ಮಾರ್ಚ್ 01, ಸೋಮವಾರ, 2021 : ಇಂದಿನ ಪಂಚಾಂಗ ಹಾಗೂ ರಾಶಿಭವಿಷ್ಯ

ಪಂಚಾಂಗ

ಶ್ರೀ ಶಾರ್ವರಿ ನಾಮ ಸಂವತ್ಸರ,
ವಾರ: ಸೋಮವಾರ, ತಿಥಿ: ದ್ವಿತೀಯ ಉಪರಿ ತೃತೀಯ
ನಕ್ಷತ್ರ: ಹಸ್ತಾ ನಕ್ಷತ್ರ, ಉತ್ತರಾಯಣ
ಶಿಶಿರ ಋತು, ಮಾಘ ಮಾಸ, ಕೃಷ್ಣ ಪಕ್ಷ.

ರಾಹುಕಾಲ: 8:08 ರಿಂದ 09:37
ಗುಳಿಕಕಾಲ: 2:05 ರಿಂದ 3.34
ಯಮಗಂಡಕಾಲ: 11:6 ರಿಂದ 12: 35

ಮೇಷ

ಬರಬೇಕಾದ ಹಣ ಹಿಂದಿರುಗಿ ಬರುವ ಸಾಧ್ಯತೆ. ಉಳಿತಾಯದಲ್ಲಿ ಪ್ರಗತಿ. ಆರೋಗ್ಯದಲ್ಲಿ ಸುಧಾರಣೆ‌. ಸಂತಾನ ಭಾಗ್ಯ ಪ್ರಾಪ್ತಿಯಾಗುವ ಕಾಲ ಸನ್ನಿಹಿತವಾಗಿದೆ. ನಿಂತು ಹೋದ ಯೋಜನೆಗಳು ಪುನರಾರಂಭಗೊಳ್ಳುವವು.

ವೃಷಭ

ಬೇರೆಯವರ ಅಪಹಾಸ್ಯಕ್ಕೆ ಗುರಿಯಾಗುವ ಸಾಧ್ಯತೆಯಿದ್ದು ಗಂಭೀರ ನಡವಳಿಕೆ ಅಗತ್ಯ. ಮಾನಸಿಕ ಚಂಚಲತೆಯುಂಟಾಗಿ ದುಸ್ವಪ್ನಗಳು ಉಂಟಾಗಬಹುದು. ನಿರಾಶೆಗೊಳ್ಳುವ ಅವಶ್ಯಕತೆ ಇಲ್ಲ.

ಮಿಥುನ

ನೌಕರರು ಮತ್ತು ಸ್ವಂತ ಉದ್ಯೋಗಿಗಳು ತಪ್ಪು ತಡೆಗಳಿಗೆ ಅವಕಾಶವಾಗದಂತೆ ಎಚ್ಚರಿಕೆ ವಹಿಸುವುದು ಅಗತ್ಯ. ಉದ್ಯೋಗ ಅಥವಾ ವಾಸದ ಸ್ಥಾನ ಪಲ್ಲಟವಾಗುವ ಸಾಧ್ಯತೆ. ಯಾವುದೇ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ.

ಕಟಕ

ಆರ್ಥಿಕ ಅನುಕೂಲ ನಿಮ್ಮನ್ನರಸಿ ಬರುವುದು. ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದರೊಂದಿಗೆ ವೆಚ್ಚವನ್ನೂ ಮಾಡುವಿರಿ. ನಿಮ್ಮ ಉತ್ತಮ ನಡವಳಿಕೆಯಿಂದಾಗಿ ಗೌರವಾದರಗಳು ಲಭ್ಯವಾಗುವವು.

ಸಿಂಹ

ಕಣ್ಣು ಅಥವಾ ತಲೆನೋವಿನಿಂದ ಬಳಲುವ ಸಾಧ್ಯತೆ. ಅತಿಯಾದ ವಾದ ವಿವಾದದಿಂದಾಗಿ ವೈರತ್ವ ಬರಬಹುದು. ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವ ಸಾಧ್ಯತೆಯಿದ್ದು ಜಾಗೃತೆ ವಹಿಸಿ. ದಂಡ ತೆರಬೇಕಾದೀತು.

ಕನ್ಯಾ

ನಿಮ್ಮ ಕೆಲಸ–ಕಾರ್ಯಗಳು ಮಂದಗತಿಯಲ್ಲೂ ಪ್ರಗತಿಯನ್ನು ಕಾಣುವುದು. ಉದರ ಸಂಬಂಧಿ ಸಣ್ಣಪುಟ್ಟ ತೊಂದರೆಗಳು ಕಂಡುಬರಬಹುದು. ಹೊಸ ಕಾರ್ಯ ಪ್ರಾರಂಭಿಸದಿರುವುದೇ ಒಳ್ಳೆಯದು.

