ಮಾರ್ಚ್ 19,ಶುಕ್ರವಾರ,2021 : ಇಂದಿನ ನಿತ್ಯಪಂಚಾಂಗ ಮತ್ತು ರಾಶಿಭವಿಷ್ಯ

ಶ್ರೀ ಶಾರ್ವರಿ ನಾಮ ಸಂವತ್ಸರ ಉತ್ತರಾಯಣ, ಶಿಶಿರ ಋತು,ಫಾಲ್ಗುಣ ಮಾಸ,
ಶುಕ್ಲ ಪಕ್ಷ,ಷಷ್ಠಿ, ಶುಕ್ರವಾರ, ಕೃತಿಕ ನಕ್ಷತ್ರ/ರೋಹಿಣಿ ನಕ್ಷತ್ರ.
ರಾಹುಕಾಲ 11:00ರಿಂದ 12: 31
ಗುಳಿಕಕಾಲ 07:58 ರಿಂದ 09:29
ಯಮಗಂಡಕಾಲ 3.33 ರಿಂದ 05:04

ಮೇಷ

ಶತ್ರುಭೀತಿ ದೂರವಾಗಿ ನಿರುಮ್ಮಳವೆನ್ನಿಸಲಿದೆ. ವ್ಯವಹಾರಗಳಲ್ಲಿ ಮಕ್ಕಳ ಸಹಕಾರ ದೊರೆಯುವುದು. ಆತ್ಮೀಯರೊಂದಿಗೆ ಸಮಾಲೋಚನೆಯಿಂದ ನೆಮ್ಮದಿ. ಉದ್ಯೋಗಾಕಾಂಕ್ಷಿಗಳಿಗೆ ಪರೀಕ್ಷೆಯ ಕಾಲ.

ವೃಷಭ

ಅನಿರೀಕ್ಷಿತ ಪ್ರಯಾಣ ಎದುರಾಗಲಿದೆ. ವೃತ್ತಿ ವ್ಯವಹಾರಗಳಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ. ಆರೋಗ್ಯದಲ್ಲಿ ಸುಧಾರಣೆ. ಬಂಧು ಬಾಂಧವರ ಭೇಟಿಯಿಂದಾಗಿ ಮಾನಸಿಕ ನೆಮ್ಮದಿ ಹೊಂದುವಿರಿ.

ಮಿಥುನ

ವಾಹನ, ಯಂತ್ರೋಪಕರಣಗಳಿಂದಾಗಿ ಸ್ವಲ್ಪಮಟ್ಟಿನ ತೊಂದರೆ. ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ಸಂತಸದ ಸುದ್ದಿಯೊಂದನ್ನು ಸ್ವೀಕರಿಸಲಿದ್ದೀರಿ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.

ಕಟಕ

ಕೆಲಸ–ಕಾರ್ಯಗಳಲ್ಲಿ ಯಶಸ್ಸು. ಪ್ರೀತಿಪಾತ್ರರ ಭೇಟಿಯಿಂದಾಗಿ ನೆಮ್ಮದಿ. ವಿದ್ಯಾಭ್ಯಾಸದಲ್ಲಿ ಸಫಲತೆ. ವಿವಾದಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ಸಾಮಾಜಿಕ ಗೌರವಾದರಗಳು.

ಸಿಂಹ

ವಿವಾಹ ಸಂಬಂಧ ವಿರೋಧಿಗಳಿಂದ ಒತ್ತಡವನ್ನು ಎದುರಿಸಬೇಕಾದೀತು. ಕುಟುಂಬ ವರ್ಗದವರಲ್ಲಿ ಸಣ್ಣಪುಟ್ಟ ಮನಸ್ತಾಪ ಕಂಡುಬರುವುದು. ಮಿತ್ರರ ಸಹಕಾರದಿಂದಾಗಿ ಎಲ್ಲವೂ ಸುಗುಮವಾಗಲಿದೆ.

ಕನ್ಯಾ

ಎದೆಗುಂದದ ಧೈರ್ಯದಿಂದಾಗಿ ಕೆಲಸ–ಕಾರ್ಯಗಳಲ್ಲಿ ಅಡಚಣೆಗಳು ನಿವಾರಣೆಯಾಗುವುದು. ಲೇವಾದೇವಿ ವ್ಯವಹಾರದಿಂದ ಅಧಿಕ ಲಾಭ. ಆಪ್ತರ ಭೇಟಿ ಸಂತಸ ನೀಡಲಿದೆ. ವಿಪರೀತ ಖರ್ಚು.

