ಮಾರ್ಚ್ 20, ಶನಿವಾರ, 2021 : ನಿತ್ಯಪಂಚಾಂಗ ಹಾಗೂ ರಾಶಿಭವಿಷ್ಯ

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ ಉತ್ತರಾಯಣ,
ಶಿಶಿರ ಋತು, ಫಾಲ್ಗುಣ ಮಾಸ,
ಶುಕ್ಲ ಪಕ್ಷ, ಸಪ್ತಮಿ, ಶನಿವಾರ,
ರೋಹಿಣಿ ನಕ್ಷತ್ರ (ಹಗಲು 4.46)
ಮೃಗಶಿರಾ ನಕ್ಷತ್ರ
ರಾಹುಕಾಲ: 9:28 ರಿಂದ 10:59
ಗುಳಿಕಕಾಲ: 6: 27ರಿಂದ 07:57
ಯಮಗಂಡಕಾಲ: 02:01 ರಿಂದ 03:32

ಮೇಷ

ಕೃಷಿ ಕಾಮಗಾರಿಗಳ ಸಂಪನ್ಮೂಲ ಕ್ರೋಢಿಕರಣಕ್ಕಾಗಿ ಹಣಕಾಸು ಸಂಸ್ಥೆಗಳ ಮೊರೆ ಹೊಗಬೇಕಾದೀತು. ದೂರದ ಪ್ರಯಾಣ ಮಾಡಬೇಕಾದೀತು. ಸ್ವಂತ ವಾಹನ ಖರೀದಿಯಿಂದ ನೆಮ್ಮದಿ ಕಾಣುವಿರಿ.

ವೃಷಭ

ಹಂತಹಂತವಾಗಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ಬಂಧುಗಳ ಆಗಮನದಿಂದ ಸಂತೋಷದ ವಾತಾವರಣ. ಸಂಬಂಧಿಕರೊಂದಿಗೆ ಸುದೀರ್ಘ ಆಪ್ತಸಮಾಲೋಚನೆಯಿಂದಾಗಿ ಬಾಂಧವ್ಯದಲ್ಲಿ ವೃದ್ಧಿ.

ಮಿಥುನ

ವೈಯಕ್ತಿಕ ವಿಚಾರಗಳತ್ತ ಹೆಚ್ಚಿನ ಗಮನ ಹರಿಸಬೇಕಾದೀತು. ನೆರೆಯವರೊಂದಿಗೆ ಸ್ನೇಹ ಸಂಬಂಧಗಳು ವೃದ್ಧಿಯಾಗಲಿವೆ. ಮನೆ ಬದಲಾವಣೆ ವಿಚಾರ ಚರ್ಚೆಗೆ ಬರಲಿದೆ. ಅತಿಯಾದ ಆಯಾಸದಿಂದ ಬಳಲುವಿರಿ.

ಕಟಕ

ಮನೆಯವರ ಅಸಮ್ಮತಿಯ ನಡುವೆಯೂ ದೂರ ಪ್ರಯಾಣ ಮಾಡಬೇಕಾದೀತು. ಪತ್ನಿವರ್ಗದವರಿಂದ ಸಹಾಯ ದೊರಕಲಿದೆ. ಸಂಬಂಧಿಗಳ ಮಧ್ಯಸ್ಥಿಕೆಯಿಂದಾಗಿ ಸಮಸ್ಯೆ ನಿವಾರಣೆಯಾಗಲಿದೆ.

ಸಿಂಹ

ತುರ್ತು ವಿಷಯಕ್ಕಾಗಿ ಸಂಬಂಧಿಕರ ನೆರವನ್ನು ಪಡೆಯಬೇಕಾದೀತು. ಸಂಸಾರದಲ್ಲಿ ನೆಮ್ಮದಿ. ಅನಗತ್ಯ ಸುತ್ತಾಟದಿಂದಾಗಿ ದೇಹಾಲಸ್ಯ. ಗುರುದೇವತಾ ದರ್ಶನ ಮಾಡುವ ಸಾಧ್ಯತೆ ಕಂಡುಬರುವುದು.

ಕನ್ಯಾ

ತಂದೆ ತಾಯಿಗಳಿಗೆ ಮಕ್ಕಳ ಸಲುವಾಗಿ ವಿದೇಶ ಪ್ರಯಾಣ ಸಾಧ್ಯತೆ. ಸತ್ಪುರುಷರ ಸಂದರ್ಶನ ಮಾಡುವ ಸಂಭವ. ಅಧ್ಯಯನದಲ್ಲಿಯ ಆಸಕ್ತಿಯಿಂದಾಗಿ ಉತ್ತಮ ಭವಿಷ್ಯ ನಿರ್ಮಾಣಕ್ಕೆ ಮಾರ್ಗವಾಗಲಿದೆ.

