ಇಂದಿನ ಮರದ ಪರಿಚಯ: ಅಶೋಕ ವೃಕ್ಷಂ

ಅಶೋಕ ವೃಕ್ಷ ಕಂಕೇಲಿ ವಕುಳ ವೃಕ್ಷ ಅಸೋಗಂ ವಂಜುಲೇ ಎಂಬ ಹೆಸರುಗಳಿಂದ ಕರೆಯುತ್ತಾರೆ.
ಈ ವೃಕ್ಷಗಳು ಪಶ್ಚಿಮ ಘಟ್ಟ ಕಾಡುಗಳು, ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಮಾತ್ರಕಾಣುತ್ತವೆ.ಔಷಧೀಯ ತಯಾರಿಕೆ ಘಟಕಗಳಿಂದ ಬಾರಿ ಬೇಡಿಕೆ ಏರ್ಪಟ್ಟು, ಅತಿ ಹೆಚ್ಚಿನ ಬಳಕೆಯಿಂದ ಈ ವೃಕ್ಷವು ಅವನತಿಯ ಅಂಚಿಗೆ ಬಂದು ತಲುಪಿದೆ.ಇದನ್ನು ಮನಗೊಂಡ ಸರ್ಕಾರ ಹಾಗೂ ತೋಟಗಾರಿಕೆ ಇಲಾಖೆ,ಇತ್ತೀಚಿಗೆ ಉದ್ಯಾನವನಗಳಲ್ಲಿ ಅಲಂಕಾರಿಕ ವೃಕ್ಷವಾಗಿ ಬೆಳೆಸುವುದರ ಜೊತೆಗೆ ರಸ್ತೆಗಳ ಪಕ್ಕ ಸಾಲು ಮರಗಳಾಗಿಯೂ ಬೆಳೆಸುತ್ತಿದ್ದಾರೆ.ಈ ವೃಕ್ಷವು ಸುಮಾರು 25 ರಿಂದ 35 ಅಡಿ ಎತ್ತರ ಬೆಳೆಯುತ್ತದೆ.
ಅಶೋಕ ವೃಕ್ಷದ ಬಗ್ಗೆ ರಾಮಾಯಣ ಮಹಾಗ್ರಂಥದಲ್ಲೇ ಉಲ್ಲೇಖವಾಗಿರುವುದನ್ನು ನಾವು ನೋಡಬಹುದು.ಲಾಂಕಾಧಿಪತಿ ರಾವಣ, ಸೀತಾಮಾತೆಯನ್ನು ಕದ್ದು ಹೊತ್ತೊಯ್ದು ಅಶೋಕ ವನದಲ್ಲಿ ಇಟ್ಟಿದ್ದನೆಂದು ಪುರಾಣಗಳು ಹೇಳುತ್ತವೆ. ಈ ವೃಕ್ಷವು ಹಿಂದುಗಳಿಗೆ ಮಾತ್ರ ಪವಿತ್ರವಾದ ವೃಕ್ಷವಲ್ಲದೇ ಬೌಧ, ಜೈನ್ಯ ಧರ್ಮಿಯರೂ ಪೂಜನೀಯ ಭಾವದಿಂದ ನೋಡುತ್ತಾರೆ.
ಅನೇಕ ಪ್ರಾಂತ್ಯಗಳಲ್ಲಿ ಪ್ರೇಮಿಗಳು, ಅವರ ಪ್ರೀತಿ ಅಮರವಾಗಲೆಂದು ಈ ವೃಕ್ಷಕ್ಕೆ ಪ್ರದಕ್ಷಿಣೆ ಹಾಕಿ ಮುಡುಪು ಕಟ್ಟಿ ಪೂಜಿಸುತ್ತಾರೆ.
ಪುರಾತನ ಕಾಲದಿಂದಲೂ ಅಶೋಕ ವೃಕ್ಷಕ್ಕೆ ಆಯುರ್ವೇದದಲ್ಲಿ ಅತ್ಯಂತ ಮಹತ್ವದ ಸ್ಥಾನವಿದೆ.ಈ ವೃಕ್ಷದಲ್ಲಿ ಔಷಧಗಳ ಭಂಡಾರವೇ ತುಂಬಿದೆ.ಎಲೆ ಹೂ ಕಾಯಿ ತೊಗಟೆ ಬೇರು ಪಂಚಾಂಗ ಸಹಿತ ಔಷಧಿಯಾಗಿ ಉಪಯೋಗಿಸುತ್ತಾರೆ.ಅದರಲ್ಲೂ ಸ್ತ್ರೀಗೆ ಸಂಬಂಧಿಸಿದ ವ್ಯಾಧಿಗಳಿಗೆ ಬಹಳಷ್ಟು ವಿಶೇಷವಾಗಿ ಉಪಯೋಗಿಸುತ್ತಾರೆ.
ಅಶೋಕ ವೃಕ್ಷದ ತೊಗಟೆಯ ಕಷಾಯ ಸೇವನೆಯಿಂದ, ಅತಿಸಾರ ಭೇದಿ, ಆಂತರಿಕ ಗಡ್ಡೆ, ಹುಣ್ಣುಗಳು,ಮೂತ್ರನಾಳಕ್ಕೆ ಸಂಬಂಧಿಸಿದ ವ್ಯಾಧಿಗಳು ಗುಣವಾಗುತ್ತೆ.
ಒಂದು ಮಣ್ಣಿನ ಮಡಿಕೆಯಲ್ಲಿ 100 ಗ್ರಾಂ ಅಶೋಕ ವೃಕ್ಷದ ತೊಗಟೆಯನ್ನು ಹಾಕಿ, ಅದಕ್ಕೆ 1 ಲೀಟರ್ ನೀರನ್ನು ಹಾಕಿ,ಒಲೆಯಮೇಲಿಟ್ಟು ಮಂದದ ಹುರಿಯಲ್ಲಿ ಚೆನ್ನಾಗಿ ಕುದಿಸಿ,1/4 ಭಾಗವಾದಾಗ ಕೆಳಗಿಳಿಸಿ, ಉಗರು ಬೆಚ್ಚಗಿದ್ದಾಗ ಸೋಸಿ, 1 ಲೋಟ ಹಾಲಿನಲ್ಲಿ 50ml ನಂತೆ ಕಲಸಿ ಮುಟ್ಟಾದ ಸಮಯದಲ್ಲಿ, ಬೆಳಿಗ್ಗೆ ಸಂಜೆ ಕ್ರಮ ತಪ್ಪದೆ ಮುಟ್ಟು ನಿಲ್ಲುವವರಿಗೂ ತೆಗೆದುಕೊಂಡರೆ, ಅತಿ ಋತಸ್ರಾವ ಗುಣವಾಗುತ್ತೆ.ರಕ್ತ ಪ್ರದರ, ಶ್ವೇತ ಪ್ರದರ ಸಹಾ ವಾಸಿಯಾಗುತ್ತೆ.ಬೇಕಾದಲ್ಲಿ ಕಷಾಯ ಹಾಲಿನೊಡನೆ ಕಲ್ಲು ಸಕ್ಕರೆ ಉಪಯೋಗಿಸಬಹುದು.
ಇದೆ ರೀತಿಯಾಗಿ ಹೂವಿನಲ್ಲೂ ಕಷಾಯ ಮಾಡಿ ಸೇವಿಸಿಬಹುದು.ಹಾಲಿನ ಜೊತೆ ಅಥವಾ ಜೇನುತುಪ್ಪ
ದಲ್ಲಿ ತೆಗೆದುಕೊಳ್ಳಬಹುದು.
ಅಶೋಕ ವೃಕ್ಷದ ಎಲೆಗಳ ರಸ ಒಂದು ವಾರ, ಬೆಳಿಗ್ಗೆ ಸಂಜೆ 2 ಚಮಚದಂತೆ ಊಟಕ್ಕೆ ಮುಂಚೆ ಒಂದು ವಾರ ತೆಗೆದುಕೊಂಡರೆ, ಗರ್ಭಾಶಯದ ಸಮಸ್ಯೆಗಳು ದೂರವಾಗಿ, ಸಂತಾನ ಪ್ರಾಪ್ತಿಯಾಗುತ್ತೆ ಎಂದು ಆಯುರ್ವೇದ ಗ್ರಂಥಗಳಲ್ಲಿ ಉಲ್ಲೇಖವಾಗಿದೆ.
ಆಯುರ್ವೇದ ಔಷಧಿ ತಯಾರಿಕೆಯಲ್ಲಿ ಇದರ ತೊಗಟೆಗೆ ಅಪಾರ ಬೇಡಿಕೆಯಿದ್ದು, ಇದರಿಂದ ಅಶೋಕಾರಿಷ್ಠ, ಅಶೋಕ ಘ್ರುತಾ, ಅಶೋಕ ವಟಿ ಇನ್ನು ಮುಂತಾದ ಔಷಧಿಗಳನ್ನು ತಯಾರಿಸುತ್ತಾರೆ.
ಅಶೋಕ ವೃಕ್ಷದ ತೊಗಟೆ ಚೂರ್ಣ ಹಾಗೂ ಬೀಜದ ಚೂರ್ಣವನ್ನು ಸ್ತ್ರೀ ಜನನೇಂದ್ರಿಯ ಸಮಸ್ಯೆಗಳಿಗೆ ಉಪಯೋಗಿಸುವುದರಿಂದ ರಾಮಭಾಣದಂತೆ ಕೆಲಸ ಮಾಡುತ್ತೆ.
ಅತಿಸಾರ ಭೇದಿ ಹಾಗೂ ರಕ್ತ ಶುದ್ಧಿಗೆ ಎಲೆ, ಹೂ, ತೊಗಟೆ ಚೂರ್ಣವನ್ನು ಔಷಧಿಯಾಗಿ ಬಳಸುತ್ತಾರೆ.
ಅಶೋಕ ವೃಕ್ಷ ಬೀಜದ ಚೂರ್ಣವನ್ನು ಸೇವಿಸುವುದರಿಂದ ಮೂತ್ರ ಪಿಂಡದಲ್ಲಿನ ಕಲ್ಲು ಕರಗಿ, ಮೂತ್ರ ಸಂಬಂಧಿಸಿದ ವ್ಯಾಧಿಗಳು ಅತಿ ತ್ವರಿತವಾಗಿ ನಿವಾರಣೆಯಾಗುತ್ತವೆ. ಗೆಳೆಯರೆ ನಾಳೆ ಮತ್ತೊಂದು ಅಮೂಲ್ಯ ವೃಕ್ಷವನ್ನು ಪರಿಚಯ ಮಾಡಿಕೊಳ್ಳೋಣ. ವಂದನೆಗಳು

