
ಶಾರ್ವರಿ ಸಂ|ರದ ಕುಂಭ ಮಾಸ ದಿನ 26 ಸಲುವ ಮಾಘ ಬಹುಳ ದ್ವಾದಶಿ 20 ಗಳಿಗೆದಿನ ವಿಶೇಷ :ಪ್ರದೋಷ ಶ್ರವಣೋಪವಾಸನಿತ್ಯ ನಕ್ಷತ್ರ :ಶ್ರವಣ 36 ಗಳಿಗೆಮಹಾ ನಕ್ಷತ್ರ :ಪೂರ್ವಾಭಾದ್ರಾಋತು :ಶಿಶಿರರಾಹುಕಾಲ :12.00-1.30 ಗಂಟೆಗುಳಿಕ ಕಾಲ :10.30-12.00 ಗಂಟೆಸೂರ್ಯಾಸ್ತ :6.38 ಗಂಟೆಸೂರ್ಯೋದಯ :6.44 ಗಂಟೆ
ಮೇಷ
ಉದ್ಯೋಗಸ್ಥ ಮಹಿಳೆಯರಿಗೆ ಕಾರ್ಯಕ್ಷೇತ್ರದಲ್ಲಿ ಗೊಂದಲ ಕಿರಿಕಿರಿ. ಪುಸ್ತಕ ಮತ್ತು ಲೇಖನ ಸಾಮಗ್ರಿಗಳ ಮಾರಾಟಗಾರರಿಗೆ ಉತ್ತಮ ವ್ಯಾಪಾರದಿಂದಾಗಿ ಆದಾಯದಲ್ಲಿ ಹೆಚ್ಚಳ.
ವೃಷಭ
ಸಾಮಾಜಿಕ ಉನ್ನತೀಕರಣಕ್ಕಾಗಿ ಹಿರಿಯರೊಂದಿಗೆ ಚರ್ಚಿಸಲಿದ್ದೀರಿ. ಹೆಚ್ಚಿನ ಪರಿಶ್ರಮದಿಂದ ಕೆಲಸಕಾರ್ಯಗಳಲ್ಲಿ ಯಶಸ್ಸನ್ನು ಸಾಧಿಸಲಿದ್ದೀರಿ. ಮಹಿಳಾ ಉದ್ಯೋಗಿಗಳಿಗೆ ಭಡ್ತಿ. ವ್ಯವಹಾರದಲ್ಲಿ ಸ್ಥಿರತೆ.
ಮಿಥುನ
ಪ್ರತಿಷ್ಠಿತ ವ್ಯಕ್ತಿಯೊಬ್ಬರ ಸಹಾಯದಿಂದ ಸರ್ಕಾರದಿಂದ ಆಗಬೇಕಾದ ಕೆಲಸಗಳು ಸುಸೂತ್ರವಾಗಿ ನೆರವೇರುವವು. ಶತ್ರುಗಳ ಬಾಧೆ. ಮಕ್ಕಳ ವಿದ್ಯಾಭ್ಯಾಸದ ಕುರಿತು ಇದ್ದ ಚಿಂತೆಗಳು ದೂರ.
ಕಟಕ
ಸರ್ಕಾರಿ ನೌಕರರಿಗೆ ಒಳ್ಳೆಯ ದಿನವಾಗಿದೆ. ರಾಜಕಾರಣಿಗಳು, ಸರ್ಕಾರಿ ಅಧಿಕಾರಿ ವರ್ಗದವರಿಗೆ ಉತ್ತಮ ದಿನವಾಗಿರುವುದು. ಸಂಗಾತಿಯ ಆಲೋಚನೆಗಳಿಗೆ ಪುರಸ್ಕಾರ ನೀಡುವುದು ಒಳ್ಳೆಯದು.
ಸಿಂಹ
ವಾಹನ ಮಾರಾಟದಲ್ಲಿ ತೊಡಗಿದವರಿಗೆ ಉತ್ತಮ ಲಾಭ. ಯಕ್ಷಿಣೀಗಾರರಿಗೆ ಉತ್ತಮ ಅವಕಾಶ. ಕಳೆದುಕೊಂಡ ವಸ್ತುವೊಂದು ಪುನಃ ಕೈ ಸೇರುವ ಸಾಧ್ಯತೆ. ವಿವಾಹ ಸಂಬಂಧ ಒತ್ತಡಕ್ಕೆ ಮಣಿಯಬೇಕಾದೀತು.
