ಮಾರ್ಚ್ 07, ಭಾನುವಾರ, 2021 : ಇಂದಿನ ಪಂಚಾಂಗ ಹಾಗೂ ರಾಶಿಭವಿಷ್ಯ

ಶಾರ್ವರಿ ಸಂ|ರದ ಕುಂಭ‌ ಮಾಸ‌ ದಿನ 23 ಸಲುವ ಮಾಘ ಬಹುಳ ನವಮಿ 25| ಗಳಿಗೆದಿನ ವಿಶೇಷ :ಸೌಕೂರು ರಥನಿತ್ಯ ನಕ್ಷತ್ರ :ಮೂಲಾ 35|| ಗಳಿಗೆಮಹಾ ನಕ್ಷತ್ರ :ಪೂರ್ವಾಭಾದ್ರಾಋತು :ಶಿಶಿರರಾಹುಕಾಲ :4.30-6.00 ಗಂಟೆಗುಳಿಕ ಕಾಲ :3.00-4.30 ಗಂಟೆಸೂರ್ಯಾಸ್ತ :6.38 ಗಂಟೆಸೂರ್ಯೋದಯ :6.45 ಗಂಟೆ

ಮೇಷ

ಸ್ನೇಹಿತರು ಮತ್ತು ಬಂಧುಗಳೊಂದಿಗಿನ ಸಂಬಂಧಗಳು ಗಟ್ಟಿಗೊಳ್ಳುವ ಸಾಧ್ಯತೆ ಕಂಡುಬರುತ್ತಿದೆ. ಮನೆಯ ಜವಾಬ್ದಾರಿ ನಿರ್ವಹಿಸುವಲ್ಲಿ ನಿರ್ಲಕ್ಷ್ಯ ಸಲ್ಲದು. ಮನೆಯವರ ಮನ ಮೆಚ್ಚಿಸಲು ಅನ್ಯ ಮಾರ್ಗ ಸರಿಯಾಗಲಾರದು.

ವೃಷಭ

ಮುಂದಾಲೋಚನೆಯಿಂದ ಮುಂಬರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಿದ್ದೀರಿ. ಸಮಾಜ ಕಲ್ಯಾಣ ಕಾರ್ಯಕ್ಕಾಗಿ ನಿಮ್ಮ ಸಲಹೆ ಸಹಕಾರ ನೀಡಬೇಕಾದ ಅನಿವಾರ್ಯತೆ ಉಂಟಾಗಬಹುದು. ಆದಾಯದಲ್ಲಿ ಹೆಚ್ಚಳ.

ಮಿಥುನ

ಅಲಂಕಾರಿಕ ವಸ್ತುಗಳನ್ನು ಖರೀದಿಸಲಿದ್ದೀರಿ. ಸರಳ ವಿವಾಹದ ನಿಶ್ಚಯದಿಂದಾಗಿ ಮನೆಯಲ್ಲಿ ಸಂತಸ ಮೂಡಿಸಲಿದ್ದೀರಿ. ಮಹಿಳೆಯರಿಗೆ ಸಂಗಾತಿಯಿಂದ ವಿಶೇಷ ಉಡುಗೊರೆ ದೊರೆಯಲಿದೆ.

ಕಟಕ

ಪ್ರಸಿದ್ಧ ಸಂಸ್ಥೆಯೊಂದಕ್ಕೆ ಸಲಹೆಗಾರರಾಗಿ ಸೇವೆ ಸಲ್ಲಿಸುವ ಅವಕಾಶ ನಿಮ್ಮದಾಗಲಿದೆ. ಗುಪ್ತ ಆಸ್ತಿ ಖರೀದಿಯ ಸಾಧ್ಯತೆ ಕಂಡುಬರುತ್ತಿದೆ. ತುರ್ತು ವಿಷಯಗಳ ಬಗ್ಗೆ ಗಮನ ಹರಿಸುವಿರಿ.

ಸಿಂಹ

ಕೆಲಸ ಕಾರ್ಯಗಳಲ್ಲಿ ಪೂರ್ಣ ನಿಮ್ಮನ್ನು ತೊಡಗಿಸಿಕೊಳ್ಳಲಿದ್ದೀರಿ. ನಿಮ್ಮ ಜವಾಬ್ದಾರಿಗಳನ್ನು ಬೇರೆಯವರಿಗೆ ವರ್ಗಾಯಿಸುವುದರಿಂದ ನೆಮ್ಮದಿಯನ್ನು ಅನುಭವಿಸಲಿದ್ದೀರಿ.