ದೇಶದ ಎಲ್ಲಾ ಸಹಕಾರಿ ಬ್ಯಾಂಕುಗಳು RBI ವ್ಯಾಪ್ತಿಗೆ- ಕೇಂದ್ರ ಸರಕಾರದ ಸುಗ್ರೀವಾಜ್ಞೆ

ದೇಶದಲ್ಲಿನ ಎಲ್ಲಾ ಸಹಕಾರಿ ಬ್ಯಾಂಕುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ವ್ಯಾಪ್ತಿಗೆ ಒಳಪಡಿಸಿ ಕೇಂದ್ರ ಸರಕಾರ ಮಹತ್ವದ ಆದೇಶವನ್ನು ಹೊರಡಿಸಿದೆ.

ದೇಶದಲ್ಲಿ ಸಹಕಾರಿ ಬ್ಯಾಂಕುಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಸುಗ್ರೀವಾಜ್ಞೆಯ ಮೂಲಕ ಸಹಕಾರಿ ಬ್ಯಾಂಕುಗಳನ್ನು ಆರ್ ಬಿ ಐ ವ್ಯಾಪ್ತಿಗೆ ಒಳಪಡಿಸಿದೆ. ಈ ಮೂಲಕ ದೇಶದಲ್ಲಿನ 1,540 ಸಹಕಾರಿ ಬ್ಯಾಂಕುಗಳು ಆರ್ ಬಿಐ ವ್ಯಾಪ್ತಿಗೆ ಒಳಪಡಲಿವೆ. ಸಹಕಾರಿ ಬ್ಯಾಂಕುಗಳಲ್ಲಿ ಸುಮಾರು 8.6 ಕೋಟಿಗೂ ಅಧಿಕ ಠೇವಣಿದಾರರಿದ್ದಾರೆ. ಕೇಂದ್ರ ಸರಕಾರದ ಈ ನಿರ್ಧಾರದಿಂದಾಗಿ ಠೇವಣಿದಾರರ ಹಣ ಸುರಕ್ಷಿತವಾಗಿರಲಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ತಿಳಿಸಿದ್ದಾರೆ.

ದೇಶದಲ್ಲಿ ಹಲವು ಸಹಕಾರಿ ಬ್ಯಾಂಕುಗಳು ಠೇವಣಿದಾರರಿಂದ ಹಣವನ್ನು ಸಂಗ್ರಹಿಸಿ ನಂತರದಲ್ಲಿ ವಂಚಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಕೇಂದ್ರ ಸರಕಾರ ಸಹಕಾರಿ ಬ್ಯಾಂಕುಗಳಿಗೆ ಮೂಗುದಾರ ಹಾಕಿದೆ.

ದಿನ ಭವಿಷ್ಯ: 24-06-2020, ಬುಧವಾರ

ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಶುಕ್ಲ ಪಕ್ಷ, ತೃತೀಯಾ ತಿಥಿ,
ಬುಧವಾರ, ಪುಷ್ಯ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 12:25 ರಿಂದ 2:01
ಗುಳಿಕಕಾಲ: ಬೆಳಗ್ಗೆ 10:49 ರಿಂದ 12:25
ಯಮಗಂಡಕಾಲ: ಬೆಳಗ್ಗೆ 7:37 ರಿಂದ 9:13

ಮೇಷ: ದ್ರವ್ಯ ಲಾಭ, ಬಂಧು-ಮಿತ್ರರ ಸಮಾಗಮ, ವ್ಯಾಪಾರ-ಉದ್ಯೋಗದಲ್ಲಿ ಲಾಭ, ಮನಸ್ಸಿನಲ್ಲಿ ಭಯ, ಆತಂಕ.

ವೃಷಭ: ಸ್ಥಳ ಬದಲಾವಣೆ, ಮಂಗಳ ಕಾರ್ಯ ನಡೆಯವುದು, ಅಮೂಲ್ಯ ವಸ್ತುಗಳ ಕಳೆದುಕೊಳ್ಳುವ ಸಾಧ್ಯತೆ, ಯಾರನ್ನೂ ಹೆಚ್ಚು ನಂಬಬೇಡಿ.

ಮಿಥುನ: ನಾನಾ ರೀತಿಯ ಸಂಪಾದನೆ, ಉನ್ನತ ಸ್ಥಾನಮಾನ, ಭಾಗ್ಯ ವೃದ್ಧಿ, ಮಾನಸಿಕ ನೆಮ್ಮದಿ, ಆತ್ಮೀಯರಲ್ಲಿ ದ್ವೇಷ, ಆರೋಗ್ಯದಲ್ಲಿ ವ್ಯತ್ಯಾಸ.

ಕಟಕ: ಕುಟುಂಬ ಸೌಖ್ಯ, ಸ್ತ್ರೀಯರಿಗೆ ಶುಭ, ಸುಖ ಭೋಜನ ಪ್ರಾಪ್ತಿ, ವಿವಾಹ ಯೋಗ, ಇಲ್ಲ ಸಲ್ಲದ ಅಪವಾದ.

