Design a site like this with WordPress.com
Get started

ವಿಧಾನ ಪರಿಷತ್ ಉಪ ಸಭಾಪತಿಗಳಾದ ಎಸ್.ಎಲ್. ಧರ್ಮೇಗೌಡರವರ ನಿಧನಕ್ಕೆ ಜಿಲ್ಲಾ ಬಿಜೆಪಿ ಸಂತಾಪ

ಸರಳ ಸಜ್ಜನಿಕೆಯ ವ್ಯಕ್ತಿತ್ವದ ವಿಧಾನ ಪರಿಷತ್ ಉಪ ಸಭಾಪತಿಗಳಾದ ಎಸ್.ಎಲ್. ಧರ್ಮೇಗೌಡರವರು ರಾಜ್ಯಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದ ಧೀಮಂತ ನಾಯಕರು. ಗ್ರಾಮ ಪಂಚಾಯತ್ ಮಟ್ಟದಿಂದ ಮೊದಲ್ಗೊಂಡು ಸಹಕಾರಿ ಕ್ಷೇತ್ರ ಸಹಿತ ರಾಜಕೀಯ ಕ್ಷೇತ್ರದ ವಿವಿಧ ಮಜಲುಗಳಲ್ಲಿ ಪಕ್ಷ ನಿಷ್ಠೆ ಮತ್ತು ಬದ್ಧತೆಯಿಂದ ಜನಸೇವೆಗೈದು ಯಶಸ್ಸಿನ ಉತ್ತುಂಗಕ್ಕೇರಿದ ಜನ ನಾಯಕರು. ವಿಧಾನ ಪರಿಷತ್ ಉಪ ಸಭಾಪತಿಗಳಾದ ಎಸ್.ಎಲ್. ಧರ್ಮೆಗೌಡರವರ ಅಕಾಲಿಕ ಅಗಲುವಿಕೆಯು ರಾಜ್ಯಕ್ಕೆ ತುಂಬಲಾರದ ನಷ್ಟವೆನಿಸಿದೆ. ಅವರ ಅಗಲಿದ ದಿವ್ಯಾತ್ಮಕ್ಕೆ ಭಗವಂತನು ಚಿರಶಾಂತಿ ಕರುಣಿಸಲಿ ಎಂಬ ಪ್ರಾರ್ಥನೆಯೊಂದಿಗೆ ಉಡುಪಿContinue reading “ವಿಧಾನ ಪರಿಷತ್ ಉಪ ಸಭಾಪತಿಗಳಾದ ಎಸ್.ಎಲ್. ಧರ್ಮೇಗೌಡರವರ ನಿಧನಕ್ಕೆ ಜಿಲ್ಲಾ ಬಿಜೆಪಿ ಸಂತಾಪ”

