
ದಿನಾಂಕ 11/03/2021
ಶಾಲಿವಾಹನ ಶಕೆ ೧೯೪೩
ಶಾರ್ವರೀ ಸಂವತ್ಸರ
ಉತ್ತರಾಯನ
ಶಿಶಿರ ಋತು
ಕುಂಭ ೨೭
ಪೂರ್ವಾಭಾದ್ರಾ ಮಹಾನಕ್ಷತ್ರ. (೨೮-೫೩)
ಮಾಘ ಮಾಸ
ಕೃಷ್ಣ ಪಕ್ಷ
ಗುರುವಾರ
ತ್ರಯೋದಶಿ ತಿಥಿ (02-59pm)
ಧನಿಷ್ಠಾ ನಕ್ಷತ್ರ (10-05pm)
ಶಿವ ಯೋಗ (೦೮-೩೫)
ವಣಿಜ ಕರಣ (೨೦-೩೯)
ಸೂರ್ಯೋದಯ – 06-43am
ಸೂರ್ಯಾಸ್ತ – 06-36pm
ದಿನ ವಿಶೇಷ :ಮಹಾಶಿವರಾತ್ರಿ
ರಾಹು ಕಾಲ
01:40pm – 03:09pm ಅಶುಭ
ಯಮಘಂಡ ಕಾಲ
06:11am – 07:41am ಅಶುಭ
ಗುಳಿಕ ಕಾಲ
09:10am – 10:40am
ಮೇಷ
ಆರ್ಥಿಕ ಅಡಚಣೆಗಳು ಹಂತ ಹಂತವಾಗಿ ನಿವಾರಣೆಯಾಗಲಿವೆ. ಅತಿಥಿಗಳ ಆಗಮನದಿಂದ ಸಂತಸದ ವಾತಾವರಣ. ಆಯಾಸ ತೋರಿಬಂದರೂ ದಿನದ ಅಂತ್ಯದಲ್ಲಿ ಕೆಲಸಗಳಲ್ಲಿ ಪ್ರಗತಿ ಕಂಡುಬರಲಿದೆ.
ವೃಷಭ
ಆರ್ಥಿಕವಾಗಿ ನಾನಾರೀತಿಯಲ್ಲಿ ಧನ ಸಂಗ್ರಹವಾಗಿ ಹಮ್ಮಿಕೊಂಡಿರುವ ಯೋಜನೆಗಳನ್ನು ಪೂರೈಸಲು ಅನುಕೂಲತೆ ಕೂಡಿಬರಲಿದೆ. ಕೃಷಿ ಕೈಗಾರಿಕಾ ಕ್ಷೇತ್ರದಲ್ಲಿ ಲಾಭಾಂಶ ಹೆಚ್ಚಳ.
ಮಿಥುನ
ಗೃಹ ನಿರ್ಮಾಣ ಕಾರ್ಯಗಳನ್ನು ಕೈಗೊಳ್ಳಲು ಉತ್ತಮ ಕಾಲ. ಮನಸ್ಸಿಟ್ಟು ಕೆಲಸ ಮಾಡಿದಲ್ಲಿ ವಿದೇಶಿ ವ್ಯವಹಾರದಲ್ಲಿ ಹೆಚ್ಚಿನ ಲಾಭ. ಭೂ ಖರೀದಿ ವ್ಯವಹಾರವನ್ನು ಮಾಡಲು ಸಕಾಲ.
ಕಟಕ
ಸರ್ಕಾರಿ ಅಧಿಕಾರಿಗಳಿಗೆ ಸ್ಥಾನ ಬದಲಾವಣೆಯ ಸಾಧ್ಯತೆ. ನೌಕರ ವರ್ಗಕ್ಕೆ ಕೆಲಸಗಳಿಂದ ವಿರಾಮ. ಆರೋಗ್ಯದ ಬಗ್ಗೆ ವಿಶೇಷ ಗಮನ ಹರಿಸುವುದು ಒಳ್ಳೆಯದು.
ಸಿಂಹ
ಉನ್ನತ ಅಧ್ಯಯನಕ್ಕೆ ಉತ್ತೇಜನ ದೊರೆತು ವಿದೇಶಕ್ಕೆ ಪ್ರಯಾಣ ಮಾಡುವ ಸಾಧ್ಯತೆ. ಸಾರಾಸಾರ ವಿವೇಚನೆಯಿಂದ ವೈವಾಹಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ವಿಶೇಷ ಭೋಜನ ಕೂಟದಲ್ಲಿ ಭಾಗಿ.
