
ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು,
ಪಾಲ್ಗುಣ ಮಾಸ, ಶುಕ್ಲ ಪಕ್ಷ,
ವಾರ : ಮಂಗಳವಾರ, ತಿಥಿ : ತೃತೀಯ,
ನಕ್ಷತ್ರ : ಅಶ್ವಿನಿ,
ರಾಹುಕಾಲ: 3.33 ರಿಂದ 5.04
ಗುಳಿಕಕಾಲ: 12.32 ರಿಂದ 2.02
ಯಮಗಂಡಕಾಲ: 9.30 ರಿಂದ 11.01
ಮೇಷ
ಆರ್ಥಿಕ ಸಹಾಯ ದೊರಕಿ ಆಸ್ತಿ ವ್ಯವಹಾರದಲ್ಲಿ ಕೈಹಾಕುವ ಸಾಧ್ಯತೆ. ದಲ್ಲಾಳಿ ವ್ಯವಹಾರದಿಂದ ಉತ್ತಮ ಆದಾಯ. ಗಣಕಯಂತ್ರ ಮುಂತಾದ ಆಧುನಿಕ ಯಂತ್ರಗಳ ವ್ಯವಹಾರ ನಿಮಗೆ ಉತ್ತಮ ಆದಾಯ ತರಲಿದೆ.
ವೃಷಭ
ಸರ್ಕಾರಿ ಉದ್ಯೋಗದಲ್ಲಿರುವವರಿಗೆ ಸ್ಥಾನ ಬದಲಾವಣೆಯ ಸಾಧ್ಯತೆ. ಹಿಂದಿನ ವರ್ಷದ ಕೆಲವು ಕಹಿ ಘಟನೆಗಳಿಗೆ ಇಂದು ಉತ್ತರ ದೊರಕಿಸಿಕೊಳ್ಳಲಿದ್ದೀರಿ. ಮನೆಯಲ್ಲಿ ಸಹೋದರರ ವಿರೋಧವನ್ನು ಎದುರಿಸಬೇಕಾಗಬಹುದು.
ಮಿಥುನ
ಗಣಕಯಂತ್ರ ಮುಂತಾದ ತಾಂತ್ರಿಕ ಉಪಕರಣಗಳ ಮಾರಾಟಗಾರರಿಗೆ ಉತ್ತಮ ಲಾಭ. ಬಂಧುಗಳ ಸಹಕಾರದಿಂದ ಆಸ್ತಿ ಖರೀದಿ ಸಾಧ್ಯತೆ. ಸಂಗಾತಿಯ ಆಸೆಯಂತೆ ದೂರದ ಪ್ರಯಾಣ ಮಾಡಲಿದ್ದೀರಿ.
ಕಟಕ
ಸ್ತ್ರೀಯರಿಗೆ ಅತಿಯಾದ ಕೆಲಸದಿಂದಾಗಿ ದೇಹಾಲಸ್ಯ. ಆಸ್ತಿ ಹಸ್ತಾಂತರ ಮಾಡುವ ಸಾಧ್ಯತೆ. ಸಾಲ ಮುಂಗಡ ಇತ್ಯಾದಿ ವ್ಯವಹಾರದಿಂದ ದಿನದ ಮಟ್ಟಿಗೆ ದೂರವಿರುವುದು ಒಳ್ಳೆಯದು. ಮಕ್ಕಳ ವಿಷಯದಲ್ಲಿ ಸಂತಸ.
ಸಿಂಹ
ಉದ್ಯಮವೊಂದರ ಸ್ಥಾಪನೆಗೆ ಅನುಕೂಲ ದೊರಕಿಸಿಕೊಳ್ಳಲಿದ್ದೀರಿ. ದಕ್ಷತೆಯ ಕಾರ್ಯನಿರ್ವಹಣೆಯಿಂದ ಉದ್ಯಮದಲ್ಲಿ ಯಶಸ್ಸು. ಆರೋಗ್ಯದಲ್ಲಿ ಏರುಪೇರುಗಳನ್ನು ನಿರೀಕ್ಷಿಸಬಹುದು.
ಕನ್ಯಾ
ಕೈಗಾರಿಕೋದ್ಯಮಿಗಳಿಗೆ ಅತ್ಯಂತ ಪ್ರಶಸ್ತವಾದ ದಿನ. ರಕ್ಷಣಾ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಉದ್ಯೋಗದಲ್ಲಿ ಬಡ್ತಿ ಸಾಧ್ಯತೆ. ಸಾರ್ವಜನಿಕ ಸಭೆ ಸಮಾರಂಭದಲ್ಲಿ ಭಾಗವಹಿಸಿ ಗೌರವ ಹೊಂದಲಿದ್ದೀರಿ.
