
12-3-2021 ಶುಕ್ರವಾರ ಶಾರ್ವರಿ ಸಂ|ರದ ಕುಂಭ ಮಾಸ ದಿನ 28 ಸಲುವ ಮಾಘ ಬಹುಳ 21 ಗಳಿಗೆದಿನ ವಿಶೇಷ :ನಿತ್ಯ ನಕ್ಷತ್ರ :ಶತಭಿಷಾ4011ಗಳಿಗೆಮಹಾ ನಕ್ಷತ್ರ :ಪೂರ್ವಾಭಾದ್ರಾಋತು :ಶಿಶಿರರಾಹುಕಾಲ :10.30-12.00 ಗಂಟೆಗುಳಿಕ ಕಾಲ :7.30 – 9.00 ಗಂಟೆಸೂರ್ಯಾಸ್ತ :6.38 ಗಂಟೆಸೂರ್ಯೋದಯ :6.42 ಗಂಟೆ
ಮೇಷ
ಔಷಧ ವ್ಯಾಪಾರಿಗಳು, ಹತ್ತಿ ಮತ್ತು ಬಟ್ಟೆ, ಔಷಧ ವ್ಯಾಪಾರಿಗಳಿಗೆ ವ್ಯವಹಾರದಲ್ಲಿ ಉತ್ತಮ ಲಾಭ. ಲೇವಾದೇವಿ ವ್ಯವಹಾರದಲ್ಲಿ ತೊಡಗಿದವರಿಗೆ ಆದಾಯದಲ್ಲಿ ಹೆಚ್ಚಳ. ಆರೋಗ್ಯದಲ್ಲಿ ಕೊಂಚಮಟ್ಟಿನ ತೊಂದರೆ.
ವೃಷಭ
ತಂತ್ರಜ್ಞರಿಗೆ, ಬ್ಯಾಂಕ್ ಮುಂತಾದ ಹಣಕಾಸು ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಪದೋನ್ನತಿ. ಅತ್ಯಂತ ಸಂತೋಷದಾಯಕ ದಿನವಾಗಿ ಪರಿಣಮಿಸಲಿದೆ. ಯೋಜಿತ ಕಾರ್ಯಗಳಲ್ಲಿ ಯಶಸ್ಸನ್ನು ಕಾಣುವಿರಿ.
ಮಿಥುನ
ಆರೋಗ್ಯದಲ್ಲಿ ಸುಧಾರಣೆ. ರಾಜಿ ಸಂಧಾನಗಳು ಸಫಲಗೊಂಡು ಪ್ರತಿಷ್ಠಿತ ಸ್ಥಾನವೊಂದನ್ನು ಅಲಂಕರಿಸುವ ಸಾಧ್ಯತೆ. ಶತೃಗಳು ಸೃಷ್ಟಿಸುವ ಸಂಚುಗಳಲ್ಲಿ ಸಿಕ್ಕಿಕೊಳ್ಳದಂತೆ ಎಚ್ಚರಿಕೆ ಅಗತ್ಯ.
ಕಟಕ
ನೌರಿಯಲ್ಲಿರುವವರಿಗೆ ಬೇಸರವನ್ನುಂಟು ಮಾಡುವ ಸಾಧ್ಯತೆ. ಮನಸ್ಸಿಗೆ ಅಹಿತಕರವೆನಿಸುವ ಸುದ್ದಿಯೊಂದು ಕೇಳಿಬರುವ ಸಾಧ್ಯತೆ . ದ್ರವ್ಯ ಸಂಗ್ರಹ ಮಾಡುವ ಯೋಗವು ಕಂಡುಬರುತ್ತಿದೆ.
ಸಿಂಹ
ಆಸ್ತಿಯನ್ನು ಖರೀದಿ ಮಾಡುವ ಸಾಧ್ಯತೆ. ಹಣಕಾಸಿನ ಅನುಕೂಲದೊಂದಿಗೆ ಉನ್ನತ ಸ್ಥಾನಮಾನ ಲಭ್ಯ. ನಿಮ್ಮ ಕುಯುಕ್ತಿಯು ಬಯಲುಗೊಂಡು ಮಾನಹಾನಿ ಎದುರಿಸಬೇಕಾದ ಸಂದರ್ಭ ಎದುರಾಗಲಿವೆ.
