
ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘಮಾಸ,
ಕೃಷ್ಣಪಕ್ಷ, ಅಮಾವಾಸ್ಯೆ, ಶನಿವಾರ, ಪೂರ್ವ ಭಾದ್ರಪದ ನಕ್ಷತ್ರ
ರಾಹುಕಾಲ: 9.33 ರಿಂದ 11.03
ಗುಳಿಕಕಾಲ: 6.32 ರಿಂದ 08:03
ಯಮಗಂಡಕಾಲ 02:03 ರಿಂದ 03:33
ಮೇಷ
ಮಕ್ಕಳ ಆರೋಗ್ಯದ ಕಡೆ ಹೆಚ್ಚಿನ ಗಮನ ಅಗತ್ಯ. ಜಂಟಿ ವ್ಯವಹಾರಗಳಿಗೆ ಕೈ ಹಾಕದಿರುವುದು ಉತ್ತಮ. ಬಂಧು ಮಿತ್ರರೊಂದಿಗೆ ಶುಭ ಸಮಾರಂಭದಲ್ಲಿ ಭಾಗಿ. ದೈನಂದಿನ ವ್ಯವಹಾಗಳಲ್ಲಿ ಸಂತಸವನ್ನು ಕಾಣಲಿದ್ದೀರಿ.
ವೃಷಭ
ವಿವಾಹಾಕಾಂಕ್ಷಿಗಳಿಗೆ ಸಂಬಂಧಗಳು ಕೂಡಿಬರುವ ಸಾಧ್ಯತೆ. ಹಲವಾರು ವೈಯಕ್ತಿಕ ಸಮಸೆಗಳನ್ನು ಪರಿಹರಿಸಿಕೊಳ್ಳುವಿರಿ. ನೂತನ ವಾಹನ ಖರೀದಿ ಮಾಡಲಿದ್ದೀರಿ.
ಮಿಥುನ
ಉದ್ಯೋಗದಲ್ಲಿರುವವರಿಗೆ ಮೇಲಾಧಿಕಾರಿಗಳಿಂದ ಪ್ರಶಂಸೆಗಳು ಹರಿದುಬರಲಿವೆ. ಮಹಿಳೆಯರ ಇಷ್ಟಾರ್ಥಗಳು ಈಡೇರಿ ಸಂತಸ ಮೂಡಲಿದೆ. ಆರ್ಥಿಕ ಅಭಿವೃದ್ಧಿಯಾಗಿ ಹೊಸ ಬದುಕಿಗೆ ನಾಂದಿಯಾಗಲಿದೆ.
ಕಟಕ
ದೂರಾಲೋಚನೆಯಿಂದ ಮಾಡಿದ ಕಾರ್ಯಗಳಲ್ಲಿ ಯಶಸ್ಸನ್ನು ಕಾಣಲಿದ್ದೀರಿ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಗಮನ ಹರಿಸಬೇಕಾದುದು ಅನಿವಾರ್ಯ. ದೂರಪ್ರಯಾಣ ಮಾಡದಿರುವುದು ಒಳಿತು.
ಸಿಂಹ
ಮಕ್ಕಳೊಂದಿಗೆ ವಾದ ವಿವಾದ ಮಾಡದಿರುವುದು ಉತ್ತಮ. ಮಿತ್ರರಿಂದ ಸಹಕಾರ ಸಲಹೆಗಳು ಲಭ್ಯ. ವಾಹನ ಚಾಲನೆ, ಸ್ತ್ರೀಯರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆ ಅಗತ್ಯ. ಬಂಧುಗಳೊಂದಿಗಿನ ಭಿನ್ನಾಭಿಪ್ರಾಯ ದೂರ.
