ಮಾರ್ಚ್ 31, ಬುಧವಾರ, 2021 : ಇಂದಿನ ನಿತ್ಯಪಂಚಾಂಗ ಹಾಗೂ ರಾಶಿಭವಿಷ್ಯ

ಶಾರ್ವರಿ ಸಂ|ರದ ಮೀನ ಮಾಸ‌ ದಿನ 17 ಸಲುವ ಫಾಲ್ಗುಣ ಬಹುಳ ತದಿಗೆ 19| ಗಳಿಗೆ ದಿನ ವಿಶೇಷ :ಸಂಕಷ್ಟಹರ ಚತುರ್ಥಿ (ಚ.ಉ.ಗಂ. 9.25) ಮಹಾ ನಕ್ಷತ್ರ ರೇವತಿ ಆರಂಭನಿತ್ಯ ನಕ್ಷತ್ರ :ಸ್ವಾತಿ 8| ಗಳಿಗೆಮಹಾ ನಕ್ಷತ್ರ :ರೇವತಿಋತು :ಶಿಶಿರರಾಹುಕಾಲ :12.00-1.30 ಗಂಟೆಗುಳಿಕ ಕಾಲ :10.30-12.00 ಗಂಟೆಸೂರ್ಯಾಸ್ತ :6.40 ಗಂಟೆ ಸೂರ್ಯೋದಯ :6.29 ಗಂಟೆ

ಮೇಷ

ಕಲೆ ಸಂಗೀತ, ಸಿನಿಮಾ ಮುಂತಾದ ಕಲಾ ಕ್ಷೇತ್ರಗಳಲ್ಲಿ ದುಡಿಯುತ್ತಿರುವವರಿಗೆ ಒಳ್ಳೆಯ ಪುರೋಭಿವೃದ್ಧಿ. ಹೋಟೆಲ್ ಉದ್ಯಮಗಳಲ್ಲಿ ತೊಡಗಿಕೊಂಡವರಿಗೆ ಉತ್ತಮ ಲಾಭ. ವಸ್ತ್ರಾಭರಣ ಖರೀದಿ ಸಾಧ್ಯತೆ.

ವೃಷಭ

ಸರ್ಕಾರಿ ಮಟ್ಟದ ಉದ್ಯೋಗಿಗಳಿಗೆ ಯಶಸ್ಸು. ಮೇಲ್ವರ್ಗದ ಗುತ್ತಿಗೆದಾರರಿಗೆ ಟೆಂಡರ್ ಮೂಲಕ ಗುತ್ತಿಗೆ ಪಡೆಯುವ ಅವಕಾಶ ದೊರಕಲಿದೆ. ಕೃಷಿಕರಿಗೆ, ಕೃಷಿ ಜಮೀನು ವ್ಯಾಪಾರದಲ್ಲಿ ತೊಡಗಿರುವವರಿಗೆ ಉತ್ತಮ ಲಾಭ.

ಮಿಥುನ

ಜೀವನದಲ್ಲಿ ಒಂದು ವಿಶೇಷ ತಿರುವನ್ನು ಪಡೆದುಕೊಳ್ಳುವ ಪರ್ವಕಾಲ. ನಿಮ್ಮ ದುಡಿಮೆ, ನಿಷ್ಠೆ, ಆತ್ಮವಿಶ್ವಾಸ ವೃತ್ತಿರಂಗದಲ್ಲಿ ಯಶಸ್ಸು. ಮನೆಯಲ್ಲಿ ಮಂಗಳ ಕಾರ್ಯಗಳಿಗೆ ಚಾಲನೆ ನೀಡಲಿದ್ದೀರಿ.

ಕಟಕ

ವಿಚಾರಗಳನ್ನು ಭಿನ್ನ ದೃಷ್ಟಿಯಿಂದ ನೋಡಲು ಪ್ರಯತ್ನಿಸುವಿರಿ. ದೈನಂದಿನ ರೀತಿ ರಿವಾಜುಗಳನ್ನು ಉಳಿಸಿಕೊಳ್ಳುವುದಕ್ಕಾಗಿ ಧಾವಂತದಿಂದ ಕೆಲಸ ಕಾರ್ಯಗಳನ್ನು ನಿರ್ವಹಿಸಬೇಕಾದೀತು. ಪುಣ್ಯ ಕ್ಷೇತ್ರಗಳಿಗೆ ಪ್ರಯಾಣ ಸಾಧ್ಯತೆ.

ಸಿಂಹ

ಸಾಮಾಜಿಕ ರಂಗದಲ್ಲಿ ಸ್ಥಾನಮಾನದೊಂದಿಗೆ ಜನಾನುರಾಗಕ್ಕೂ ಉತ್ತಮ ಅವಕಾಶ ದೊರಕಲಿದೆ. ಸಂಕಲ್ಪದಂತೆ ಕಾರ್ಯಗಳು ನೆರವೇರಿ ಮುನ್ನಡೆ. ತೈಲೋದ್ಯಮದಲ್ಲಿ ತೊಡಗಿಸಿಕೊಂಡವರಿಗೆ ಉತ್ತಮ ಆದಾಯ.