ತುಲಾ

ಜಮೀನಿನ ಕೆಲಸ–ಕಾರ್ಯಗಳು ಭರದಿಂದ ಸಾಗುವುದರ ಜೊತೆಗೆ ಕಾಮಗಾರಿಗಳು ಹೆಚ್ಚಳಗೊಳ್ಳುವವು. ಹಣಕಾಸು ಸಂಸ್ಥೆಗಳಿಂದ ಸಹಾಯ ಪಡೆಯುವ ಅವಶ್ಯಕತೆ ನೀಗಲಿದೆ.

ವೃಶ್ಚಿಕ

ತರಕಾರಿ ಹಣ್ಣುಗಳ ವ್ಯಾಪಾರಸ್ಥರಿಗೆ ಬಹು ಬೇಡಿಕೆಯಿಂದಾಗಿ ಅಧಿಕ ಲಾಭ. ಪತ್ನಿ ವರ್ಗದವರ ಮನೆಗಳಿಗೆ ಕುಟುಂಬ ಸಮೇತರಾಗಿ ಭೇಟಿ ನೀಡುವ ಸಾಧ್ಯತೆ. ಧಾನ್ಯ ವ್ಯಾಪಾರಸ್ಥರಿಗೆ ವ್ಯವಹಾರದಲ್ಲಿ ಹಿನ್ನಡೆ.

ಧನು

ಪ್ರಾಪ್ತ ವಯಸ್ಕರು ವೈವಾಹಿಕ ಜೀವನಕ್ಕೆ ಕಾಲಿಡುವ ಪ್ರಯತ್ನಗಳು ಫಲ ನೀಡಲಿವೆ. ಗಣ್ಯರೊಂದಿಗೆ ಸಮಾರಂಭದಲ್ಲಿ ಭಾಗವಹಿಸುವ ಸಾಧ್ಯತೆ. ನಿಮ್ಮ ಸಹಾಯ ಸಲಹೆ ಕೋರಿ ಬರುವವರಿಗೆ ಸಹಾಯ ನೀಡಿ.

ಮಕರ

ಚಿನ್ನಾಭರಣಗಳ ವ್ಯವಹಾರ ಪ್ರಾರಂಭಿಸಲು ಉತ್ತಮ ದಿನ. ಲೆಕ್ಕಪತ್ರ ಪರಿಶೀಲನೆಯಲ್ಲಿ ಹೆಚ್ಚಿನ ಕಾಲ ಕಳೆಯಬೇಕಾದೀತು. ಉತ್ತಮ ಆದಾಯ. ಪುಸ್ತಕ ಖರೀದಿಗಾಗಿ ವೆಚ್ಚವನ್ನು ಭರಿಸಬೇಕಾದೀತು.

ಕುಂಭ

ಹೊಸದಾಗಿ ಕಟ್ಟಿಸುತ್ತಿರುವ ಮನೆಯ ಕೆಲಸಗಳು ಪೂರ್ಣಗೊಂಡು ನೆಮ್ಮದಿಯನ್ನು ಉಂಟುಮಾಡಲಿದೆ. ಮಕ್ಕಳ ವಿವಾಹ ವಿಷಯದಲ್ಲಿ ನೆಂಟರಿಂದ ಒತ್ತಾಯಪೂರ್ವಕ ಪ್ರಸ್ತಾಪಗಳು ಬರಲಿದೆ. ಸಾಲದಿಂದ ಮುಕ್ತಿ.

ಮೀನ

ಸಹೋದ್ಯೋಗಿಗಳೊಡನೆ ಉತ್ತಮ ಸಂಬಂಧ. ಲೋಕೋಪಯೋಗಿ ಇಲಾಖೆ, ತಾಂತ್ರಿಕ ಇಲಾಖೆಯ ಕಂಪ್ಯೂಟರ್ ವಿಭಾಗದವರಿಗೆ ಅನುಕೂಲ. ರಾಜಕೀಯದಲ್ಲಿ ಮಾನಸಿಕ ದ್ವಂದ್ವ ಏರ್ಪಡಲಿದೆ.

Leave a comment

Design a site like this with WordPress.com
Get started