ಕೊರೊನಾ ಲಾಕ್ಡೌನ್ ಕಾರಣಕ್ಕೆ ವ್ಯಾಪಾರ-ವಹಿವಾಟಿಲ್ಲದೆ ಆರ್ಥಿಕವಾಗಿ ಸಂಕಷ್ಟಕ್ಕೊಳಗಾಗಿದ್ದ ಸಾರ್ವಜನಿಕರ ನೆರವಿಗಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಎಟಿಎಂ ವಹಿವಾಟಿನ ಮೇಲೆ ವಿಧಿಸುತ್ತಿದ್ದ ಶುಲ್ಕವನ್ನು ರದ್ದು ಪಡಿಸಿತ್ತು.
ಹೀಗಾಗಿ ಬ್ಯಾಂಕ್ ಗ್ರಾಹಕರು ಯಾವುದೇ ಎಟಿಎಂಗಳಲ್ಲಿ ಹಣ ಹಿಂಪಡೆದರೂ ಸಹ ಶುಲ್ಕ ಕಡಿತವಾಗುತ್ತಿರಲಿಲ್ಲ. ಆದರೆ ಇದೀಗ 5000 ರೂ. ಅಥವಾ ಅದಕ್ಕೂ ಹೆಚ್ಚಿನ ಮೊತ್ತವನ್ನು ಹಿಂಪಡೆದ ವೇಳೆ ಗ್ರಾಹಕರಿಗೆ 24 ರೂಪಾಯಿ ಶುಲ್ಕ ವಿಧಿಸಲು ಚಿಂತನೆ ನಡೆಸಲಾಗಿದೆ ಎಂದು ಹೇಳಲಾಗಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನೇಮಕ ಮಾಡಿದ್ದ ಸಮಿತಿ ಈ ಶಿಫಾರಸ್ಸನ್ನು ಮಾಡಿದ್ದು, ಜೊತೆಗೆ ಜನಸಂಖ್ಯೆ ಆಧಾರಿತವಾಗಿ ಎಟಿಎಂ ಇಂಟರ್ಚೇಂಜ್ ಶುಲ್ಕ ವಿಧಿಸಲು ತಿಳಿಸಿದೆ ಎನ್ನಲಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ಶಿಫಾರಸ್ಸನ್ನು ಅಂಗೀಕರಿಸಿದರೆ ಎಟಿಎಂ ವಹಿವಾಟುಗಳಿಗೆ ಗ್ರಾಹಕರು ಶುಲ್ಕ ಭರಿಸಬೇಕಾಗುತ್ತದೆ.
ಇದ್ದಕ್ಕಿದ್ದಂತೆ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ಸಿನವರು ಸೈನ್ಯದ ಬಗ್ಗೆ ತೋರಿಸುತ್ತಿರುವ ಕಾಳಜಿಯನ್ನು ಕಂಡು ಆಘಾತವಾಗುವಷ್ಟು ಆಶ್ಚರ್ಯವಾಗುತ್ತಿದೆ. ಸೈನದ ಕಾರ್ಯಾಚರಣೆಗಳಿಗೆ ಸಾಕ್ಷಿ ಕೇಳುವ ಮನಸ್ಥಿತಿಯ ಜನರು ಹೀಗೆ ಏಕ್ದಂ ನಮ್ಮ ಸೈನಿಕರ ಬಗ್ಗೆ ಮೊಸಳೆ ಕಣ್ಣೀರು ಹರಿಸುತ್ತಿದ್ದಾರಲ್ಲಾ ಏನು ಹೇಳೋದು. 1962 ರ ಚೀನಾದೊಂದಿಗೆ ನಡೆದ ಯುದ್ಧದ ಹೀನಾಯ ಸೋಲು ಪ್ರತಿಯೊಬ್ಬ ಭಾರತೀಯನ ಮನದಲ್ಲಿ ಈಗಲೂ ಚುಚ್ಚುತ್ತಿದೆ. ನೆಹರೂ ಮತ್ತು ಕೃಷ್ಣ ಮೆನೆನ್ನರ ಅಹಂಕಾರದ ನಡೆ ಮತ್ತು ರಾಜಕೀಯ ಹುಂಬತನಕ್ಕೆ ಬಲಿಪಶುವಾಯಿತು ಭಾರತೀಯ ಸೈನ್ಯ ಮತ್ತು ಸೈನಿಕರು.
ಇನ್ನು ಇಂದಿರಾಗಾಂಧಿಯ ವಿಷಯಕ್ಕೆ ಬಂದರೆ ಅವರೂ ಏನು ಕಡಿಮೆ ಇಲ್ಲ. 1971 ಪಾಕಿಸ್ತಾನದೊಂದಿಗೆ ನಡೆದ ಯುದ್ಧದ ಅಭೂತಪೂರ್ವ ಜಯದಿಂದ ವಿಶ್ವಮಟ್ಟದಲ್ಲಿ ದೊಡ್ಡ ನಾಯಕಿಯಾಗಿ ಬಿಂಬಿಸಿಕೊಳ್ಳುವ ತುರಾತುರಿಯಲ್ಲಿ ಯುದ್ಧದ ಅಸಲಿ ಹೀರೊ ಫೀಲ್ಡ್ ಮಾರ್ಷಲ್ ಮಾಣಿಕ್ ಷಾರವರನ್ನು ಉದ್ದೇಶ ಪೂರ್ವಕವಾಗಿ ಕಡೆಗಣಿಬಿಟ್ಟಿದ್ದರು. ದಿನೇದಿನೇ ಹೆಚ್ಚುತ್ತಿದ್ದ ಸ್ಯಾಮ್ ಮಾಣಿಕ್ ಷಾರವರ ಜನಪ್ರಿಯತೆ ಅವರಿಗೆ ಸಹಿಸಲಾಗುತ್ತಿರಲಿಲ್ಲ. ಪಾಪಿ ಪಾಕಿಸ್ತಾನವನ್ನು ತುಂಡರಿಸಿ, ಬಾಂಗ್ಲಾದೇಶವನ್ನು ಸೃಷ್ಟಿಸಿ, 93000 ಪಾಕಿಸ್ತಾನದ ಯುದ್ಧಕೈದಿಗಳನ್ನು ಹಿಡಿದಿಟ್ಟಿದ್ದ ಭಾರತೀಯ ಸೈನ್ಯದ ಸಾಹಸ ಎಲ್ಲೆಡೆ ಹೆಮ್ಮೆಯ ಮಾತಾಗಿತ್ತು. ಸ್ಯಾಮ್ ಮಾಣಿಕ್ ಷಾರವರನ್ನು ಕಡೆಗಣಿಸಿ ಸಿಮ್ಲಾ ಸಂಧಾನಕ್ಕೆ ಹೊರಟರು ಇಂದಿರಾಗಾಂಧಿ. ಇವರು ಕರೆದುಕೊಂಡು ಹೋದ ಬಾಬುಗಳ ತಂಡಕ್ಕೆ ಸಂಧಾನದ ಮಾತುಗಳನ್ನು ಯಾವ ಮಟ್ಟದಲ್ಲಿ ನಡೆಸಬೇಕೆಂಬ ಸಾಮಾನ್ಯ ಜ್ಞಾನವೂ ಇರಲಿಲ್ಲ. 93000 ಸೈನಿಕರ ಬಿಡುಗಡೆಗೆ ಒಂದೇ ಏಟಿಗೆ POK ಮತ್ತು ಕಾಶ್ಮೀರದ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಿಕೊಳ್ಳಲು ದೊರೆತ ಅವಕಾಶ ಕೈಜಾರಿ ಹೋಯಿತು. ಸಿಮ್ಲಾ ಸಂಧಾನ ಮುಗಿಸಿಕೊಂಡು ಬಂದ ಇಂದಿರಾಗಾಂಧಿ ಸ್ಯಾಮ್ ಮಾಣಿಕ್ ಷಾರವರಿಗೆ ಕರೆಮಾಡಿ ಸಂಧಾನದ ವಿವರಗಳನ್ನು ತಿಳಿಸಿ ಅವರ ಅಭಿಪ್ರಾಯವನ್ನು ಕೇಳುತ್ತಾರೆ. ಅದಕ್ಕೆ ಕಡ್ಡಿತುಂಡರಿಸಿದಂತೆ ಸ್ಯಾಮ್ ಹೇಳುತ್ತಾರೆ;