ರಾಜಧಾನಿಗೆ ಕಾಲಿಟ್ಟ `ರೂಪಾಂತರಿ’ ಕೊರೊನಾ ವೈರಸ್ : ಬೆಂಗಳೂರಿನ ‘ಮೂವರಿಗೆ ಸೋಂಕು’ ದೃಢ

ಬೆಂಗಳೂರು: ತೀವ್ರ ಆತಂಕಕ್ಕೆ ಕಾರಣವಾಗಿರುವ ರೂಪಾಂತರಿ ಕೊರೊನಾ ವೈರಸ್ ಬೆಂಗಳೂರಿಗೆ ಎಂಟ್ರಿ ಕೊಟ್ಟಿದ್ದು, ಬೆಂಗಳೂರಿನ ಮೂವರಿಗೆ ರೂಪಾಂತರಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ ಎನ್ನಲಾಗಿದೆ. ಕೇಂದ್ರ ಆರೋಗ್ಯ ಇಲಾಖೆ ಈ ಕುರಿತು ಮಾಹಿತಿ ನೀಡಿದ್ದು, ಬ್ರಿಟನ್ ನಿಂದ ಭಾರತಕ್ಕೆ ಬಂದ 6 ಮಂದಿಯಲ್ಲಿ ರೂಪಾಂತರಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿದ್ದು, ಈ ಪೈಕಿ ಹೈದರಾಬಾದ್ ನ ಇಬ್ಬರು, ಪುಣೆಯ ಒಬ್ಬರು ಹಾಗೂ ಬೆಂಗಳೂರಿನ ಮೂವರಿಗೆ ರೂಪಾಂತರಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು, ಇಂದು ಸಂಜೆ ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ. ಬೆಂಗಳೂರಿನ ಉತ್ತರಹಳ್ಳಿ ಹಾಗೂ ರಾಜಾಜಿನಗರದ ಒಟ್ಟು ಮೂವರಿಗೆ ಸೋಂಕು ದೃಢಪಟ್ಟಿದೆ. ಇನ್ನು ಇವರಲ್ಲಿ ಇಬ್ಬರು ತಾಯಿ ಮಗಳು ಅಂತಾContinue reading “ರಾಜಧಾನಿಗೆ ಕಾಲಿಟ್ಟ `ರೂಪಾಂತರಿ’ ಕೊರೊನಾ ವೈರಸ್ : ಬೆಂಗಳೂರಿನ ‘ಮೂವರಿಗೆ ಸೋಂಕು’ ದೃಢ”

ಶಾಕಿಂಗ್‌ ನ್ಯೂಸ್‌! ವಿಧಾನ ಪರಿಷತ್‌ ಉಪಸಭಾಪತಿ ಎಸ್‌ಎಲ್‌ ಧರ್ಮೇಗೌಡ ಆತ್ಮಹತ್ಯೆ..!

ಇತ್ತೀಚೆಗೆ ವಿಧಾನಪರಿಷತ್‌ನಲ್ಲಿ ನಡೆದ ಎಳೆದಾಟ, ನೂಕಾಟ ಪ್ರಕರಣದಿಂದ ಸಾಕಷ್ಟು ಮನನೊಂದಿದ್ದ ವಿಧಾನಪರಿಷತ್‌ ಉಪಸಭಾಪತಿ ಎಸ್‌ಎಲ್‌ ಧರ್ಮೇಗೌಡ(65) ಅವರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರಿನಲ್ಲಿ ಸೋಮವಾರ ರಾತ್ರಿ ನಡೆದಿದೆ. ಎಸ್‌ಎಲ್‌ ಧರ್ಮೇಗೌಡ ಅವರು ಸೋಮವಾರ ಸಂಜೆ ಮನೆಯಿಂದ ತಮ್ಮ ಕಾರಿನಲ್ಲಿ ಒಬ್ಬರೇ ತೆರಳಿದ್ದರು. ರಾತ್ರಿಯಾದರೂ ಮನೆಗೆ ವಾಪಸ್‌ ಬಾರದ ಕಾರಣ ಗನ್‌ಮ್ಯಾನ್‌, ಪೊಲೀಸರು ಮತ್ತು ಸ್ಥಳೀಯರು ಹುಡುಕಾಟ ನಡೆಸಿದ್ದರು. ನಂತರ ಅವರ ಮೃತದೇಹ ಕಡೂರು ತಾಲೂಕಿನ ಗುಣಸಾಗರದ ಮಂಕೇನಹಳ್ಳಿ ರೈಲ್ವೇ ಟ್ರ್ಯಾಕ್‌ ಬಳಿ ಪತ್ತೆಯಾಗಿದೆ. ಸಂಜೆContinue reading “ಶಾಕಿಂಗ್‌ ನ್ಯೂಸ್‌! ವಿಧಾನ ಪರಿಷತ್‌ ಉಪಸಭಾಪತಿ ಎಸ್‌ಎಲ್‌ ಧರ್ಮೇಗೌಡ ಆತ್ಮಹತ್ಯೆ..!”