
ಪಂಚಾಂಗ
ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ,
ಶಿಶಿರ ಋತು, ಫಾಲ್ಗುಣ ಮಾಸ, ಆಶ್ಲೇಷ ನಕ್ಷತ್ರ
ಶುಕ್ಲ ಪಕ್ಷ, ಏಕಾದಶಿ/ದ್ವಾದಶಿ, ಗುರುವಾರ,
ರಾಹುಕಾಲ: 2:00 ರಿಂದ3:31
ಗುಳಿಕಕಾಲ: 9 :27ರಿಂದ 10:58
ಯಮಗಂಡಕಾಲ: 06:24ರಿಂದ 07:56
ಮೇಷ
ಉದ್ಯೋಗದಲ್ಲಿ ನೆಮ್ಮದಿ ತರುವ ದಿನ. ಶುಭ ಸುದ್ದಿಯೊಂದು ಕೇಳಿಬರಲಿದೆ. ಭೂ ಖರೀದಿ ಮಾಡುವ ಸಾಧ್ಯತೆ. ಗೊಂದಲದ ಮನಃಸ್ಥಿತಿ. ಹಿರಿಯರ ಸಾಂತ್ವನದ ಮಾತುಗಳಿಂದಾಗಿ ಆತ್ಮಸ್ಥೈರ್ಯ ವೃದ್ಧಿ.
ವೃಷಭ
ವಿವಾಹಾಪೇಕ್ಷಿತರಿಗೆ ವಿವಾಹ ಕೂಡಿಬರುವ ಸಾಧ್ಯತೆ. ಹೆಚ್ಚಿನ ಯಶಸ್ಸಿಗಾಗಿ ವಿದ್ಯಾರ್ಥಿಗಳಿಂದ ಹೆಚ್ಚಿನ ಶ್ರಮ ಅಗತ್ಯ. ಸಾಲದಿಂದ ಮುಕ್ತಿ ಹೊಂದಲಿದ್ದೀರಿ. ಕನ್ಯೆಯರಿಗೆ ಮಾನಸಿಕ ಗೊಂದಲದ ದಿನ.
ಮಿಥುನ
ಕಮಿಷನ್ ವ್ಯವಹಾರದಿಂದ ಹೆಚ್ಚಿನ ಆದಾಯ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಚಂಚಲತೆ. ವಯೋವೃದ್ಧರಿಗೆ ಆರೋಗ್ಯದಲ್ಲಿ ಏರಿಳಿತ. ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಒಳ್ಳೆಯದು.
ಕಟಕ
ಕೌಟುಂಬಿಕ ಕಲಹಗಳು ಇತ್ಯರ್ಥ. ಬಹು ನಿರೀಕ್ಷಿತ ವ್ಯವಹಾರವೊಂದರಲ್ಲಿ ಯಶಸ್ಸು. ಸಂಗಾತಿಯ ನೆಮ್ಮದಿಯ ಮಾತುಗಳಿಂದ ಸಂತೋಷಗೊಳ್ಳುವಿರಿ. ಮಕ್ಕಳ ಆರೋಗ್ಯದೆಡೆಗೆ ಗಮನವಿರಲಿ.
ಸಿಂಹ
ಸೈನಿಕರಿಗೆ, ಆರಕ್ಷಣಾ ಕೆಲಸದಲ್ಲಿ ತೊಡಗಿಕೊಂಡವರಿಗೆ ಬಿಡುವಿಲ್ಲದ ದಿನ. ಜೀವನದಲ್ಲಿ ಸಾಧನೆಯೊಂದನ್ನು ಮಾಡಿದ ತೃಪ್ತಿ. ಶಿಕ್ಷಣ ಕ್ಷೇತ್ರದಲ್ಲಿರುವವರಿಗೆ ಉನ್ನತ ಪದವಿಯನ್ನು ಹೊಂದುವ ಲಕ್ಷಣ ಕಂಡುಬರುತ್ತಿದೆ.
ಕನ್ಯಾ
ಕನ್ಯೆಯರಿಗೆ ವಿಶೇಷ ಉಡುಗೊರೆ ಸ್ವೀಕರಿಸುವ ಅವಕಾಶ. ಕಾರ್ಯನೈಪುಣ್ಯತೆಯಿಂದಾಗಿ ಸ್ನೇಹಿತರ ನಡುವೆ ಗೌರವಕ್ಕೆ ಪಾತ್ರರಾಗಲಿದ್ದೀರಿ. ಉದ್ಯೋಗ ವಿಚಾರದಲ್ಲಿ ಸ್ನೇಹಿತರಿಂದ ಸೂಕ್ತ ಸಲಹೆ. ರೈತರಿಗೆ ಸಂತೋಷದ ದಿನ.