ಕನ್ಯಾ

ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳು ಬರಲಿವೆ. ಎಲ್ಲ ವಿಧದಿಂದಲೂ ಸುಖ ಜೀವನ ನಿಮ್ಮದಾಗಲಿದೆ. ಅವಿವಾಹಿತರಿಗೆ ಬಂಧುಗಳ ಸಹಾಯದಿಂದ ಅನಿರೀಕ್ಷಿತವಾಗಿ ವಿವಾಹ ಯೋಗ ಕೂಡಿಬರಲಿದೆ.

ತುಲಾ

ಹಲವು ಹೊಸಬರ ಪರಿಚಯದಿಂದಾಗಿ ಎಲ್ಲ ರೀತಿಯಿಂದಲೂ ಅನುಕೂಲ. ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ದೊರಕಲಿದೆ. ಅವಿವಾಹಿತ ಸ್ತ್ರೀಯರಿಗೆ ಮಾಂಗಲ್ಯ ಭಾಗ್ಯ.

ವೃಶ್ಚಿಕ

ಕಾರ್ಯಕ್ಷೇತ್ರದಲ್ಲಿ ಕೆಲಸ ಕಾರ್ಯಗಳು ಸುಸೂತ್ರವಾಗಿ ಸಾಗುತ್ತವೆ. ಸಾಮಾಜಿಕವಾಗಿ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಲಿದ್ದೀರಿ. ಸೂಕ್ತ ವ್ಯಕ್ತಿಗಳಿಂದ ಸಕಾಲದಲ್ಲಿ ಸಲಹೆ ಪಡೆಯುವುದರಿಂದ ಅನುಕೂಲ.

ಧನು

ಕಾರ್ಯರಂಗದಲ್ಲಿ ಧೈರ್ಯ, ಪ್ರಯತ್ನ ಬಲ, ಆತ್ಮವಿಶ್ವಾಸದ ಪ್ರವೃತ್ತಿಗಳಿಂದಾಗಿ ಸಮಸ್ಯೆಗಳು ದೂರ. ಸಾಮಾಜಿಕವಾಗಿ ವರ್ಚಸ್ಸು ಹೆಚ್ಚುವುದರ ಜೊತೆಗೆ ಗೌರವ ಪ್ರಾಪ್ತಿ. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಯ.

ಮಕರ

ಶಿಸ್ತುಬದ್ಧ ಜೀವನದಿಂದಾಗಿ ಎಲ್ಲ ರಂಗಗಳಲ್ಲಿಯೂ ಯಶಸ್ಸು. ಸಕಾರಾತ್ಮಕ ಚಿಂತನೆಗಳಿಂದಾಗಿ ಸಮಸ್ಯೆಗಳು ಕರಗಿಹೋಗಲಿವೆ. ಆಪ್ತ ಮಹಿಳೆಯರಿಂದ ದೊರೆತ ಸಲಹೆಗಳನ್ನು ತಿರಸ್ಕರಿಸುವುದು ಸರಿಯಲ್ಲ.

ಕುಂಭ

ವಿದ್ಯಾರ್ಥಿಗಳಿಗೆ ವಿಶೇಷ ರೀತಿಯ ಸೌಲಭ್ಯಗಳು ದೊರಕುವ ಸಾಧ್ಯತೆ. ಕೃಷಿಕ್ಷೇತ್ರದಲ್ಲಿ ದುಡಿಯುವವರಿಗೆ ಉತ್ತಮ ಆದಾಯ. ದರ್ಜಿಗಳು ಮತ್ತು ಜವುಳಿ ವ್ಯಾಪಾರಸ್ಥರಿಗೆ ಉತ್ತಮ ಲಾಭ. ಆರೋಗ್ಯದಲ್ಲಿ ಸ್ಥಿರತೆ ಕಾಣುವಿರಿ.

ಮೀನ

ಸ್ವತಂತ್ರ ವೃತ್ತಿಯವರಿಗೆ ನಿರಂತರ ಆದಾಯ ಬಂದರೂ ಖರ್ಚು ವೆಚ್ಚಗಳ ವಿಚಾರದಲ್ಲಿ ಜಾಗರೂಕತೆ ಅಗತ್ಯ. ಹಿರಿಯರ ಅನುಗ್ರದಿಂದ ನೆಮ್ಮದಿ. ಹೊಸ ಯೋಜನೆ ಪ್ರಾರಂಭಕ್ಕೆ ಚಿಂತನೆ.

Leave a comment

Design a site like this with WordPress.com
Get started