ಕನ್ಯಾ

ವೃತ್ತಿ ಜೀವನದಲ್ಲಿ ಬದಲಾವಣೆ ಸಾಧ್ಯತೆ ಕಂಡುಬರುತ್ತಿದೆ. ಆದಾಯದಲ್ಲಿ ಹೆಚ್ಚಳದ ನಿರೀಕ್ಷೆ ಇದೆ. ಶಿಕ್ಷಣ ಕ್ಷೇತ್ರದಲ್ಲಿರುವವರ ಸೇವೆ ಗಮನಿಸಿ ಸಾಮಾಜಿಕ ಗೌರವ ಪ್ರಾಪ್ತ. ಸಂಗಾತಿಯ ಮಾತಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದು ಉಚಿತ.

ತುಲಾ

ಅನಗತ್ಯ ಮಾತುಕತೆ, ಚರ್ಚೆಗಳಲ್ಲಿ ಭಾಗವಹಿಸದಿರುವುದೇ ಉತ್ತಮ. ವಕೀಲ ವೃತ್ತಿಯಲ್ಲಿರುವವರಿಗೆ ಬಿಡುವಿನ ದಿನವಾಗಲಿದೆ. ಪ್ರಯಾಣ ಪ್ರವಾಸ ಗಳಿಗೆ ಶುಭದಿನವಾಗಲಿದೆ. ಚಿನ್ನಾಭರಣ ವ್ಯಾಪಾರಿಗಳಿಗೆ ವಿಶೇಷ ಲಾಭ .

ವೃಶ್ಚಿಕ

ಬಂಧುವೊಬ್ಬರ ಮನೆಯಲ್ಲಿ ಸಂಜೆಯವರೆಗೂ ವಿಶೇಷ ಸಮಾರಂಭ ಗಳಲ್ಲಿ ಭಾಗಿಯಾಗಿ ಭೋಜನಕೂಟದಲ್ಲಿ ಭಾಗವಹಿಸುವ ಸಾಧ್ಯತೆ ಕಂಡು ಬರುತ್ತಿದೆ. ಮನೆಯವರ ವಿಷಯದಲ್ಲಿ ಉದಾಸೀನ ಸಲ್ಲದು.

ಧನು

ನಿಮ್ಮ ರಾಜಕೀಯ ವಿಷಯದಲ್ಲಿ ಬದಲಾವಣೆಯೊಂದನ್ನು ಕಾಣಲಿ ದ್ದೀರಿ. ನಿಮ್ಮ ಪ್ರಭಾವದಿಂದಾಗಿ ನೆರೆ ಹೊರೆಯವರ ಸಮಸ್ಯೆಗಳನ್ನು ಪರಿಹಾರ ಮಾಡಲಿದ್ದೀರಿ. ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ದೊರೆಯುವ ಸಾಧ್ಯತೆ.

ಮಕರ

ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ಶ್ರಮವಹಿಸಿ ಮಾಡಿದ ಸಾಧನೆಯ ಸಂತಸವನ್ನು ಮನೆಯವರೊಂದಿಗೆ ಹಂಚಿಕೊಳ್ಳಲಿದ್ದೀರಿ. ಸರ್ಕಾರಿ ನೌಕರರಿಗೆ ಸ್ಥಾನ ಪಲ್ಲಟ ಇಲ್ಲವೇ ಪದೋನ್ನತಿಯಿಂದಾಗಿ ಉತ್ತಮ ಆದಾಯ.

ಕುಂಭ

ಆಭರಣ ತಯಾರಿಕೆ, ಗೃಹಾಲಂಕಾರ ಸಾಮಗ್ರಿ ಮುಂತಾದ ಕರಕುಶಲ ವೃತ್ತಿಗಳಲ್ಲಿ ತೊಡಗಿದವರಿಗೆ ಹೆಚ್ಚಿನ ವರಮಾನ ದೊರಕಲಿದೆ. ನಿರ್ಮಾಣ ಕೆಲಸಗಳು ಚುರುಕು ಪಡೆದುಕೊಳ್ಳುತ್ತವೆ. ಸಂಸಾರದಲ್ಲಿ ನೆಮ್ಮದಿ.

ಮೀನ

ನೌಕರಸ್ಥರಿಗೆ ವಿಶೇಷ ಸ್ಥಾನಮಾನ ದೊರಕಲಿದೆ. ಪದೋನ್ನತಿಯಿಂದಾಗಿ ಆರ್ಥಿಕ ಸುಧಾರಣೆ ಕಾಣಲಿದ್ದೀರಿ. ಚಿನ್ನಾಭರಣ ಖರೀದಿ ಸಾಧ್ಯತೆ. ಮನೆಗೆ ಹೊಸ ಸದಸ್ಯರ ಸೇರ್ಪಡೆಯ ಸಂಭ್ರಮ ಸಾಧ್ಯತೆ.

Leave a comment

Design a site like this with WordPress.com
Get started