ಸಿಂಹ: ವಿಪರೀತ ಹಣವ್ಯಯ, ಕಾರ್ಯದಲ್ಲಿ ನಿಧಾನ, ದುಃಖದಾಯಕ ಪ್ರಸಂಗ, ಗುಪ್ತ ವಿದ್ಯೆಯಲ್ಲಿ ಆಸಕ್ತಿ.

ಕನ್ಯಾ: ದ್ರವ್ಯ ನಾಶ, ಪರರಿಗೆ ವಂಚಿಸುವ ಸಾಧ್ಯತೆ, ಋಣ ಬಾಧೆ, ಪ್ರಿಯ ಜನರ ಭೇಟಿ, ವಿದ್ಯಾಭ್ಯಾಸದಲ್ಲಿ ಪ್ರಗತಿ.

ತುಲಾ: ಅಲ್ಪ ಲಾಭ, ಹಣಕಾಸು ನಷ್ಟ, ಕುಟುಂಬದಲ್ಲಿ ಕಲಹ, ಶತ್ರುಗಳಿಂದ ತೊಂದರೆ, ಆರ್ಥಿಕ ಪರಿಸ್ಥಿತಿ ಏರುಪೇರು.

ವೃಶ್ಚಿಕ: ಇಲ್ಲ ಸಲ್ಲದ ಅಪವಾದ, ಗೌರವಕ್ಕೆ ಧಕ್ಕೆ, ಬುದ್ಧಿ ಕ್ಲೇಷ, ಕೆಲಸ ಕಾರ್ಯಗಳಲ್ಲಿ ವಿಘ್ನ, ಮಾನಸಿಕ ನೆಮ್ಮದಿ, ಸ್ವಜನರ ವಿರೋಧ.

ಧನಸ್ಸು: ಉದ್ಯೋಗದಲ್ಲಿ ಅಭಿವೃದ್ಧಿ, ವ್ಯಾಪಾರದಲ್ಲಿ ಲಾಭ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ತೀರ್ಥಯಾತ್ರೆ ದರ್ಶನ, ದೂರ ಪ್ರಯಾಣ.

ಮಕರ: ದಾಂಪತ್ಯದಲ್ಲಿ ಅನ್ಯೋನ್ಯತೆ, ಆಕಸ್ಮಿಕ ಧನ ಲಾಭ, ಧಾರ್ಮಿಕ ವಿಚಾರಗಳಲ್ಲಿ ಆಸಕ್ತಿ, ವಸ್ತ್ರಾಭರಣ ಖರೀದಿ ಯೋಗ.

ಕುಂಭ: ಭೂ ವ್ಯವಹಾರದಲ್ಲಿ ಲಾಭ, ವಾಹನದಿಂದ ಅನುಕೂಲ, ಹಿತ ಶತ್ರುಗಳಿಂದ ತೊಂದರೆ, ಎಲ್ಲಿ ಹೋದರೂ ಅಶಾಂತಿ, ದೇಹಾಲಸ್ಯ, ಚಂಚಲ ಮನಸ್ಸು.

ಮೀನ: ವಿದ್ಯಾರ್ಥಿಗಳಿಗೆ ಪ್ರಶಂಸೆ, ನೌಕರಿಯಲ್ಲಿ ಕಿರಿಕಿರಿ, ಹಣಕಾಸು ನಷ್ಟ, ಅಪವಾದ, ಅವಮಾನ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಋಣ ಬಾಧೆ.

ಇಂದಿನ ಮರದ ಪರಿಚಯ : ಪಾಲಾಶ

ಬ್ರಹ್ಮಪಾದ ಪಾಲಾಶ ಕಿಂಶುಕ ಕರ್ಮಿ ಯಾಜ್ಞಿಕ ಕ್ಷಾರ ಶ್ರೇಷ್ಠ ರಕ್ತ ಪುಷ್ಪ ಸಮಿತ ದ್ರುಮ ಕಿಂಶಕಮು ಪಾಲಶಮು ಬ್ರಹ್ಮವೃಕ್ಷ ಪುರಸ ಮರಮು ಮುತ್ತಲಮರ ಕೆಸುಡೋ ಧಾಕ್ ಚಮಠ್ ಎಂಬ ಹೆಸರುಗಳಿಂದ ಕರೆಯುತ್ತಾರೆ. ಕಾಡು ಮೇಡುಗಳು,ಬೆಟ್ಟ ಗುಡ್ಡಗಳು,ಕೆರೆ ಕಟ್ಟೆಗಳು,ಹೊಲ ಗದ್ದೆಗಳ ಬದಿಗಳ ಮೇಲೆ ಹಾಗೂ ನಾಡಿನಲ್ಲಿಯೂ ನೈಸರ್ಗಿಕವಾಗಿ ಬೆಳೆಯುತ್ತದೆ.