ತುಲಾ
ಸಾಮಾಜಿಕ ಗೌರವ ಪ್ರಾಪ್ತಿ. ವ್ಯಾಪಾರಸ್ಥರಿಗೆ ಉತ್ತಮ ಲಾಭ. ರಾಜಕೀಯ ವ್ಯಕ್ತಿಗಳಿಗೆ ಇರುಸು ಮುರುಸು. ಸಾಂಸಾರಿಕವಾಗಿ ಸಮಾಧಾನ. ತಾಂತ್ರಿಕ ವಿದ್ಯಾರ್ಥಿಗಳಿಗೆ ನೈಪುಣ್ಯತೆಯ ಬಗ್ಗೆ ಹೆಮ್ಮೆಯ ದಿನ.
ವೃಶ್ಚಿಕ
ರಾಜಕಾರಣಿಗಳಿಗೆ ಒತ್ತಡದ ದಿನ. ಕಾರ್ಯಬಾಹುಳ್ಯದಿಂದ ಸ್ವಲ್ಪಮಟ್ಟಿನ ವಿರಾಮ ದೊರಕಿ ಮಾನಸಿಕ ನೆಮ್ಮದಿ. ಸಂಸಾರದೊಂದಿಗೆ ಸಂತಸದ ಪ್ರಯಾಣ. ಸಾರ್ವಜನಿಕ ರಂಗದಲ್ಲಿ ಇರುವವರಿಗೆ ಪುರಸ್ಕಾರ.
ಧನು
ಸರ್ಕಾರಿ ನೌಕರಿಯಲ್ಲಿರುವವರಿಗೆ ಕಾರ್ಯ ಒತ್ತಡ ಕಡಿಮೆಯಾಗಿ ಮನಸ್ಸಿಗೆ ನಿರಾಳತೆ ಮೂಡಿಬರಲಿದೆ. ಮಿತ್ರ ವೃಂದದವರಿಂದ ಶುಭ ವಾರ್ತೆ. ಮಿತ ವ್ಯಯ ಮಾಡುವಿರಿ. ಆರ್ಥಿಕ ಅನುಕೂಲತೆ ಕೂಡಿಬರಲಿದೆ.
ಮಕರ
ಕಾರ್ಖಾನೆ, ಕೃಷಿ ಕ್ಷೇತ್ರದ ಕೆಲಸಗಾರರಿಗೆ ಕಾರ್ಯಸಿದ್ಧಿಯಿಂದಾಗಿ ಸಮಾಧಾನಕರ ದಿನ. ವಿಶೇಷ ಸಮಾರಂಭವೊಂದರಲ್ಲಿ ಭಾಗವಹಿಸುವ ಸಾಧ್ಯತೆ. ವಾತ ಸಂಬಂಧಿ ಬಾಧೆಯಿಂದ ಸುಧಾರಿಸಿಕೊಳ್ಳಲಿದ್ದೀರಿ.
ಕುಂಭ
ಮನಸ್ಸಿನಲ್ಲಿ ಗೊಂದಲಕರ ವಾತಾವರಣ ಕಂಡುಬರುತ್ತದೆ. ಸಮಾಧಾನಕರ ನಡವಳಿಕೆಯಿಂದಾಗಿ ಸಂಸಾರದಲ್ಲಿ ಸಂತಸ ಮೂಡಿಬರಲಿದೆ. ಮಕ್ಕಳಿಂದ ಸಂತೋಷದ ಸುದ್ದಿಯನ್ನು ಕೇಳಲಿದ್ದೀರಿ.
ಮೀನ
ನ್ಯಾಯ ತೀರ್ಮಾನ ಮಾಡುವಲ್ಲಿ ಹೆಚ್ಚಿನ ಮುತುವರ್ಜಿ ವಹಿಸುವಿರಿ. ತೈಲ ವ್ಯಾಪಾರಿಗಳಿಗೆ ವ್ಯವಹಾರದಲ್ಲಿ ಹಿನ್ನಡೆ. ಸರ್ಕಾರಿ ನೌಕರರಿಗೆ ಸಹೋದ್ಯೋಗಿಗಳಿಂದ ಸಕಾಲಿಕ ನೆರವಿನಿಂದಾಗಿ ಸಂತೋಷದ ವಾತಾವರಣ.