಾಹುಕಾಲ: 09 :25ರಿಂದ 10:51ಗುಳಿಕಕಾಲ: 06:34 ರಿಂದ 07:59ಯಮಗಂಡಕಾಲ: 01:42 ರಿಂದ 03:08 ಮೇಷ ಸರ್ಕಾರಿ ಅಧಿಕಾರಿಗಳಿಗೆ ಸ್ಥಾನ ಬದಲಾವಣೆಯ ಸಾಧ್ಯತೆ ಗಾಢವಾಗಿ ಕಂಡುಬರುತ್ತಿದೆ. ನೌಕರವರ್ಗಕ್ಕೆ ಕೆಲಸಗಳಿಂದ ವಿರಾಮ. ಆರೋಗ್ಯದ ಬಗ್ಗೆ ವಿಶೇಷ ಗಮನ ಹರಿಸುವುದು ಒಳ್ಳೆಯದು. ವೃಷಭ ಸರ್ಕಾರಿ ಕೆಲಸದಲ್ಲಿರುವವರಿಗೆ ಬಿಡುವಿಲ್ಲದ ಕೆಲಸ–ಕಾರ್ಯಗಳಿಂದಾಗಿ ಸಂಗಾತಿಯ ಕೋಪವನ್ನು ಎದುರಿಸಬೇಕಾದೀತು. ಮನೆಯವರ ಪ್ರಯಾಣಕ್ಕಾಗಿ ವಿಶೇಷ ವೆಚ್ಚ ಭರಿಸಬೇಕಾದೀತು. ಮಿಥುನ ಗೃಹನಿರ್ಮಾಣ ಕಾರ್ಯಗಳನ್ನು ಕೈಗೊಳ್ಳಲು ಉತ್ತಮವಾದ ಕಾಲ. ಮನಸ್ಸಿಟ್ಟು ಕೆಲಸವನ್ನು ಮಾಡಿದಲ್ಲಿ ವಿದೇಶಿ ವ್ಯವಹಾರದಲ್ಲಿContinue reading “ಡಿಸೆಂಬರ್ 12, ಶನಿವಾರ;2020 : ಇಂದಿನ ರಾಶಿಭವಿಷ್ಯ”
ಡಿಸೆಂಬರ್ 11, ಶುಕ್ರವಾರ; 2020: ಇಂದಿನ ರಾಶಿಭವಿಷ್ಯ
ಪಂಚಾಂಗ:ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,ಶರದೃತು, ಕಾರ್ತಿಕಮಾಸ, ಕೃಷ್ಣಪಕ್ಷ,ಏಕಾದಶಿ / ದ್ವಾದಶಿ, ಶುಕ್ರವಾರ,ಚಿತ್ತ ನಕ್ಷತ್ರ / ಸ್ವಾತಿ ನಕ್ಷತ್ರ,ರಾಹುಕಾಲ 10 :50ರಿಂದ 12 :16ಗುಳಿಕಕಾಲ 07:58 ರಿಂದ 09:24ಯಮಗಂಡಕಾಲ 03:08 ರಿಂದ 04:34 ಮೇಷ ಆಪ್ತರೊಂದಿಗೆ ವಿಚಾರ ವಿನಿಮಯ ನಡೆಸಲಿದ್ದೀರಿ. ಆರ್ಥಿಕ ಸಂಕಷ್ಟ ಪರಿಹರಿಸಿಕೊಳ್ಳುವಿರಿ. ಓದಿನಲ್ಲಿ ಹೆಚ್ಚಿನ ಆಸಕ್ತಿ ತೋರುವಿರಿ. ಮಕ್ಕಳಿಂದ ಶುಭ ಸುದ್ದಿ ಕೇಳಲಿದ್ದೀರಿ. ಮನೆಮಂದಿಯೊಂದಿಗೆ ದೇವತಾ ದರ್ಶನ ಭಾಗ್ಯ. ವೃಷಭ ಕಳೆದುಹೋದ ವಸ್ತು ಅಥವಾ ಬಹುದಿನಗಳಿಂದ ಬರಬೇಕಾಗಿದ್ದ ವಸ್ತುಗಳನ್ನು ಪುನಃ ಪಡೆದುಕೊಳ್ಳುವ ಸಾಧ್ಯತೆ. ಚರ ಆಸ್ತಿಗಳ ಖರೀದಿ ಮಾಡಲಿದ್ದೀರಿ.Continue reading “ಡಿಸೆಂಬರ್ 11, ಶುಕ್ರವಾರ; 2020: ಇಂದಿನ ರಾಶಿಭವಿಷ್ಯ”
ಸಮಗ್ರ ಗ್ರಾಮಾಭಿವೃದ್ಧಿಗಾಗಿ ಬಿಜೆಪಿ ಬೆಂಬಲಿತ ಗ್ರಾ.ಪಂ. ಅಭ್ಯರ್ಥಿಗಳನ್ನು ಗೆಲ್ಲಿಸಿ: ಕೆ.ರಘುಪತಿ ಭಟ್
ಉಡುಪಿ: ಗ್ರಾಮಗಳ ಉದ್ಧಾರವೇ ದೇಶದ ಉದ್ಧಾರ. ಇಂದು ಗ್ರಾಮ ಪಂಚಾಯತ್ ಸಹಿತ ವಿವಿಧ ಸ್ತರದ ಸ್ಥಳೀಯಾಡಳಿತ ಸಂಸ್ಥೆಗಳು, ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಅಭಿವೃದ್ಧಿ ಪರ ಆಡಳಿತವಿದೆ. ಈ ಪರ್ವ ಕಾಲದಲ್ಲಿ ಗ್ರಾಮಗಳ ಸಮಗ್ರ ಅಭಿವೃದ್ಧಿಗಾಗಿ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಅಭ್ಯರ್ಥಿಗಳನ್ನು ಗರಿಷ್ಠ ಸಂಖ್ಯೆಯಲ್ಲಿ ಗೆಲ್ಲಿಸಿಕೊಡುವ ಮೂಲಕ ಜನತೆ ಗ್ರ್ರಾಮಾಭಿವೃದ್ಧಿಗೆ ತಮ್ಮ ಅಮೂಲ್ಯ ಕೊಡುಗೆ ನೀಡಬೇಕು ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ಹೇಳಿದರು. ಅವರು ಪಂದುಬೆಟ್ಟುನಲ್ಲಿ ನಡೆದ ಅಂಬಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯContinue reading “ಸಮಗ್ರ ಗ್ರಾಮಾಭಿವೃದ್ಧಿಗಾಗಿ ಬಿಜೆಪಿ ಬೆಂಬಲಿತ ಗ್ರಾ.ಪಂ. ಅಭ್ಯರ್ಥಿಗಳನ್ನು ಗೆಲ್ಲಿಸಿ: ಕೆ.ರಘುಪತಿ ಭಟ್”