‘Pakistanis and your staff have made a monkey of you’
ಮೊದಲಿಂದಲೂ ಎಡರುತೊಡರಾಗಿದ್ದ ಅವರ ಸಂಬಂಧ ಅಲ್ಲಿಗೆ ಮುಗಿದೇ ಹೋಯಿತು ಎನ್ನಬಹುದು. ಮುಂದೆ ಸ್ಯಾಮ್ ಮಾಣಿಕ್ ಷಾರವರಿಗೆ ಫೀಲ್ಡ್ ಮಾರ್ಷಲ್ ಆಗಿ ಪ್ರಮೋಶನ್ ಸಿಕ್ಕಾಗ ಆ ಹುದ್ದೆಗೆ ಸಿಗಬೇಕಾದ ಗೌರವ ಮನ್ನಣೆಗಳು ಸಿಗಲಿಲ್ಲ. ಎಲ್ಲದಕ್ಕೂ ಮಿಗಿಲಾಗಿ ಫೀಲ್ಡ್ ಮಾರ್ಷಲ್ ರವರಿಗೆ ಸಿಗಬೇಕಾದ ಸಂಬಳವೂ ಸಿಗಲಿಲ್ಲ. ಮುಂದೆ 2007 ರಲ್ಲಿ ಮಾಣಿಕ್ ಷಾ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾಗ ಅಂದಿನ ರಾಷ್ಟ್ರಪತಿ ಅಬ್ದುಲ್ ಕಲಾಮ್ ಅವರು ಇವರ ಆರೋಗ್ಯ ವಿಚಾರಿಸಲು ಬಂದಾಗ ಕಲಾಮ್ ರವರೊಂದಿಗೆ ಸಿಗಬೇಕಾಗಿರುವ ತಮ್ಮ ಸಂಬಳದ ಬಗ್ಗೆ ತಿಳಿಸುತ್ತಾರೆ. ನ್ಯಾಯವಾಗಿ ಭಾರತ ರತ್ನ ಪ್ರಶಸ್ತಿಗೆ ಅರ್ಹನಾದ ವ್ಯಕ್ತಿಗೆ ಸಂಬಳ ಸಿಗುತ್ತಿಲ್ಲವೇ! ಅದೇ ಆಘಾತದಿಂದ ದೆಹಲಿಗೆ ಮರಳಿದ ಕಲಾಮ್ ರವರು ಶೀಘ್ರವೇ ಕಾರ್ಯಗತರಾಗುತ್ತಾರೆ. ಜೂನ್ 2007 ಮೊದಲ ವಾರ, ದೆಹಲಿಯಿಂದ ರಾಷ್ಟ್ರಪತಿಯವರ ಕಾರ್ಯಾಲಯದಿಂದ ಒಬ್ಬ ಸಿಬ್ಬಂದಿ ಮಾಣಿಕ್ ಷಾರವರು ಇದ್ದ ಆಸ್ಪತ್ರೆಗೆ ಹೋಗಿ ಒಂದು ಚೆಕ್ ಕೊಡುತ್ತಾರೆ. 34 ವರ್ಷಗಳ ಬರಬೇಕಾಗಿದ್ದ ಸಂಬಳದ ಬಾಬತ್ತು ಬರೋಬ್ಬರಿ ಒಂದು ಕೋಟಿ ಹದಿನಾರು ಲಕ್ಷದಷ್ಟು ಮೊತ್ತದ ಚೆಕ್ ಅದು. ಆದರೆ ದುರ್ದೈವ 27 ಜೂನ್ 2007 ರಂದು ಮಾಣಿಕ್ ಷಾರವರು ವಿಧಿವಶರಾದರು, ಬಹುಶಃ ಆ ಚೆಕ್ ಅವರ ಹಾಸಿಗೆ ಪಕ್ಕದ ಲಾಕರಿನಲ್ಲಿತ್ತೇನೋ.
ಇಷ್ಟೇ ಅಲ್ಲಾ, ನಮ್ಮ ಸೈನಿಕರಿಗೆ ಕಾಂಗ್ರೆಸ್ ಸರ್ಕಾರದ ಇನ್ನೊಂದು ಪಾರಿತೋಷತಕ ಸದ್ಯದಲ್ಲೇ ಸಿಗಲಿತ್ತು. 1973 ರಲ್ಲಿ ಘೋಷಿಸಿದ ವೇತನ ಆಯೋಗದಲ್ಲಿ ಸೈನಿಕರ ಪಿಂಚಣಿಯನ್ನು ಇಪ್ಪತ್ತರಿಂದ ನಲವತ್ತು ಪ್ರತಿಶತದಷ್ಟು ಕಡಿತಗೊಳಿಸಲಾಗಿತ್ತು ಮತ್ತು civilian ಸಿಬ್ಬಂದಿಯ ಪಿಂಚಣಿಯನ್ನು ಏರಿಸಲಾಗಿತ್ತು. ಒಬ್ಬ ಸೈನ್ಯದ ತರಬೇತಿ ಪಡೆದ ಸಿಬ್ಬಂದಿಯನ್ನು ದಿನಗೂಲಿ ನೌಕರರ ಶ್ರೇಣಿಗೆ ಸೇರಿಸಲಾಗಿತ್ತು.
ಭಲೇ ಸರ್ಕಾರವೇ ಸೈನ್ಯಕ್ಕೆ ಮತ್ತು ಸೈನಿಕರಿಗೆ ನೀವು ಕೊಟ್ಟ ಕೊಡುಗೆ ಅಪಾರ ಎಂದು ಇಡೀ ಸೈನ್ಯಕ್ಕೆ ಸೈನ್ಯವೇ ಅಂದಿನ ಸರ್ಕಾರವನ್ನು ಕೊಂಡಾಡಿತು. ಈಗ ಅದೆಲ್ಲಿಂದ ಬಂತೋ ಏನೋ ಸೈನಿಕರ ಬಗ್ಗೆ ಕಾಳಜಿ, ಕನಿಕರ ಈ ರಾಹುಲನ ಗ್ಯಾಂಗಿಗೆ. “ಎಲ್ಲಿದ್ದೆ ಇಲ್ಲೀ ತನಕ… ಈಗ್ಯಾಕೆ ಬಂದ್ಯಯ್ಯ..” ಅಂತಾ ಹಾಡಬೇಕು ಎನಿಸುತ್ತದೆ.
ಪಂಚಾಂಗ: ಶ್ರೀ ಶಾರ್ವರಿನಾಮ ಸಂವತ್ಸರ, ಉತ್ತರಾಯಣ ಪುಣ್ಯಕಾಲ, ಗ್ರೀಷ್ಮ ಋತು, ಜೇಷ್ಠ ಮಾಸ, ಕೃಷ್ಣ ಪಕ್ಷ, ಚರ್ತುದಶಿ ತಿಥಿ, ಬೆಳಗ್ಗೆ 11:54 ನಂತರ ಅಮಾವಾಸ್ಯೆ, ಶನಿವಾರ, ರೋಹಿಣಿ ನಕ್ಷತ್ರ ಮಧ್ಯಾಹ್ನ 12:02 ನಂತರ ಮೃಗಶಿರ ನಕ್ಷತ್ರ
ರಾಹುಕಾಲ: ಬೆಳಗ್ಗೆ 9:12 ರಿಂದ 10:48 ಗುಳಿಕಕಾಲ: ಬೆಳಗ್ಗೆ 5:59 ರಿಂದ 7:36 ಯಮಗಂಡಕಾಲ: ಮಧ್ಯಾಹ್ನ 2:01 ರಿಂದ 3:37
ಮೇಷ: ಎಲೆಕ್ಟ್ರಾನಿಕ್, ಯಂತ್ರೋಪಕರಣ ಮಾರಾಟಗಾರಿಗೆ ಲಾಭ, ವ್ಯಾಪಾರದಲ್ಲಿ ಅಧಿಕ ಧನಾಗಮನ, ವಾಹನ ಚಾಲನೆಯಲ್ಲಿ ಎಚ್ಚರ, ಅಪಘಾತವಾಗುವ ಸಾಧ್ಯತೆ, ಸ್ವಯಂಕೃತ ಅಪರಾಧಗಳಿಂದ ಸಂಕಷ್ಟ, ದೇಹದಲ್ಲಿ ಆಲಸ್ಯ, ಅವಕಾಶ ಕಳೆದುಕೊಳ್ಳುವಿರಿ.