ಇದರಲ್ಲಿ ಮೂರು ಪ್ರಭೇದಗಳಿದ್ದು,ಕೆಂಪು ಹೂವು ಬಿಡುವ ಮುತ್ತುಗದ ಮರಗಳು ಎಲ್ಲೆಂದರಲ್ಲಿ ಕಾಣುತ್ತವೆ.ಹಳದಿ ಹೂವು ಬಿಡುವ ಮುತ್ತುಗದ ಮರಗಳು ಅಪರೂಪವಾದರೆ,ಇನ್ನು ಬಿಳಿ ಹೂವು ಬಿಡುವ ಮುತ್ತುಗದ ಮರಗಳು ಬಾರಿ ಅಪರೂಪ.ಮೂರು ವಿಧದ ಮುತ್ತುಗದ ವೃಕ್ಷಗಳಲ್ಲೂ ಔಷಧೀಯ ಭಂಡಾರವೇ ತುಂಬಿದೆ.
ಶಿವನಿಗೆ ಅರ್ಪಿಸುವ ದಶ ಪುಷ್ಪಗಳಲ್ಲಿ ಇದು ಸಹಾ ಒಂದು.ವಿಶೇಷ ಪೂಜೆಗಳಲ್ಲಿ ಈ ಹೂವುಗಳನ್ನು ತಪ್ಪದೆ ಮಹಾದೇವನಿಗೆ ಅರ್ಪಿಸುವುದು ವಾಡಿಕೆ.ಈ ವೃಕ್ಷ ಮಾನವನಿಗೆ ದೇವರು ಕೊಟ್ಟ ವರವೆಂದರೆ ತಪ್ಪಾಗಲಾರದು
ಸುಮಾರು 25 ರಿಂದ 45 ಅಡಿವರಿಗೂ ಬೆಳೆಯುವ
ಮುತ್ತುಗದ ಮರಗಳಲ್ಲಿ ಫೆಬ್ರವರಿ ಮಾರ್ಚ್ ತಿಂಗಳಲ್ಲಿ ಹೂವುಗಳು ಬಿಟ್ಟಾಗ ಬಹು ದೂರದಿಂದಲೇ ತನ್ನ ಇರುವನ್ನು ತೋರುತ್ತೆ.ಇಡಿ ಮರವೆಲ್ಲ ಹೂವುಗಳು ತುಂಬಿ ನೋಡಲು ಕಣ್ಣಿಗೆ ಹಬ್ಬವನ್ನುಂಟುಮಾಡುತ್ತದೆ.
ಇದು ವಗರು ಖಾರ ಕಹಿ ರಸಗಳಿಂದ ಕೂಡಿದ್ದು, ಎಲೆ ಅಂಟು ಹೂವು ಬೀಜ ಕಾಂಡ ಬೇರು, ಎಲ್ಲಾದರಲ್ಲೂ ಔಷಧೀಯ ಗುಣಗಳು ತುಂಬಿದ್ದು,ಅಗ್ನಿದೀಪಕ ವೀರ್ಯವರ್ಧಕ ಉದರಕ್ರಿಮಿನಾಶಕ ವಿಷಶಾಮಕವಾಗಿರುತ್ತದೆ.ಇದರ ಎಲೆಗಳಲ್ಲಿ ಊಟ ಮಾಡುವುದರಿಂದ ಈ ಎಲ್ಲಾ ಪ್ರಯೋಜನವನ್ನು ಪಡೆದುಕೊಳ್ಳಬಹುದು.
ಉಪನಯನ ಕಾಲದಲ್ಲಿ ವಟುವು ಭುಜದ ಮೇಲೆ ಮುತ್ತುಗದ ಕೊಂಬೆಯನ್ನು ಇಟ್ಟುಕೊಳ್ಳುವುದರಿಂದ ಆತನಲ್ಲಿ ಬ್ರಹ್ಮಚರ್ಯಯ ಗುಣಗಳು ಮೂಡುತ್ತವೆ….!
ಇದರ ಬೀಜಗಳಿಂದ ತಯಾರಿಸಿರುವ “ಚೀನಪೋಡಿಯ”ಎಂಬ ಜಂತು ನಾಶಕ ಬಳಕೆಯಿಂದ
ಉದರದಲ್ಲಿರುವ ಜಂತುಹುಳು ಕಿಲುಮೆಹುಳುಗಳು
ನಾಶವಾಗುತ್ತವೆ.
ಮುತ್ತುಗದ ಹೂವುಗಳನ್ನು ಒಣಗಿಸಿ ಚೂರ್ಣ ಮಾಡಿ ಜೇನುತುಪ್ಪದಲ್ಲಿ ರಂಗಳಿಸಿ ನೆಕ್ಕಿದಾಗ ಚರ್ಮದ ಬಣ್ಣ ಸುಕ್ಕುಗಟ್ಟದೆ, ಚರ್ಮದ ಬಣ್ಣ ಬದಲಾಗದೆ ಉಳಿಯುತ್ತೆ.(ಅಂದರೆ ಚರ್ಮ ಕಾಪ್ಪಾಗುವಿಕೆ,ಮುಖದ ಮೇಲಿನ ಮಂಗು ಇತ್ಯಾದಿ ಚರ್ಮ ವ್ಯಾಧಿಗಳು ನಿವಾರಣೆಯಾಗುತ್ತೆ) ಅಷ್ಟೇ ಅಲ್ಲದೆ ತುಟಿಗಳು ಕೆಂಪಾಗಿ,ಸುಂದರವಾಗಿ ಉಳಿಯುತ್ತವೆ.
ಮುತ್ತುಗ ಮರದ ಸಮೂಲದ ಚೂರ್ಣ 1 ಚಮಚ 1ಚಮಚ ಜೇನುತುಪ್ಪ ರಂಗಳಿಸಿ ಸೇವಿಸಿದರೆ
ಕಫ ಪಿತ್ತ ಮೂತ್ರದ ಉರಿ ಮೂಲವ್ಯಾಧಿ ಕೃಮಿಜನಿತವಾದ ಎಲ್ಲಾ ತರಹದ ಹುಣ್ಣುಗಳು ಅತ್ಯಂತ ಶೀಘ್ರವಾಗಿ ವಾಸಿಯಾಗುತ್ತವೆ.ಇದೆ ಮುತ್ತುಗದ ಮರದ ಯಾವ ಭಾಗವನ್ನಾದರೂ ತೆಗೆದುಕೊಂಡು
ಪುಡಿ ಮಾಡಿ ಗಾಯಕ್ಕೆ ಲೇಪನ ಮಾಡಿದರೆ,ಗಾಯವು ಬೇಗನೆ ಮಾಯುವುದು.
ಮುತ್ತುಗದ ತೊಗಟೆಯ ಚೂರ್ಣದ ಕಷಾಯ ನಿಯಮಿತವಾಗಿ ಸೇವಿಸುವುದರಿಂದ ಥೈರಾಯ್ಡ್ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
50ml ಮುತ್ತುಗದ ಬೇರಿನ ಕಷಾಯಕ್ಕೆ 1 ಚಮಚ ಜೇನುತುಪ್ಪ ಅಥವಾ ಕೆಂಪು ಕಲ್ಲುಸಕ್ಕರೆ ಕಲಸಿ ಸೇವಿಸಿದರೆ ಲೈಂಗಿಕ ಶಕ್ತಿ ಹೆಚ್ಚುತ್ತೆ.
ಹೂವುಗಳನ್ನು ನೆರಳಿನಲ್ಲಿ ಒಣಗಿಸಿ ಚೂರ್ಣ ಮಾಡಿಟ್ಟುಕೊಂಡು 1 ಲೋಟ ನಾಟಿ ಹಸುವಿನ ಹಾಲಿನಲ್ಲಿ 1/2 ಚಮಚ ಹೂವಿನ ಚೂರ್ಣ 1 ಚಮಚ ಕಲ್ಲುಸಕ್ಕರೆ ಬೆರಸಿ ಸೇವಿಸಿದರೆ ಚರ್ಮವ್ಯಾಧಿಗಳು
ಗುಣವಾಗುತ್ತವೆ.
ಮುತ್ತುಗದ ಬೀಜಿನ ಚೂರ್ಣವನ್ನು ಸೇವಿಸುತ್ತಾ ಬಂದರೆ ಮೂತ್ರ ವಾಧಿಗಳು,ಪೈಲ್ಸ್ ಗುಣವಾಗುತ್ತೆ.ಅಂಟು ಅಥವಾ ಹೂವಿನ ಚೂರ್ಣ ಸೇವಿಸಿದರೆ ರಕ್ತಪಿತ್ತ ಗುಣವಾಗುತ್ತೆ.
ವೀರ್ಯಕಣಗಳು ಕಡಿಮೆ ಇರುವಂತವರು, ಮುತ್ತುಗದ ಬೀಜಗಳು ಹಾಗೂ ಹುಣಸೆ ಬೀಜಗಳನ್ನು ನೀರಿನಲ್ಲಿ ನೆನೆಸಿಟ್ಟು, ಹೊಟ್ಟು ಸುಲಿದು ನೆರಳಲ್ಲಿ
ಒಣಗಿಸಿ ಚೂರ್ಣಮಾಡಿಟ್ಟುಕೊಂಡು, ಬೆಳಿಗ್ಗೆ ಸಂಜೆ
6 ಗ್ರಾಂ 1 ಚಮಚ ಜೇನುತುಪ್ಪ 1 ಲೋಟ ಹಸುವಿನ ಹಾಲಿನಲ್ಲಿ ಕಲಸಿ ಸೇವಿಸುತ್ತಾ ಬಂದರೆ ಅಪಾರವಾದ
ವೀರ್ಯಾಣುಗಳು ವೃದ್ಧಿಯಾಗುತ್ತವೆ.
ಮುತ್ತುಗದ ಚಿಗರೆಲೆಗಳನ್ನು ನೆರಳಲ್ಲಿ ಒಣಗಿಸಿ
ಚೂರ್ಣಮಾಡಿಟ್ಟುಕೊಂಡು,1ಲೋಟ ನೀರಿನಲ್ಲಿ 1 ಚಮಚದಂತೆ ದಿನವು ಸೇವಿಸುತ್ತಾ ಬಂದರೆ ಮಧುಮೇಹ ಅತೋಟಿಗೆ ಬರುತ್ತೆ.ಇದರ ಉಪಯೋಗಗಳು ಅಪರಮಿತವಾದದ್ದು. ಗೆಳೆಯರೆ ನಾಳೆ ಮತ್ತೊಂದು ಅಮೂಲ್ಯ ವೃಕ್ಷದ ಪರಿಚಯ ಮಾಡಿಕೊಳ್ಳೋಣ.ವಂದನೆಗಳು