ತುಲಾ
ಹೆಣ್ಣುಮಕ್ಕಳಿಗೆ ಕಂಕಣ ಭಾಗ್ಯ ದೊರೆಯಲಿದೆ. ನೌಕರಿಯಲ್ಲಿರುವವರಿಗೆ ಕಿರಿಕಿರಿ ಸಾಧ್ಯತೆ. ಬಂಧುಗಳಿಂದ ಆರ್ಥಿಕ ಸಹಾಯದ ಭರವಸೆ ಪಡೆಯಲಿದ್ದೀರಿ. ಮನಸ್ಸಿಗೆ ಉಲ್ಲಾಸ ತರುವಂತಹ ವಾರ್ತೆಯೊಂದನ್ನು ಕೇಳಲಿದ್ದೀರಿ.
ವೃಶ್ಚಿಕ
ಹಣಕಾಸು ವ್ಯವಹಾರ ನಡೆಸುವವರಿಗೆ ಹೆಚ್ಚಿನ ಆದಾಯ. ಮಹಿಳಾ ರಾಜಕಾರಣಿಗಳಿಂದ ಕಿರುಕುಳ ಉಂಟಾಗುವ ಸಾಧ್ಯತೆ. ವೈದ್ಯಕೀಯ ಕ್ಷೇತ್ರದಲ್ಲಿರುವವರಿಗೆ ಉತ್ತಮ ಹೆಸರಿನೊಂದಿಗೆ ಆದಾಯ ತರಲಿದೆ.
ಧನು
ಸಂಶೋಧನಾ ಕೆಲಸದಲ್ಲಿರುವವರಿಗೆ ಹೊಸ ಸಂಶೋಧನೆಯ ಗರಿ ಮುಡಿಗೇರಲಿದೆ. ಆಸ್ತಿ ಖರೀದಿ ಸಾಧ್ಯತೆ. ಮನೆಯಲ್ಲಿ ಆಧುನಿಕ ವಿಶೇಷ ಬದಲಾವಣೆಯೊಂದನ್ನು ನಿರೀಕ್ಷಿಸಬಹುದು. ಆರೋಗ್ಯದಲ್ಲಿ ಗಮನ ಅವಶ್ಯ.
ಮಕರ
ಆಸ್ತಿ ನೋಂದಣಿ ಮುಂತಾದ ಕೆಲಸಗಳು ಸುಗಮವಾಗಿ ನಡೆಯಲಿದೆ. ವ್ಯಾಪಾರ ವ್ಯವಹಾರದಲ್ಲಿ ಮುನ್ನಡೆ. ವ್ಯವಸಾಯ ಕ್ಷೇತ್ರದಲ್ಲಿ ದುಡಿಯುತ್ತಿರುವವರಿಗೆ ಉತ್ತಮ ದಿನವಾಗಲಿದೆ. ಆರೋಗ್ಯದಲ್ಲಿ ಸುಧಾರಣೆ.
ಕುಂಭ
ಕೋರ್ಟು ಕಛೇರಿ ಕೆಲಸಗಳಲ್ಲಿ ಯಶಸ್ಸು. ಸ್ವಯಂ ಉದ್ಯೋಗಿಗಳಿಗೆ ಹೆಚ್ಚಿನ ಆದಾಯ. ಸಗಟು ವ್ಯಾಪಾರಿಗಳಿಗೆ ಉತ್ತಮ ವ್ಯವಹಾರವನ್ನು ನಿರೀಕ್ಷಿಸಬಹುದು. ಮಕ್ಕಳಿಂದ ಕಿರಿಕಿರಿ ಅನುಭವಿಸಬೇಕಾದೀತು.
ಮೀನ
ಜಲ ಸಂಬಂಧಿ ಕೆಲಸಗಳಲ್ಲಿ ತೊಡಗಿರುವವರಿಗೆ ಉತ್ತಮ ಭವಿಷ್ಯ. ಹೊಸ ವ್ಯಕ್ತಿಗಳ ಪರಿಚಯದಿಂದಾಗಿ ಕಾರ್ಯಾನುಕೂಲ. ಕ್ರೀಡಾಪಟುಗಳಿಗೆ ಸ್ಪರ್ಧೆಯಲ್ಲಿ ಉತ್ತಮ ಸಾಧನೆಯ ಲಕ್ಷಣ ಕಂಡುಬರುತ್ತಿದೆ.