ಮಾರ್ಚ್ 15, ಸೋಮವಾರ, 2021 ; ಇಂದಿನ ಪಂಚಾಂಗ ಹಾಗೂ ರಾಶಿಭವಿಷ್ಯ

ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ,
ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ,
ವಾರ: ಸೋಮವಾರ, ತಿಥಿ: ದ್ವಿತೀಯ, ನಕ್ಷತ್ರ: ರೇವತಿ, ರಾಹುಕಾಲ: 8.01 ರಿಂದ 9.31
ಗುಳಿಕಕಾಲ :2.03 ರಿಂದ 3.33
ಯಮಗಂಡಕಾಲ :11.02 ರಿಂದ 12.32

ಮೇಷ

ಉದ್ಯೋಗದಲ್ಲಿ ಬದಲಾವಣೆಯಾಗುವ ನಿರೀಕ್ಷೆ. ಯುವಕರಿಗೆ ಪ್ರಶಂಸೆಯ ಸುರಿಮಳೆ. ನೆರೆಹೊರೆಯವ ರೊಂದಿಗೆ ವಿರಸ ತಲೆದೋರಬಹುದು. ಉದ್ಯಮ ಸ್ಥಳದಲ್ಲಿ ನವೀಕರಣ/ ಬದಲಾವಣೆ ಮಾಡಲಿದ್ದೀರಿ.

ವೃಷಭ

ಸಮಸ್ಯೆಗಳಿಗೆ ಪರಹಾರ ಕಂಡುಕೊಳ್ಳುವಿರಿ. ತೈಲ ವ್ಯಾಪಾರಿಗಳಿಗೆ ಅಧಿಕ ಧನಲಾಭ. ಲೆಕ್ಕಪತ್ರಗಳನ್ನು ಮರುಪರಿಶೀಲನೆಗೆ ಒಳಪಡಿಸಬೇಕಾದ ಅನಿವಾರ್ಯತೆ ತಲೆದೋರೀತು.

ಮಿಥುನ

ಬಟ್ಟೆ ಹಾಗೂ ಲೋಹ ವ್ಯಾಪಾರ ಮಾಡುವವರಿಗೆ ವಿಶೇಷ ಆದಾಯ. ಹಣಕಾಸು ಸಂಸ್ಥೆಗಳ ಅಧಿಕಾರಿಗಳ ವ್ಯತಿರಿಕ್ತ ಸಲಹೆಯಿಂದಾಗಿ ನಷ್ಟ. ಲೇವಾದೇವಿದಾರರಿಗೆ ವಿಶೇಷ ಲಾಭದ ನಿರೀಕ್ಷೆ ಕಂಡುಬರುವುದು.

ಕಟಕ

ಆಮದು–ರಫ್ತು ವ್ಯವಹಾರದಲ್ಲಿ ತೊಡಗಿಕೊಂಡಿರುವವರಿಗೆ ಉತ್ತಮ ಲಾಭ. ಪಾಲುಗಾರಿಕೆ ವ್ಯವಹಾರ ಸ್ವಲ್ಪಮಟ್ಟಿನ ಇರುಸುಮುರುಸು ತರುವ ಸಾಧ್ಯತೆ. ಉದ್ಯೋಗಸ್ಥರಿಗೆ ಒಳ್ಳೆಯ ಸುದ್ದಿ.

ಸಿಂಹ

ಉದ್ಯೋಗ ಕ್ಷೇತ್ರದಿಂದ ಒಳ್ಳೆಯ ಸುದ್ದಿ. ಅತಿಯಾದ ಕಾರ್ಯಬಾಹುಳ್ಯದಿಂದಾಗಿ ಕೌಟುಂಬಿಕ ವಿರಸ ಮೂಡುವ ಸಾಧ್ಯತೆ. ಮಕ್ಕಳು ಉದ್ಯೋಗ ನಿಮಿತ್ತ ವಿದೇಶ ಪ್ರಯಾಣ ಮಾಡುವ ಸಾಧ್ಯತೆ.

ಕನ್ಯಾ

ಅಡೆತಡೆಗಳ ನಡುವೆಯೂ ಶುಭ ಕಾರ್ಯ ನೆರವೇರಿಸಲಿದ್ದೀರಿ. ವಿಮಾ ಅಧಿಕಾರಿಗಳಿಗೆ ಸ್ಥಾನ ಬದಲಾವಣೆ. ಔಷಧ ತಯಾರಕರು, ಬಣ್ಣ ಮುಂತಾದ ರಾಸಾಯನಿಕ ವಸ್ತುಗಳ ವ್ಯವಹಾರಗಳಲ್ಲಿ ತೊಡಗಿದವರಿಗೆ ಉತ್ತಮ ಲಾಭ.