ರಾಜ್ಯದಲ್ಲಿಂದು ಮುನ್ನೂರರ ಗಡಿದಾಟಿದ ಕೊರೋನಾ; 10ಸಾವಿರ ಸನಿಹಕ್ಕೆ ಸೋಂಕಿತರ ಸಂಖ್ಯೆ, 8 ಮಂದಿ ಸಾವು

ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ 322 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು ಸೋಂಕಿತರ ಸಂಖ್ಯೆ 9721 ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಇವತ್ತು ಒಂದೇ ದಿನ 274 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು ಒಟ್ಟು 6004 ಜನ ಇದುವರೆಗೂ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

3563 ಸಕ್ರಿಯ ಪ್ರಕರಣಗಳು ಇದ್ದು 120 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವತ್ತು ಪತ್ತೆಯಾದ ಪ್ರಕರಣಗಳ ಪೈಕಿ 64 ಮಂದಿ ಅಂತರರಾಜ್ಯ ಪ್ರಯಾಣಿಕರಾಗಿದ್ದು 5 ಜನ ಅಂತರಾಷ್ಟ್ರೀಯ ಪ್ರಯಾಣಿರಾಗಿದ್ದಾರೆ. ಇವತ್ತು ಒಂದೇ ದಿನ 8 ಜನ ಸಾವನ್ನಪ್ಪಿದ್ದು, ರಾಜ್ಯದಲ್ಲಿ ಕೊರೋನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 150 ಕ್ಕೆ ಏರಿಕೆಯಾಗಿದೆ.

ಬ್ರೇಕಿಂಗ್ ನ್ಯೂಸ್: ಕೊರೋನಾಗೆ ಇಂದು ಅಧಿಕೃತವಾಗಿ ಔಷಧಿ ಬಿಡುಗಡೆಗೊಳಿಸಿದ ಪತಂಜಲಿ..

ವಿಶ್ವದೆಲ್ಲೆಡೆ ತನ್ನ ಕರಾಳ ಮುಖವನ್ನು ತೋರಿಸುತ್ತಾ ಕೋಟ್ಯಾಂತರ ಜನರನ್ನು ಆತಂಕಕ್ಕೆ ತಳ್ಳಿರುವ ಕೊರೊನಾದಿಂದ ಜಗತ್ತಿನೆಲ್ಲೆಡೆ ಭಯದ ಕಾರ್ಮೋಡ ಮೂಡಿದೆ. ಇಡೀ ದೇಶವನ್ನೇ ಸಾವಿನ ಕೂಪದಲ್ಲಿ ಮುಳುಗಿಸಿರುವ ಕೊರೋನಾಗೆ ಲಸಿಕೆ, ಮದ್ದು ಕಂಡು ಹಿಡಿಯಲು ಎಲ್ಲಾ ದೇಶಗಳು ಸಂಶೋಧನೆ ಮಾಡುತ್ತಿವೆ. ಮಿಂಚಿನಂತೆ ಹರಡುತ್ತಿರುವ ಕೊರೊನಾ ವೈರಸ್‌ಗೆ ಚಿಕಿತ್ಸೆ ಇಲ್ಲದೆ ಇಡೀ ವಿಶ್ವ ಬೆಚ್ಚಿಬಿದ್ದಿರುವಾಗ, ಭಾರತದ ಪತಂಜಲಿ ಸಂಸ್ಥೆಯು ಕೊರೊನಾ ವೈರಸ್‌ಗೆ ಲಸಿಕೆ ಅಭಿವೃದ್ಧಿ ಪಡಿಸಿ, ಬಿಡುಗಡೆಗೊಳಿಸಿ ಅಚ್ಚರಿ ಮೂಡಿಸಿದೆ.

ಪತಂಜಲಿ ಸಂಸ್ಥೆಯ ಸಂಸ್ಥಾಪಕರಾಗಿರುವ ಯೋಗಗುರು ಬಾಬಾ ರಾಮ್ ದೇವ್ ಔಷಧಿ ಬಿಡುಗಡೆ ಮಾಡಿದ್ದಾರೆ. ನೂರಾರು ಕೊರೋನಾ ಪೀಡಿತ ರೋಗಿಗಳ ಮೇಲೆ ನಮ್ಮ ಪತಂಜಲಿಯ ಔಷಧಿಯನ್ನು ನೀಡಲಾಗಿದೆ. ಈ ಔಷಧಿ ಪ್ರಯೋಗಿಸಿರುವವರ ಮೇಲೆ ಶೇ.100 ರಷ್ಟು ಫಲಿತಾಂಶ ನೀಡಿದೆ. 5 ರಿಂದ 7 ದಿನದಲ್ಲಿ ಎಲ್ಲಾ ಕೊರೋನಾ ರೋಗಿಗಳು ಗುಣಮುಖರಾಗಿದ್ದಾರೆ ಎಂದು ಪತಂಜಲಿ ಸಂಸ್ಥೆಯ ಸಿಇಒ ಆಚಾರ್ಯ ಬಾಲಕೃಷ್ಣ, ಔಷಧಿ ಬಿಡುಗಡೆ ವೇಳೆ ಹೇಳಿದ್ದಾರೆ. ಸದ್ಯ ಪತಂಜಲಿ ಸಂಸ್ಥೆಯ ಹೇಳಿಕೆ ತಲ್ಲಣ ಸೃಷ್ಟಿಸಿದೆ. ಪತಂಜಲಿ ಔಷಧಿ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುವ ಮುನ್ಸೂಚನೆ ದೊರೆತಿದೆ.

ಪತಂಜಲಿ ಕಂಪನಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆಚಾರ್ಯ ಬಾಲಕೃಷ್ಣ ಕೊರೋನಾ ವೈರಸ್ ನಿರ್ಮೂಲನೆ ಔಷಧವನ್ನು ಕಂಪನಿ ಕಂಡುಹಿಡಿದಿರುವುದಾಗಿ ತಿಳಿಸಿದ್ದರು. ಅಶ್ವಗಂಧ, ತುಳಸಿ, ಗಿಲೋಯ್ ಸೇರಿಸಿ ಮಾಡುವ ಮಿಶ್ರಣದಿಂದ ಕೊರೋನಿಲ್ ತಯಾರಿಸಿದ್ದು, ಶೇ 100ರಷ್ಟು ಗುಣಮುಖರಾಗುವ ಸಾಧ್ಯತೆ ಇದೆ ಎಂದು ರಾಮ್‌ದೇವ್ ತಿಳಿಸಿದ್ದಾರೆ. ಕೊರೋನಾ ವೈರಸ್‌ಗೆ ಆಯುರ್ವೇದದಲ್ಲಿ ಮೊದಲ ಔಷಧ ಬಿಡುಗಡೆ ಮಾಡಲು ಹೆಮ್ಮೆಯಾಗುತ್ತಿದೆ. ಎಂದು ಬಾಲಕೃಷ್ಣ ಅವರು ಹೇಳಿದ್ದಾರೆ.

ಮುಂದಿನ ಪೀಳಿಗೆಗೂ ಪರಿಸರವನ್ನು ಉಳಿಸಿ-ಬೆಳೆಸಿ ವರ್ಗಾಯಿಸುವ ಕೆಲಸ ನಮ್ಮದಾಗಬೇಕು: ಪ್ರತಾಪ್ ಸಿಂಗ್

ಕರಡಿ: ಮನುಷ್ಯ ತನ್ನ ಸ್ವಾರ್ಥದ ಜೊತೆಗೆ ದುರಾಸೆಗೆ ಪ್ರಕೃತಿಯನ್ನು ಬಲಿಕೊಡುತ್ತಿದ್ದು, ಇದರ ಪರಿಣಾಮವಾಗಿ ಮುಂದೊಂದು ದಿನ ಭೂಮಿಯ ಮೇಲೆ ಜೀವರಾಶಿಗಳು ಕಣ್ಮರೆಯಾಗುವ ದಿನ ಬರಬಹುದು ಅದುದರಿಂದ ಅಳಿವಿನಂಚಿನಲ್ಲಿರುವ ಪರಿಸರವನ್ನು ಉಳಿಸಿ-ಬೆಳೆಸಿ ಮುಂದಿನ ಪೀಳಿಗೆಗೂ ವರ್ಗಾಯಿಸುವ ಕೆಲಸ ನಮ್ಮದಾಗಬೇಕೆಂದು ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಪ್ರತಾಪ್ ಸಿಂಗ್ ಹೇಳಿದರು.
ಇಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಕರಡಿ ವಲಯದ ಹಟ್ಣ ಗ್ರಾಮದ ಶ್ರೀ ಕೆಂಪಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಪರಿಸರ ಸಂರಕ್ಷಣೆ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡ ಸಸಿ ನಾಟಿ ಮತ್ತು ಪರಿಸರ ಜಾಗೃತಿ ಕಾರ್ಯಕ್ರಮದ ಕುರಿತು ಮಾತನಾಡಿದರು.