ಕನ್ಯಾ
ವ್ಯವಹಾರದಲ್ಲಿ ಪ್ರಗತಿ ಕಾಣುವಿರಿ. ಉನ್ನತ ಶಿಕ್ಷಣದ ಅವಕಾಶಗಳು ಕೈಗೂಡಲಿದೆ. ವಿವಾದಗಳಲ್ಲಿ ಯಶಸ್ಸು. ಶೃಂಗಾರ ಉಪಕರಣ, ಯಂತ್ರೋಪಕರಣಗಳ ವ್ಯಾಪಾರದಲ್ಲಿ ಉತ್ತಮ ಲಾಭ ದೊರಕಲಿದೆ.
ತುಲಾ
ವಾದವಿವಾದಗಳಿಂದಾಗಿ ನಿರಾಸಕ್ತಿ ಮೂಡುವ ಸಾಧ್ಯತೆ. ಶತೃ ಬಾಧೆಯಿಂದ ಮುಕ್ತರಾಗಿ ನೆಮ್ಮದಿ ಅನುಭವಿಸಲಿದ್ದೀರಿ. ವ್ಯವಹಾರದಲ್ಲಿ ಕಾರ್ಮಿಕರ ಕೊರತೆ ಎದುರಿಸಿ ನಷ್ಟ ಅನುಭವಿಸಬೇಕಾದೀತು.
ವೃಶ್ಚಿಕ
ಮಹಿಳೆಯರಿಗೆ ಉದ್ಯೋಗದಲ್ಲಿ ಉತ್ತಮ ಅವಕಾಶ ತೆರೆದುಕೊಳ್ಳುವ ಲಕ್ಷಣ. ನೌಕರಸ್ಥ ಮಹಿಳೆಯರು ಕಛೇರಿಗಳಲ್ಲಿ ಕಿರಿಕಿರಿ ಎದುರಿಸಬೇಕಾದೀತು. ಯಂತ್ರೋಪಕರಣಗಳಲ್ಲಿ ತೊಂದರೆ ಕಂಡುಬರುವ ಸಾಧ್ಯತೆ.
ಧನು
ವ್ಯವಸಾಯದಲ್ಲಿ ತೊಡಗಿರುವವರು ಹಣಕಾಸಿನ ಮುಗ್ಗಟ್ಟು ಎದುರಿಸಬೇಕಾದೀತು. ಬಂಧುಗಳ ಮಧ್ಯಪ್ರವೇಶದಿಂದಾಗಿ ಸಮಸ್ಯೆ ಪರಿಹಾರ. ಪ್ರೇಮ ಪ್ರಕರಣಗಳಲ್ಲಿ ಯಶಸ್ಸು. ಮಂಗಲ ಕಾರ್ಯಗಳಲ್ಲಿ ಭಾಗಿ.
ಮಕರ
ವಾದ– ವಿವಾದಗಳಲ್ಲಿ ವಿಜಯ. ವ್ಯವಹಾರ ಸಂಪರ್ಕದಿಂದ ಅಭಿವೃದ್ಧಿ. ಯುವಕರಿಗೆ ಭಾಗ್ಯೋದಯ. ವ್ಯಾಪಾರ ಪ್ರತಿನಿಧಿಗಳಿಗೆ ಲೆಕ್ಕಪರಿಶೋಧಕರಿಗೆ ಬಿಡುವಿಲ್ಲದ ಕೆಲಸ. ಅತಿಯಾದ ಕಾರ್ಯಬಾಹುಳ್ಯ.
ಕುಂಭ
ಆತ್ಮೀಯರ ಸಲಹೆಯಿಂದಾಗಿ ಎದುರಾದ ವಿಪತ್ತಿನಿಂದ ಪಾರಾಗಲಿದ್ದೀರಿ. ಮನೆಯ ತುಂಬ ಹರ್ಷದ ಹೊನಲು. ಸಂಕಲ್ಪಿಸಿದ ಕಾರ್ಯಗಳಲ್ಲಿ ಯಶಸ್ಸನ್ನು ಕಾಣುವಿರಿ. ದೇವತಾರಾಧನೆಯಿಂದಾಗಿ ವಿಘ್ನಗಳು ಪರಿಹಾರ.
ಮೀನ
ಪ್ರವಾಸೋದ್ಯಮ, ಸಂಚಾರ ವ್ಯವಸ್ಥೆಗಳಲ್ಲಿ ತೊಡಗಿಕೊಂಡವರಿಗೆ ಉತ್ತಮ ಅವಕಾಶ. ಕಲಾವಿದರು, ಸಾಹಿತಿಗಳಿಗೆ ಸನ್ಮಾನ ಸಮಾರಂಭಗಳು ಏರ್ಪಡುವ ಸಾಧ್ಯತೆ. ಅನಿರೀಕ್ಷಿತ ಮೂಲಗಳಿಂದ ಆದಾಯ.