ವೃಷಭ: ವಾಹನ-ಸ್ಥಿರಾಸ್ತಿ ನಷ್ಟ, ದಾಂಪತ್ಯದಲ್ಲಿ ಕಲಹ, ಮನೆ ವಾತಾವರಣ ಅಶಾಂತಿ, ಮಿತ್ರರೇ ದೂರಾಗುವರು, ಪತ್ರ ವ್ಯವಹಾರಗಳಲ್ಲಿ ತೊಂದರೆ, ಉದ್ಯೋಗ-ಗೃಹ ಬದಲಾವಣೆಯಿಂದ ಸಮಸ್ಯೆ.
ಮಿಥುನ: ಬಂಧುಗಳಿಂದ ಪಡೆದ ಸಾಲದ ಚಿಂತೆ, ನಾನಾ ಚಿಂತೆಯಿಂದ ನಿದ್ರಾಭಂಗ, ಆರ್ಥಿಕ ಸಂಕಷ್ಟ, ಕೌಟುಂಬಿಕ ಸಮಸ್ಯೆ, ಸಹೋದ್ಯೋಗಿಗಳ ಜೊತೆ ಕಲಹ, ನೆಮ್ಮದಿ ಇಲ್ಲದ ಜೀವನ.
ಕಟಕ: ಮಕ್ಕಳಿಂದ ಧನ ಲಾಭ, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಪ್ರಾಪ್ತಿ, ಭವಿಷ್ಯದ ಬಗ್ಗೆ ಚಿಂತನೆ, ಉತ್ತಮ ಗೌರವ ಸಂಪಾದನೆಗೆ ಹಂಬಲ, ಶುಭ ಫಲ ಯೋಗ.
ಸಿಂಹ: ಉದ್ಯೋಗ ನಿಮಿತ್ತ ಪ್ರಯಾಣ, ಸ್ಥಿರಾಸ್ತಿ-ವಾಹನ ಖರೀದಿಗೆ ಅನುಕೂಲ, ಸಾಲದ ಸಹಾಯ ಲಭಿಸುವುದು, ಉದ್ಯೋಗ ಸ್ಥಳದಲ್ಲಿ ಮಂದಗತಿ, ಕೆಲಸ ಕಾರ್ಯದಲ್ಲಿ ಪ್ರಗತಿ.
ಕನ್ಯಾ: ತಂದೆಯಿಂದ ಅದೃಷ್ಟ ಬದಲಾಗುವುದು, ಮಿತ್ರರಿಂದ ದಾಂಪತ್ಯದಲ್ಲಿ ಕಲಹ, ನೆಮ್ಮದಿ ಇಲ್ಲದ ವಾತಾವರಣ, ಸಾಲದ ಸಹಾಯ ಲಭಿಸುವುದು.
ತುಲಾ: ಮಿತ್ರರೊಂದಿಗೆ ವಾಗ್ವಾದ, ಕುಟುಂಬದಲ್ಲಿ ವೈಮನಸ್ಸು, ಅನಿರೀಕ್ಷಿತ ಉದ್ಯೋಗ ನಷ್ಟ, ಸಂಗಾತಿಯಿಂದ ಲಾಭ.
ವೃಶ್ಚಿಕ: ಉದ್ಯೋಗ ಸ್ಥಳದಲ್ಲಿ ಒತ್ತಡ, ದಾಂಪತ್ಯದ ಮೇಲೆ ದುಷ್ಪರಿಣಾಮ, ಪಾಲುದಾರಿಕೆ ವ್ಯವಹಾರದಲ್ಲಿ ಮನಃಸ್ತಾಪ, ಗೌರವಕ್ಕೆ ಧಕ್ಕೆ, ತಂದೆಯ ಆರೋಗ್ಯದಲ್ಲಿ ಸಮಸ್ಯೆ.
ಧನಸ್ಸು: ಮಿತ್ರರಿಗಾಗಿ ಅಧಿಕ ಖರ್ಚು, ಅನಿರೀಕ್ಷಿತ ಬೆಳವಣಿಗೆ, ಪ್ರೀತಿ ಪ್ರೇಮದ ಬಲೆಗೆ ಸಿಲುಕುವಿರಿ, ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಕಲಹ, ಕೋರ್ಟ್ ಕೇಸ್‍ಗಳಿಗೆ ಓಡಾಟ.
ಮಕರ: ದಾಂಪತ್ಯದಲ್ಲಿ ಅಶಾಂತಿ, ಬಂಧುಗಳಿಂದ ಕಿರಿಕಿರಿ, ನೆರೆಹೊರೆಯವರಿಂದ ತೊಂದರೆ, ಆಕಸ್ಮಿಕ ಅನುಕೂಲ, ಸೇವಾ ವೃತ್ತಿಯ ಉದ್ಯೋಗ ಲಭಿಸುವುದು.
ಕುಂಭ: ಸಂಗಾತಿಯ ಬಂಧುಗಳಿಂದ ಅನುಕೂಲ, ಆರ್ಥಿಕ ಸಮಸ್ಯೆ ಬಗೆಹರಿಯವುದು, ಉದ್ಯೋಗದಲ್ಲಿ ಸಮಸ್ಯೆ, ಕೆಲಸದಲ್ಲಿ ಗೊಂದಲಗಳು ನಿವಾರಣೆ.
ಮೀನ: ಪ್ರಯಾಣದಲ್ಲಿ ಅಡೆತಡೆ, ಉದ್ಯೋಗದಲ್ಲಿ ಬದಲಾವಣೆ, ಸ್ಥಳ ಬದಲಾವಣೆ, ಯಶಸ್ಸು ಲಭಿಸುವುದು, ಅಧಿಕವಾದ ಉಷ್ಣ ಬಾಧೆ, ಅಜೀರ್ಣ, ಹೊಟ್ಟೆ ನೋವು
ಮುಂಬೈನಿಂದ ಉಡುಪಿ ಜಿಲ್ಲೆಗೆ ಬಂದ 54 ವರ್ಷ ವಯಸ್ಸಿನ ಕೊರೋನ ಸೋಂಕಿತ ವ್ಯಕ್ತಿಯೊಬ್ಬರು ದಿಢೀರ್ ಆಗಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ತೆಕ್ಕಟ್ಟೆ ನಿವಾಸಿಯಾಗಿರುವ ಇವರು, ಗುರುವಾರ ಮಧ್ಯಾಹ್ನ ಮಹಾರಾಷ್ಟ್ರ ದಿಂದ ಕುಂದಾಪುರಕ್ಕೆ ಬಂದಿದ್ದರು. ಇವರೊಂದಿಗೆ ಇತರ ನಾಲ್ಕು ಮಂದಿ ಮಹಾರಾಷ್ಟ್ರದಿಂದ ಬಂದಿದ್ದರು. ನಿಯಮದಂತೆ ಇವರೆಲ್ಲ ಮನೆಯಲ್ಲೇ ಹೋಂ ಕ್ವಾರಂಟೈನ್ ಗೆ ಒಳಗಾಗಿದ್ದರು. ಉಡುಪಿಗೆ ಬಂದಾಗ ಇವರನ್ನು ಸಂಪೂರ್ಣ ತಪಾಸಣೆ ಮಾಡಿದ್ದೆವು. ಇವರಲ್ಲಿ ಕೊರೋನದ ಯಾವುದೇ ಲಕ್ಷಣ ಕಂಡು ಬಂದಿರಲಿಲ್ಲ. ಇವರು ದಿಢೀರ್ ಆಗಿ ಮನೆಯಲ್ಲೇ ಸಾವನ್ನಪ್ಪಿದ್ದಾರೆ. ಮರಣಕ್ಕೆ ಕಾರಣ ಮರಣೋತ್ತರ ಪರೀಕ್ಷೆಯಿಂದ ತಿಳಿಯಬೇಕಾಗಿದೆ. ಗಂಟಲ ದ್ರವ ಪರೀಕ್ಷೆಯಲ್ಲಿ ಪಾಸಿಟಿವ್ ಇರುವುದು ಗೊತ್ತಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ
ವಿಭೀತಕೀ ತಾರೆಮರ ಶಾಂತಿಮರ ತಾನಿಕಾಯಿ ಚೆಟ್ಟು (ಮಾನು) ಬಿಭೀತ ಬಹೆಡಾ ತಾಡಿ ಅಕ್ಕಮ್ ತೊಡೀಕೈ ತನ್ರಿ ಬೈಡಾ ಎಂಬ ಹೆಸರುಗಳಿಂದ ಕರೆಯುತ್ತಾರೆ. ಅರಣ್ಯಗಳಲ್ಲಿ ಮಾತ್ರ ಕಂಡು ಬರುವ ತಾರೆ ಮರ, ಸಾಂಪ್ರದಾಯಿಕವಾಗಿ ಪೂಜನೀಯ ಸ್ಥಾನ ಹೊಂದಿರುವ ತಾರೆಮರವನ್ನು ಶನಿದೇವರ ಪ್ರತಿನಿಧಿ ಎಂದು ಭಾವಿಸಲಾಗಿದ್ದು, ಹಲವಾರು ಶನೇಶ್ವರ ದೇವಾಲಯಗಲ್ಲಿ ಬೆಳೆಸಿರುತ್ತಾರೆ. ಸುಮಾರು 55 ರಿಂದ 90 ಅಡಿವರಿಗೂ ಎತ್ತರ ಬೆಳೆಯುತ್ತೆ. ಆಯುರ್ವೇದ, ಯುನಾನಿ, ಸಾಂಪ್ರದಾಯಿಕ ಚಿಕಿತ್ಸ ಪದ್ಧತಿಯಲ್ಲಿ, ಬೀಜ,ತೊಗಟೆ,ಕಾಯಿಯ ಸಿಪ್ಪೆಯನ್ನು ಔಷಧೀಯ ಉದ್ದೇಶಕ್ಕಾಗಿ ಬಳಸುತ್ತಾರೆ. ತಾರೆಕಾಯಿಯ ಚೂರ್ಣವನ್ನು ಬಿಸಿ ನೀರಿನಲ್ಲಿ ಕಲಸಿ, ಚರ್ಮದ ಅಲರ್ಜಿ, ಗುಳ್ಳೆಗಳು, ಮುಖದ ಮೇಲಿನ ಮೊಡವೆಗಳಿಗೆ ಲೇಪನ ಮಾಡುವುದರಿಂದ ಅದ್ಭುತವಾದ ಫಲಿತಾಂಶ ಕಾಣಬಹುದು. ತಾರೆಕಾಯಿ ಚೂರ್ಣ, ಮಧುಮೇಹ, ಮಲಬದ್ದತೆಗೆ, ಉತ್ತುಮವಾದ ಔಷಧಿಯಾಗಿದ್ದು, ಕೆಮ್ಮು, ಗಂಟಲು ಕೆರತ, ಬಾಯಿ ಹುಣ್ಣು, ಬಾಯಿ ದುರ್ಗಂಧ, ರುಚಿ ಇಲ್ಲದೆ ಇರುವುಕೆಯ ಸಮಸ್ಯೆ ಇದ್ದಾಗ, ತಾರೆಕಾಯಿಯ ಸಿಪ್ಪೆಯನ್ನು ನೆರಳಲ್ಲಿ ಒಣಗಿಸಿ, ಬಾಯಿಯಲ್ಲಿ ಹಾಕಿಕೊಂಡು ಚಪ್ಪರಿಸುತ್ತಿದ್ದರೆ, ಇವೆಕ್ಕೆಲ್ಲ ಮುಕ್ತಿಕಾಣಬಹು. ಗಂಟಲು ನೋವು,ಕಫ,ಇದ್ದಾಗ ತಾರೆಕಾಯಿ ಚೂರ್ಣಕ್ಕೆ ಹಿಪ್ಪಲಿ ಚೂರ್ಣ ಸಮನಾಗಿ ತೆಗೆದುಕೊಂಡು, ಜೇನುತುಪ್ಪದಲ್ಲಿ ರಂಗಳಿಸಿ ನೆಕ್ಕುತ್ತಾ ಬಂದರೆ ಶೀಘ್ರ ಗುಣ ಕಾಣಬಹುದು. ತಾರೆಕಾಯಿ ಚೂರ್ಣ, ಲವಂಗದ ಚೂರ್ಣ ಸಮವಾಗಿ ತೆಗೆದುಕೊಂಡು, ಜೇನುತುಪ್ಪದಲ್ಲಿ ಕಲಸಿ, ಊಟಕ್ಕೆ ಮೊದಲು ಸೇವಿಸಿದರೆ, ಎಂತಹ ಕೆಮ್ಮು ಇದ್ದರೂ ಗುಣವಾಗುತ್ತೆ. ಅಳಲೆಕಾಯಿ ಹಾಗೂ ತಾರೆಕಾಯಿ ಸಿಪ್ಪೆಯ ಚೂರ್ಣವನ್ನು ಸಮನಾಗಿ, ಬೆಳಿಗ್ಗೆ ಸಂಜೆ ಬಿಸಿನೀರಿನಲ್ಲಿ ಕಲಸಿ ಸೇವಿಸಿದರೆ, ಶರೀರದಲ್ಲಿನ ವಾತ ಸಮಸ್ಯೆಗಳಿಂದ ಮುಕ್ತಿ ಕಾಣಬಹುದು. ತಾರೆಕಾಯಿ ಚೂರ್ಣ ಹೃದ್ರೋಗಗಳಿಗೆ ಟಾನಿಕ್ ನಂತೆ ಕೆಲಸ ಮಾಡುತ್ತೆ.ತಾರೆಕಾಯಿ ಚೂರ್ಣಕ್ಕೆ ಸಮ ಪ್ರಮಾಣದಲ್ಲಿ ಬೆಲ್ಲವನ್ನು ಕಲಸಿ, ಹಸುವಿನ ತುಪ್ಪದಲ್ಲಿ ಕಲಸಿ ಸೇವಿಸಿದರೆ, ಹೃದಯಕ್ಕೆ ಬಲಬಂದು, ಹೃದ್ರೋಗ ಸಮಸ್ಯೆಗಳು ದೂರವಾಗುತ್ತವೆ. ಬೆಟ್ಟದ ನೆಲ್ಲಿಕಾಯಿ ಚೂರ್ಣ, ತಾರೆಕಾಯಿ ಚೂರ್ಣ ಸಮನಾಗಿ ತೆಗೆದುಕೊಂಡು ಬಿಸಿನೀರಿನಲ್ಲಿ ಕಲಸಿ ತೆಗೆದುಕೊಳ್ಳುತ್ತಾ ಬಂದರೆ, ರಕ್ತ ಪ್ರದರ, ಶ್ವೇತ ಪ್ರದರ ವ್ಯಾಧಿಗೆ ಅದ್ಭುತವಾಗಿ ಕೆಲಸ ಮಾಡುತ್ತೆ. ತಾರೆಕಾಯಿ, ಬೆಟ್ಟದ ನೆಲ್ಲಿಕಾಯಿ, ಅಳಲೆಕಾಯಿ ಸಮನಾಗಿ ತೆಗೆದುಕೊಂಡು, ಬೀಜಗಳನ್ನು ತೆಗೆದು, ನೆರಳಲ್ಲಿ ಒಣಗಿಸಿ, ಒರಳಲ್ಲಿ ಹಾಕಿ ಚೆನ್ನಾಗಿ ಕುಟ್ಟಿ, ಶುಭ್ರವಾದ ಬಟ್ಟೆಯಲ್ಲಿ ಸೋಸಿದರೆ "ತ್ರಿಫಲ" ಚೂರ್ಣ ಸಿದ್ಧವಾಗುತ್ತೆ. ನೂರು ವ್ಯಾಧಿಗಳಿಗೆ ಒಂದೇ ಔಷಧಿ "ತ್ರಿಫಲ"
ಚೂರ್ಣ.ಸರ್ವ ವ್ಯಾಧಿ ಹರಣ ತ್ರಿಫಲ ಚೂರ್ಣ.ಪ್ರತಿಯೊಬ್ಬರು ದಿನವು 5 ಗ್ರಾಂ ನಂತೆ ರಾತ್ರಿ ಹೊತ್ತಿನಲ್ಲಿ ಹಾಲು ಅಥವಾ ಜೇನುತುಪ್ಪದೊಡನೆ ತೆಗೆದುಕೊಳ್ಳಬಹುದು. ಸೂಚನೆ:- ಗರ್ಭಿಣಿಯರು, ಮೊಲೆ ಹಾಲು ಉಣಿಸುತ್ತಿರುವವರು, ತುಂಬಾ ಸಣ್ಣಗಿರುವವರು ಸೇವಿಸಬಾರದು.ಆಯುರ್ವೇದ ಪಂಡಿತರ ಸಲಹೆ ಇಲ್ಲದೆ ಸೇವಿಸಬಾರದು. ಗೆಳೆಯರೆ ನಾಳೆ ಮತ್ತೊಂದು ಅಮೂಲ್ಯ ವೃಕ್ಷವನ್ನು ಪರಿಚಯ ಮಾಡಿಕೊಳ್ಳೋಣ. ವಂದನೆಗಳು
ಜಿಲ್ಲೆಯಲ್ಲಿ ಸಾಕಷ್ಟು ಮಂದಿ ಮಾಸ್ಕ್ ಹಾಕದೆ ಹೊರಗಡೆ ಓಡಾಟ ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ಈವರೆಗೆ ಮಾಸ್ಕ್ ಹಾಕದವರಿಂದ ಸುಮಾರು 27,000 ರೂ.ವರೆಗೆ ದಂಡ ವಸೂಲಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮಾಸ್ಕ್ ಹಾಕದವರಿಗೆ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಲಾಗುವುದು. ಹಾಗೂ ದಂಡ ವಿಧಿಸಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ ನೀಡಿದ್ದಾರೆ.