ನಮ್ಮ ದೇಶದಲ್ಲಿ ಶೇಕಡಾ70 ರಷ್ಟು ಜನ ಗ್ರಾಮೀಣ ಭಾಗದಲ್ಲಿ ವಾಸ ಮಾಡುತ್ತಿದ್ದು ಗ್ರಾಮೀಣ ಜನರು ಪರ್ಯಾಯ ಇಂಧನಗಳ ಬಳಕೆ ಮೂಲಕ ಸೌದೆಯ ಬಳಕೆ ಕಡಿಮೆ ಮಾಡಬಹುದು, ಇಂತಹ ಕೆಲಸ ಮಾಡಲು ಯಾವುದೇ ಪದವಿಯ ಅವಶ್ಯಕತೆ ಇಲ್ಲ ನಮ್ಮಗೆಲ್ಲರಿಗೂ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅದರ್ಶ ಎಂದರು.

ಕಾರ್ಯಕ್ರಮವನ್ನು ಕುರಿತು ಪ್ರಾಸ್ತವಿಕ ಮಾತನಾಡಿದ ವಲಯ ಮೇಲ್ವಿಚಾರಕರಾದ ರಮೇಶ್. ಎನ್ ಗ್ರಾಮಾಭಿವೃದ್ಧಿ ಯೋಜನೆಯು ಪ್ರತೀ ವರ್ಷ ಜೂನ್ ತಿಂಗಳಲ್ಲಿ ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ವನಮಹೋತ್ಸವ, ಬೀಜದುಂಡೆ ಕಾರ್ಯಕ್ರಮ, ಮತ್ತು ಸಸಿ ನಾಟಿ ಕಾರ್ಯಕ್ರಮಗಳನ್ನು ಮಾಡುತ್ತಾ ಬರುತ್ತಿದ್ದೆ ಈ ಮೂಲಕ ಜನರಲ್ಲಿ ಜಾಗೃತಿಯ ಜೊತೆಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯರಾದ ಎಚ್ .ಕೆ. ಮಂಜುನಾಥ್, ಕಿರಿಯ ಆರೋಗ್ಯ ಸಹಾಯಕಿ ಪುಷ್ಪಲತಾ, ಕೃಷಿ ಮೇಲ್ವಿಚಾರಕ ಪ್ರಸನ್ನಕುಮಾರ್, ಜ್ಞಾನವಿಕಾಸ ಸಮನ್ವಯಧಿಕಾರಿ ವಿಜಯಲಕ್ಷ್ಮಿ, ಒಕ್ಕೂಟದ ಅಧ್ಯಕ್ಷರಾದ ನಾಗರತ್ನ, ಕಾರ್ಯದರ್ಶಿ ಪ್ರಕಾಶ್, ಹಾಗೂ ಸೇವಾಪ್ರತಿನಿಧಿಗಳಾದ ಅಂಬಿಕಾ, ಲತಾಮಣಿ ಉಪಸ್ಥಿತರಿದ್ದರು‌.

ಜೂನ್ 23, 2020;ಮಂಗಳವಾರ ಇಂದಿನ ರಾಶಿಫಲ

ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಶುಕ್ಲ ಪಕ್ಷ, ದ್ವಿತೀಯಾ ತಿಥಿ,
ಮಂಗಳವಾರ, ಪುನರ್ವಸು ನಕ್ಷತ್ರ

ರಾಹುಕಾಲ: ಮಧ್ಯಾಹ್ನ 3:57 ರಿಂದ 5:13
ಗುಳಿಕಕಾಲ: ಮಧ್ಯಾಹ್ನ 12:25 ರಿಂದ 2:01
ಯಮಗಂಡಕಾಲ: ಬೆಳಗ್ಗೆ 9:13 ರಿಂದ 10:49

ಮೇಷ: ಸಂಬಂಧಿಕರಿಂದ ಕುತಂತ್ರ, ಅಮೂಲ್ಯ ವಸ್ತುಗಳ ಕಳೆದುಕೊಳ್ಳುವಿರಿ, ಮಾನಸಿಕ ವೇದನೆ, ಮಾತಿನ ಮೇಲೆ ಹಿಡಿತ ಅಗತ್.

ವೃಷಭ: ಮಾನಹಾನಿ, ಆರೋಗ್ಯದಲ್ಲಿ ಏರುಪೇರು, ಮಾತೃವಿನೊಂದಿಗೆ ಕಲಹ, ಹಿರಿಯರಿಂದ ಉಪದೇಶ, ಮಾನಸಿಕ ನೆಮ್ಮದಿ.

ಮಿಥುನ: ಕುಟುಂಬದಲ್ಲಿ ಕಲಹ, ವೈಮನಸ್ಸು, ಶತ್ರುಗಳ ಬಾಧೆ, ವಾಹನ ಚಾಲಕರು ಎಚ್ಚರಿಕೆ, ಅಪಘಾತವಾಗುವ ಸಾಧ್ಯತೆ, ಯೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ.

ಕಟಕ: ತೀರ್ಥಯಾತ್ರೆ ಸಾಧ್ಯತೆ, ಶೀತ ಸಂಬಂಧಿತ ರೋಗ ಬಾಧೆ, ಚಂಚಲ ಮನಸ್ಸು, ಪರಿಸ್ಥಳ ವಾಸ.

ಸಿಂಹ: ಆಲಸ್ಯ ಮನೋಭಾವ, ಉದ್ಯೋಗ ಸ್ಥಳದಲ್ಲಿ ಕಲಹ, ದಾಂಪತ್ಯದಲ್ಲಿ ವಿರಸ, ಅಧಿಕವಾದ ಖರ್ಚು.

ಕನ್ಯಾ: ನೀಚ ಜನರಿಂದ ತೊಂದರೆ, ಕೃಷಿಯಲ್ಲಿ ಲಾಭ, ಸ್ತ್ರೀಯರಿಗೆ ಅನುಕೂಲ, ಇಷ್ಟಾರ್ಥ ಸಿದ್ಧಿ, ಋಣ ಬಾಧೆಯಿಂದ ಮುಕ್ತಿ.

ತುಲಾ: ಮಾನಸಿಕ ವೇದನೆ, ಹಿತ ಶತ್ರುಗಳಿಂದ ತೊಂದರೆ, ನಂಬಿಕಸ್ಥರಿಂದ ದ್ರೋಹ, ಮಕ್ಕಳಿಗೆ ಬುದ್ಧಿಮಾತು.

ವೃಶ್ಚಿಕ: ಆರೋಗ್ಯದಲ್ಲಿ ಏರುಪೇರು, ಮಾಡುವ ಕೆಲಸದಲ್ಲಿ ವಿಘ್ನ, ಸಂಕಷ್ಟ ಹೆಚ್ಚು, ಶತ್ರುಗಳ ಕುತಂತ್ರಕ್ಕೆ ಸಿಲುಕುವಿರಿ, ಆರೋಗ್ಯದಲ್ಲಿ ವ್ಯತ್ಯಾಸ.