ತುಲಾ

ಒತ್ತಡಗಳ ಪರಿಣಾಮವಾಗಿ ವಿರೋಧಿಗಳು ತಟಸ್ಥರಾಗಲಿದ್ದಾರೆ. ವಾಹನ, ಯಂತ್ರೋಪಕರಣಗಳಿಂದ ನೆಮ್ಮದಿ. ಕುಟುಂಬದಲ್ಲಿನ ಕಿರಿಕಿರಿಯಿಂದ ಹೊರಬಂದು ನೆಮ್ಮದಿಯನ್ನು ಹೊಂದಲಿದ್ದೀರಿ.

ವೃಶ್ಚಿಕ

ಅಧ್ಯಯನದಲ್ಲಿ ಉನ್ನತಿ ಕಾಣುವಿರಿ. ವೃತ್ತಿಜೀವನದಲ್ಲಿ ಪ್ರಗತಿ. ಅಸ್ಥಿರ ಮನಸ್ಸಿನಿಂದಾಗಿ ಭಯ ಮೂಡುವ ಸಾಧ್ಯತೆ. ಪ್ರೀತಿಪಾತ್ರರೊಂದಿಗಿನ ಸಮಾಲೋಚನೆ ಮಾನಸಿಕ ನೆಮ್ಮದಿ ತರಲಿದೆ.

ಧನು

ಸಮಯೋಚಿತವಾಗಿ ಕೈಗೊಂಡ ಕಾರ್ಯಗಳು ಸಂಪೂರ್ಣಗೊಂಡು ಹಿರಿಯರಿಂದ ಮೆಚ್ಚುಗೆ. ಆರೋಗ್ಯದಲ್ಲಿ ಸುಧಾರಣೆ. ಪ್ರಯಾಣದಲ್ಲಿನ ನೆಮ್ಮದಿಯನ್ನು ಸಂಪೂರ್ಣ ಪಡೆದುಕೊಳ್ಳಲಿದ್ದೀರಿ.

ಮಕರ

ಭಿನ್ನಮತ ಬಗೆಹರಿಯುವುದರೊಂದಿಗೆ ಕೆಲಸ–ಕಾರ್ಯಗಳು ಸರಾಗವಾಗಿ ಸಂತಸ ಮೂಡಲಿದೆ. ಭೂ ವ್ಯವಹಾರದಲ್ಲಿ ಹಿರಿಯರ ಸಲಹೆ ಪಡೆದು ಮುಂದುವರೆಯುವುದು ಒಳಿತು. ವ್ಯಾಪಾರಸ್ಥರಿಗೆ ನಿರೀಕ್ಷಿತ ಲಾಭ.

ಕುಂಭ

ಕೆಲಸದಲ್ಲಿ ಒತ್ತಡ ಎದುರಿಸುವಿರಿ. ವಿಪರೀತ ಶ್ರಮ ವಹಿಸಿ ಕಾರ್ಯನಿರ್ವಹಿಸುವುದರಿಂದಾಗಿ ದೇಹಾಲಸ್ಯ. ಅನಾವಶ್ಯಕ ಓಡಾಟಗಳು ಎದುರಾಗುವ ಸಾಧ್ಯತೆ. ಸಂಗಾತಿಯ ಸಹಕಾರದಿಂದ ನೆಮ್ಮದಿ.

ಮೀನ

ವ್ಯಾಪಾರ ವ್ಯವಹಾರಗಳಲ್ಲಿನ ಲಾಭ ವೃದ್ಧಿಯಾಗಲಿದೆ. ಹರ್ಷ ಮೂಡಿಸುವ ಸಂದೇಶಗಳನ್ನು ಕೇಳುವಿರಿ. ಬಹುದಿನಗಳಿಂದ ಬರಬೇಕಾದ ಬಾಕಿ ಹಣ ಬರಲಿದೆ. ಕುಟುಂಬದಲ್ಲಿ ಶಾಂತ ವಾತಾವರಣ ನೆಲೆಸುವುದು.

Leave a comment

Design a site like this with WordPress.com
Get started