ಉಡುಪಿ ಜಿಲ್ಲಾಡಳಿತ ಮತ್ತು ನಗರಸಭೆ ವತಿಯಿಂದ ಮಾಸ್ಕ್ ದಿನಾಚರಣೆ ಪ್ರಯುಕ್ತ ಕೋವಿಡ್-19 ಹರಡದಂತೆ ಜಗಜಾಗೃತಿ ಮೂಡಿಸಲು ಗುರುವಾರ ನಗರದಲ್ಲಿ ಆಯೋಜಿಸಲಾದ ಪಾದಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕೊರೋನಾ ವಿರುದ್ಧ ನಿರಂತರ ಹೋರಾಟ ಅಗತ್ಯವಾಗಿದೆ. ಈ ಹೋರಾಟ ಮುಗಿಯುವುದಿಲ್ಲ. ಈ ಹೋರಾಟದಲ್ಲಿ ಬಹಳ ಮುಖ್ಯವಾದ ಅಸ್ತ್ರ ಮಾಸ್ಕ್.
ಮಾಸ್ಕ್ ಬಳಕೆಯಿಂದ ಶೇ.50ರಷ್ಟು ಸೋಂಕನ್ನು ಹರಡದಂತೆ ತಡೆಗಟ್ಟಬಹುದು. ಈ ಪ್ರಯೋಗ ಇತರ ರಾಷ್ಟ್ರಗಳಲ್ಲಿಯೂ ಯಶಸ್ವಿಯಾಗಿದೆ. ಆದುದರಿಂದ ಪ್ರತಿ ಯೊಬ್ಬರು ಹೊರಗಡೆ ಮಾಸ್ಕ್ ಇಲ್ಲದೆ ಬರಬಾರದು. ಮಾಸ್ಕ್ ಧರಿಸದೇ ಬಂದಲ್ಲಿ ನಿಮಗೂ ಮತ್ತು ಇತರರಿಗೂ ತೊಂದರೆಯಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಶ್ರೀ ಶಾರ್ವರಿನಾಮ ಸಂವತ್ಸರ, ಉತ್ತರಾಯಣ ಪುಣ್ಯಕಾಲ, ಗ್ರೀಷ್ಮ ಋತು, ಜೇಷ್ಠ ಮಾಸ, ಕೃಷ್ಣ ಪಕ್ಷ, ತ್ರಯೋದಶಿ ತಿಥಿ, ಮಧ್ಯಾಹ್ನ 11:03 ನಂತರ ಚುರ್ತುದಶಿ, ಶುಕ್ರವಾರ, ಕೃತ್ತಿಕಾ ನಕ್ಷತ್ರ ಬೆಳಗ್ಗೆ 10:31 ನಂತರ ರೋಹಿಣಿ ನಕ್ಷತ್ರ
ರಾಹುಕಾಲ: ಬೆಳಗ್ಗೆ 10:48 ರಿಂದ 12:24 ಗುಳಿಕಕಾಲ: ಬೆಳಗ್ಗೆ 7:36 ರಿಂದ 9:12 ಯಮಗಂಡಕಾಲ: ಮಧ್ಯಾಹ್ನ 3:37 ರಿಂದ 5:13
ಮೇಷ: ಸ್ತ್ರೀಯರಿಂದ ಅದೃಷ್ಟ ಒಲಿಯುವುದು, ಯತ್ನ ಕಾರ್ಯಗಳಲ್ಲಿ ಜಯ, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಅನಗತ್ಯ ಮನಃಸ್ತಾಪ, ವ್ಯವಹಾರದಲ್ಲಿ ಅನುಕೂಲ ಸಾಧ್ಯತೆ.
ವೃಷಭ: ಕಲಾವಿದರಿಗೆ ಉತ್ತಮ ಅವಕಾಶ, ಮಾನಸಿಕ ನೆಮ್ಮದಿ ಪ್ರಾಪ್ತಿ, ಅಧಿಕಾರಿಗಳು-ರಾಜಕೀಯ ವ್ಯಕ್ತಿಗಳು ಪ್ರಯಾಣ ಮಾಡುವರು, ಸಹೋದ್ಯೋಗಿಗಳಿಂದ ನಷ್ಟ.
ಮಿಥುನ: ಸಹೋದರಿಯಿಂದ ಧನಾಗಮನ, ಅಧಿಕ ಸಾಲ ಬಾಧೆ, ನೆರೆಹೊರೆಯವರಿಂದ ಕಿರಿಕಿರಿ, ಬಂಧುಗಳಿಂದ ತೊಂದರೆ.
ಕಟಕ: ಶ್ರಮಕ್ಕೆ ತಕ್ಕ ಪ್ರತಿಫಲ, ಸ್ವಯಂ ಸಾಮಥ್ರ್ಯದಿಂದ ಸಂಪಾದನೆ ಮಾಡುವಿರಿ, ಮನೆಯಲ್ಲಿ ಅಹಿತಕರ ವಾತಾವರಣ, ಅಹಂಭಾವದ ಮಾತುಗಳನ್ನಾಡುವಿರಿ.
ಸಿಂಹ: ಆರೋಗ್ಯ ಸಮಸ್ಯೆ, ಶತ್ರುಗಳು ಅಧಿಕವಾಗುವರು, ದಾಂಪತ್ಯದಲ್ಲಿ ಮನಃಸ್ತಾಪ, ಸ್ನೇಹಿತರಿಂದ ಉದ್ಯೋಗ ಪ್ರಾಪ್ತಿ.
ಕನ್ಯಾ: ಕುಟುಂಬ ನಿರ್ವಹಣೆಗೆ ಸಾಲ, ಹಣಕಾಸು ವಿಚಾರದಲ್ಲಿ ಕಿರಿಕಿರಿ, ಕೌಟುಂಬಿಕ ಕಲಹ, ಮಕ್ಕಳಿಂದ ನಷ್ಟ ಅಧಿಕವಾಗುವುದು, ಸ್ಥಿರಾಸ್ತಿ ಸಮಸ್ಯೆ ಬಗೆಹರಿಯುವ ಸಾಧ್ಯತೆ.
ತುಲಾ: ಆಕಸ್ಮಿಕ ಉದ್ಯೋಗ ಬಡ್ತಿ, ಮಕ್ಕಳ ಪ್ರೇಮ ವಿಚಾರದಲ್ಲಿ ಅಶಾಂತಿ, ದಾಂಪತ್ಯದಲ್ಲಿ ಕಲಹ, ಪಿತ್ರಾರ್ಜಿತ ಆಸ್ತಿ ತಗಾದೆ, ಬಂಧುಗಳ ವಿರುದ್ಧ ಜಯ.