ಕನ್ಯಾ
ಆರ್ಥಿಕ ಅನುಕೂಲತೆಗಳು ಕೂಡಿಬರಲಿವೆ. ವಿದೇಶಪ್ರಯಾಣ ಯೋಗವೂ ಕಂಡುಬರುತ್ತಿದೆ. ದಿನನಿತ್ಯದ ಕೆಲಸಗಳಲ್ಲಿ ಉತ್ಸಾಹ ಮೂಡಿಬರಲಿದೆ. ಮಿತ್ರರ ಸಹಾಯ ಸಹಕಾರಗಳಿಂದಾಗಿ ವ್ಯವಹಾರಗಳು ಸುಧಾರಿಸಲಿವೆ.
ತುಲಾ
ದೈನಂದಿನ ಕಾರ್ಯಗಳಲ್ಲಿ ಆಸಕ್ತಿ ವಹಿಸಲಿದ್ದೀರಿ. ಆಸ್ತಿ ವಿಷಯದಲ್ಲಿ ಕಲಹ ಎದುರಾಗುವ ಸಾಧ್ಯತೆ. ನೌಕರಿಯಲ್ಲಿರುವವರಿಗೆ ವರ್ಗಾವಣೆ. ಅಮೂಲ್ಯ ವಸ್ತುಗಳ ಸಂಗ್ರಹಣೆ ಮಾಡಲಿದ್ದೀರಿ.
ವೃಶ್ಚಿಕ
ತಾಳ್ಮೆಯಿಂದ ಕಾರ್ಯಸಿದ್ಧಿ. ಕೃಷಿ ಕ್ಷೇತ್ರದಲ್ಲಿ ಕೆಲಸಮಾಡುವಾಗ ಎಚ್ಚರಿಕೆ ವಹಿಸುವುದು ಉತ್ತಮ. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ವ್ಯವಹಾರದಲ್ಲಿ ಹೆಚ್ಚಿನ ಶ್ರಮ ವಹಿಸಬೇಕಾದೀತು.
ಧನು
ಸಂತೃಪ್ತ ಸಾಂಸಾರಿಕ ಜೀವನ. ಮಹಿಳೆಯರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಲಿದ್ದೀರಿ. ಕುಟುಂಬದ ಸದಸ್ಯರೊಂದಿಗೆ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ. ಅತಿಯಾದ ಕೋಪ ತೊಂದರೆಗೆ ಆಹ್ವಾನವಾದೀತು.
ಮಕರ
ಬಹುಕಾಲದ ಬಯಕೆಗಳು ಈಡೇರಲಿವೆ. ಋಣಪರಿಹಾರದಿಂದಾಗಿ ಸಂತೃಪ್ತಿ. ವೈಯುಕ್ತಿಕ ವಿಚಾರಗಳನ್ನು ಬಹಿರಂಗ ಪಡಿಸದೇ ಇರುವುದು ಕ್ಷೇಮ. ವಸ್ತ್ರ, ಹತ್ತಿ, ನಾರಿನ ಪದಾರ್ಥಗಳ ವ್ಯಾಪಾರದಲ್ಲಿ ಹೆಚ್ಚಿನ ಆದಾಯ.
ಕುಂಭ
ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ. ಗೃಹ ನಿರ್ಮಾಣ ಅಥವಾ ಖರೀದಿ ಸಾಧ್ಯತೆ. ಮಹಿಳೆಯರಿಗೆ ಸಾಮಾಜಿಕ ಗೌರವಾದರಗಳು ದೊರಕಲಿವೆ. ರಾಜಕೀಯದಲ್ಲಿ ಯಶಸ್ಸಿನ ಹೆಜ್ಜೆ ತುಳಿಯಲಿದ್ದೀರಿ.
ಮೀನ
ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ತುರುಸಿನಿಂದ ತೊಡಗಿಕೊಳ್ಳುವಿರಿ. ಹಣಕಾಸಿನ ವಿಚಾರದಲ್ಲಿ ಅತ್ಯಂತ ಜಾಗರೂಕತೆ ಅವಶ್ಯ. ಮಕ್ಕಳ ಆರೋಗ್ಯದ ಕಡೆ ತುಸು ಗಮನ ವಹಿಸುವುದು ಉತ್ತಮ.