ಧನಸ್ಸು: ಉದ್ಯೋಗದಲ್ಲಿ ಅಭಿವೃದ್ಧಿ, ವಾದ-ವಿವಾದಗಳಲ್ಲಿ ಭಾಗಿ, ಹಿತ ಶತ್ರುಗಳಿಂದ ತೊಂದರೆ, ವ್ಯವಹಾರದಲ್ಲಿ ಎಚ್ಚರ, ಕೆಲಸ ಕಾರ್ಯಗಳಲ್ಲಿ ವಿಳಂಬ.

ಮಕರ: ತಾಳ್ಮೆ ಅತ್ಯಗತ್ಯ, ಅನ್ಯ ಜನರಲ್ಲಿ ದ್ವೇಷ, ಆರೋಗ್ಯದಲ್ಲಿ ವ್ಯತ್ಯಾಸ, ಅಕಾಲ ಭೋಜನ, ಹೊಸ ಸಮಸ್ಯೆಗಳು ಉದ್ಭವ.

ಕುಂಭ: ಅಧಿಕವಾದ ಖರ್ಚು, ಅಲ್ಪ ಆದಾಯ, ಎಲ್ಲಿ ಹೋದರೂ ಅಶಾಂತಿ, ಕೆಲಸ ಕಾರ್ಯಗಳಲ್ಲಿ ಕಲಹ.

ಮೀನ: ಭೂ ಲಾಭ, ಹೆತ್ತವರಲ್ಲಿ ಪ್ರೀತಿ ವಾತ್ಸಲ್ಯ, ಆಕಸ್ಮಿಕ ಧನ ಲಾಭ, ಪರರಿಂದ ಸಹಾಯ ಲಭಿಸುವುದು, ಮಾನಸಿಕ ನೆಮ್ಮದಿ.

ಕಿಲ್ಲರ್ ಕೊರೋನಾಗೆ ರಾಜ್ಯದಲ್ಲಿ ಇಂದು ಐದು ಬಲಿ

ರಾಜ್ಯದಲ್ಲಿ ಇಂದು ಕೂಡ ಕಿಲ್ಲರ್ ಕೊರೋನಾಗೆ ಬಲಿಯಾಗುವವರ ಸಂಖ್ಯೆ ಮುಂದುವರೆದಿದೆ. ಇಂದು ರಾಜ್ಯದಲ್ಲಿ ಐವರು ಕೊರೋನಾ ಸೋಂಕಿನಿಂದಾಗಿ ಬಲಿಯಾಗಿದ್ದಾರೆ. ಅಲ್ಲದೇ ಇಂದು ಒಂದೇ ದಿನ 249 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 9399ಕ್ಕೆ ಏರಿಕೆಯಾದ್ರೇ, ಸಾವಿನ ಸಂಖ್ಯೆ 142ಕ್ಕೆ ಏರಿಕೆಯಾಗಿದೆ.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ರಾಜ್ಯದಲ್ಲಿ ಇಂದು ಹೊಸದಾಗಿ 249 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 9399ಕ್ಕೆ ಏರಿಕೆಯಾಗಿದೆ. ಇವರಲ್ಲಿ ಇದುವರೆಗೆ ಸೋಂಕಿತರಾದಂತ 5730 ಜನರು ಸಂಪೂರ್ಣವಾಗಿ ಗುಣಮುಖರಾಗುವ ಮೂಲಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಸಕ್ರೀಯ ಕೊರೋನಾ ಸೋಂಕಿತರ ಸಂಖ್ಯೆ 3523 ಆಗಿದೆ ಎಂದು ತಿಳಿಸಿದೆ.

ಇನ್ನೂ ಇಂದು ಬೆಂಗಳೂರು ನಗರದಲ್ಲಿ ಪಿ.9276, ಪಿ.9299, ಪಿ.9362 ಸೋಂಕಿತರು ಸಾವನ್ನಪ್ಪಿದ್ದರೇ, ಬಳ್ಳಾರಿಯಲ್ಲಿ ಪಿ.7732 ಹಾಗೂ ರಾಮನಗರದಲ್ಲಿ ಪಿ.9237 ಸೋಂಕಿತರು ಸೇರಿ ಒಟ್ಟು ಐವರು ಕಿಲ್ಲರ್ ಕೊರೋನಾಗೆ ಬಲಿಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಸಾವಿನ ಸಂಖ್ಯೆ 142ಕ್ಕೆ ಏರಿಕೆಯಾಗಿರುವುದಾಗಿ ತಿಳಿದು ಬಂದಿದೆ.