ವೃಶ್ಚಿಕ: ಮಕ್ಕಳಿಂದ ತೊಂದರೆ, ಮನೆಯಲ್ಲಿ ಅಶಾಂತಿ, ಉದ್ಯೋಗ ನಿಮಿತ್ತ ಪ್ರಯಾಣ, ಮನಸಿಗೆ ಕೆಟ್ಟಾಲೋಚನೆ, ಮಾನಸಿಕ ನೆಮ್ಮದಿ ಹಾಳು.
ಧನಸ್ಸು: ತಂದೆಯ ಸಾಲ ಬಾಧೆ, ಬಂಧುಗಳಿಂದ ಕಿರಿಕಿರಿ, ಸ್ತ್ರೀಯರೊಂದಿಗೆ ಕಲಹ, ಸರ್ಕಾರಿ ಕೆಲಸಗಳಲ್ಲಿ ಜಯ, ಅಧಿಕಾರಿಗಳಿಂದ ಅನುಕೂಲ.
ಮಕರ: ಆಕಸ್ಮಿಕ ಪ್ರೇಮದ ಬಲೆಗೆ ಸಿಲುಕುವಿರಿ, ಆತ್ಮ ವಿಶ್ವಾಸದ ಅಧಿಕವಾಗುವುದು, ಹೆಣ್ಣು ಮಕ್ಕಳಿಂದ ಅನುಕೂಲ, ಸೈಟ್ ಖರೀದಿಗೆ ಸಹಕಾರ.
ಕುಂಭ: ಸ್ನೇಹಿತರೇ ಶತ್ರುಗಳಾಗುವರು, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಸ್ಥಿರಾಸ್ತಿ-ವಾಹನ ಖರೀದಿಗೆ ಸಹಾಯ, ನೆಮ್ಮದಿಯ ವಾತಾವರಣಕ್ಕೆ ಧಕ್ಕೆ.
ಮೀನ: ಪಡೆದ ಸಾಲ ಮರುಪಾವತಿಸುವಿರಿ, ಸ್ವಯಂಕೃತ್ಯಗಳಿಂದ ತೊಂದರೆ, ಶತ್ರುಗಳು ಅಧಿಕವಾಗುವರು, ವಿಪರೀತ ನಷ್ಟ, ಮಕ್ಕಳಿಂದ
ವಟ ವೃಕ್ಷ ರಕ್ತಫಲ ಕ್ಷೀರೀ ಬಹುಪಾದ ವನಸ್ಪತಿ ಯಕ್ಷವಾಸ ಪದಾರೋಹೀ ನ್ಯಗ್ರೋಧ ಸ್ಕಂಧಜ ಧ್ರುವ ಆಲದ ಮರ ಮರ್ರಿ ಚೆಟ್ಟು(ಮಾನು) ಆಲ ಮರಂ ಎಂಬ ಹೆಸರುಗಳಿಂದ ಕರೆಯುತ್ತಾರೆ. ಕಾಡುಗಳಲ್ಲಿ, ಬೆಟ್ಟ ಗುಡ್ಡ ಪ್ರದೇಶಗಳಲ್ಲಿ ಬೃಹದ್ಧಕಾರವಾಗಿ ಬೆಳೆದಿರುತ್ತವೆ.ಭಾರತ ದೇಶದಲ್ಲಿ ಆಲದ ಮರವಿಲ್ಲದ ಗ್ರಾಮವೇ ಇಲ್ಲಾ....! ಪ್ರತಿಯೊಂದು ಹಳ್ಳಿಯಲ್ಲೂ ಆಲದ ಮರ ಇದ್ದೆ ಇರುತ್ತೆ. "ಯಕ್ಷವಾಸ" ಎಂಬ ಹೆಸರು ಆಲದ ಮರದ ಶ್ರೇಷ್ಠತೆ,ವಿಶಿಷ್ಟತೆಗಳನ್ನು ಸ್ಪಷ್ಟ ಪಡಿಸುತ್ತದೆ.ಈ ವೃಕ್ಷ
ದಲ್ಲಿ ಆಶ್ರಯ ಪಡೆಯತಕ್ಕವರು, ಅತ್ಯುತ್ತಮವಾದ ಆರೋಗ್ಯ,ಹಾಗೂ ಅಪರಿಮಿತವಾದ ತೇಜಸ್ಸನ್ನು ಪಡೆದು ದೇವತಾ ಸ್ವರೂಪದಿಂದ ಕಂಗೊಳಿಸಬಲ್ಲರು..! ಆಲದೆಲೆಯ ಮೇಲೆ ಪವಡಿಸಿರುವ ಬಾಲಕೃಷ್ಣನ ಚಿತ್ರದ ರೂಪ ಕಲ್ಪನೆಯ ಹಿಂದೆಯೂ ಒಂದು ವೈಜ್ಞಾನಿಕ ಸಾಂಕೇತಿಕ ಅರ್ಥವಿದೆ ಎಂಬುವುದನ್ನು ಆಲದ ಔಷಧೀಯ ಉಪಯುಕ್ತತೆಯನ್ನು ಅರಿತ ನಂತರ ತಿಳಿಯಬಹುದಾಗಿದೆ. ಆಲದ ಮರದ ಬಿಳಿಲುಗಳು ಮರದ ಮುಖ್ಯ ಕಾಂಡದಿಂದ, ಕೆಲವೊಮ್ಮೆ ರೆಂಬೆಗಳಿಂದ ನೇರವಾಗಿ ಭೂಮಿಗೆ ಅಭಿಮುಖವಾಗಿ ಬೆಳೆಯುತ್ತಾ ಸಾಗಿ, ಕಡೆಗೆ ಭೂಮಿಯೊಳಕ್ಕೆ ಇಳಿಯುತ್ತವೆ….! ಕ್ರಮೇಣ ಇವು ಹೆಚ್ಚು ದಪ್ಪವಾಗಿಯೂ,ದೃಢವಾಗಿಯೂ ಆಗಿ ಇಡೀ ವೃಕ್ಷಕ್ಕೆ ಆಧಾರ ಸ್ತಂಭಗಳಾಗಿ ಪರಿಣಮಿಸುವುವು..! ಈ ಬಿಳಿಲುಗಳ ವ್ಯಾಪ್ತಿಯು ಅಗಾಧವಾಗಿ ಜಗತ್ತಿಗೇ ಸೋಜಿಗ ಎನಿಸುವ ಬೃಹತ್ ಗಾತ್ರದ ವಟ ವೃಕ್ಷಗಳ ಬೆಳವಣಿಗೆ ಕಾರಣವಾಗಿದೆ. ಆಲದ ಮರ ತನ್ನ ಔಷಧೀಯ ಗುಣಗಳಿಂದಾಗಿಯೂ ಪ್ರಖ್ಯಾತವಾಗಿದೆ. ಆಲದ ಮರದ ಬಿಳಲನ್ನು ಕೊಬ್ಬರಿ ಎಣ್ಣೆಯೊಡನೆ ಚೆನ್ನಾಗಿ ಕಾಯಿಸಿ, ತಲೆಗ ಲೇಪಿಸಿಕೊಳ್ಳುವುದರಿಂದ, ತಲೆಯ ಕೂದಲು ಬಹಳ ಉದ್ದವಾಗಿ ಸೊಂಪಾಗಿ ಬೆಳೆಯುತ್ತದೆ. ಅನೇಕ ಕೇಶ ತೈಲ ತಯಾರಿಸುವ ಕಂಪನಿಗಳು, ಕೇಶ ತೈಲ ತಯಾರಿಸಲು ಈ ಬಿಳಿಲನ್ನೂ ಹೆಚ್ಚಾಗಿ ಬಳಿಸುತ್ತವೆ. ಆಲದ ಮರದ ಹಣ್ಣನ್ನು ಪಕ್ಷಿಗಳು ಹಾಗೂ ಮಂಗಗಳು ತುಂಬಾ ಇಷ್ಟಪಟ್ಟು ತಿನ್ನುತ್ತವೆ.