ತುಲಾ

ಸಂಕಷ್ಟಗಳು ಕಡಿಮೆಯಾಗಿ ಕೆಲಸ–ಕಾರ್ಯಗಳು ಸುಗಮ ಚಾಲನೆ ಪಡೆದುಕೊಳ್ಳುವವು. ಸಿಟ್ಟು ಸೆಡವುಗಳಿಂದಾಗಿ ತೊಂದರೆ. ಅನಿರೀಕ್ಷಿತ ಅನಾವಶ್ಯಕ ಖರ್ಚು ಸಂಭವಿಸುವವು. ಆರೋಗ್ಯದಲ್ಲಿ ಸುಧಾರಣೆ.

ವೃಶ್ಚಿಕ

ಆರ್ಥಿಕ ಉನ್ನತಿ ಕಂಡುಬರುವುದು. ಶತ್ರುಗಳ ವಿರುದ್ಧ ಜಯದ ಸವಾರಿ ಮಾಡುವ ಯೋಗವಿದೆ. ಬಹುದಿನಗಳ ಸಮಸ್ಯೆಯಿಂದ ಪರಿಹಾರ ದೊರೆತು ನೆಮ್ಮದಿಯ ಜೀವನ ಕಂಡುಬರುವುದು. ಬಂಧುಗಳ ಆಗಮನವನ್ನು ನಿರೀಕ್ಷಿಸಿ.

ಧನು

ನಿಮ್ಮ ನಿರ್ಣಯಗಳು ಫಲ ನೀಡುವವು. ಆದಾಯದಲ್ಲಿ ಹೆಚ್ಚಳ ಕಂಡು ಬಂದು ಪರಿಸ್ಥಿತಿ ಸುಧಾರಿಸುವುದು. ವಾಹನ ಖರೀದಿ ಭಾಗ್ಯ. ಉದ್ಯೋಗ ಕ್ಷೇತ್ರದಲ್ಲಿ ಗೌರವಾದರ. ಸ್ನೇಹಿತರೊಂದಿಗೆ ಸಂತಸ ಹಂಚಿಕೊಳ್ಳುವಿರಿ.

ಮಕರ

ಹಿರಿಯರೊಂದಿಗೆ ವಿಧೇಯತೆಯಿಂದ ನಡೆದುಕೊಳ್ಳಿ. ಸಾಮಾಜಿಕ ಕಾರ್ಯಗಳಿಂದಾಗಿ ನೆಮ್ಮದಿ. ವೃಥಾ ವೈಮನಸ್ಸು ಎದುರಾಗಬಹುದು. ಆರ್ಥಿಕ ವಿಷಯದಲ್ಲಿ ಯಥಾಸ್ಥಿತಿ ಮುಂದುವರೆದು, ಕೆಲಸ–ಕಾರ್ಯಗಳಲ್ಲಿ ಉತ್ಸಾಹ.

ಕುಂಭ

ಮನೆಯಲ್ಲಿ ಶುಭಮಂಗಲ ಕಾರ್ಯಗಳು ನೆರವೇರುವ ಸಾಧ್ಯತೆ. ನೌಕರಿಯ ವಿಷಯದಲ್ಲಿ ಉನ್ನತ ಸ್ಥಾನ ಅಥವಾ ಬದಲಾವಣೆ ಕಂಡುಬರುವುದು. ಆರ್ಥಿಕ ಅನುಕೂಲತೆ ಉತ್ತಮಗೊಳ್ಳುವುದು.

ಮೀನ

ಅನಾವಶ್ಯಕ ಖರ್ಚು. ಬಂಧುಗಳ ಭೇಟಿ ಸಾಧ್ಯತೆ. ಉದ್ಯೋಗದಲ್ಲಿ ಹೆಚ್ಚಿನ ಒತ್ತಡ. ಆಹಾರದಲ್ಲಿನ ವ್ಯತ್ಯಯದಿಂದಾಗಿ ಅಜೀರ್ಣ ಸಂಬಂಧಿ ರೋಗಗಳು ಕಂಡುಬರಬಹುದು. ಸಂಗಾತಿಯಿಂದ ಉತ್ತಮ ಸಹಕಾರ.

Leave a comment

Design a site like this with WordPress.com
Get started