ಕನ್ಯಾ
ಸರ್ಕಾರಿ ಕೆಲಸದಲ್ಲಿರುವವರಿಗೆ ಬಿಡುವಿಲ್ಲದ ಕೆಲಸ ಕಾರ್ಯಗಳಿಂದಾಗಿ ಸಂಗಾತಿಯ ಕೋಪವನ್ನು ಎದುರಿಸಬೇಕಾದೀತು. ಮನೆಯವರ ಪ್ರಯಾಣಕ್ಕಾಗಿ ವಿಶೇಷ ವೆಚ್ಚ ಭರಿಸಬೇಕಾದೀತು.
ತುಲಾ
ನಿರುದ್ಯೋಗಿಗಳಿಗೆ ಉದ್ಯೋಗಾವಕಾಶಗಳು ತೆರೆದುಕೊಳ್ಳುವ ಸಾಧ್ಯತೆ. ನ್ಯಾಯಾಲಯದಲ್ಲಿನ ಕಟ್ಳೆಗಳಿಗೆ ಚಾಲನೆ. ಖರೀದಿ ಮಾರಾಟ ವ್ಯವಹಾರಗಳಲ್ಲಿ ಉತ್ತಮ ಲಾಭ. ಸಾಹಿತಿ, ಬುದ್ಧಿಜೀವಿಗಳಿಗೆ ಗೌರವ ಪ್ರಾಪ್ತಿ.
ವೃಶ್ಚಿಕ
ಕೆಲಸ ಕಾರ್ಯಗಳಲ್ಲಿ ಅನುಕೂಲ. ಉದ್ಯೋಗ ಕ್ಷೇತ್ರದಲ್ಲಿ ಮೇಲಾಧಿಕಾರಿಗಳ ಪ್ರಶಂಸೆಗೆ ಪಾತ್ರರಾಗಲಿದ್ದೀರಿ. ವಿಶ್ವಾಸದಿಂದ ಉದ್ಯೋಗ ವ್ಯಾಪಾರಗಳಲ್ಲಿ ತೊಡಗಿಕೊಳ್ಳುವುದರಿಂದ ಹೆಚ್ಚಿನ ಲಾಭ.
ಧನು
ಉದ್ಯೋಗಾಕಾಂಕ್ಷಿಗಳಿಗೆ ಅನಿರೀಕ್ಷಿತ ಉದ್ಯೋಗಾವಕಾಶ. ವಿದೇಶಿ ವ್ಯವಹಾರಸ್ಥರೊಂದಿಗಿನ ಸಂಪರ್ಕದಿಂದಾಗಿ ವ್ಯವಹಾರಕ್ಕೊಂದು ತಿರುವು. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಪ್ರಗತಿ.
ಮಕರ
ಉನ್ನತಾಧಿಕಾರಿಗಳ ಅನುಗ್ರಹದಿಂದಾಗಿ ನೌಕರಿಯಲ್ಲಿ ಅನುಕೂಲತೆ. ಸಾಮಾಜಿಕೆ ಸೇವೆಯಲ್ಲಿ ದಿನವಿಡೀ ತೊಡಗಿಕೊಂಡು ಸಂತೋಷ ಅನುಭವಿಸಲಿದ್ದೀರಿ. ಮಕ್ಕಳಿಂದ ಆರ್ಥಿಕ ಸಹಕಾರ.
ಕುಂಭ
ದೇವತಾನುಗ್ರಹದಿಂದ ಶುಭ ಕಾರ್ಯಗಳು ನಿಮ್ಮ ಮನದಿಚ್ಛೆಯಂತೆ ನೆರವೇರುವವು. ಧೈರ್ಯ ಆತ್ಮವಿಶ್ವಾಸ ಮತ್ತು ಪ್ರಯತ್ನ ಬಲದಿಂದಾಗಿ ಅನುಕೂಲ. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಯ.
ಮೀನ
ನಿಮ್ಮ ಒಳ್ಳೆಯತನದ ದುರುಪಯೋಗವಾಗದಂತೆ ಎಚ್ಚರಿಕೆ ವಹಿಸುವುದು ಒಳ್ಳೆಯದು. ಅವಶ್ಯಕತೆಗಿಂತ ಹೆಚ್ಚಾಗಿ ಹಣಕಾಸಿನ ನೆರವು ದೊರೆಯಲಿದೆ. ಶೀಘ್ರದಲ್ಲೇ ಸಂತೋಷಕರ ಸುದ್ದಿಯೊಂದನ್ನು ಆಲಿಸಲಿದ್ದೀರಿ.