ಮಾನವರು ಈ ಹಣ್ಣನ್ನು ನುಣ್ಣಗೆ ಅರೆದು ಮೈಗೆ ಲೇಪಿಸಿಕೊಂಡು ಒಂದು ಗಂಟೆ ಬಿಟ್ಟು ಸ್ನಾನ ಮಾಡಿದರೆ ಅನೇಕ ಚರ್ಮ ರೋಗಗಳು ನಿವಾರಣೆಯಾಗುವುದಲ್ಲದೆ,ಮೈ ಹಕ್ಕಿಯಷ್ಟು ಹಗುರಾದಂತೆ ಭಾಸವಾಗುವುದು….! ಆಲದ ಮರದ ಹಾಲನ್ನು ಯಜ್ಞ ಯಾಗಾದಿಗಳಲ್ಲಿ ಬಹಳ ವಿಶೇಷವಾಗಿ ಬಳಸುವರು.ಇದರ ಅಂಶವನ್ನು ಹೊಂದಿರುವ ಧೂಮವನ್ನು ಆಘ್ರಾಣಿಸುವುದರಿಂದ ಮಾನವನು ತನ್ನ ವಯೋಧರ್ಮವನ್ನು ಮೀರಿದವನೇ ಆದರೂ ಕೂಡ,ಅತ್ಯಂತ ಚಟುವಟಿಕೆಯಿಂದ ಇರುತ್ತಾನೆ.ಸೂರ್ಯೋದಯಕ್ಕೆ ಮುನ್ನ ಏಳಬೇಕೆಂಬ ಆಪೇಕ್ಷೆಯು ಮೂಡಿ,ಎದ್ದ ತಕ್ಷಣ ಅತ್ಯುತ್ಸಾಹದಿಂದ ಇರುತ್ತಾನೆ.ಆಲದ ಮರದ ಹಾಲಿನ ಸೇವನೆ ಮಾನವರಲ್ಲಿ ಅಪೂರ್ವವಾದ ಚೈತನ್ಯವು ಉದ್ಭವಿಸಲು ಕಾರಣವಾಗುವುದು….! ಆಲದ ಎಲೆಯಲ್ಲಿ ಒಂದು ವರ್ಷ ಕಾಲ ಪ್ರತಿ ದಿನವೂ ಊಟವನ್ನು ಮಾಡುತ್ತಿದ್ದರೆ ಮನೋ ನಿಶ್ಚಯವು ಮೂಡಿ,ಅತೀಂದ್ರಿಯ ಜ್ಞಾನವು ಉಂಟಾಗುತ್ತದೆ. ಆಲದ ಮರದ ತೊಗಟೆಯನ್ನು ಚೂರ್ಣ ಮಾಡಿ, ನೀರಿನಲ್ಲಿ ಕಲಸಿ ಮೈಗೆ ಲೇಪಿಸಿಕೊಂಡು, ಎರಡು ಗಂಟೆಯ ನಂತರ ಸ್ನಾನ ಮಾಡಿದರೆ ಮಾನವನು ಚೈತನ್ಯವಂತನೆನಿಸುವನು….! ಪುರಾತನ ಕಾಲದಲ್ಲಿ ಋಷಿ ಮುನಿಗಳು,ಆಲದ ಮರದಿಂದ ತಯಾರಿಸಿದ ಪಾದುಕೆಗಳನ್ನು ಬಳಸುತ್ತಿದ್ದರಿಂದ ಅವರ ಜ್ಞಾನ ವೃದ್ಧಿಯಾಗುತಿತ್ತು. ಇಂತಹ ಪಾದುಕೆಗಳನ್ನು “ಕಡಾವು” ಎಂದು ಕರೆಯುತ್ತಿದ್ದರು. ಆಲದ ಚಿಗುರನ್ನು ತಂದು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಬೆಳಿಗ್ಗೆ ಸಂಜೆ 50ml ಗೆ ಒಂದು ಚಮಚ ಜೇನುತುಪ್ಪ ಸೇರಿಸಿ ಸೇವಿಸುತ್ತಾ ಬಂದರೆ ಮಲಬದ್ಧತೆ ಗುಣವಾಗುತ್ತೆ. ಕೆಲವು ಮಕ್ಕಳಿಗೆ ಮೂರು ವರ್ಷವಾದರೂ ಮಾತು ಬರುವುದಿಲ್ಲ,ಅಂತಹ ಮಕ್ಕಳಿಗೆ ಆಲದ ಮರದ ತೊಗಟೆಯ ಗಂಧ ತೇಯ್ದು ನೆಕ್ಕಿಸುತ್ತಾ ಬಂದರೆ ಬೇಗನೆ ಮಾತು ಬರುವುದು….! ಮಕ್ಕಳಿಗೆ ಆಲದ ಹಣ್ಣನ್ನು ನೆರಳಲ್ಲಿ ಒಣಗಿಸಿ ಚೂರ್ಣ ಮಾಡಿಟ್ಟುಕೊಂಡು 1 ಚಮಚ ಚೂರ್ಣ,1 ಚಮಚ ಜೇನುತುಪ್ಪ,1 ಲೋಟ ಹಸುವಿನ ಹಾಲಿನಲ್ಲಿ ಕಲಸಿ ಬೆಳಿಗ್ಗೆ ಸಂಜೆ ಕೊಡುತ್ತಾ ಬಂದರೆ, ಜ್ಞಾಪಕ ಶಕ್ತಿ ಹೆಚ್ಚುತ್ತೆ.ಪೌಷ್ಠಿಕತೆ ಹೆಚ್ಚಿ ಸದೃಢರಾಗುತ್ತಾರೆ. ಬಿಳಲು ಅಥವಾ ತೊಗಟೆಯ ಕಷಾಯ ಮಾಡಿ ಸೇವಿಸುತ್ತಾ ಬಂದರೆ ಮಧುಮೇಹ ಅತೋಟಿಗೆ ಬರುತ್ತೆ. ಮೂಲವ್ಯಾಧಿ ಗುಣವಾಗುತ್ತೆ. ಆಲದ ಮರದ ಕೆಳಗಡೆ ಕುಳಿತು ವಿಶ್ರಾಂತಿಯನ್ನು ಪಡೆದರೆ ಆರೋಗ್ಯಕ್ಕೆ ತುಂಬಾ ಒಳ್ಳೇದು ಎಂದು ಪೂರ್ವಿಕರು ಹೇಳಿದ್ದಾರೆ.ಈಗಿನ ಹಿರಿಯರು ಹೇಳುತ್ತಾರೆ.ಆಲದ ಮರದ ಉಪಯೋಗಗಳು ಅಪರಿಮಿತವಾದದ್ದು. ಗೆಳೆಯರೆ ನಾಳೆ ಮತ್ತೊಂದು ಅಮೂಲ್ಯ ವೃಕ್ಷವನ್ನು ಪರಿಚಯ ಮಾಡಿಕೊಳ್ಳೋಣ. ವಂದನೆಗಳು
ಕೋವಿಡ್ – 19 ಸೋಂಕಿತರ ಸಂಖ್ಯೆಯಲ್ಲಿ ಉಡುಪಿ ಪ್ರಥಮ ಸ್ಥಾನದಲ್ಲಿ ಇದ್ದರೂ ಕೋವಿಡ್ – 19 ನಿಂದ ಗುಣಮುಖರಾದವರಲ್ಲಿಯೂ ಉಡುಪಿ ಮೊದಲ ಸ್ಥಾನದಲ್ಲಿದೆ. ಜಿಲ್ಲಾಡಳಿತದ ಜವಾಬ್ದಾರಿಯುತ ಕಾರ್ಯವೈಖರಿ ಹಾಗೂ ಉಡುಪಿಯ ಜನರ ಜಾಗೃತಿಯಿಂದ ಕೋವಿಡ್ – 19 ನಿಯಂತ್ರಣದಲ್ಲಿದೆ ಎಂದು ಶಾಸಕ ರಘುಪತಿ ಭಟ್ ಹೇಳಿದರು.