ತುಲಾ

ಅಧಿಕಾರಿಗಳ ಅಸಹಕಾರದಿಂದ ಸರಕಾರದಿಂದಾಗಬೇಕಾದ ಕೆಲಸ ವಿಳಂಬ. ನಿರಾಸೆಯ ಮಧ್ಯೆ ಆಸೆಯ ಸೆಳೆವೊಂದು ಕಂಡುಬರಲಿದೆ. ಕಾರ್ಯಸಾಧನೆಗಾಗಿ ಅನ್ಯ ಮಾರ್ಗವೊಂದನ್ನು ಕಂಡುಕೊಳ್ಳುವಿರಿ.

ವೃಶ್ಚಿಕ

ಸಂಗಾತಿಗೆ ನೆರೆಹೊರೆಯವರಿಂದ ಸ್ವಲ್ಪಮಟ್ಟಿನ ಪ್ರತಿರೋಧ. ನವೀನ ವ್ಯವಹಾರವೊಂದರಲ್ಲಿ ಹಣ ವಿನಿಯೋಗ. ಹೊಸ ಉದ್ಯಮದಿಂದ ಶ್ರೇಯಸ್ಸು. ಧಾರ್ಮಿಕ ಕಾರ್ಯಗಳಿಗಾಗಿ ಧನ ವಿನಿಯೋಗ ಮಾಡಲಿದ್ದೀರಿ.

ಧನು

ರಾಜಕೀಯ ವ್ಯಕ್ತಿಗಳಿಗೆ ಆಶಾದಾಯಕ ದಿನ. ಸರ್ಕಾರಿ ಹುದ್ದೆಯಲ್ಲಿರುವವರು ಭ್ರಷ್ಟಾಚಾರದ ಆರೋಪವನ್ನು ಎದುರಿಸಬೇಕಾದೀತು. ವಿಚಾರಣೆ ವೇಳೆಯಲ್ಲಿ ಸಂಯಮದಿಂದಾಗಿ ಎಲ್ಲವೂ ನಿರಾಳವಾಗಲಿವೆ.

ಮಕರ

ತುರ್ತುವಿಷಯಕ್ಕಾಗಿ ಸಂಬಂಧಿಕರ ನೆರವನ್ನು ಪಡೆಯಬೇಕಾದೀತು. ಸಂಸಾರದಲ್ಲಿ ನೆಮ್ಮದಿ. ಅನಗತ್ಯ ಸುತ್ತಾಟದಿಂದಾಗಿ ದೇಹಾಲಾಸ್ಯ. ಗುರುದೇವತಾ ದರ್ಶನ ಮಾಡುವ ಸಾಧ್ಯತೆ ಕಂಡುಬರುವುದು.

ಕುಂಭ

ಹೊಸದಾಗಿ ಕಟ್ಟಿಸುತ್ತಿರುವ ಮನೆಯ ಕೆಲಸಗಳು ಪೂರ್ಣಗೊಂಡು ನೆಮ್ಮದಿ ಉಂಟುಮಾಡಲಿದೆ. ಮಕ್ಕಳಿಗೆ ವಿವಾಹ ವಿಷಯದಲ್ಲಿ ನೆಂಟರಿಂದ ಒತ್ತಾಯ ಪೂರ್ವಕ ಪ್ರಸ್ತಾಪ. ಸಾಲದಿಂದ ಮುಕ್ತಿ ಹೊಂದಿ ನಿರಾಳತೆ.

ಮೀನ

ತರಕಾರಿ ಹಣ್ಣುಗಳ ವ್ಯಾಪಾರಸ್ಥರಿಗೆ ಬಹು ಬೇಡಿಕೆಯಿಂದಾಗಿ ಅಧಿಕ ಲಾಭ. ಪತ್ನಿ ವರ್ಗದವರ ಮನೆಗಳಿಗೆ ಕುಟುಂಬ ಸಮೇತರಾಗಿ ಭೇಟಿ. ಧಾನ್ಯ ವ್ಯಾಪಾರಸ್ಥರಿಗೆ ವ್ಯವಹಾರದಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ ಕಂಡುಬರಲಿದೆ.

Leave a comment

Design a site like this with WordPress.com
Get started