ಇಂದಿನ ಮರದ ಪರಿಚಯ : ಸ್ವರ್ಣವರ್ಷಣಿ


ಸುವರ್ಣಿಕಾ ಸುವರ್ಣಭೂಷಣಿ ಸ್ವರ್ಣಮಂಜರಿ ರಾಜವೃಕ್ಷ ಅರ್ಗವಧ ರೇಲ ಚೆಟ್ಟು ಹೇಮಪುಷ್ಪ ಸರಕೊಂಡ್ರೆ ಪೆರಿಕೊಂಡ್ರೆ ಸುವರ್ಣಕಂ ಕೊಡೈಮುಡಿ ಸರವಳಿಗೈ ಸರಕೋನೈ ಅಮಲ್ತಾಸ್ ಬ್ಯಾಟೆಮರ ಕೊಂಡೆಮರ ಕಾಡು ಕೊಂಡೆಮರ ಕಕ್ಕೆಮರ ಎಂಬ ಹೆಸರುಗಳಿಂದ ಕರೆಯುತ್ತಾರೆ.
ಅರಣ್ಯ ಪ್ರದೇಶಗಳಲ್ಲಿ,ಬೆಟ್ಟ ಗುಡ್ಡಗಳಲ್ಲಿ,ಕೆರೆ ಕಟ್ಟೆಗಳ ಮೇಲೆ, ಹೊಲಗಳ ಬದಿಗಳ ಮೇಲೆ, ರಸ್ತೆಗಳ ಪಕ್ಜದಲ್ಲಿ ನೈಸರ್ಗಿಕವಾಗಿ, 20 ರಿಂದ 30 ಅಡಿ ಬೆಳೆದರೆ, ಫಲವತ್ತಾದ ಭೂಮಿಯಲ್ಲಿ 50 ಅಡಿವರೆಗೂ ಬೆಳೆಯುತ್ತೆ. ಇದರ ಪುಷ್ಫಮಂಜರಿ ನೋಡಲು ಕಣ್ಣಿಗೆ ತುಂಬಾ ಮುದ ನೀಡುತ್ತೆ.
ಇದು ಥೈಲ್ಯಾಂಡ್ ದೇಶದ ರಾಷ್ಟ್ರೀಯ ಪುಷ್ಫವು ಅಲ್ಲದೇ ನಮ್ಮ ದೇಶದಲ್ಲಿನ ಕೇರಳ ರಾಜ್ಯವು ರಾಜ್ಯ ಪುಷ್ಫವೆಂದು ಘೋಷಣೆ ಮಾಡಿದೆ.
ಇದರ ಎಲೆ ಹೂ ಹಣ್ಣು ತೊಗಟೆ ಬೇರು ಸಹಿತ, ಎಲ್ಲವನ್ನು ಆಯುರ್ವೇದ,ಯುನಾನಿ,ಸಿದ್ಧ ಔಷಧಿ ಪದ್ಧತಿಯಲ್ಲಿ ಔಷಧಿಯಾಗಿ ಬಳಸುತ್ತಾರೆ.
ಹಿಂದೂ ಸಂಪ್ರದಾಯದಲ್ಲಿ ಕಕ್ಕೆ ಮರದ ಪುಷ್ಫಗಳು, ಮಹಾ ಶಿವನಿಗೆ ಅತ್ಯಂತ ಪ್ರಿಯವಾದ ಪುಷ್ಫಾಗಳಲ್ಲೊಂದು ಎಂದು ಪರಿಗಣಿಸಲಾಗಿದ್ದು, ವಿಶೇಷ ಪೂಜಾ ಸಮಯದಲ್ಲಿ, ಕಕ್ಕೆ ಮರದ ಪುಷ್ಫಗಳಿಂದ ಶಿವನನ್ನು ಅಲಂಕರಿಸುತ್ತಾರೆ.
ಕಕ್ಕೆ ಮರದ ಕಾಯಿಯ ಅಂಟನ್ನು ತೆಗೆದು, ಒಂದು ಲೋಟ ನೀರಿನಲ್ಲಿ, ರಾತ್ರಿ ನೆನಸಿಟ್ಟು, ಬೆಳಿಗ್ಗೆ ಎದ್ದು ಸೋಸಿ, ಖಾಲಿ ಹೊಟ್ಟೆಯಲ್ಲಿ ಆ ನೀರನ್ನು ಕುಡಿದರೆ “ಮಲಬದ್ಧತೆಗೆ” ರಾಮಬಾಣದಂತೆ ಕೆಲಸ ಮಾಡುತ್ತೆ.
ಕಕ್ಕೆಬೇರಿನ ತೊಗಟೆ50ಗ್ರಾಂ,ಒಂದು ತುಂಡು ಹಸಿ ಶುಂಠಿ ಒಂದು ಮಡಿಕೆಯಲ್ಲಿ ಹಾಕಿ, ಅದಕ್ಕೆ ನೀರನ್ನು ಹಾಕಿ, ಒಲೆಯ ಮೇಲಿಟ್ಟು ಚೆನ್ನಾಗಿ ಕುದಿಸಿ, ಕೆಳಗಿಳಿಸಿ.
ಉಗರು ಬೆಚ್ಚಗಾದಾಗ ಸೋಸಿ, ಅದಕ್ಕೆ ಜೇನುತುಪ್ಪ
ಸೇರಿಸಿ, ಸೇವಿಸುತ್ತಾ ಬಂದರೆ ಎಂತಹ ಚರ್ಮವ್ಯಾಧಿ
ಇದ್ದರು ಗುಣವಾಗುತ್ತೆ.
ಕಿವಿ ಹುಣ್ಣಿಗೆ, ಕಕ್ಕೆ ಮರದ ತೊಗಟೆ ತಂದು, ಎಳ್ಳೆಣ್ಣೆಯಲ್ಲಿ ಹಾಕಿ ಚೆನ್ನಾಗಿ ಕುದಿಸಿ, ಉಗರು ಬೆಚ್ಚಗಿದ್ದಾಗ ಸೋಸಿ, ಕಿವಿಗೆ ಮೂರ್ನಾಲ್ಕು ತೊಟ್ಟು ಹಾಕುತ್ತಾ ಬಂದರೆ, ಕಿವಿ ಹುಣ್ಣು ವಾಸಿಯಾಗುತ್ತೆ.
ಕಕ್ಕೆ ಮರದ ಚಿಗರು ಎಲೆಗಳ ಪಲ್ಯ, ಹೂವುಗಳಿಂದ ಚಟ್ನಿ ಮಾಡಿ ಸೇವಿಸಿದರೆ ತುಂಬಾ ರುಚಿಕರವಾಗಿರುವುದಲ್ಲದೆ,ಇದು ಜಠರ ಆರೋಗ್ಯವನ್ನು ಚೆನ್ನಾಗಿ ಕಾಪಾಡುತ್ತೆ.
ಕಕ್ಕೆ ಮರದ ಹೂವುಗಳಿಂದ ಗುಲ್ಕನ್ ತಯಾರಿಸಿ ಸೇವಿಸುತ್ತಿದ್ದರೆ, ಜಠರ ಸಮಸ್ಯೆಗಳು ದೂರವಾಗುತ್ತೆ.
ಕಫ, ವಾತ, ಪಿತ್ತ ರೋಗಗಳು ಶಮನವಾಗುತ್ತೆ, ಹಾಗೂ ಇದು ಶ್ವಾಸಕೋಶ ಸಮಸ್ಯೆಗಳಿಗೆ ಉತ್ತಮ ಔಷಧಿಯಾಗಿ ಕೆಲಸ ಮಾಡುತ್ತೆ.
ಕಕ್ಕೆ ಮರದ ಹೂವುಗಳನ್ನು ತಂದು ನೆರಳಲ್ಲಿ ಒಣಗಿಸಿ ಚೂರ್ಣ ಮಾಡಿಟ್ಟುಕೊಂಡು, ಬೆಳಿಗ್ಗೆ ಸಂಜೆ
1ಚಮಚ ಚೂರ್ಣವನ್ನು, ಬಿಸಿ ನೀರು ಅಥವಾ ಜೇನುತುಪ್ಪದಲ್ಲಿ ತೆಗೆದುಕೊಂಡರೆ, ಜೀರ್ಣಕ್ರಿಯೆ ಉತ್ತಮಗೊಳ್ಳುವುದರ ಜೊತೆಗೆ ಜಠರದ ಕಾರ್ಯಕ್ಷಮತೆ ಹೆಚ್ಚುತ್ತೆ.
ಕಕ್ಕೆ ಮರದ ತೊಗಟೆಯಲ್ಲಿ ಗಂಧ ತೇಯ್ದು, ಮುಖದ ಮೇಲಿನ ಕಪ್ಪು ಮಚ್ಚೆಗಳು ಹಾಗೂ ಮೊಡವೆಗಳಿಗೆ ಲೇಪಿಸುತ್ತಾ ಬಂದಲ್ಲಿ, ಮೊಡವೆ ಮಚ್ಚೆಗಳಿಂದ ಮುಕ್ತಿ ಪಡೆಯುವದರ ಜೊತೆಗೆ ಮುಖದ ಸೌಂದರ್ಯ ಹೆಚ್ಚುತ್ತೆ….!
ಕಕ್ಕೇಕಾಯಿ ಬೀಜದ ಚೂರ್ಣವನ್ನು ಬೆಳಿಗ್ಗೆ ಸಂಜೆ 10 ಗ್ರಾಂ ನಂತೆ 1 ಚಮಚ ಕಲ್ಲು ಸಕ್ಕರೆ ಜೊತೆಗೆ ಸೇವಿಸುವುದರಿಂದ, ಲೈಂಗಿಕ ಸಮಸ್ಯೆಗಳು,ಧಾತು
ಸಮಸ್ಯೆಗಳು ದೂರವಾಗಿ, ದೇಹಕ್ಕೆ ಪುಷ್ಠಿಯನ್ನು ಒದಗಿಸುತ್ತೆ.
ಬಾವು ವ್ರಣ ಇರುವ ಕಡೆ ಇದರ ಎಲೆಗಳನ್ನು ಅರೆದು ಲೇಪಿಸಿದರೆ ಶೀಘ್ರ ಗುಣವಾಗುತ್ತೆ. ಸೂಚನೆ:- ಕಕ್ಕೆ ಮರದ ಎಲೆ ಹೂ ಕಾಯಿ ತೊಗಟೆ ಬೇರು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಭೇದಿಯಾಗುವ ಸಾಧ್ಯತೆ ಇದ್ದು, ಆಯುರ್ವೇದ ವೈದ್ಯರ ಸಲಹೆ ಪಡೆದು ಉಪಯೋಗಿಸಿ. ಗೆಳೆಯರೆ ನಾಳೆ ಮತ್ತೊಂದು ಅಮೂಲ್ಯ ವೃಕ್ಷ ಪರಿಚಯ ಮಾಡಿಕೊಳ್ಳೋಣ. ವಂದನೆಗಳು

Design a site like this with WordPress.com
Get started