ಜನರಲ್ಲಿ ಕೋವಿಡ್ – 19 ವಿರುದ್ಧ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ದಿ. 18-06-2020 ರಂದು ಜಿಲ್ಲಾಡಳಿತ ಹಾಗೂ ನಗರಸಭೆ ವತಿಯಿಂದ ಮಾಸ್ಕ್ ದಿನ ಆಚರಣೆಯ ಜನ ಜಾಗೃತಿ ಜಾಥಾಕ್ಕೆ ಚಾಲನೆಯನ್ನು ನೀಡಿ ಮಾತನಾಡಿದರು.
ಕೋವಿಡ್ – 19 ಕುರಿತು ಭಯ ಪಡುವ ಅಗತ್ಯವಿಲ್ಲ. ಆದರೆ ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ನಮ್ಮ ನಮ್ಮ ಸುರಕ್ಷತೆ ಬಗ್ಗೆ ಗಮನ ಹರಿಸಬೇಕು. ಸರ್ಕಾರ, ಅಧಿಕಾರಿಗಳೊಂದಿಗೆ ಜನಸಾಮಾನ್ಯರು ಕೈಜೋಡಿಸಿ ಕೋವಿಡ್ – 19 ವಿರುದ್ಧ ಹೋರಾಡಬೇಕು. ಆಗ ನಾವು ಯಶಸ್ವಿಯಾಗುತ್ತೇವೆ ಎಂದು ಹೇಳಿದರು.
ಬಳಿಕ ನಗರಸಭೆಯಿಂದ ತಾಲೂಕ ಆಫೀಸ್ ವೃತ್ತದವರೆಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಜನ ಜಾಗೃತಿ ಜಾಥ ನೆರವೇರಿತು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಜಿ ಜಗದೀಶ್, ಅಪರ ಜಿಲ್ಲಾಧಿಕಾರಿಗಳಾದ ಸದಾಶಿವ್ ಪ್ರಭು, ಉಡುಪಿ ಪೋಲಿಸ್ ಉಪ ಅಧೀಕ್ಷಕರಾದ ಜೈಶಂಕರ್, ಪೌರಾಯುಕ್ತರಾದ ಆನಂದ್ ಸಿ ಕಲ್ಲೋಲಿಕರ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಮೋಹನ್ ರಾಜ್ ಹಾಗೂ ನಗರಸಭೆಯ ಅಧಿಕಾರಿಗಳು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.
ಶ್ರೀ ಶಾರ್ವರಿನಾಮ ಸಂವತ್ಸರ, ಉತ್ತರಾಯಣ ಪುಣ್ಯಕಾಲ, ಗ್ರೀಷ್ಮ ಋತು, ಜೇಷ್ಠ ಮಾಸ, ಕೃಷ್ಣ ಪಕ್ಷ, ದ್ವಾದಶಿ ತಿಥಿ, ಬೆಳಗ್ಗೆ 9:41 ನಂತರ ತ್ರಯೋದಶಿ ತಿಥಿ, ಗುರುವಾರ, ಭರಣಿ ನಕ್ಷತ್ರ ಬೆಳಗ್ಗೆ 8:30 ನಂತರ ಕೃತ್ತಿಕಾ ನಕ್ಷತ್ರ
ದಿನ ವಿಶೇಷ: ಪ್ರದೋಷ
ರಾಹುಕಾಲ: ಮಧ್ಯಾಹ್ನ 2:01 ರಿಂದ 3:37 ಗುಳಿಕಕಾಲ: ಬೆಳಗ್ಗೆ 9:12 ರಿಂದ 10:48 ಯಮಗಂಡಕಾಲ: ಬೆಳಗ್ಗೆ 5:59 ರಿಂದ 7:36
ಮೇಷ: ಉದ್ಯೋಗ ಪ್ರಾಪ್ತಿ, ಮಾತೃವಿನಿಂದ ಅನುಕೂಲ, ಪಿತ್ರಾರ್ಜಿತ ಆಸ್ತಿ ತಗಾದೆ, ಅನಗತ್ಯ ಕಲಹ ಬಗೆಹರಿಯವುದು.
ವೃಷಭ: ಭಾವನೆಗಳಿಗೆ ಮನ್ನಣೆ, ಕಾರ್ಯ ನಿಮಿತ್ತ ಓಡಾಟ, ವ್ಯಾಪಾರ ಉದ್ಯಮದಲ್ಲಿ ಪ್ರಗತಿ, ನೆರೆಹೊರೆಯವರಿಂದ ಪ್ರಯಾಣ,
ಮಿಥುನ: ಪಿತ್ರಾರ್ಜಿತ ಆಸ್ತಿ ತಗಾದೆ, ವ್ಯವಹಾರದಲ್ಲಿ ಅಡೆತಡೆ, ಕುಟುಂಬಕ್ಕಾಗಿ ಖರ್ಚು, ವಸ್ತ್ರಾಭರಣ ಖರೀದಿ, ಆಕಸ್ಮಿಕ ಧನಾಗಮನ.
ಕಟಕ: ದುಶ್ಚಟಗಳಿಂದ ತೊಂದರೆಗೆ ಸಿಲುಕುವಿರಿ, ಕುಟುಂಬಸ್ಥರಿಂದಲೇ ಮಾನಹಾನಿ, ವ್ಯಾಪಾರ ವ್ಯವಹಾರದಲ್ಲಿ ಅನುಕೂಲ.
ಸಿಂಹ: ಬಂಧುಗಳಲ್ಲಿ ಕಲಹ, ಮಿತ್ರರಿಂದ ಅನುಕೂಲ, ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ, ಗ್ಯಾಸ್ಟ್ರಿಕ್ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ.
ಕನ್ಯಾ: ಪ್ರಯಾಣದಲ್ಲಿ ಅಡೆತಡೆ, ತಂದೆಯಿಂದ ಲಾಭ, ಕೆಲಸ ಕಾರ್ಯಗಳಲ್ಲಿ ಅನುಕೂಲ, ಗೌರವ-ಕೀರ್ತಿ ಸಂಪಾದನೆಗೆ ಹಂಬಲ, ಉನ್ನತ ಹುದ್ದೆಗಾಗಿ ಕನಸು.
ತುಲಾ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಮಾನಸಿಕ ಒತ್ತಡ, ವ್ಯಾಪಾರಸ್ಥರಿಗೆ ಅನುಕೂಲ, ಕೋರ್ಟ್ ಕೇಸ್‍ಗಳಲ್ಲಿ ಜಯ.
ವೃಶ್ಚಿಕ: ದಾಂಪತ್ಯದಲ್ಲಿ ವಿರಸ, ಮಾನಸಿಕ ವ್ಯಥೆ, ಸ್ಥಿರಾಸ್ತಿಯಿಂದ ಲಾಭ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ.
ಧನಸ್ಸು: ಹಣಕಾಸು ಸಮಸ್ಯೆ, ಅಧಿಕ ಚಿಂತೆ, ಅನಗತ್ಯ ನಷ್ಟ, ಉದ್ಯೋಗ ನಿಮಿತ್ತ ಪ್ರಯಾಣ,
ಮಕರ: ಸಂಗಾತಿಯಿಂದ ಅನುಕೂಲ, ಮಕ್ಕಳಿಗೆ ಉತ್ತಮ ಅವಕಾಶ ಪ್ರಾಪ್ತಿ, ರೋಗ ಬಾಧೆಗಳಿಂದ ಮುಕ್ತಿ, ಅಹಂಭಾವದಿಂದ ಅಪನಂಬಿಕೆ.
ಕುಂಭ: ಸೇವಕರಿಂದ ಕಿರಿಕಿರಿ, ಕೆಲಸಗಾರರಿಂದ ನಷ್ಟ, ಉದ್ಯೋಗದಲ್ಲಿ ನಿರಾಸಕ್ತಿ, ಕೆಲಸದಲ್ಲಿ ವಿಪರೀತ ಒತ್ತಡ, ಸ್ಥಿರಾಸ್ತಿ-ವಾಹನದ ಮೇಲೆ ಸಾಲದ ಬೇಡಿಕೆ.
ಮೀನ: ಭಾವನಾ ಲೋಕದಲ್ಲಿ ವಿಹಾರ, ಪತ್ರ ವ್ಯವಹಾರದಲ್ಲಿ ಅನುಕೂಲ, ಮಕ್ಕಳಿಗೆ ಉತ್ತಮ ಅವಕಾಶ, ಈ ದಿನ ಶುಭ ಫಲ.