ಕನ್ಯಾ
ಕುಟುಂಬದಲ್ಲಿ ಸುಖ ಸಂತೋಷದೊಂದಿಗೆ ಆರ್ಥಿಕ ಅಭಿವೃದ್ಧಿ. ಹಿತೈಷಿಗಳೊಂದಿಗೆ ವಿಶೇಷ ಕಾರ್ಯಕ್ರಮಗಳಲ್ಲಿ ಭಾಗಿ. ಸ್ವಯಂ ಉದ್ಯೋಗಿಗಳಿಗೆ ಹೆಚ್ಚಿನ ಪರಿಶ್ರಮ.
ತುಲಾ
ಸಗಟು ವ್ಯಾಪಾರಗಳಲ್ಲಿ ಗಣನೀಯ ಪ್ರಗತಿ, ಆದಾಯದಲ್ಲಿ ಹೆಚ್ಚಳ ಕಂಡುಬಂದರೂ ಆದಾಯಕ್ಕೆ ಮೀರಿದ ವೆಚ್ಚ ಭರಿಸಬೇಕಾದೀತು. ನೌಕರಿಯಲ್ಲಿರುವವರಿಗೆ ಬಿಡುವು. ಸಂಗಾತಿಯ ಸಹಕಾರದಿಂದಾಗಿ ಸಂತಸ.
ವೃಶ್ಚಿಕ
ಉದ್ಯೋಗದಲ್ಲಿ ಬದಲಾವಣಿಗಾಗಿ ಚಿಂತಿಸಲಿದ್ದೀರಿ. ಹಿತೈಷಿಗಳ ಸಲಹೆಗಾಗಿ ಚರ್ಚಿಸಲಿದ್ದೀರಿ. ದುಡುಕುತನ ತೋರಿಸದಿರುವುದು ಉತ್ತಮ. ಹಣಕಾಸಿನ ವಿಚಾರದಲ್ಲಿ ಸ್ಥಿರತೆ. ಬರಹಗಾರರೊಬ್ಬರ ಅನಿರೀಕ್ಷಿತ ಭೇಟಿ.
ಧನು
ಉದ್ಯೋಗದ ನಿಮಿತ್ತ ದೂರದ ಪ್ರಯಾಣ ಮಾಡಬೇಕಾದೀತು. ಆದಾಯದಲ್ಲಿ ಹೆಚ್ಚಳದಿಂದಾಗಿ ನೆಮ್ಮದಿ ಮೂಡಿಬರಲಿದೆ. ನೇತ್ರ ಸಂಬಂಧಿ ಕಾಯಿಲೆಗಳು ದೂರವಾಗುವವು.
ಮಕರ
ಚಿನ್ನ ಬೆಳ್ಳಿ ಮುಂತಾದ ಆಭರಣ ವ್ಯಾಪಾರಿಗಳಿಗೆ ಉತ್ತಮ ವ್ಯವಹಾರ ಕುದುರುವುದು. ಕೃಷಿ ಕಾರ್ಯಗಳಿಗಾಗಿ ಧನ ವಿನಿಯೋಗ. ಧವಸ ಧಾನ್ಯಗಳ ವ್ಯವಹಾರದಲ್ಲಿ ಹೆಚ್ಚಿನ ಪ್ರಗತಿ ಕಾಣುವಿರಿ.
ಕುಂಭ
ಕೃಷಿ ಹಾಗೂ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಉತ್ತಮ ಅವಕಾಶ. ಬರಹಗಾರರಿಗೆ ಸ್ಪರ್ಧೆಯಲ್ಲಿ ಬಹುಮಾನ ಗೆಲ್ಲುವ ಅವಕಾಶ. ಮಕ್ಕಳ ಉನ್ನತ ವ್ಯಾಸಂಗಕ್ಕಾಗಿ ಹೆಚ್ಚಿನ ವಿನಿಯೋಗ ಮಾಡಬೇಕಾದೀತು.
ಮೀನ
ಆರ್ಥಿಕ ಸದೃಢತೆಯಿಂದಾಗಿ ಆಸ್ತಿ ಖರೀದಿ. ಸಂಶೋಧನಾ ಕೇಂದ್ರಗಳಲ್ಲಿ ಕೆಲಸ ಮಾಡುವವರಿಗೆ ಹೊಸದೊಂದು ಆಶಾಕಿರಣ ಮೂಡಿಬರಲಿದೆ. ರೈತಾಪಿ ವರ್ಗದವರಿಗೆ ಉತ್ತಮ ಬೆಳೆಯ ನಿರೀಕ್ಷೆ.